Hi Everyone, Welcome to Moral Storys. – Short Story with a Moral
You can see here the best Moral Stories in Kannada. Kannada Short Moral Stories
1. ಮೊಲ, ಮೊಸಳೆ ಮತ್ತು ನರಿ – Short Story with a Moral

ಒಂದಾನೊಂದು ಕಾಲದಲ್ಲಿ ಮೊಲ ತನ್ನ ಕುಟುಂಬದೊಂದಿಗೆ ದಟ್ಟವಾದ ಕಾಡಿನಲ್ಲಿ ವಾಸವಾಗಿತ್ತು. ಮೊಲ ತನ್ನ ಮರಿಗಳೊಂದಿಗೆ ಆಟವಾಡುತ್ತಾ ಸಂತೋಷದಿಂದ ಇತ್ತು.
ಮೊಲ ಒಂದು ದಿವಸ ಆಹಾರಕ್ಕಾಗಿ ಹೊರಗಡೆ ಹೋದಾಗ ನರಿ ಕಣ್ಣಿಗೆ ಬಿತ್ತು. ನರಿ, “ಆಹಾ! ಎಷ್ಟು ಸುಂದರವಾಗಿದೆಯಲ್ಲಾ, ನೋಡ್ಲಿಕ್ಕೆ ಇಷ್ಟು ಸುಂದರವಾಗಿದ್ರೆ ಇನ್ನು ಅದನ್ನು ತಿಂದ್ರೆ ಇನ್ನೆಷ್ಟು ರುಚಿಯಾಗಿರುತ್ತೆ” ಎಂದು ಮನಸಿನಲ್ಲಿ ಅಂದುಕೊಂಡಿತು. ನರಿ ಮೊಲವನ್ನು ಹಿಡಿಯಲು ಹಾರಿತು ಆದರೆ ಮೊಲ ಸಿಗದಂತೆ ಓಡಿ ಹೋಗಿ ತನ್ನ ಪೊದೆ ಸೇರಿತು.
ನರಿ ಅಷ್ಟಕ್ಕೆ ಸುಮ್ಮನಾಗಲಿಲ್ಲ, ಮೊಲದ ಹೆಜ್ಜೆ ಜಾಡು ಹಿಡಿದು ಮೊಲ ವಾಸಿಸುವ ಪೊದೆಯನ್ನು ಪತ್ತೆ ಮಾಡಿತು. ನರಿ ಮೊಲದ ಹತ್ತಿರ ಬಂದು “ನಾನು ನಿನ್ನನು ತಿನ್ನದೇ ಬಿಡಲಾರೆ. ನೀನಾಗಿ ಒಪ್ಪಿಕೊಂಡರೆ ನಿನ್ನನು ಮಾತ್ರ ತಿನ್ನುವೆ ಇಲ್ಲವಾದರೆ ನಿನ್ನ ಮಕ್ಕಳನ್ನೂ ಬಿಡುವುದಿಲ್ಲ” ಎಂದಿತು.
ಆಗ ಮೊಲ ಬೇರೆ ದಾರಿ ಕಾಣದೆ “ಸರಿ ಆದರೆ ಸ್ವಲ್ಪ ದಿನ ಟೈಮ್ ಬೇಕು” ಎಂದು ಕೇಳಿತು. ಅದಕ್ಕೆ ನರಿ “ಸರಿ ಹಾಗಾದ್ರೆ ಎರಡು ದಿನ ಟೈಮ್ ಕೊಡ್ತೀನಿ. ಮೂರನೇ ದಿನ ಇಲ್ಲಿಗೆ ಬಂದು ಬಿಡ್ತೀನಿ” ಎಂದು ಹೇಳಿ ಹೊರಟುಹೋಯಿತು.
ಮೊಸಳೆಯ ಜೊತೆ ಮೊಲಕ್ಕೆ ತುಂಬಾ ಆತ್ಮೀಯ ಸ್ನೇಹವಿತ್ತು ಹಾಗಾಗಿ ಮೊಲ ತನಗೆ ಎದುರಾದ ಸಂಕಷ್ಟವನ್ನೆಲ್ಲ ತೋಡಿಕೊಂಡಿತು. ಅದಕ್ಕೆ ಮೊಸಳೆ ಈ ರೀತಿಯಾಗಿ ಸಲಹೆ ಕೊಡುತ್ತದೆ. ಅದೆನೆಂದರೆ “ನರಿ ನಿನ್ನ ಹತ್ತಿರ ಬಂದಾಗ ಹೇಗಾದರೂ ಮಾಡಿ ನನ್ನ ಬಳಿ ಕರಕೊಂಡು ಬಾ, ಮಿಕ್ಕಿದ್ದೆಲ್ಲಾ ನಾನು ನೋಡಿಕೊಳ್ಳುತ್ತೇನೆ” ಎಂದಿತು.
ನರಿ ಹೇಳಿದ್ಹಾಗೆ ಮೂರನೇ ದಿನ ಮೊಲದ ಹತ್ತಿರ ಬಂದು “ನಿನಗೆ ಕೊಟ್ಟ ಟೈಮ್ ಮುಗಿತು, ಇನ್ನು ನಾನು ತಡಮಾಡಲಾರೆ” ಎಂದಿತು.
Aslo Read – ನರಿ ಮತ್ತು ಇಲಿಗಳು
ಆಗ ಮೊಲ “ನಾನೂ ಸಿದ್ದವಾಗೆ ಇದ್ದೇನೆ ಆದರೆ ನನ್ನ ಆತ್ಮೀಯ ಸ್ನೇಹಿತ ನಿನ್ನನು ಕಾಣಬೇಕೆಂದು ಆತೊರೆಯುತ್ತಿದ್ದಾನೆ ಮತ್ತು ನಿನಗಾಗಿ ಎಲ್ಲಾ ತರಹದ ಮಾಂಸವನ್ನು ಮತ್ತು ಭಕ್ಷ ಭೋಜನವನ್ನು ಸಿದ್ಧಪಡಿಸಿದ್ದಾನೆ” ಎಂದಿತು. ಆಗ ನರಿಗೆ ಇನ್ನೂ ಆಸೆ ಜಾಸ್ತಿಯಾಗಿ “ಹೌದಾ! ಹಾಗಾದ್ರೆ ನಡೆ ಹೋಗೋಣ” ಎಂದು ಹೇಳಿತು.
ಮೊಲ ಮತ್ತು ನರಿ ಮೊಸಳೆಯ ಹತ್ತಿರ ಬಂದವು. ನರಿ ಬಂದದ್ದನ್ನು ಕಂಡು ಮೊಸಳೆ “ನರಿ ಚಕ್ರವರ್ತಿಗೆ ಜಯವಾಗಲಿ! ಜಯವಾಗಲಿ! ನಮ್ಮ ಈ ಸುಂದರ ಪ್ರದೇಶಕ್ಕೆ ನಿಮ್ಮನು ಪ್ರೀತಿಯಿಂದ ಆಹ್ವಾನಿಸುತ್ತೆವೆ” ಎಂದು ಕೂಗಿತು.
ಮೊಸಳೆ, ನರಿಗೆ “ನಿಮಗಾಗಿ ನದಿಯ ಒಳಗಡೆ ರಾಜ ಸಿಂಹಾಸನವನ್ನಾಕಿ ಎಲ್ಲಾ ತರಹದ ಮಾಂಸವನ್ನು ಮತ್ತು ಭಕ್ಷ ಭೋಜನವನ್ನು ಸಿದ್ಧಪಡಿಸಿದ್ದೆನೆ, ದಯಮಾಡಿ ಆಗಮಿಸಿ” ಎಂದು ನದಿಗೆ ಹಾರಿತು.
ಆಗ ನರಿ ಒಂದು ಕ್ಷಣನು ಯೋಚನೆ ಮಾಡದೆ ಮೂರ್ಖತನದಿಂದ ನದಿಗೆ ಹಾರಿತು. ನದಿಯಲ್ಲಿ ನೀರು ಆಳವಾಗಿರುವುದರಿಂದ ನಿಲುವು ಸಿಗದೆ ನರಿ ವಿಲವಿಲ ಒದ್ದಾಡಿ ಪ್ರಾಣ ಬಿಟ್ಟಿತು.
ಮೊಸಳೆ ಮಾಡಿದ ಸಹಾಯಕ್ಕೆ ಮೊಲ ಕೃತಜ್ಞತೆಯನ್ನು ಸಲ್ಲಿಸುತ್ತದೆ ಮತ್ತು ತನ್ನ ಮರಿಗಳೊಂದಿಗೆ ಸಂತೋಷದಿಂದ ಜೀವಿಸುತ್ತದೆ.
ಕಥೆಯಲ್ಲಿನ ನೀತಿ / Moral of this Story :
ಉಪಾಯವೊಂದಿದ್ದರೆ ಎಂತಹ ಅಪಾಯದಿಂದಾದರೂ ಪಾರಾಗಬಹುದು.
2. ಮೀನುಗಾರ ಮತ್ತು ಬಲೆ – Short Story with a Moral

ಒಂದು ಊರಿನಲ್ಲಿ ನಾಗಪ್ಪ ಎನ್ನುವ ಒಬ್ಬ ಮೀನುಗಾರ ಇದ್ದ. ಅವನು ಊರಿಗೆ ಸಮೀಪದಲ್ಲಿರುವ ನದಿಯೊಂದರಲ್ಲಿ ಮೀನುಗಳನ್ನು ಹಿಡಿದು ಮಾರಾಟ ಮಾಡುತ್ತಿದ್ದ. ಮೀನು ಮಾರಾಟ ಮಾಡಿ ಬಂದ ದುಡ್ಡಿನಿಂದ ಜೀವನ ನಡೆಸುತ್ತಿದ್ದ. ಮೀನುಗಾರಿಕೆ ಅವನ ಪ್ರಧಾನ ಕಸುಬಾಗಿತ್ತು.
ನಾಗಪ್ಪ ಒಂದು ದಿನ ಪೇಟೆಗೆ ಹೋಗಿ ಹೊಸ ಮೀನಿನ ಬಲೆ ತೆಗೆದುಕೊಂಡು ಬಂದನು. ಇದರಿಂದ ಇನ್ನೂ ಹೆಚ್ಚು ಮೀನುಗಳನ್ನು ಹಿಡಿದು ಮಾರಾಟ ಮಾಡಿ ಹೆಚ್ಚು ಹಣ ಸಂಪಾದಿಸಿದ. ಹೀಗೆ ನಾಗಪ್ಪ ಮೀನುಗಾರಿಕೆಯಲ್ಲಿ ವೃದ್ಧಿಯಾಗುತ್ತಾ ಹೋದಂತೆಲ್ಲ ಉಳಿದ ಮೀನುಗಾರರು ಅವನ ಏಳಿಗೆಯನ್ನು ಸಹಿಸದೆಹೋದರು.
ಒಂದು ದಿನ ರಾತ್ರಿ ನಾಗಪ್ಪ ಮಲಗಿಕೊಂಡಿದ್ದಾಗ ಕಳ್ಳರು ಬಂದು ಮೀನಿನ ಬಲೆಯನ್ನು ತೆಗೆದುಕೊಂಡು ಹೋದರು. ನಾಗಪ್ಪ ಬೆಳಿಗ್ಗೆ ಎದ್ದು ನೋಡಿದರೆ ಮೀನಿನ ಬಲೆ ಇರೋದಿಲ್ಲ.
ನಾಗಪ್ಪ ನದಿ ದಂಡೆಯ ಮೇಲೆ ಕುಳಿತು ಅಳುತ್ತಿರುತ್ತಾನೆ. ಗಂಗಾ ದೇವತೆ ಪ್ರತ್ಯಕ್ಷವಾಗಿ “ಪ್ರಿಯಾ ಮಗನೇ ಏಕೆ ಅಳುತ್ತಾ ಕೂತಿರುವೆ?” ಎಂದು ನಾಗಪ್ಪನನ್ನು ಕೇಳುತ್ತಾಳೆ.
Also Read – ನಾಸ್ತಿಕ
ಅದಕ್ಕೆ ನಾಗಪ್ಪನು “ನನ್ನ ಮೀನಿನ ಬಲೆಯನ್ನು ಯಾರೋ ಕದ್ದುಕೊಂಡು ಹೋಗಿದ್ದಾರೆ” ಎಂದು ಉತ್ತರಿಸುತ್ತಾನೆ. ಆಗ ಗಂಗಾ ದೇವತೆ ಮೀನು ತುಂಬಿರುವ ಹತ್ತು ಬಲೆಯನ್ನು ಕೊಟ್ಟು ಮಾಯಾವಾಗುತ್ತಾಳೆ.
ನಾಗಪ್ಪ ಆ ಹತ್ತು ಬಲೆಗಳ ಮೀನುಗಳನ್ನು ತೆಗೆದುಕೊಂಡು ಮಾರುಕಟ್ಟೆಯಲ್ಲಿ ಮಾರಾಟ ಮಾಡಿ ಸಾಕಷ್ಟು ಲಾಭ ಗಳಿಸಿದನು. ನಾಗಪ್ಪ ಒಬ್ಬ ದೊಡ್ಡ ಮೀನು ವ್ಯಾಪಾರಿಯಾಗಿ ಬೆಳೆದನು.
ತನ್ನ ಕೈ ಕೆಳಗೆ ಹತ್ತು ಜನರನ್ನು ಕೆಲಸಕ್ಕೆ ಇಟ್ಟುಕೊಂಡನು. ಮತ್ತೆ ಇದನ್ನೆಲ್ಲಾ ನೋಡಲಾಗದ ಉಳಿದ ಮೀನುಗಾರರು ನಾಗಪ್ಪನ ಹತ್ತಿರ ಬಂದು ಕೇಳಿದರು.
ಇದೆಲ್ಲಾ ನೀನು ಹೇಗೆ ಗಳಿಸಿದಿ ಎಂದು ಕೇಳಿದರು. ಅದಕ್ಕವನು ನಡೆದ ಸಂಗತಿಯನ್ನೆಲ್ಲಾ ವಿವರಿಸಿದನು. ಅವನ ಮಾತನ್ನು ಕೇಳಿದ ಉಳಿದ ಮೀನುಗಾರರಿಗೆ ಆಸೆಯಾಗಿ ನದಿಯ ದಡದಲ್ಲಿ ಕುಳಿತು ಅಳುತ್ತಿರುವಂತೆ ನಟಿಸಿದರು.
ಗಂಗಾ ದೇವತೆ ಪ್ರತ್ಯಕ್ಷವಾಗಲೇ ಇಲ್ಲ, ಇನ್ನೂ ಜೋರಾಗಿ ಅಳುವಂತೆ ನಟಿಸಿದರು. ಒಮ್ಮಿಂದೊಮ್ಮೆಲೆ ನದಿ ಬಂದು ಅವರನ್ನು ಕೊಚ್ಚಿಕೊಂಡು ಹೋಯಿತು.
ಕಥೆಯಲ್ಲಿನ ನೀತಿ / Moral of this Story:
ಸಾಧಿಸುವ ಛಲ ಕಷ್ಟ ಪಡುವವರಲ್ಲಿ ಮಾತ್ರ ಕಾಣಿಸುತ್ತದೆ.
ಇನ್ನೊಬ್ಬರ ಸೋಲನ್ನು, ನಾಶನವನ್ನು ಕೋರುವವರು ತಮ್ಮ ಗುಂಡಿಯನ್ನು ತಾವೆ ತೋಡಿಕೊಳ್ಳುತ್ತಾರೆ.
3. ಕಾಗೆ ಮತ್ತು ಕೋಗಿಲೆ – Short Story with a Moral

ಕಾಗೆ ಮತ್ತು ಕೋಗಿಲೆ ಎರಡು ಒಳ್ಳೆ ಸ್ನೇಹಿತರಾಗಿದ್ದವು. ಒಂದು ದಿನ ಗಾಳಿ ಮಳೆ ಬಂದಾಗ ಇಬ್ಬರ ಗೂಡುಗಳು ಗಾಳಿಗೆ ಬಡಿದುಕೊಂಡು ಹೋದವು. ಮಾರನೇ ದಿನ ಕಾಗೆ ಮತ್ತು ಕೋಗಿಲೆ ಹೊಸ ಗೂಡು ಕಟ್ಟಿಕೊಳ್ಳಲು ಸೌದೆ ತರುವುದಕ್ಕಾಗಿ ಕಾಡಿಗೆ ಹೋದವು.
ಅಲ್ಲಿ ಒಬ್ಬ ಕಟ್ಟಿಗೆ ಕಡಿಯುವವನು ಕಟ್ಟಿಗೆಗಳನ್ನು ಸಾಗಿಸಲು ಪ್ರಯಾಸ ಪಡುತ್ತಿದ್ದ. ಅವನನ್ನು ನೋಡಿದ ಕಾಗೆ ಮತ್ತು ಕೋಗಿಲೆ ಸಹಾಯ ಮಾಡಲು ಹತ್ತಿರ ಹೋದವು.
ಕಾಗೆ ಅವನಿಗೆ “ಪಕ್ಕದಲ್ಲಿ ನದಿಯೊಂದು ಹರಿಯುತ್ತಿದೆ, ಈ ಕಟ್ಟಿಗೆಗಳನ್ನು ಆ ನದಿಯಲ್ಲಿ ಹಾಕಿ ಮತ್ತು ಮುಂದೆ ಆ ಕಟ್ಟಿಗೆಗಳನ್ನು ಕೂಡಿಹಾಕಿಕೊ” ಎಂದು ಸಲಹೆ ನೀಡಿದವು. ಅವನು ಕಾಗೆ ಮತ್ತು ಕೋಗಿಲೆಗೆ ಧನ್ಯವಾದ ಹೇಳಿದನು ಮತ್ತು ಗೂಡು ಕಟ್ಟಿಕೊಳ್ಳಲು ಸೌದೆಯನ್ನು ಕೊಟ್ಟನು.
ಕಾಗೆ ಮತ್ತು ಕೋಗಿಲೆ ಸೌದೆ ತಗೊಂಡು ಬಂದವು. ಆಲದ ಮರದ ಕೊಂಬೆಯಲ್ಲಿ ಗೂಡನ್ನು ಕಟ್ಟಿಕೊಂಡವು. ಕೆಲವು ದಿನ ಆದ ಮೇಲೆ ಎರಡು ಪಕ್ಷಿಗಳು ಮೊಟ್ಟೆ ಇಟ್ಟು ಮರಿ ಎಬ್ಬಿಸಿದವು. ಕಾಗೆ ಮತ್ತು ಕೋಗಿಲೆ ಮರಿಗಳನ್ನು ಗೂಡಿನಲ್ಲಿ ಬಿಟ್ಟು ಆಹಾರಕ್ಕಾಗಿ ಹೊರಗಡೆ ಹೋದವು.
ಕೋಗಿಲೆಗೆ ಒಂದು ಜೋಳದ ತೆನೆ ಸಿಕ್ಕಿತು ಆದರೆ ಕಾಗೆಗೆ ಏನೂ ಸಿಗಲಿಲ್ಲ, ಅದಕ್ಕಾಗಿ ಕಾಗೆ “ಆ ಜೋಳದ ತೆನೆಯನ್ನು ಏಕಾದರೂ ಮಾಡಿ ನಾನು ತಗೋಬೇಕು” ಅಂತ ಅಂದುಕೊಂಡಿತು.
ಮೆಲ್ಲಗೆ ಕಾಗೆ ಕೋಗಿಲೆ ಹತ್ರ ಬಂದು “ಇವತ್ತು ಮಹಾ ಪರಿಶುದ್ಧವಾದ ದಿನ ಕಣ್ಣು ಮುಚ್ಚಿ ರಾಘವೇಂದ್ರ ಸ್ವಾಮಿಗಳ ನೂರ ಎಂಟು ಮಂತ್ರ ಹೇಳಿದರೆ ನೂರಾ ಎಂಟು ಸಿಹಿ ತಿನಿಸುಗಳನ್ನು ಕೊಡ್ತಾರಂತೆ, ಇನ್ನೂ ಸ್ವಲ್ಪ ಹೊತ್ತಾದ್ರೆ ರಾಹು ಕಾಲ ಬರುತ್ತೆ” ಎಂದು ಸುಳ್ಳು ಹೇಳಿತು.
ಅದರ ಮಾತು ಕೇಳಿ ಕೋಗಿಲೆ ಕಣ್ಣು ಮುಚ್ಚಿಕೊಂಡು ಮಂತ್ರ ಪಠಿಸುವಾಗ ಕಾಗೆ ಮೆಲ್ಲಗೆ ಜೋಳದ ತೆನೆಯನ್ನು ತೆಗೆದುಕೊಂಡು ಹೋಯಿತು.
ಕೋಗಿಲೆ ಕಣ್ಣು ತೆರೆದು ನೋಡಿದಾಗ ಅಲ್ಲಿ ಕಾಗೆ ಮತ್ತು ಜೋಳದ ತೆನೆ ಇಲ್ಲದಿರುವುದನ್ನು ಕಂಡು ದುಃಖಿಸಿತು. ಕೋಗಿಲೆಗೆ “ಕಾಗೆ ನನ್ನ ಮೋಸ ಮಾಡಿತು” ಎಂದು ಅರ್ಥವಾಯಿತು.
ಕೋಗಿಲೆ ತನ್ನ ಮರಿಗಳು ಬೆಳಿಗ್ಗೆಯಿಂದ ಉಪವಾಸವಿದ್ದಾವೆಂದು ತಿಳಿದು ಮತ್ತೆ ಆಹಾರಕ್ಕಾಗಿ ಅಲೆದಾಡುತ್ತಿದ್ದಾಗ ಕಟ್ಟಿಗೆ ಕಡಿಯುವವನು ತನ್ನ ಮನೆಯಲ್ಲಿ ಇರುವ ದವಸಧಾನ್ಯ, ಹಣ್ಣುಹಂಪಲು ಕೊಟ್ಟು ಕಳಿಸುತ್ತಾನೆ.
ಕೋಗಿಲೆ ದವಸಧಾನ್ಯ, ಹಣ್ಣುಹಂಪಲು ತೆಗೆದುಕೊಂಡು ತನ್ನ ಗೂಡಿಗೆ ಬಂದಿತು. ಅಲ್ಲಿ ಕಾಗೆ ಘೋರವಾಗಿ ಅಳುತ್ತಾ ಕುಂತಿತ್ತು.
Also Read – ಮೂರು ಕಾಗೆಗಳು
ಕೋಗಿಲೆ “ಏನಾಯ್ತು, ಯಾಕೆ ಅಳುತ್ತಿದ್ದಿ” ಎಂದು ಕಾಗೆಯನ್ನು ಕೇಳಿತು.
ಅದಕ್ಕೆ ಕಾಗೆ “ನಿನ್ನ ಜೋಳದ ತೆನೆಯನ್ನು ತೆಗೆದುಕೊಂಡು ಬರುತ್ತಿದ್ದಾಗ ಹದ್ದು ಬಂದು ನನ್ನೆಲ್ಲಾ ಮರಿಗಳನ್ನು ತೆಗೆದುಕೊಂಡು ಹೋಯಿತು” ಎಂದು ಅಳುತ್ತಾ ಹೇಳಿತು.
ಕಥೆಯಲ್ಲಿನ ನೀತಿ / Moral of this Story :
ನಾವು ಒಬ್ಬರನ್ನು ಮೋಸ ಮಾಡಲು ಪ್ರಯತ್ನಿಸಿದರೆ ; ಮತ್ತೊಬ್ಬರು ನಮ್ಮನ್ನು ಮೋಸ ಮಾಡಲು ಹೊಂಚು ಹಾಕುತ್ತಿರುತ್ತಾರೆ.