Stories in Kannada with Moral

Stories in Kannada with Moral

Moral Stories
Spread the love

Welcome to Moral Storys – Stories in Kannada with Moral

Thanks for visiting our site,. You can read unique and worldwide Moral Stories

ಬಂಗಾರದ ಮೊಟ್ಟೆ / Golden Egg – Moral Story

Stories in Kannada with Moral

ಒಂದಾನೊಂದು ಊರಿನಲ್ಲಿ ಒಬ್ಬ ಮನುಷ್ಯನಿದ್ದನು. ಅವನ ಬಳಿ ಒಂದು ಸುಂದರವಾದ ಕೋಳಿ ಇತ್ತು. ಬೆಳಿಗ್ಗೆ ಕೋಳಿ ಕೂಗಿ ಊರಿನ ಜನರನ್ನು ಎಬ್ಬಿಸುತ್ತಿತ್ತು. Stories in Kannada with Moral

ಕೋಳಿ ದಿನಾ ಒಂದು ಮೊಟ್ಟೆ ಇಡುತಿತ್ತು. ಅದರ ಯಜಮಾನ ಮೊಟ್ಟೆ ತಗೊಂಡು ಹೋಗಿ ಪೇಟೆಯಲ್ಲಿ ಮಾರಿ ಬರುತ್ತಿದ.ಕೋಳಿ ಇಡುವ ಮೊಟ್ಟೆಗಳು ಅವನ ಜೀವನಕ್ಕೆ ಆಸರೆಯಾಗಿತ್ತು

ಒಂದು ದಿನ ಕೋಳಿ ಬಂಗಾರದ ಮೊಟ್ಟೆ ಇಟ್ಟಿತು. ಯಜಮಾನನಿಗೆ ತುಂಬಾ ಸಂತೋಷವಾಯಿತು. ಕೋಳಿಯನ್ನು ತುಂಬಾ ಕಾಳಜಿಯಿಂದ ನೋಡಿಕೊಂಡನು. ಅದನ್ನು ಅವನ ಮಲಗುವ ಕೋಣೆಯಲ್ಲಿಟ್ಟು ವಿಶೇಷ ತಿಂಡಿ ತಿನಿಸುಗಳನ್ನು ಕೊಟ್ಟನು ಮತ್ತು ಬೇಗ ಶ್ರೀಮಂತನಾದನು.

ಆದರೆ ಅದು ಅವನಿಗೆ ಸಾಲಲಿಲ್ಲ, ಇನ್ನು ದೊಡ್ಡ ಶ್ರೀಮಂತನಾಗುವ ಆಸೆಯಾಯಿತು. ರಾತ್ರಿಯಲ್ಲಿ ಒಂದು ಆಲೋಚನೆ ಹುಟ್ಟಿಕೊಂಡಿತು; ಅದೇನೆಂದರೆ, ‘ಒಂದು ಬಂಗಾರದ ಮೊಟ್ಟೆಗಾಗಿ ಒಂದು ದಿನ ಕಾಯುವುದಕ್ಕಿಂತ ಹೊಟ್ಟೆಯಲ್ಲಿರುವ ಎಲ್ಲಾ ಮೊಟ್ಟೆಗಳನ್ನು ಒಂದೇ ಬಾರಿ ಮಾರಿ ಶ್ರೀಮಂತನಾಗಬಹುದಲ್ಲ’ ಎಂದು.

Stories in Kannada with Moral

ಅದಕ್ಕಾಗಿ ಅವನು ಬೆಳಿಗ್ಗೆ ಎದ್ದು ಕೋಳಿಯ‌‌ ಹೊಟ್ಟೆಯನ್ನು ಸೀಳಿ ನೋಡಿದ. ಆದರೆ ಹೊಟ್ಟೆಯಲ್ಲಿ ಒಂದು ಮೊಟ್ಟೆಯೂ ಸಿಗಲಿಲ್ಲ. ಯಜಮಾನ ಬಹಳವಾಗಿ ದುಃಖಿಸಿದನು. ಅತಿ ಆಸೆಯಿಂದ ಜೀವನಕ್ಕೆ ಆಸರೆಯಾಗಿರುವ ಕೋಳಿಯನ್ನು ಕಳೆದುಕೊಂಡನು.

ಕಥೆಯಲ್ಲಿನ ನೀತಿ / Moral of this Story : ಅತಿಯಾದ ಆಸೆ ಜೀವನವನ್ನು ಸಂಕಷ್ಟಕ್ಕೆ ಕರೆದೊಯ್ಯುತ್ತದೆ. ಜೊತೆಗೆ ಇದ್ದ ನೆಮ್ಮದಿಯೂ ಕೂಡ ಮಾಯವಾಗುತ್ತದೆ.

ನಾಸ್ತಿಕ / An Athiest – Moral Story

Stories in Kannada with Moral

ಒಂದು ಊರಿನಲ್ಲಿ ಒಬ್ಬ ನಾಸ್ತಿಕ ವ್ಯಕ್ತಿ ಇದ್ದನು, ಅವನ ಹೆಸರು ಲೋಕೇಶ್. ಅವನು ಈ ಲೋಕದಲ್ಲಿ ದೇವರು ಇಲ್ಲವೇ ಇಲ್ಲ ಎಂದು ಹೇಳಿಕೊಂಡು ತಿರುಗುತ್ತಿದ್ದನು ಮತ್ತು ಒಂದುವೇಳೆ ಯಾರಾದರೂ ದೇವರು ಇದ್ದಾನೆ ಎಂದು ಹೇಳಿದರೆ ಅವರ ಜೊತೆ ವಾದಕ್ಕಿಳಿದು ಎಲ್ಲಿದ್ದಾನೆ ನನಗೆ ತೋರಿಸು ಎಂದು ಗೇಲಿ ಮಾಡುತ್ತಿದ್ದ.

ತನಗಿರುವ ಎಲ್ಲಾ “ಕಷ್ಟ” ಮತ್ತು “ದಾರಿದ್ರ್ಯಕ್ಕೆ” ದೇವರೇ ಕಾರಣವೆಂದು ದೂಷಿಸುತ್ತಿದ್ದ. ಅಷ್ಟೇ ಅಲ್ಲದೆ ‘ನಾನೇ’, ‘ನನ್ನದು’ ಎಂದು ಜಂಬಕೊಚ್ಚಿಕೊಳ್ಳುತ್ತಿದ್ದನು.

ಲೋಕೇಶ್ ಒಂದು ದಿನ ಮೀನ ಹಿಡಿಯಲು ಸಮುದ್ರ ಮಧ್ಯಭಾಗಕ್ಕೆ ಹೋದ. ಮೀನು ಹಿಡಿಯುವಾಗ ಗಾಳಿ ಮಳೆ ಜೋರಾಗಿ ಎದ್ದಿತು. ಗಾಳಿಯ ರಭಸಕ್ಕೆ ಸಮುದ್ರ ಅಲೆಗಳು ಹುಡುಗು ಗಿಂತ ಎತ್ತರಕ್ಕೆ ಏಳುತ್ತಿದ್ದವು.

ಆಕಾಶದಲ್ಲಿ ಭಯಂಕರ ಗುಡುಗು ಸಿಡಿಲು. ರಭಸವಾಗಿ ಏಳುವ ಅಲೆಗಳು ಹಡುಗನ್ನು ದಿಕ್ಕುತಪ್ಪಿಸಿತು. ಅವನ ಎದೆಯ ಬಡಿತ ಹೆಚ್ಚಾಯಿತು.

Stories in Kannada with Moral

ಆಕಾಶದಿಂದ ಒಂದು ಬೆಳಕು ಹರಿದ ಬಂತು. ಅವನ ಕಣ್ಣುಗಳು ಮೊಬ್ಬಾದವು. ಗುಡುಗಿನ ಶಬ್ಧದಂತೆ ಆಕಾಶದಿಂದ ಒಂದು ಧ್ವನಿ ಕೇಳಿ ಬಂತು.  ನಾಸ್ತಿಕ ಭಯ ಭ್ರಾಂತನಾದನು.

ಆಕಾಶವಾಣಿ, ನಾನು ಈ ಸೃಷ್ಟಿಗೆ “ಸೃಷ್ಟಿಕರ್ತ”, ‘ಆದಿಯಿಂದ ಇದ್ದಾತನು ಮುಂದೆನೂ ಇರುವ ದೇವರು ಆಗಿದ್ದೇನೆ’. ಗರ್ಭದಲ್ಲಿ ನೀನಿನ್ನು ಪಿಂಡವಿರುವಾಗಲೇ ನಿನ್ನನು ರೂಪಿಸಿದವನು ನಾನು.
ಬೆಳೆದಂತೆಲ್ಲ ನಿನ್ನ ಅವಶ್ಯಕತೆಗಳನ್ನೆಲ್ಲ ಪೂರೈಸುವವನು, ಬದುಕಲು ಉಚಿತವಾಗಿ ಗಾಳಿ ಮಳೆ ಬೆಳಕು ಅಗ್ನಿ ಕೊಟ್ಟವನು ನಾನೇ. ಆದರೆ ನೀನು ದೇವರೇ ಇಲ್ಲವೆಂದು ನಿನ್ನಷ್ಟು ಬಂದಂತೆ ನಡೆದುಕೊಳ್ಳುತ್ತೀಯಾ?

ಭೂಮಿಯಲ್ಲಿ ನೀನೆಷ್ಟರವನು, ನಿನ್ನ ಆಯುಷ್ಯಕಾಲ ಎಷ್ಟು? ನೀನು ಇಲ್ಲಿಯೇ ಶಾಶ್ವತವೇ? ಎಂದು ಪ್ರಶ್ನಿಸಿದನು.

Read Also – ಆಗುವುದೆಲ್ಲಾ ಒಳ್ಳೆಯದಕ್ಕೆ

ಆಗ ನಾಸ್ತಿಕ ನಡುಗುತ್ತಾ, “ದೇವರೇ ನನ್ನನ್ನು ಕ್ಷಮಿಸು. ನಾನು ಕಣ್ಣಿದ್ದರೂ ಕುರುಡಾಗಿ ಕಿವಿಯಿದ್ದರೂ ಕಿವುಡನಾಗಿದ್ದೇನೆ. ನನ್ನ ಕಣ್ಣು ಕಿವಿ ಹೃದಯ ನಿಮ್ಮ ಗದರಿಕೆಯಿಂದ ತೆರೆದುಕೊಂಡವು. ಈ ಮಾಯಾ ಪ್ರಪಂಚದಲ್ಲಿ ದುಡ್ಡಿದ್ರೆ ದುನಿಯಾ ಅಂತ ಅಂದುಕೊಂಡಿದ್ದೆ. ನಿಮ್ಮ ಇರುವಿಕೆಯನ್ನು ನಾನು ಗ್ರಹಿಸಲಿಲ್ಲ.

ಸರ್ವೆಶ್ವರನಾದ ದೇವರೇ  ನನ್ನನು ಕ್ಷಮಿಸಿ, ಈ ಆಪತ್ತಿನಿಂದ ರಕ್ಷಿಸಿ, ಕಾಪಾಡು ಎಂದು ಅಂಗಲಾಚಿ ಬೇಡಿಕೊಂಡ. ತಕ್ಷಣವೇ ಗಾಳಿ ಮಳೆ ನಿಂತಿತು. ಸಮುದ್ರದ ಅಲೆಗಳು ಶಾಂತವಾದವು. ಹಡಗು ನಿಧಾನವಾಗಿ ದಡ ಸೇರಿತು. Stories in Kannada with Moral

ಕಥೆಯಲ್ಲಿನ ನೀತಿ / Moral of the Story
ಸರ್ವಶಕ್ತನು ಆದ ದೇವರು ಭೂತ ಭವಿಷ್ಯತ್ ವರ್ತಮಾನ ಕಾಲ ಜ್ಞಾನವನ್ನು ತಿಳಿದವನಾಗಿದ್ದಾನೆ. ಜನನ – ಮರಣ ಆತನ ಕೈವಶವಾಗಿವೆ.
ಯಾವುದೋ ಒಂದು ರೀತಿಯಲ್ಲಿ ಸಹಾಯ ಮಾಡುವಾತನು ಆಗಿದ್ದಾನೆ.
ಸತ್ಯವನ್ನು ಪ್ರೀತಿಸುವವನು ಅಸತ್ಯವನ್ನು ದ್ವೇಷಿಸುವವನೂ ಆಗಿದ್ದಾನೆ.

ಆನೆ ಮತ್ತು ಕುರಿಗಳು / Elephant and the Sheep – Moral Story

ಒಂದು ಅರಣ್ಯದಲ್ಲಿ ಒಂದು ಕುರಿಗಳ ಮಂದೆಯೊಂದು ವಾಸವಾಗಿತ್ತು. ಎಲ್ಲಾ ಕುರಿಗಳು ಬಹಳ ಮುಗ್ಧ ಮತ್ತು ಧೈರ್ಯಶಾಲಿಗಳಾಗಿದ್ದವು.

ಅರಣ್ಯ ಮಧ್ಯಭಾಗದಲ್ಲಿ ಒಂದು ನದಿಯೊಂದು ಹರಿಯುತ್ತಿತ್ತು. ಆ ನದಿ ಕಾಡಿ ಎಲ್ಲಾ ಜೀವಜಂತುಗಳಿಗೆ ಜೀವನದಿಯಾಗಿತ್ತು. ಎಲ್ಲಾ ಪ್ರಾಣಿ ಪಕ್ಷಿಗಳು ಅಲ್ಲಿಗೆ ಬಂದು ನೀರು ಕುಡಿಯುತ್ತಿದ್ದವು. ಕುರಿಗಳು ಸಹ ಎಲ್ಲಾ ಕಡೆ ಮೇಯ್ದು ಬಂದು ಆ ನದಿ ನೀರನ್ನು ಕುಡಿಯುತ್ತಿದ್ದವು.

ಒಂದು ದಿನ ಕುರಿಗಳೆಲ್ಲಾ ನೀರು ಕುಡಿಯುತ್ತಿದ್ದಾಗ ನದಿಯ ಆಕಡೆ ದಡದಲ್ಲಿ ಆನೆಯೊಂದು ಹಲುಬಿಸುತ್ತಾ ಇತ್ತು.

ಕುರಿಗಳೆಲ್ಲಾ ಗಾಬರಿಯಾಗಿ, “ಏನಾಯ್ತು! ಏಕೆ ಅಳುತ್ತಿರುವಿ? ಎಂದು” ಕೇಳಿದವು. ಅದಕ್ಕೆ ಆನೆ “ಇರುವೆಗಳು ನನ್ನ ಸೊಂಡಿಲಿನೊಳಕ್ಕೆ ಬಂದು ಕಚ್ಚುತ್ತಿವೆ, ಅವು ತುಂಬಾ ನೋವು ಕೊಡುತ್ತಿವೆ” ಎಂದಿತು.

ಅದಕ್ಕೆ ಕುರಿಗಳು ಒಂದು ಉಪಾಯವನ್ನು ಯೋಚಿಸಿ ಆನೆಗೆ, “ನೀರಿನಲ್ಲಿ ಮುಳುಗಿ ಸೊಂಡಿಲಿನಿಂದ ರಭಸವಾಗಿ ಎಳೆದು, ಪುನಃ ಅಷ್ಟೇ ರಭಸವಾಗಿ ನೀರು ಹೊರಗೆ ಹಾಕು” ಎಂದು ಹೇಳಿದವು.

ಅವುಗಳ ಮಾತಿನಂತೆ ಆನೆ ನದಿಯಲ್ಲಿ ಮುಳುಗಿ ಸೊಂಡಿಲಿನಿಂದ ನೀರನ್ನು ಹೀರಿ ಹೊರಗಾಕಿತು. ಆಗ ಎಲ್ಲಾ ಇರುವೆಗಳು ನೀರಿನಲ್ಲಿ ಕೊಚ್ಚಿಕೊಂಡು ಹೋದವು. ಆನೆ, ಕುರಿಗಳಿಗೆ ಧನ್ಯವಾದ ಹೇಳಿತು. ಕುರಿಗಳು ಅಲ್ಲಿಂದ ತಮ್ಮ ನಿವಾಸ ಸ್ಥಾನಕ್ಕೆ ಹಿಂದಿರುಗಿದವು.

Aslo Read This – ‘Father and Son’ Moral Story

ಒಂದು ದಿವಸ ಎಲ್ಲಾ ಕುರಿಗಳು ಮೇಯುತ್ತಿದ್ದಾಗ ತೋಳವೊಂದು ದಾಳಿ ಮಾಡಿತು. ಕುರಿಗಳು ಗಾಬರಿಯಾಗಿ ಓಡಲು ಶುರುಮಾಡಿದವು. ತೋಳ ಬೆನ್ನಟ್ಟುತ್ತಲೇ ಇತ್ತು, ಕುರಿಗಳು ನದಿನೀರು ಆಳವಾಗಿರುವುದರಿಂದ ಕೊನೆಯದಾಗಿ ನದಿಯಂಚಿನಲ್ಲಿ ಬಂದು ನಿಂತವು. 

ಅಷ್ಟರಲ್ಲೇ ನದಿ ಆಚೆ ಕಡೆ ಆನೆಯು ಬಂದು ದೊಡ್ಡದಾದ ಮರವೊಂದನ್ನು ನದಿಗೆ ಅಡ್ಡಲಾಗಿ ಉರುಳಿಸಿತು. ತಕ್ಷಣ ಕುರಿಗಳು ಅದರ ಸಹಾಯದಿಂದ ನದಿಯನ್ನು ದಾಟಿದವು. ತೋಳ ಅಲ್ಲಿಂದ ಹೊರಟು ಹೋಯಿತು.

ಕಥೆಯಲ್ಲಿನ ನೀತಿ / Moral of this Story : ನಾವು ಯಥಾರ್ಥವಾಗಿ ಮಾಡಿದ ಸಹಾಯ ಮತ್ತೊಂದು ದಿನ ಮತ್ತೊಂದು ರೀತಿಯಲ್ಲಿ ಅಥವಾ ಯಾವುದೋ ವಿಧದಲ್ಲಿ ನಮಗೆ ದೊರೆಯುತ್ತದೆ.

ಕಾಗೆ ಮತ್ತು ಹಂಸ / The Swan and the Crow – Moral Story

ಒಂದು ಸರೋವರದಲ್ಲಿ ಒಂದು ಸುಂದರವಾದ ಹಂಸ ವಾಸವಾಗಿತ್ತು. ಅದು ಅತ್ಯಂತ ಆನಂದವಾಗಿ, ಆರೋಗ್ಯವಾಗಿ ಇತ್ತು. ಹೆಚ್ಚಿನ ಸಮಯವನ್ನು ಸರೋವರದಲ್ಲಿ ಕಳೆಯುತ್ತಿತ್ತು.

ಅದೇ ಸರೋವರದ ದಡದಲ್ಲಿ ಒಂದು ಮರದ ಕೊಂಬೆಯ ಮೇಲೆ ಕಾಗೆಯೊಂದು ವಾಸವಾಗಿತ್ತು. ಕಾಗೆ ಹಂಸದ ಅಂದಚೆಂದ ಅದರ ಬಿಳಿ ಬಣ್ಣ ನೋಡಿ ಅಸೂಯೆ ಪಟ್ಟಿತು. ಕಾಗೆ ತನ್ನ ಕಪ್ಪು ನೋಡಿ ಚಿಂತಿಸುತ್ತಾ ಕುಳಿತಿತು. ಹೇಗಾದರೂ ನಾನೂ ಅದರಂತೆ ಬೆಳ್ಳಗೆ ಆಗಬೇಕು. ಸುಂದರವಾಗಿ ಕಾಣಬೇಕು ಅಂತ ಅಂದುಕೊಂಡಿತು‌.

Stories in Kannada with Moral

ಹಂಸ ಯಾವಾಗಲೂ ನೀರಿನಲ್ಲಿ ಈಜುವುದರಿಂದಲೇ ಬೆಳ್ಳಗಿದೆ ಎಂದುಕೊಂಡಿತು ಕಾಗೆ. ಅದಕ್ಕಾಗಿ ಕಾಗೆ ದಿನವಿಡೀ ನೀರಿನಲ್ಲಿ ಮುಳುಗಿ ಮುಳುಗಿ ತೇಲಿತು. ಕಾಗೆಯ ಬಣ್ಣ ಕಪ್ಪಾಗಿಯೇ ಇತ್ತು. ಆದರೂ ಕೂಡ ಕಾಗೆ ತನ್ನ ಪ್ರಯತ್ನ ಮಾತ್ರ ಬಿಡಲಿಲ್ಲ, ಮಾಡುತ್ತಲೇ ಇತ್ತು.

ಕೊನೆಗೆ ಕಾಗೆ ನೀರಿನಲ್ಲಿ ಮುಳುಗಿ ಮುಳುಗಿ ನಿಶ್ಯಕ್ತಿ ಹೊಂದಿ, ಅನಾರೋಗ್ಯಕ್ಕೆ ತುತ್ತಾಯಿತು. ಬೇಗ ಚೇತರಿಸಿಕೊಳ್ಳಲಿಲ್ಲ. ಕಾಗೆಗೆ ತನ್ನ ತಪ್ಪಿನ ಅರಿವಾಗಿ ಇದ್ದುದರಲ್ಲೇ ಸಂತೋಷಪಡಬೇಕು ಎಂದು ತಿಳಿದುಕೊಂಡಿತು.

ಕಥೆಯಲ್ಲಿನ ನೀತಿ / Moral of this Story : ಇತರರನ್ನು ನೋಡಿ ಇಲ್ಲದನ್ನು ಆಶಿಸಬಾರದು. ಇದ್ದುದರಲ್ಲೇ ತೃಪ್ತರಾಗಿರಬೇಕು.

Follow our Facebook page – Moral Storys

Stories in Kannada with Moral

ವಿ.ಸೂ. – ಕಥೆಯಲ್ಲಿನ ಏನಾದರೂ ದೋಷಗಳು / ತಪ್ಪುಗಳು ಕಂಡುಬಂದರೆ ದಯಮಾಡಿ ಕಾಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು.





Spread the love

Leave a Reply

Your email address will not be published. Required fields are marked *