Hi Everyone, Welcome to Moral Storys – Story Inspired
1. ಸೋಮಾರಿ ಭಿಕ್ಷುಕ – Story Inspired

ಒಂದಾನೊಂದು ಊರಲ್ಲಿ ಒಬ್ಬ ಸೋಮಾರಿ ಭಿಕ್ಷುಕ ಇದ್ದ. ಅವನು ರಾಜನ ಅರಮನೆಯ ಮುಂದೆ ಕೂತುಕೊಂಡು ಭಿಕ್ಷೆ ಬೇಡುತ್ತಾ ಜೀವನ ನಡೆಸುತ್ತಾ ಇದ್ದ.
ತನ್ನ ಭಿಕ್ಷೆ ಬೇಡುವ ಜೀವನವನ್ನು ಹೇಸಿಗೆ ಪಟ್ಟು, ರಾಜನ ಅಂತಸ್ತು – ಐಶ್ವರ್ಯ ನೋಡಲಾರದ ಭಿಕ್ಷುಕ ದೇವರನ್ನು ಬೈಯುತ್ತಾ ಗುಣುಗುಟ್ಟುತ್ತಾ ಇದ್ದ.
ಭಿಕ್ಷುಕ ದೇವರಿಗೆ “ಬುದ್ಧಿ ಆದ ಇಲ್ಲ ನಿಂಗೆ? ರಾಜನಿಗೇನೋ ಅರಮನೆ, ಅಧಿಕಾರ, ಅಂತಸ್ತು, ಮೃಷ್ಟಾನ್ನ ಭೋಜನ ಕೊಟ್ಟೆ. ಆದರೆ ನನಗೇನೋ ಕಿತ್ತೋಗಿರೋ ತಟ್ಟೆ ಹರದೋಗಿರೋ ಬಟ್ಟೆ ಕೊಟ್ಟೆ. ತಾರತಮ್ಯ ಯಾಕ್ ಮಾಡಕತ್ತಿ, ನೀನು ಸರೀ ಇಲ್ಲ” ಎಂದು ಭಿಕ್ಷುಕ ಆಕಾಶದ ಕಡೆ ಮುಖ ಮಾಡಿ ದೇವರನ್ನು ದೂಷಿಸುತ್ತಿದ್ದ.
ಆಗ ಒಬ್ಬ ಋಷಿ ಬಂದು “ಅಯ್ಯಾ! ನಾನು ನಿಮಗೆ ಒಂದು ಕೋಟಿ ರೂಪಾಯಿ ಕೊಡ್ತೀನಿ ನಿನ್ನ ಎರಡು ಕಾಲು ಕತ್ತರಿಸಿ ಕೊಡ್ತೀಯಾ? ನಾಲ್ಕು ಕೋಟಿ ರೂಪಾಯಿ ಕೊಡ್ತೀನಿ ಎರಡು ಕಾಲು ಎರಡು ಕೈ ಕತ್ತರಿಸಿ ಕೊಡ್ತೀಯಾ?” ಎಂದು ಕೇಳಿದ.
ಅದಕ್ಕೆ ಭಿಕ್ಷುಕ “ನಿನಗೇನಾದರೂ ತಲೆ ಕೆಟ್ಟಿದೆಯಾ ಎಲ್ಲಿಂದೋ ಬಂದು ಎರಡು ಕೋಟಿ ಕೊಡ್ತೀನಿ ನನ್ನ ಎರಡು ಕಾಲು ಕೊಡ್ತೀಯಾ ನಾಲ್ಕು ಕೋಟಿ ಕೊಡ್ತೀನಿ ಎರಡು ಕಾಲು ಎರಡು ಕೈ ಕೊಡ್ತೀಯಾ ಅಂತ ಕೇಳ್ತಾಯಿದ್ದಿಯಲ್ಲ.
ಬುದ್ಧಿ ಏನಾದರೂ ಇದೆಯಾ ನಿಂಗೆ, ಯಾರಾದರೂ ಕೋಟಿ ರೂಪಾಯಿಗಾಗಿ ಅಂಗಾಂಗಗಳನ್ನು ಕತ್ತರಿಸಿ ಕೊಡ್ತಾರ” ಎಂದು ವ್ಯಂಗ್ಯದಿಂದ ಮಾತಾಡಿದ.
Story Inspired
ಅದಕ್ಕೆ ಋಷಿಗಳು ಬಿಕ್ಷುಕನಿಗೆ “ಕೋಟಿ ರೂಪಾಯಿ ಕೊಡ್ತೀನಿ ನಿನ್ನು ಅಂಗಗಳನ್ನು ಕತ್ತರಿಸಿ ಕೊಡ್ತೀಯಾ ಅಂತ ಕೇಳಿದ್ದಕ್ಕೆ, ಕೋಟಿ ರೂಪಾಯಿಗಾಗಿ ಯಾರಾದರೂ ಅಂಗಗಳನ್ನು ಕೊಡ್ತಾರ ಅಂತ ವ್ಯಂಗ್ಯದ ಮಾತುಗಳಾಡಿದಿ.
ಕೋಟಿ ರೂಪಾಯಿಗಿಂತಲೂ ಹೆಚ್ಚಾಗಿ ಬೆಲೆ ಬಾಳುವ ದೇಹವನ್ನು ದೇವರು ನಿನಗೆ ಕೊಟ್ಟರೆ, ನೀನು ನನಗೆ ಏನು ಕೊಟ್ಟಿದ್ದಿ ಅಂತ ದೇವರನ್ನು ದೂಷಿಸುತ್ತಾ ಇದ್ದೀಯಲ್ಲಾ ಇದು ನ್ಯಾಯವಾ” ಎಂದು ಕೇಳಿದ.
Also Read – ಯಜಮಾನನ ಸೋಮಾರಿ ಬೆಕ್ಕು
ಯಾರಿಗೆ ಏನೇನು ಕೊಡಬೇಕು, ಯಾವಾಗ ಕೊಡಬೇಕು ಮತ್ತು ಎಲ್ಲಿ ಕೊಡಬೇಕು ಆತನಿಗೆ ಚೆನ್ನಾಗಿ ಗೊತ್ತು. ರಾಜನಿಗೆ ಅರಮನೆ, ಅಂತಸ್ತು, ಅಧಿಕಾರ, ಮೃಷ್ಟಾನ್ನ ಭೋಜನ ಅವೆಲ್ಲಾ ಸುಮ್ಮನೆ ಬಂದಿಲ್ಲ. ಆತನು ಕಷ್ಟಪಟ್ಟು ಗಳಿಸಿದ್ದಾನೆ ಅದರ ಜೊತೆಗೆ ಆತನ ಪ್ರಾಮಾಣಿಕತೆ, ನಿಷ್ಠೆ, ನಂಬಿಕೆ ಮತ್ತು ಸತತ ಪ್ರಯತ್ನ ಆತನನ್ನು ರಾಜನ ಸ್ಥಾನದಲ್ಲಿ ನಿಲ್ಲಿಸಿವೆ.
ಋಷಿ ಮಾತುಗಳಿಗೆ ಭಿಕ್ಷುಕ ಮನಮರಗಿ ತಿಳಿಯದೆ ಆಡಬಾರದ ಮಾತುಗಳನ್ನೆಲ್ಲ ಆಡಿದೆನಲ್ಲಾ ಎಂದು ತನ್ನೊಳಗೆ ಪಶ್ಚಾತ್ತಾಪ ಪಟ್ಟ.
ಕಥೆಯಲ್ಲಿನ ನೀತಿ / Moral of this Story :
ನಮ್ಮ ಸತತ ಪ್ರಯತ್ನದ ಜೊತೆಗೆ ದೇವರ ಸಹಾಯವೂ ಬೇಕು ಹಾಗಿದ್ದಾಗ ಮಾತ್ರ ನಮ್ಮ ಜೀವನದಲ್ಲಿ ಒಂದು ಉನ್ನತ ಸ್ಥಾನಕ್ಕೆ ಹೋಗಲು ಸಾಧ್ಯ.
2. ಸಹಾಯ ಮಾಡುವುದು ನನ್ನ ಧರ್ಮ – Story Inspired

ಒಂದು ಸಣ್ಣ ಗ್ರಾಮದಲ್ಲಿ ರಮೇಶ ಸುರೇಶ ಎಂಬ ಇಬ್ಬರು ಗೆಳೆಯರಿದ್ದರು. ಇಬ್ಬರು ಆತ್ಮೀಯ ಗೆಳೆಯರು, ಎಲ್ಲಿಗೆ ಹೋದರೂ ಜೊತೆಯಾಗಿಯೇ ಹೋಗುತ್ತಿದ್ದರು.
ಒಂದು ದಿನ ಹೊಲಕ್ಕೆ ಹೋಗುವಾಗ ದಾರಿಯಲ್ಲಿ ದಾರಿಯಲ್ಲೊಂದು ನಾಯಿ ನೋವಿನಿಂದ ಕೂಗುತ್ತಾ ಇತ್ತು. ಸುರೇಶ ಮತ್ತು ರಮೇಶ ನಾಯಿಯ ಹತ್ತಿರಕ್ಕೆ ಹೋಗಿ ನೋಡಿದರೆ ಅದರ ಎರಡು ಕಾಲಿಗೆ ಬಲವಾದ ಪೆಟ್ಟಾಗಿ ರಕ್ತ ಬರ್ತಾ ಇತ್ತು.
ಸುರೇಶನು ನಾಯಿಯ ಕಾಲಿಗೆ ಬಟ್ಟೆ ಕಟ್ಟಲು ಪ್ರಯತ್ನಿಸುತ್ತಿರುವಾಗ ನಾಯಿ ಬೊಗಳುತ್ತಾ ಅದರ ಹತ್ತಿರಕ್ಕೆ ಬರಗೊಡಿಸಲಿಲ್ಲ ಮತ್ತು ಕಚ್ಚಲು ಬರುತ್ತಿತ್ತು.
Read Also – ದುರಾಸೆಯ ಪ್ರತಿಫಲವೇ ದುಃಖ
ಸುರೇಶನು ಆದರೂ ಕೂಡ ಅದರ ಕಾಲಿಗೆ ಬಟ್ಟೆ ಕಟ್ಟಲು ಮತ್ತೆ ಮುಂದಾದ. ನಾಯಿಯು ಹತ್ತಿರಕ್ಕೆ ಬಂದಾಗ ಭಯಪಡುತ್ತಾ ಕಾಲಿನಿಂದ ಚೀರುತ್ತಾ, ಬೋಗುಳುತ್ತಾ ಇತ್ತು.
ರಮೇಶನು ಸುರೇಶನಿಗೆ – “ಅದನ್ನು ಬಿಟ್ಟು ಬಿಡು ತನ್ ಪಾಡಿಗೆ ತಾನು ಇರುತ್ತೆ, ನಾವು ಒಳ್ಳೇದ್ ಮಾಡಲಿಕ್ಕೆ ಹೋದ್ರೆ ಅದು ನಮ್ಗೆ ಗುರಾಯಿಸುತ್ತೆ” ಎಂದನು
ಅದಕ್ಕೆ ಸುರೇಶನು – ಕಚ್ಚುವುದು, ಚೀರುವುದು, ಬೋಗುಳುವುದು ಅದರ ಧರ್ಮ. ಸಹಾಯ ಮಾಡುವುದು, ಮಾನವೀಯತೆ ತೋರಿಸುವುದು ಮಾನವನ ಧರ್ಮ. ಅದರ ಧರ್ಮವನ್ನು ಅದು ಪಾಲಿಸಿದೆ. ಆದರೆ ಮಾನವನಾಗಿ ನನ್ನ ಧರ್ಮವನ್ನು ನಾನು ಪಾಲಿಸಬೇಕು.
ಕಥೆಯಲ್ಲಿನ ನೀತಿ / Moral of this Story :
ಆಪತ್ತಿನಲ್ಲಿ ಇದ್ದಾಗ ಸಹಾಯ ಮಾಡುವುದು ಮನುಷ್ಯನ ಆದ್ಯ ಕರ್ತವ್ಯವಾಗಿದೆ. ಕರುಣೆ, ದಯೆ ಳ, ಮಾನವೀಯತೆ ತೋರಿಸುವುದು ಮಾನವನ ಧರ್ಮ. ಏಕೆಂದರೆ ಎಲ್ಲ ಜೀವರಾಶಿಗಳಿಗಿಂತ ಮನುಷ್ಯನು ಶ್ರೇಷ್ಠನು.
ಅವನಿಗೆ ಜ್ಞಾನ, ತಿಳಿವಳಿಕೆ ಎಲ್ಲದರ ಬಗ್ಗೆ ಅರಿವು ಇದೆ.
3. ಸಾಧನೆ ಸಾಧಕನ ಸೊತ್ತು – Story Inspired
ಒಂದು ಸಣ್ಣ ಊರಿನಲ್ಲಿ ಮಹೇಶ ಸುರೇಶ ಮತ್ತು ರಮೇಶ ಎಂಬ ಮೂವರು ಗೆಳೆಯರು ಇದ್ದರು. ಈ ಮೂವರು ಸ್ನೇಹಿತರು ಪಿಯುಸಿ ದ್ವಿತೀಯ ವರ್ಷದಲ್ಲಿ ಓದುತ್ತಿದ್ದರು.
ಕಾಲೇಜಿಗೆ ಒಟ್ಟಿಗೆ ಹೋಗಿ, ಹೊಟ್ಟಿಗೆ ಬರುತ್ತಿದ್ದರು. ಅವರ ಸ್ನೇಹ ಅನನ್ಯವಾಗಿತ್ತು. ಕಾಲೇಜಿನ ಪ್ರತಿಯೊಂದು ಚಟುವಟಿಕೆಯಲ್ಲಿ ಆಟದಲ್ಲೂ ಪಾಠದಲ್ಲೂ ಮುಂದಿದ್ದರು.
ಮಹೇಶ ಮತ್ತು ಸುರೇಶ ಆರ್ಥಿಕವಾಗಿ ಸ್ವಲ್ಪ ಬಡವರಾಗಿದ್ದರು. ಜೀವನದ ಬಗ್ಗೆ, ಹಣದ ಬಗ್ಗೆ, ಬಡತನದ ಬಗ್ಗೆ ಅರಿವಿತ್ತು. ಮತ್ತು ಅಷ್ಟೇ ಶ್ರಮಜೀವಿಗಳಾಗಿದ್ದರು. ಕಾಲೇಜು ಮುಗಿದಮೇಲೆ ಮನೇಲಿ ತಂದೆತಾಯಿಗೆ ಸಹಾಯ ಮಾಡುತ್ತಿದ್ದರು.
ಮಹೇಶ ಮತ್ತು ಸುರೇಶ ಕಾಲೇಜು ರಜಾದಿನಗಳಲ್ಲಿ ಕೆಲಸಕ್ಕೆ ಹೋಗಿ ತಮ್ಮ ಖರ್ಚುಗಳನ್ನು ತಾವೇ ನೋಡಿಕೊಳ್ಳುತ್ತಿದ್ದರು.
Story Inspired
ಆದರೆ ರಮೇಶನು ಮಾತ್ರ ಸ್ವಲ್ಪ ಭಿನ್ನವಾಗಿದ್ದನು. ತಂದೆ ತಾಯಿ ಆರ್ಥಿಕವಾಗಿ ಸ್ವಲ್ಪ ಮಟ್ಟಿಗೆ ಉಳ್ಳವರಾಗಿದ್ದರು. ಹಾಗಾಗಿ ಬಡತನದ ಬಗ್ಗೆ, ಹಣದ ಬಗ್ಗೆ, ಕಷ್ಟದ ಬಗ್ಗೆಯಾಗಲಿ ತಿಳಿದಿರಲಿಲ್ಲ. ಕಷ್ಟ ಪಟ್ಟು ದುಡಿಯುವುದಂತೂ ಅವನಿಗೆ ಹಿಡಿಸದ ವಿಷಯ.
ರಮೇಶನು ಕಾಲೇಜಿನಿಂದ ಬಂದ ಮೇಲೆ ಮನೇಲಿ ಯಾವುದೇ ಕೆಲಸಗಳನ್ನು ಮಾಡುತ್ತಿರಲಿಲ್ಲ ಮತ್ತು ಯಾರಿಗೂ ಕೂಡ ಆಸರೆಯಾಗುತ್ತಿರಲಿಲ್ಲ. ಅಪ್ಪ ಕೊಟ್ಟ ಪಾಕೇಟ್ಮನಿಯಿಂದ ಶೋಕಿ ಮಾಡುತ್ತಿದ್ದ.
ಮಹೇಶ ಮತ್ತು ಸುರೇಶ ಪರೀಕ್ಷೆಗಳು ಹತ್ತಿರ ಬರುತ್ತಿದ್ದಂತೆ ಓದಲು ಶುರುಮಾಡಿದರು. ರಮೇಶನು ಬರುಬರುತ್ತಾ ಓದಿನ ಕಡೆ ಆಸಕ್ತಿ ತೋರಿಸಲಿಲ್ಲ.
ಮಹೇಶ ಮತ್ತು ಸುರೇಶ ಕಷ್ಟಪಟ್ಟು ಓದಿ ಅಂತಿಮ ಪರೀಕ್ಷೆಯಲ್ಲಿ ಫಸ್ಟ್ ರ್ಯಾಂಕ್ ನಲ್ಲಿ ಪಾಸಾದರು. ಆದರೆ ರಮೇಶ ಮಾತ್ರ ಫೇಲಾದ.
ಮಹೇಶ ಮತ್ತು ಸುರೇಶ ಪ್ರಥಮ ಸ್ಥಾನದಲ್ಲಿ ಪಾಸಾದಿದ್ದಕ್ಕೆ ಪದವಿಯಲ್ಲಿ ಉಚಿತ ಸೀಟು ದೊರೆಯಿತು. ಹೀಗೆ ಇಬ್ಬರು ಮುಂದೆನೂ ಕೂಡ ಕಷ್ಟಪಟ್ಟು ಓದಿ ಫಸ್ಟ್ ರ್ಯಾಂಕ್ ನಲ್ಲಿ ಪಾಸಾಗಿ ನೌಕರಿ ಪಡೆದರು.
ಆದರೆ ರಮೇಶನು ಮಾತ್ರ ವಿದ್ಯಾಭ್ಯಾಸವನ್ನು ಅರ್ಧಕ್ಕೆ ನಿಲ್ಲಿಸಿ, ಓದಿನ ಕಡೆ ಜಿಗುಪ್ಸೆ ಮೂಡಿ ಮತ್ತೆ ಕಟ್ಟಿ ಬರೆಯುವ ತಾಪತ್ರಯಕ್ಕೆ ಹೋಗಲಿಲ್ಲ. ಮನೇಲಿ ಆರ್ಥಿಕ ಪರಿಸ್ಥಿತಿ ಹದಗೆಡುತ್ತಾ ಹೋಯಿತು. ಬೇರೆ ಯಾವ ದಾರಿಯೂ ಕಾಣದೆ ಬೇರೆಯವರ ಹೊಲದಲ್ಲಿ ಕೆಲಸಕ್ಕೆ ಹೋಗುತ್ತಿದ್ದ.
ಕಥೆಯಲ್ಲಿನ ನೀತಿ / Moral of this Story :
ಸಾಧಿಸುವ ಛಲ, ಸತತ ಪ್ರಯತ್ನ, ನಂಬಿಕೆಯಿದ್ದರೆ ಸಕಲವೂ ಸಾಧ್ಯ.
ಕೂತು ತಿಂದರೆ ಬೆಟ್ಟದಷ್ಟು ಬಂಗಾರವೂ ಕೂಡ ಕರಗುತ್ತದೆ.
4. ಮುಪ್ಪಾದ ಎತ್ತು – Story Inspired
ಒಂದು ಕಾಲದಲ್ಲಿ ಮಾನಪ್ಪ ಎನ್ನುವ ಒಬ್ಬ ವ್ಯಕ್ತಿ ಇದ್ದನು. ಅವನ ಬಳಿ ಎರಡು ಎತ್ತುಗಳಿದ್ದವು. ಆದರೆ ಒಂದು ಎತ್ತುಗೆ ಮಾತ್ರ ವಯಸ್ಸಾಗಿತ್ತು.
ಹೊಲದಲ್ಲಿ ಉಳುಮೆ ಮಾಡಲು ಆಗುತ್ತಿರಲಿಲ್ಲ. ಸಂತೆಯಲ್ಲಿ ಮಾರಾಟ ಮಾಡಲು ಹೋದರೆ ಯಾರೂ ಆ ಎತ್ತನ್ನು ಖರೀದಿಸಲಿಲ್ಲ. ಅದಕ್ಕಾಗಿ ಅದರ ಯಜಮಾನ ಇದರಿಂದ ಯಾವುದೇ ಉಪಯೋಗವಿಲ್ಲ ಎಂದು ಸರಿಯಾಗಿ ಹುಲ್ಲನ್ನು ಹಾಕುತ್ತಿರಲಿಲ್ಲ. ಅದಕ್ಕೆ ಯಾವುದೇ ರೀತಿಯ ಕಾಳಜಿ ಮಾಡಲಿಲ್ಲ.
ಇದನ್ನು ಗಮನಿಸಿದ ಒಬ್ಬ ಸಾಧು ಆ ಯಜಮಾನನ ಬಳಿಗೆ ಬಂದ “ನಿನ್ನ ಈ ಎತ್ತನ್ನು ಯಾರಿಗೂ ಮಾರಬೇಡ, ಅದ್ಭುತವಾದ ಎತ್ತಿದು. ಇದನ್ನು ಮನೆಬಾಗಲಿ ಮುಂದೆ ಕಟ್ಟಿಹಾಕಿ ದಿನಾ ಹೋಗುವಾಗ ಬರುವಾಗ ಅದಕ್ಕೆ ನಮಸ್ಕರಿಸಿ ಹೋದರೆ ಲಕ್ಷ್ಮಿ ದೇವಿ ನಿಮ್ಮ ಮನೆಗೆ ಬರ್ತಾರೆ. ಆಗ ಬೇಗ ಶ್ರೀಮಂತನಾಗುವಿ” ಎಂದು ಸಣ್ಣ ಸುಳ್ಳು ಹೇಳಿ ಹೋಗ್ತಾನೆ.
ಅಂದಿನಿಂದ ಅದರ ಯಜಮಾನ ಎತ್ತಿಗೆ ದಿನ ಮೈತೊಳೆದು, ಹೋಗುವಾಗ ಬರುವಾಗ ನಮಸ್ಕರಿಸಿ, ಗೋದಲಿ ತುಂಬಾ ಹುಲ್ಲು ಹಾಕಿತ್ತಿದ್ದನು.
Story Inspired
ಅದೆ ವರ್ಷ ದೇವರ ಕೃಪೆಯಿಂದ ಮಳೆ ಬೆಳೆ ಚೆನ್ನಾಗಿ ಬಂದು ಕೈತುಂಬಾ ಲಾಭ ಪಡೆದನು. ಇದೆಲ್ಲ ಈ ಅದ್ಭುತ ಎತ್ತಿನಿಂದಲೆ ಎಂದು ಅದನ್ನು ಇನ್ನು ಜೋಪಾನವಾಗಿ ಕಾಪಾಡಿಕೊಂಡನು.
ಕಥೆಯಲ್ಲಿನ ನೀತಿ / Moral of this Story :
ಸುಳ್ಳು ಹೇಳುವುದು ತಪ್ಪೆ ಆದರೂ ಕೆಲವೊಂದು ಸಲ ಹೇಳಿದ ಸುಳ್ಳು ಸತ್ಯಕ್ಕೆ ಸಮೀಪವಾದ ಮಾರ್ಗದಲ್ಲಿ ನಡೆಸುತ್ತದೆ. ಅವರಿಗೆ ಲಾಭವನ್ನು ತಂದು ಕೊಡುತ್ತದೆ.