Stories in Kannada PDF

Stories in Kannada PDF

Moral Stories
Spread the love

Hi Everyone Welcome to Moral Storys – Stories in Kannada PDF

This Stories helps to every Childrens to gain and build Morality in their life. We are providing best stories. It’s simple and easy to understand.

Stories in Kannada PDF

ತಂದೆ ಮತ್ತು ಮಗ / Father and Son – Stories in Kannada PDF

Stories in Kannada PDF

ಒಂದು ಗ್ರಾಮದಲ್ಲಿ ದೇವಪ್ಪ ಎನ್ನುವ ಒಬ್ಬ ರೈತ ಇದ್ದನು. ಆತನಿಗೆ ಒಬ್ಬ ಮಗನಿದ್ದನು. ಒಬ್ಬನೇ ಮಗ ಇರುವುದರಿಂದ ಅವನನ್ನು ತುಂಬಾ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದನು. ಮತ್ತು ಯಾವುದೇ ರೀತಿಯ ಭಾರವಾದ ಕೆಲಸವನ್ನು ಮಾಡಲು ಬಿಡುತ್ತಿರಲಿಲ್ಲ. Stories in Kannada PDF.

ದೇವಪ್ಪ ಒಬ್ಬ ದೈವಭಕ್ತ, ಪ್ರಾಮಾಣಿಕ ಮತ್ತು ಮೃದುವಾದ ಮಾತಿನ ಶೈಲಿಯನ್ನು ಹೊಂದಿದ್ದ. ಪ್ರತಿಯೊಂದು ಕೆಲಸದಲ್ಲೂ ದೇವರನ್ನು ನೆನೆಸುತ್ತಿದ್ದ. ಅದರಂತೆ ತನ್ನ ಮಗನನ್ನು ಸಹ ಅದೇ ದಾರಿಯಲ್ಲಿ ನಡೆಸಿದ.

ದೇವಪ್ಪನಿಗೆ ಎರಡು ಎಕರೆ ಜಮೀನು ಮತ್ತು ಎರಡು ಎತ್ತುಗಳಿದ್ದವು. ಒಂದು ದಿನ ಹೊಲದಲ್ಲಿ ಬೆಳಿಗ್ಗೆಯಿಂದ ಸಂಜೆಯವರೆಗೆ ನೇಗಿಲ ಹಿಡಿದು ಸುಸ್ತಾಗಿದ್ದನು. ಮತ್ತು ಕಾಲಿಗೆ ಒಂದು ಮುಳ್ಳು ಚುಚ್ಚಿತ್ತು. ಸೂರ್ಯ ಮುಳುಗುವ ಹೊತ್ತಿಗೆ ಮನೆ ಸೇರಿದ.

Read Alsoರಾಜ ಮತ್ತು ಮೂವರು ಕಳ್ಳರು

ರಾತ್ರಿ ಊಟ ಆದ ಮೇಲೆ ತಂದೆ, ಮಗನನ್ನು ಕೂಗಿ ಕಾಲಿಗೆ ಚುಚ್ಚಿರುವ ಮುಳ್ಳನ್ನು ತೆಗೆಯಲು ಕರೆದನು. ಆದರೆ ಮಗ ಫೋನಿನಲ್ಲಿ ಬ್ಯುಸಿ ಆಗಿದ್ದ. ಬೇಗ ಎದ್ದು ಬರಲಿಲ್ಲ. ತಂದೆ ಎರಡು-ಮೂರು ಬಾರಿ ಕೂಗಿಕೊಂಡ. ಮಗ, “ಏನಪ್ಪ ನಿನ್ ಕಿರಿಕಿರಿ ಬಂದೆ ಇರು” ಎಂದು ಗೊಗೆರಿದ.

ತಂದೆ “ನಾಳೆ ಕೆಲಸ ನಿಲ್ಲಬಾರದಪ್ಪ. ಈವತ್ತು ಮುಳ್ಳು ತೆಗೆದರೆ ನಾಳೆಗೆ ಹಗುರಾಗತ್ತೆ, ಒಂದ್ ಎರಡು ನಿಮಿಷ ಬೇಗ ಬಂದ್ಹೋಗಪ್ಪ” ಎಂದನು. ಮಗ ಮೂಗು ಮುರಿಯುತ್ತಾ ಬೇಸರದ ಮನಸ್ಸಿನಿಂದ ಬಂದು ಕಾಲಿಗೆ ಚುಚ್ಚಿರುವ ಮುಳ್ಳನ್ನು ತೆಗೆದನು.

ಮರುದಿನ ಬೆಳಿಗ್ಗೆ ಎದ್ದು ಎತ್ತುಗಳು ಹೊಡೆದುಕೊಂಡು ಹೊಲಕ್ಕೆ ಹೋಗಿ ಯಥಾ ಪ್ರಕಾರ ತನ್ನ ಕೆಲಸದಲ್ಲಿ ತಾನಿದ್ದನು. ಎರಡು ದಿನ ಆದ ಮೇಲೆ ಮಗನಿಗೆ ವಿಪರೀತ ಜ್ವರ ಬಂತು. ಮಗನು ಎದ್ದು ಒಂದು ತುತ್ತು ಅನ್ನ ತಿನ್ನುವಷ್ಟು ಶಕ್ತಿ ಇರಲಿಲ್ಲ.

Stories in Kannada PDF

ತಂದೆ ಆ ದಿನ ತನ್ನ ಎಲ್ಲಾ ಕೆಲಸವನ್ನು ಬದಿಗೊತ್ತಿ ಮಗನ ಆರೋಗ್ಯ ಸುಧಾರಿಸಲು ಮನೆಯಲ್ಲಿದ್ದ. ತಂದೆ ವೈದ್ಯರನ್ನು ಮನೆಗೆ ಕರೆದುಕೊಂಡು ಬಂದನ. ಮಗನನ್ನು ವೈದ್ಯರಿಗೆ ತೋರಿಸಿ, ಇಂಜೆಕ್ಷನ್ ಮಾತ್ರೆ ಕೊಡಿಸಿದ.

ಮಗನಿಗೆ ಜ್ವರ ಕಡಿಮೆಯಾಗುವ ವರೆಗೂ ಅವನ ಜೊತೆಯಿದ್ದು, ಅವನ ಯೋಗಕ್ಷೇಮ ನೋಡಿಕೊಂಡನು. ಆಗ ಮಗನಿಗೆ ತನ್ನ ತಪ್ಪಿನ ಅರಿವಾಗಿ ತಂದೆಯ ಬಳಿ ಕ್ಷಮೆ ಕೇಳಿದ. ನಿನಗೆ ಮುಳ್ಳು ಚುಚ್ಚಿದಾಗ ನಾಳೆ ಕೆಲಸ ನಿಲ್ಲಬಾರದೆಂದು ನನ್ನನು ಕರೆದಾಗ ನಾನು ಅದನ್ನು ತೆಗೆಯಲು ತಾತ್ಸಾರ ಮಾಡಿದೆ. ಆದರೆ ನೀನು ನನಗೋಸ್ಕರ ನಿನ್ನ ಎಲ್ಲಾ ಕೆಲಸಗಳನ್ನು ಬದಿಗೊತ್ತಿ ಯಾವತ್ತೂ ಕೂಡಾ ಬೇಸರ ಪಡದೆ ನನ್ನ ಆರೈಕೆ ಮಾಡಿದೆ.

ಕಥೆಯಲ್ಲಿನ ನೀತಿ / Moral of this Story:
ತಂದೆ ತಾಯಿಗೆ ಎಷ್ಟು ನೋವಿದ್ದರೂ ಅದನ್ನು ತೋರಿಸುವುದಿಲ್ಲ ಆದರೆ ತಮ್ಮ ಮಕ್ಕಳಿಗೆ  ಸ್ವಲ್ಪ ಗಾಯವಾದರೂ ಅವರ ಕರುಳು ಮಿಡುಕುತ್ತದೆ.

ವ್ಯಾಪಾರಿ ಮತ್ತು ಕತ್ತೆ / The Merchant and the Donkey – Stories in Kannada PDF

Stories in Kannada PDF

ಒಂದು ಕಾಲದಲ್ಲಿ ಈಶಪ್ಪ ಎಂಬ ಒಬ್ಬ ಮನುಷ್ಯನಿದ್ದನು. ಅವನು ತುಂಬಾ ಸೋಮಾರಿ ವ್ಯಕ್ತಿಯಾಗಿದ್ದ. ಕಷ್ಟಪಟ್ಟು ಯಾವತ್ತೂ ದುಡಿಯುತ್ತಿರಲಿಲ್ಲ. ದುಡಿಯುವವರನ್ನು ನೋಡಿ ಗೇಲಿ ಮಾಡುತ್ತಿದ್ದ ಮತ್ತು ಜೀವನದಲ್ಲಿ ಯಾವುದನ್ನೂ ಕಷ್ಟಪಟ್ಟು ಗಳಿಸುವ ಮನಸ್ಥಿತಿ ಹೊಂದಿರಲಿಲ್ಲ. ಎಲ್ಲವೂ ತಾನಾಗಿಯೇ ಒದಗಿ ಬರಬೇಕು ಎಂಬ ಆಲೋಚನೆಯಲ್ಲಿ ಬದುಕುತ್ತಿದ್ದನು.

Read Alsoಹಳಿ ತಪ್ಪಿದ ರೈಲು

ಅವನ‌ ತಂದೆ ಒಬ್ಬ ತರಕಾರಿ ವ್ಯಾಪಾರಿಯಾಗಿದ್ದನು. ಮತ್ತು ಅವನಿಗೆ ಒಂದು ಕತ್ತೆ ಇತ್ತು. ಅವನು ದಿನಾಲು ಪೇಟೆಗೆ ಹೋಗಿ ತರಕಾರಿಯನ್ನು ಕತ್ತೆಯ ಮೇಲೆ ಹೇರಿಕೊಂಡು ಮಾರಾಟ ಮಾಡುತ್ತಿದ್ದ.

ಆದರೆ ಅವನು ತನ್ನ ಸ್ವಂತ ಊರಿನಿಂದ ಪೇಟೆಗೆ ‌ಹೋಗಬೇಕಾದರೆ ಒಂದು ದಟ್ಟವಾದ ಕಾಡನ್ನು ಸುತ್ತುವರೆದು ಹೋಗಬೇಕಾಗಿತ್ತು. ಏಕೆಂದರೆ ಊರು ಮತ್ತು ಪೇಟೆಯ ಮಧ್ಯೆ ಒಂದು ಭಯಂಕರವಾದ ಅರಣ್ಯ ಇತ್ತು. ಅದರಲ್ಲಿ ಬೇಟೆಯಾಡುವ ಕ್ರೂರ ಪ್ರಾಣಿಗಳು ಇರುವುದರಿಂದ ಕಾಡಿನ ಮಧ್ಯೆ ಯಾರು ಹೋಗುತ್ತಿರಲಿಲ್ಲ. ಅದಕ್ಕಾಗಿ ಅವನ ತಂದೆ ಕಾಡನ್ನು ಸುತ್ತಿ ಮೂವತ್ತು ಕಿಲೋ ಮೀಟರ್ ಕ್ರಮಿಸಿ ಪೇಟೆಗೆ ಹೋಗಬೇಕಾಗಿತ್ತು.

Stories in Kannada PDF

ಕೆಲವು ದಿನ ಆದ ಮೇಲೆ ಅವನ ತಂದೆ ಅನಾರೋಗ್ಯದಿಂದ ಹಾಸಿಗೆ ಹಿಡಿದನು. ಮತ್ತೆ ವ್ಯಾಪಾರ ಮಾಡುವ ಆಶೆಯನ್ನು ಬಿಟ್ಟ. ಮತ್ತು ಮಗನನ್ನು ಕರೆದು ತನ್ನ ವ್ಯಾಪಾರವನ್ನು ತಾನು ಮುಂದುವರಿಸುವಂತೆ ಹೇಳಿದ. ಅದಕ್ಕವನು ಬೇಗ ಒಪ್ಪಿಕೊಳ್ಳಲಿಲ್ಲ.

ತಂದೆ – “ಜೀವನದಲ್ಲಿ ಯಾವ ಕೆಲಸವೂ ಮಾಡದೆ ಬದುಕುವುದು ಬಲು ಕಷ್ಟ, ಅದರಲ್ಲಿ ಸಮಾಜ ಅಂತವನನ್ನು ಎಂದಿಗೂ ಗೌರವಿಸುವುದಿಲ್ಲ” ಎಂದನು. ಮಗನಿಗೆ ಮುಖ್ಯವಾಗಿ ಕಾಡಿನ ಮಧ್ಯೆ ಹೋಗದಿರಲು ಕಿವಿಯಲ್ಲಿ ಒತ್ತಿ ಒತ್ತಿ ಹೇಳಿದ.

ಅವನ ತಂದೆ ಅನಾರೋಗ್ಯದಿಂದ ಹಾಸಿಗೆ ಹಿಡಿದ ಕಾರಣ ಆರ್ಥಿಕ ಪರಿಸ್ಥಿತಿ ಎದುರಾಯಿತು. ಮನೆ ಸಂಸಾರ ನಡೆಸಲು ಕಷ್ಟವಾಯಿತು ಮತ್ತು ತಂದೆಗೆ ಔಷಧಿ ತರಲು ಹಣ ಸಾಲದೇ ಹೋಯಿತು.

Read Also Thisಮೂರು ಕಾಗೆಗಳು

ಅದಕ್ಕಾಗಿ ಈಶಪ್ಪನು ಕೆಲವು ದಿವಸಗಳಾದ ಮೇಲೆ ವ್ಯಾಪಾರ ಮಾಡಲು ನಿರ್ಧರಿಸಿದನು. ಕತ್ತೆಯನ್ನು ಹೊಡೆದುಕೊಂಡು ಮೂವತ್ತು ಕಿಲೋ ಮೀಟರ್ ನಡೆದು ಪೇಟೆಗೆ ಹೋದನು. ಅಲ್ಲಿ ತರಕಾರಿಯನ್ನು ತಗೊಂಡು ಮತ್ತೆ ಅಲ್ಲಿಂದ ವ್ಯಾಪಾರ ಮಾಡುತ್ತಾ ಹಿಂದಿರುಗಿದನು. ಹೀಗೆ ಒಂದು ವಾರ ವ್ಯಾಪಾರ ಮಾಡಿದ.

ಆದರೆ ದಿನಾಲೂ ಇದೇತರ ಕಾಡನ್ನು ಸುತ್ತಿ ಹೋಗುವುದು ಭಾರಿ ಕಷ್ಟ ಮತ್ತು ಬಹಳ ಸಮಯ ತೆಗೆದುಕೊಳ್ಳುತ್ತದೆ ಎಂದು ಭಾವಿಸಿದ. ಅದಕ್ಕಾಗಿ ಅವನು ಕಾಡಿನ ಮಧ್ಯದಲ್ಲೇ ಹೋಗಲು ನಿರ್ಧರಿಸಿದ.

ಕತ್ತೆಯನ್ನು ಹಿಡಿದುಕೊಂಡು ಕಾಡಿನಲ್ಲಿ ಹೋಗುವಾಗ ಅವನಿಗೆ ಹುಲಿ ಚರ್ಮ ವೊಂದು ಬಿದ್ದಿದ್ದು ಕಾಣಿಸಿತು. ಅದನ್ನು ಕತ್ತೆಗೆ ಹೊದಿಸಿದ ಮತ್ತು ಕಾಡಿನಲ್ಲಿ ಮೂಲಕ ಸಾಗಿದ.

Stories in Kannada PDF

ಕತ್ತೆ ಹುಲಿ ಚರ್ಮ ಹೊದ್ದು ಕೊಂಡಿರುವುದರಿಂದ ಕಾಡಿನ ಕೆಲವು ಸಾಧು ಪ್ರಾಣಿಗಳು ನೋಡಿ ಓಡಿ ಹೋದವು ಇನ್ನುಳಿದ ಹುಲಿ, ಚಿರತೆಯಂತ ಪ್ರಾಣಿಗಳು ಸುಮ್ಮನೆ ನೋಡುತ್ತಾ ನಿಂತಿದ್ದವು. ಅವನು ಅರಣ್ಯವನ್ನು ದಾಟಿ ಪೇಟೆ ಸೇರಿದನು. ಈ ಪ್ಲ್ಯಾನ್ ವರ್ಕೌಟ್ ಆಗ್ತಾ ಇದೆ ಅಂದುಕೊಂಡು ಅದನ್ನೆ ಮುಂದುವರಿಸಲು ನಿರ್ಧರಿಸಿದನು.

ಈಶಪ್ಪನು ಬರುವಾಗ ಕತ್ತೆಗೆ ಬಾಳೆಹಣ್ಣು, ಸೊಪ್ಪು ಕೊಟ್ಟು ಹೊಟ್ಟೆ ತುಂಬಾ ತಿನ್ನಿಸಿದ. ಪುನಃ ಅದೇ ಕಾಡಿನ ಮಾರ್ಗವಾಗಿ ಬರುತ್ತಿದ್ದಾಗ ಹುಲಿ ವೇಷದಲ್ಲಿರುವ ಕತ್ತೆಗೆ ಇನ್ನೊಂದು ಕತ್ತೆ ಕಾಣಿಸುತ್ತದೆ. ಕತ್ತೆಗೆ ಸಂತೋಷವಾಗಿ ವದರಲು(ಕೂಗಲು) ಶುರು ಮಾಡಿತು.

Read Alsoಮಾಯಾ ಬಾಗಿಲು

ಆಗ ಎಲ್ಲಾ ಪ್ರಾಣಿಗಳು ಅದರ ಅಸಲಿ ರೂಪವನ್ನು ಪತ್ತೆ ಹಚ್ಚಿದವು. ನಿಜವಾದ ಹುಲಿಯ ಘರ್ಜನೆಗೆ ಕತ್ತೆ ಓಡಿ ಹೋಯಿತು. ಅವನು ಮರವೇರಿ ಅವಿತು ಕೂತುಕೊಂಡ. ಆಗ ಅವನಿಗೆ ತಂದೆ ಹೇಳಿದ ಉಪದೇಶ ನೆನಪಾಯಿತು.

ಕಥೆಯಲ್ಲಿನ ನೀತಿ / Moral of this Story –

ಜೀವನದಲ್ಲಿ ತಾಳ್ಮೆ, ಸಹನೆಯಿರಬೇಕು.

‌ಹಿರಿಯರ ಮಾತುಗಳನ್ನು ಪಾಲಿಸಬೇಕು.

‌ಕಷ್ಟ ಪಡದೆ ಯಾವುದೂ ಬರುವುದಿಲ್ಲ, ಸುಲಭವಾಗಿ ಬಂದರೆ ಅದು ಚಿರಕಾಲ ಉಳಿಯುವುದಿಲ್ಲ.

ಪಾರಿವಾಳ ಮತ್ತು ಬಲೆ / Pigeon and the Trap

ಒಂದು ಕಾಡಿನಲ್ಲಿ ಪಾರಿವಾಳಗಳ ಗುಂಪೊಂದು ವಾಸವಾಗಿತ್ತು. ಆ ಪಾರಿವಾಳ ಗುಂಪಿಗೆ ಒಂದು ಹಿರಿಯ ಪಾರಿವಾಳ ನಾಯಕನಾಗಿ ಮಾರ್ಗದರ್ಶನ ನೀಡುತ್ತಿತ್ತು.

ಒಂದು ದಿವಸ ಪಾರಿವಾಳಗಳೆಲ್ಲ ಆಕಾಶದಲ್ಲಿ ಹಾರಾಡುತ್ತಿದ್ದಾಗ, ಬೇಟೆಗಾರನೊಬ್ಬ ಮೊಲಗಳನ್ನು ಹಿಡಿಯಲು ಬಲೆಯನ್ನು ಹಾಕುತ್ತಿದ್ದ. ಇದನ್ನು ಸೂಕ್ಷ್ಮವಾಗಿ ಗಮನಿಸಿದ ಪಾರಿವಾಳಗಳು ಎಲ್ಲಾ ಪ್ರಾಣಿ ಮತ್ತು ಪಕ್ಷಿಗಳಿಗೆ ಬೇಟೆಗಾರನಿಂದ ತಪ್ಪಿಸಿಕೊಳ್ಳುವಂತೆ ಸಂದೇಶ ರವಾನಿಸಿದವು.

ಬೇಟೆಗಾರನು ಪಕ್ಷಿಗಳನ್ನು ಬಲೆಗೆ ಕೆಡವಲು ಶೇಂಗಾ ಮತ್ತು ಜೋಳದ ಕಾಳುಗಳನ್ನು ಅಲ್ಲಲ್ಲಿ ಚೆಲ್ಲಿದ ಮತ್ತು ರಹಸ್ಯವಾಗಿ ಅಡಗಿ ಕುಳಿತುಕೊಂಡ. ನವಿಲುಗಳ ಗುಂಪೊಂದು ಅದೇ ಮಾರ್ಗವಾಗಿ ಹಾರುತ್ತಿದ್ದಾಗ ಕೆಳಗಡೆ ಶೇಂಗಾ ಮತ್ತು ಜೋಳದ ಕಾಳುಗಳು ಬಿದ್ದಿರುವುದನ್ನು ಕಂಡು ತಕ್ಷಣ ಅಲ್ಲಿಗೆ ಹಾರಿದವು.

Stories in Kannada PDF

ಬೇಟೆಗಾರನು ಅವುಗಳಿಗೆ ತಿಳಿಯದಂತೆ ರಹಸ್ಯವಾಗಿ ಬಲೆ ಬೀಸಿ ಸೆರೆ ಹಿಡಿದ. ನವಿಲುಗಳು ಬೆಲೆಗೆ ಬಿದ್ದು ಒದ್ದಾಡುತ್ತಿದ್ದವು. ಒಂದೊಂದು ನವಿಲು ಒಂದೊಂದು ದಿಕ್ಕಿಗೆ ಹಾರಲು ಪ್ರಯತ್ನಿಸುತ್ತಿದ್ದಾಗ, ಪಾರಿವಾಳಗಳು ಮೇಲಿಂದ ಇನ್ನೂ ನೀವು ತಪ್ಪಿಸಿಕೊಳ್ಳಲು ಅವಕಾಶವಿದೆ. ಎಲ್ಲರೂ ಒಟ್ಟಿಗೆ ಒಂದೇ ದಿಕ್ಕಿಗೆ ಹಾರಲು ಪ್ರಯತ್ನಿಸಿ ಎಂದು ಸೂಚನೆ ನೀಡಿತು.

ಅದರ ಸೂಚನೆಯಂತೆ ಎಲ್ಲಾ ನವಿಲುಗಳು ಒಂದೇ ದಿಕ್ಕಿಗೆ ಹಾರಿದವು. ಎತ್ತರದಲ್ಲಿ  ಬಲೆಯ ಜೊತೆಗೆ ಹಾರುತ್ತಿರುವಾಗ, ಹಿರಿಯ ಪಾರಿವಾಳ ಬಂದು ‘ನಿಮ್ಮ ಹರಿತವಾದ ಕೊಕ್ಕೆಯಿಂದ ಬಲೆಯನ್ನು ಕಟ್ಟುಮಾಡಿ’ ಎಂದು ಮಾರ್ಗದರ್ಶನ ನೀಡಿತು.‌

Read Alsoಕಂದನ ಮೇಲಿನ ತಂದೆಯ ಪ್ರೀತಿ

ಬಲೆಯೊಳಗೆ ಹಾರುವ ಎಲ್ಲಾ ನವಿಲುಗಳು ತಮ್ಮ ಕೊಕ್ಕೆಯಿಂದ ಬಲೆಯನ್ನು ಕತ್ತರಿಸಿ ಬೀಳಿಸಿದವು. ನವಿಲುಗಳು ಬಲೆಯಿಂದ ಪಾರಾದವು. ಹಿಂದಿನಂತೆ ಸ್ವತಂತ್ರವಾಗಿ ಹಾರಾಡುತ್ತಿದ್ದವು ಮತ್ತು ಹಿರಿಯ ಪಾರಿವಾಳಕ್ಕೆ ಸಾಕಷ್ಟು ಧನ್ಯವಾದಗಳು ಅರ್ಪಿಸಿದವು.

ಕಥೆಯಲ್ಲಿನ ನೀತಿ / Moral of this Story:
ಒಂಟಿಯಾಗಿ ಏನನ್ನು ಸಾಧಿಸಲು ಸಾಧ್ಯವಿಲ್ಲ, ಕೈಗೆ ಕೈ ಸೇರಿದರೆ ಬೆಟ್ಟವನ್ನಾದರೂ ಕದಲಿಸಬಹುದು. ಅದಕ್ಕಾಗಿ ಹಿರಿಯರು ಹೇಳಿರುವುದು ಒಗ್ಗಟ್ಟಿನಲ್ಲಿ ಬಲವಿದೆ ಎಂದು.

Also Read thisಒಗ್ಗಟ್ಟಿನಲ್ಲಿ ಬಲವಿದೆ

Stories in Kannada PDF

Follow Our Facebook Page – Moral Storys

* ವಿ.ಸೂ. – ಈ ಮೇಲಿನ ಕಥೆಗಳಲ್ಲಿ ಏನಾದರೂ ತಪ್ಪು / ದೋಷಗಳು ಕಂಡುಬಂದರೆ ದಯಮಾಡಿ ಕಾಮೆಂಟ್ ಮೂಲಕ ತಿಳಿಸಿ ಧನ್ಯವಾದಗಳು.


Spread the love

Leave a Reply

Your email address will not be published. Required fields are marked *