Short Stories Morals

Short Stories Morals

Moral Stories
Spread the love

Hi Everyone, Welcome to Moral Storys – Short Stories Morals

1. ಆನೆ ಮತ್ತು ನರಿ – Short Stories Morals

Short Stories Morals
Short Stories Morals

ಒಂದು ಅಡವಿಯಲ್ಲಿ ಒಂದು ನರಿ ಮತ್ತು ಆನೆ ಜೀವಿಸುತ್ತಾ ಇದ್ದವು. ಇಬ್ಬರು ತುಂಬಾ ಆತ್ಮೀಯವಾಗಿ ಜೀವಿಸುತ್ತಿದ್ದರು. ಎಷ್ಟೆಂದರೆ ಒಬ್ಬರನ್ನೊಬ್ಬರು ಬಿಟ್ಟಿರಲಾರದಷ್ಟು.

ನದಿ ಆಚೆ ಕಡೆ ಒಂದು ಕಬ್ಬಿನ ಹೊಲ ಇತ್ತು. ಒಂದು ದಿನ ಆನೆಗೆ ಕಬ್ಬು ತಿನ್ನುವ ಆಸೆಯಾಯಿತು. ಈ ಮಾತನ್ನು ನರಿಗೆ ತಿಳಿಸಿತು, ಇವತ್ತು ನಂಗೆ ಕಬ್ಬು ತಿನ್ನುವ ಆಸೆಯಾಗಿದೆ ಎಂದು. ಅದಕ್ಕೆ ನರಿ ‘ಹೌದು ನಂಗೂ ತಿನ್ನುವ ಆಸೆಯಾಗಿದೆ ಬಹಳ ದಿವಸ ಆಯಿತು ತಿಂದಿಲ್ಲ’ ಎಂದಿತು.

ಆದರೆ ನಾವು ನದಿ ದಾಟೋದು ಹೇಗೆ, ನಂಗೆ ಈಜು ಬರಲ್ವಲ್ಲ  ಎಂದಿತು ನರಿ. ಅದಕ್ಕೆ ಆನೆ ನಾನು ಇದಿನಲ್ವ ನನ್ನ ಬೆನ್ನಿನ ಮೇಲೆ ಕೂರಿಸಿಕೊಂಡು ಹೋಗ್ತೀನಿ ಎಂದಿತು.

ಆನೆ ನರಿಯನ್ನು ತನ್ನ ಬೆನ್ನಿನ ಮೇಲೆ ಕೂಡಿಸಿಕೊಂಡು ನದಿ ದಾಟಿತು. ಇಬ್ಬರು ಕಬ್ಬಿನ ಹೊಲಕ್ಕೆ ಹೋದರು. ನರಿ ಬೇಗ ಬೇಗ ತಿಂದು ಹೊಟ್ಟೆ ತುಂಬಿಸಿಕೊಂಡಿತು ಆದರೆ ಆನೆಯ ಹೊಟ್ಟೆ ದೊಡ್ದದಾಗಿರುವದರಿಂದ ಬೇಗ ಹೊಟ್ಟೆ ತುಂಬಲಿಲ್ಲ. ಆದರೆ ಹೊಟ್ಟೆ ತುಂಬಿರುವ ನರಿ ಮೈಮರೆತು ಸಂತೋಷದಿಂದ ಕೂಗಲು ಶುರುಮಾಡಿತು.

ಆನೆ, ಕೂಗಬೇಡ ಯಾರಾದರೂ ಬಂದು ನೋಡಿದರೆ ನಮ್ ಗತಿ ಅಷ್ಟೇ ಎಂದಿತು. ಆದರೂ ಕೂಡ ನರಿ ಕೇಳಲಿಲ್ಲ. ತನ್ನ ಹಠವನ್ನು ತಾನು ಸಾಧಿಸತೊಡಗಿತು. ನರಿಯ ಕೂಗು ಕೇಳಿ ಅಷ್ಟರಲ್ಲೇ ಹೊಲದ ಯಜಮಾನ  ಬಂದನು.

Read Also – ಕತ್ತೆ ಮತ್ತು ಕುದುರೆ

ನರಿ ವೇಗವಾಗಿ ಓಡಿ ದೊಣ್ಣೆಯ ಏಟಿನಿಂದ ತಪ್ಪಿಸಿಕೊಂಡಿತು. ಆದರೆ ಆನೆ ದೊಡ್ಡದಾಗಿ ಮತ್ತು ಭಾರವಾಗಿ ಇರುವುದರಿಂದ ಯಜಮಾನನ ಏಟುಗಳಿಂದ ತಪ್ಪಿಸಿಕೊಳ್ಳಲು ಆಗಲಿಲ್ಲ. ಅವನು ಆನೆಯನ್ನು ಹಿಗ್ಗಾಮುಗ್ಗಾ ಥಳಿಸಿದನು. ಕೊನೆಗೆ ಹೇಗೋ ಹೊಲದ ಮೇರೆಯನ್ನು ದಾಟಿ ಬಂದಿತು.

ಕೊನೆಗೆ ನರಿ ಮತ್ತು ಆನೆ ನದಿ ದಡದಲ್ಲಿ ಭೇಟಿಯಾದವು. ಆನೆ ನರಿಯನ್ನು ಹೀಗೇಕೆ ಮಾಡಿದಿ ಎಂದು ಕೇಳಿತು. ಅದಕ್ಕೆ ನರಿ ಹೊಟ್ಟೆ ತುಂಬಾ ತಿಂದ ಮೇಲೆ ಕೂಗುವುದು ನನಗೆ ಅಭ್ಯಾಸ ಎಂದು ಹೇಳಿತು.

Short Stories Morals

ಆಗ ಆನೆ ಏನು ಮಾತಾಡದೆ ಸುಮ್ಮನೆ ಇದ್ದಿತು. ಕೊನೆಗೆ ನದಿಯ ಈಚೆ ಕಡೆಯಿಂದ ಆ ಕಡೆ ದಾಟಬೇಕಿತ್ತು. ಆಗ ಆನೆ ಮೊದಲಿನಂತೆ ನರಿಯನ್ನು ತನ್ನ ಬೆನ್ನಿನ ಮೇಲೆ ಕೂಡಿಸಿಕೊಂಡು ನದಿಯ ಮಧ್ಯಭಾಗಕ್ಕೆ ಬಂದಿತು.

ನದಿ ಮಧ್ಯ ಭಾಗಕ್ಕೆ ಬಂದಾಗ ಆನೆ ನೀರಿನಲ್ಲಿ ಪೂರ್ತಿಯಾಗಿ ಮುಳುಗಿ ಮುಳುಗಿ ಸ್ನಾನ ಮಾಡತೊಡಗಿತು. ನರಿಗೆ ಭಯವಾಯಿತು. ತುಂಬಾ ಸಿಟ್ಟಿನಿಂದ ನೀನು ಏನು ಮಾಡ್ತಾ ಇದಿಯಾ, ನೀನು ಹಾಗೆ ಮಾಡಿದರೆ ನಾನು ನಿಜವಾಗ್ಲೂ ಸಾಯ್ತೀನಿ ಎಂದು ಕಿರುಚಿಕೊಂಡಿತು.

ಅದಕ್ಕೆ ಆನೆ ದೊಣ್ಣೆ ಏಟು ತಿಂದ ಮೇಲೆ ಆಳವಾದ ನೀರಿನಲ್ಲಿ ಮುಳುಗುವ ಅಭ್ಯಾಸವಿದೆ ಎಂದಿತು. ಆಗ ನರಿ “ನಾನು ಮಾಡಿದ ಕೆಲಸಕ್ಕೆ ಪ್ರತೀಕಾರ ತೀರಿಸಿಕೊಳ್ಳುತ್ತಿದೆ ಎಂದುಕೊಂಡಿತು. ಕೊನೆಗೆ ಆನಯೇ ನರಿಯನ್ನು ಸುರಕ್ಷಿತವಾಗಿ ದಡ ಸೇರಿಸಿತು.

Read Also – ಹಳಿ ತಪ್ಪಿದ ರೈಲು

ನರಿ ಆವತ್ತಿನಿಂದ ಯಾವ ಪ್ರಾಣಿಗೂ ತೊಂದರೆ ಕೊಡುವ ಆಲೋಚನೆಯೂ ಮಾಡಲಿಲ್ಲ. ಮೊದಲಿನಂತೆ ಆನೆ ಮತ್ತು ನರಿ ಅನ್ಯೋನ್ಯವಾಗಿ ಜೀವಿಸಿದವು.

ಕಥೆಯಲ್ಲಿನ ನೀತಿ / Moral of this Story :
ಒಬ್ಬರಿಗೆ ಮೇಲು ಮಾಡಲು ಆಗದಿದ್ದರೂ ಪರವಾಗಿಲ್ಲ ಕೇಡು ಬಯಸಬಾರದು. ನಮ್ಮ ಸಂತೋಷಕ್ಕಾಗಿ ಒಬ್ಬರಿಗೆ ಕೇಡು ಬಯಸಿದರೆ ಮತ್ತೊಂದು ದಿನ ಅದರ ದುಪ್ಪಟ್ಟು ಪರಿಣಾಮ ನಮಗಾಗುತ್ತದೆ.

2. ಸಿಂಹದ ಮೂರ್ಖತನ – Short Stories Morals

ಒಂದು ಕಾಡಿನಲ್ಲಿ ಸಿಂಹವೊಂದು ವಾಸವಾಗಿತ್ತು. ಶಾರೀರಿಕವಾಗಿ ಬಲಶಾಲಿಯಾಗಿತ್ತು. ಆದರೆ ಬುದ್ಧಿ ಬಲದಲ್ಲಿ ಪೆದ್ದು ಆಗಿತ್ತು. ಸಿಂಹ ಕಾಡಿನಲ್ಲಿರುವ ಸಣ್ಣ ಪುಟ್ಟ ಪ್ರಾಣಿಗಳನ್ನು ತಿಂದು ಬದುಕುತ್ತಿತ್ತು.

ಒಂದು ದಿವಸ ಸಿಂಹ ‘ಈ ಕಾಡಿಗೆ ನಾನೇ ರಾಜ, ನಾನು ಹೇಳಿದ್ದೆ ಶಾಸನ. ನಂಗೆ ಸರಿಸಾಟು ಯಾರು ಇಲ್ಲ’ ಎಂದು ಜಂಬ ಕೊಚ್ಚಿಕೊಂಡಿತು.

ಒಂದಾನೊಂದು ದಿನ ಬೆಳಿಗ್ಗೆ ಸಿಂಹ ತನ್ನ ಗುಹೆಯಿಂದ ಆಹಾರಕ್ಕಾಗಿ ಹೊರಬಂತು. ಬೆಳಗಿನ ತಿಳಿಬಿಸಿಲಿನಲ್ಲಿ ತನ್ನ ಉದ್ದವಾಗಿರುವ ನೆರಳನ್ನು ನೋಡಿ ನಾನೇ ಬಲಿಷ್ಠನು ಎಂದು ಮತ್ತಷ್ಟು ಗರ್ವಿಸಿತು. ಅದೇ ಉತ್ಸಾಹದಲ್ಲಿ ಆಹಾರ ಹುಡುಕುತ್ತಾ ಮುಂದೆ ಹೋಯಿತು.

ದಾರಿಯಲ್ಲಿ ಒಂದು ಮೊಲ ಸಿಕ್ಕಿತು ಅದನ್ನು ನೋಡಿ ‘ಈ ಸಣ್ಣ ಪ್ರಾಣಿ ನನ್ನ ದೇಹದ ಹಸಿವೆಯನ್ನು ತೀರಿಸಲಾರದು’ ಎಂದು ಮತ್ತೊಮ್ಮೆ ತನ್ನ ನೆರಳನ್ನು ನೋಡಿಕೊಳ್ಳುತ್ತಾ ಅದನ್ನು ಬಿಟ್ಟು ಬಿಟ್ಟುಬಿಟ್ಟಿತು.

Read Also – ಆನೆ ಮತ್ತು ಇರುವೆಗಳು

ಸಮಯ ಕಳೆದಂತೆಲ್ಲ ಹಸಿವು ಜಾಸ್ತಿಯಾಗುತ್ತಾ ಹೋಯಿತು.  ದಾರಿ ಉದ್ದಕ್ಕೂ ಆಹಾರ ಹುಡುಕುತ್ತಾ ಹೊರಟಿತು. ಎಲ್ಲಾ ಕಡೆ ಹುಡುಕಾಡಿತು ಆದರೆ ಎಲ್ಲೂ ಸಿಗಲಿಲ್ಲ. ತಿರುಗಿ ತಿರುಗಿ ಹಸಿವೆಯಿಂದ ನಿಶ್ಯಕ್ತಿ ಹೊಂದಿತು.

ಕೊನೆಗೆ ಒಂದು ನರಿ ಎದುರಾಯಿತು. ಆದರೆ ಅದನ್ನು ಹಿಡಿಯಲು ಶಕ್ತಿ ಸಾಲದೆ ಸುಮ್ಮನೆ ನಿಂತಿತು. ಅಷ್ಟರಲ್ಲೇ ಸೂರ್ಯನ ಬಿಸಿಲು ನೆತ್ತಿಯ ಮೇಲೆ ಬಂದಿತ್ತು. ಆಗ ತನ್ನ ನೆರಳನ್ನು ನೋಡಿ  ಅಸೂಯೆ ಪಟ್ಟಿತು. ಕೊನೆಗೆ ನರಿಯನ್ನು ಹಿಡಿಯಲು ಆಗದೆ ಅದನ್ನೂ ಬಿಟ್ಟುಬಿಟ್ಟಿತು.

ಅಲ್ಲಿಂದ ಹಿಂತಿರುಗಿ ಮೊಲ ಇರುವ ಸ್ಥಳಕ್ಕೆ ಹೋಯಿತು. ಆದರೆ ಅಲ್ಲಿ ಮೊಲ‌ ಇರಲಿಲ್ಲ. ಸಿಂಹ ತನಗಾದ ಸ್ಥಿತಿಯನ್ನು ನೋಡಿ ಹೇಸಿಗೆ ಪಟ್ಟಿತು. ಮತ್ತು ಕೈಗೆ ಸಿಕ್ಕ ಮೊಲವನ್ನು ತಿನ್ನದೆ ಮೂರ್ಖತನದಿಂದ ಬಿಟ್ಟೆನಲ್ಲ ಎಂದು ದುಃಖಿಸಿತು.

Short Stories Morals

ಕಥೆಯಲ್ಲಿನ ನೀತಿ / Moral of this Story :

  • ನಾನು ಎನ್ನುವ ಅಹಂಕಾರ ಬೆಂಕಿ ಇದ್ದಂತೆ ನಮ್ಮನ್ನೇ ಸುಡುತ್ತದೆ.
  • ತನ್ನನ್ನು ತಾನು ತಗ್ಗಿಸಿಕೊಂಡವನು ಹೆಚ್ಚಿಸಲ್ಪಡುತ್ತಾನೆ. ತಾನೇ ಶ್ರೇಷ್ಠ ಎಂದು ಹೆಚ್ಚಿಸಿಕೊಳ್ಳುವವನು ತಗ್ಗಿಸಲ್ಪಡುವವನು.
  • ಅತಿಯಾದ ಆಸೆಯು ಸಂಕಷ್ಟಕ್ಕೆ ದಾರಿ ಮಾಡಿಕೊಡುತ್ತದೆ.

3. ಆಮೆಯ ರಕ್ಷಾಕವಚ – Short Stories Morals

ಒಂದು ದೊಡ್ಡ ಕಾಡಿನಲ್ಲಿ ಚಿಕ್ಕ ಸರೋವರವೊಂದಿತ್ತು. ಆ ಸರೋವರ ಕಾಡಿನ ಎಲ್ಲಾ ಜಂತುವುಗಳಿಗೆ ಅದೊಂದೇ ಜೀವದ ಬುಗ್ಗೆಯಾಗಿತ್ತು‌.

ಬೇಸಿಗೆ ಕಾಲದಲ್ಲಿ ಕಾಡಿನ ಎಲ್ಲಾ ಪ್ರಾಣಿ ಪಕ್ಷಿಗಳಿಗೆ ಈ ಚಿಕ್ಕ ಸರೊವರವೇ ಒಂದು ವರವಾಗಿತ್ತು.

ಚಿಕ್ಕ ಸರೊವರದಲ್ಲೊಂದು ಸುಂದರವಾದ ಆಮೆಯೊಂದು ಸುಮಾರು ವರ್ಷಗಳಿಂದ ವಾಸವಾಗಿತ್ತು. ಅದು ಬಹಳ ಸಂತೋಷದಿಂದ, ಹಾಯಾಗಿ ಇತ್ತು. ಆಮೆ ಬಲಶಾಲಿ ಮತ್ತು ಗಟ್ಟಿಯಾಗಿತ್ತು. ಏಕೆಂದರೆ ಅದರ ಮೈ ಮೇಲಿರುವ ಚಿಪ್ಪು ಅದಕ್ಕೆ ರಕ್ಷಾಕವಚದಂತಿತ್ತು.

ಅಲ್ಲಿನ ಪ್ರಾಣಿಗಳು ಕೆಲವೊಮ್ಮೆ ಕಾಲಿನಿಂದ ತುಳಿದರೂ ಅದಕ್ಕೆ ಏನು ಆಗುತ್ತಿರಲಿಲ್ಲ. ಅದರ ಮೇಲಿನ ಕವಚ ಅದನ್ನು ಎಲ್ಲಾ ಕಾಲದಲ್ಲೂ ರಕ್ಷಣೆ ಮಾಡುತಿತ್ತು.

Read Also – ಬಂಗಾರದ ಮೊಟ್ಟೆ

ಬರು ಬರುತ್ತಾ ಆಮೆಗೆ ಅಹಂಕಾರ ಜಾಸ್ತಿಯಾಗುತ್ತಾ ಹೋಯಿತು. ಒಂದು ದಿವಸ ತನ್ನ ಗುಹೆಯಿಂದ  ಹೊರಗೆ ಬರುತ್ತಿದ್ದಾಗ ಅದರ ಹಿಂಬದಿಯಲ್ಲಿ ಆನೆಯೊಂದು ಬಂದು ನಿಂತಿತು. ಆನೆಯ ನೆರಳು ನೋಡಿ ಆಮೆ ತನ್ನನ್ನು ತಾನೇ ಬಲಿಷ್ಠನೆಂದು ಬಿಂಬಿಸಿಕೊಂಡಿತು.

ತನಗಿರುವ ರಕ್ಷಾಕವಚವನ್ನು ತೆಗೆದು ಹಾಕಿತು. ನನ್ನನು ಯಾರು ಏನು ಮಾಡಲಾರರು ಎಂದು ಬೀಗುತ್ತಾ ತಿರುಗಾಡುತ್ತಾ ಇತ್ತು.

Also Read – ನಾಸ್ತಿಕ

ಅದೇ ದಿನ ಮಧ್ಯಾಹ್ನ ಸಮಯದಲ್ಲಿ ಕಾಡು ಕೋಣಗಳ ಗುಂಪೊಂದು ನೀರು ಕುಡಿಯಲು ಬಂದವು. ಗುಂಪುಗಟ್ಟಿ ಬಂದ ಕೋಣಗಳು ಕಾಲಿನಿಂದ ಆಮೆಯನ್ನು ತುಳಿದು ಬಿಟ್ಟವು. ರಕ್ಷಾಕವಚ ಇಲ್ಲದ ಕಾರಣ ಆಮೆ ನೋವಿನಿಂದ ವಿಲವಿಲ ಒದ್ದಾಡಿ ಪ್ರಾಣ ಬಿಟ್ಟಿತು.

ಕಥೆಯಲ್ಲಿನ ನೀತಿ / Moral of this Story:
ಆ ದೇವರ ಸೃಷ್ಟಿಯಲ್ಲಿ ಎಲ್ಲವೂ ಶ್ರೇಷ್ಠ. ಯಾರ್ಯಾರಿಗೆ ಏನೇನು ಕೊಡಬೇಕು, ಯಾವಾಗ ಕೊಡಬೇಕು, ಎಲ್ಲಿ ಕೊಡಬೇಕೊ  ದೇವರು ಕೊಟ್ಟಿದ್ದಾನೆ.
ಸೃಷ್ಟಿಯ ಎಲ್ಲಾ ಜೀವರಾಶಿಗಳಗೆ ತಮ್ಮ ತಮ್ಮ ಜಾತಿಗನುಸಾರವಾಗಿ ಬದುಕುವ ವೈಶಿಷ್ಟ್ಯತೆಯನ್ನು, ಕೌಶಲ್ಯವನ್ನು, ಜ್ಞಾನವನ್ನು ಕೊಟ್ಟಿದ್ದಾನೆ.

4. ಕೊಬ್ಬಿದ ಹುಂಜ – Short Stories Morals

ಒಂದು ಸುಂದರವಾದ ಚಿಕ್ಕ ಹಳ್ಳಿ. ಆ ಹಳ್ಳಿಯಲ್ಲಿ ಒಬ್ಬ ಯಜಮಾನ ಕೋಳಿಗಳನ್ನು ಸಾಕಿಕೊಂಡಿದ್ದ. ಅದರಲ್ಲಿ ಒಂದು ಕೊಬ್ಬಿದ ಹುಂಜ ಇತ್ತು. ಹುಂಜ ‘ನಾನೇ ಶ್ರೇಷ್ಠ ಎಂದು ಬಣ್ಣಿಸಿಕೊಳ್ತುತ್ತಾ ಇತ್ತು.

ದಿನಾಲೂ ಬೆಳಿಗ್ಗೆ ನಸುಕಿನಲ್ಲಿ ಕೂಗಿ ಊರಿನ ಜನರನ್ನೆಲ್ಲ ಎಬ್ಬಿಸುತ್ತಿತ್ತು. ಮತ್ತು ನಾನಿಲ್ಲದೆ ಬೆಳಗಾಗುವುದಿಲ್ಲ. ನನ್ನ ಕೂಗು ಕೇಳದೆ ಊರಿನ ಜನರೆಲ್ಲಾ ಏಳುವುದಿಲ್ಲ ಎಂಬುದಾಗಿ ಗರ್ವಕೊಚ್ಚಿಕೊಳ್ಳುತ್ತಿತ್ತು.

ಒಂದು ದಿವಸ ಯಜಮಾನ ತನ್ನ ಕೆಲಸದಲ್ಲಿ ನಿರತರಾಗಿದ್ದರು ಅದಕ್ಕಾಗಿ ಹುಂಜಕ್ಕೆ ಸರಿಯಾದ ಊಟ ನೀಡಲಿಲ್ಲ. ಅದಕ್ಕೆ ಕಾಳಜಿ ವಹಿಸಲಿಲ್ಲ.

Read Also – ಮಾಯಾ ಬಾಗಿಲು

ಹುಂಜ – ‘ನನ್ನ ಸರಿಯಾಗಿ ನೋಡಿಕೊಳ್ಳಲಿಲ್ಲ’ ಎಂದು ಯಜಮಾನನ ಮೇಲೆ ಸಿಟ್ಟುಗೊಂಡಿತು. ಅದಕ್ಕಾಗಿ ಹುಂಜ ‘ನಾಳೆಯಿಂದ ಕೂಗುವುದನ್ನು ನಿಲ್ಲಿಸುತ್ತೇನೆ; ಆಗ ಏನು ಮಾಡ್ತಾನೆ ನೋಡೋಣ’ ಎಂದುಕೊಂಡಿತು.

ಮರು ದಿನ ಬೆಳಿಗ್ಗೆ ಊರಿನ ಜನರೆಲ್ಲಾ ಯಥಾ ಪ್ರಕಾರ ಎದ್ದು ತಮ್ಮ ತಮ್ಮ ಕೆಲಸಗಳಲ್ಲಿ ತೊಡಗಿದ್ದರು. ಇದನ್ನು ನೋಡಿ ಕೊಬ್ಬಿದ ಹುಂಜ ನಾನು ಕೂಗಿದರೆ ಮಾತ್ರ ಬೆಳಗಾಗುತ್ತೆ ಅಂದುಕೊಂಡಿದ್ದೆ, ಆದರೆ ಬೆಳಗಾಗುವುದು ನನ್ನಿಂದಲ್ಲ ಕಣ್ಣಿಗೆ ಕಾಣದ ಅಗೋಚರ ಶಕ್ತಿಯಿಂದ.

ಹುಂಜ ‘ನಾನು ಕೂಗಿದರೂ ಕೂಗದಿದ್ದರೂ ದಿನ ಬೆಳಗಾಗುತ್ತೆ, ನನ್ನ ಕೂಗಿನಿಂದಲೇ ಜನರು ಏಳುತ್ತಾರೆ ಎನ್ನುವುದು ನನ್ನ ತಪ್ಪು ಕಲ್ಪನೆ’ ಎಂದು ಅರ್ಥವಾಯಿತು.

Short Stories Morals

ಕಥೆಯಲ್ಲಿನ ನೀತಿ / Moral of this Story :
ಕಾಲ ಯಾರಿಗಾಗಿ ಕಾಯುವುದಿಲ್ಲ, ಯಾರಿಗಾಗಿ ನಿಲ್ಲುವುದಿಲ್ಲ. ನನ್ನಿಂದಲೇ ಮತ್ತೊಬ್ಬರ ದಿನ ಆರಂಭವಾಗುತ್ತೆ ಎನ್ನುವುದು ಮೂರ್ಖತನ.


Follow Us On Facebook Moral Storys


Spread the love

Leave a Reply

Your email address will not be published. Required fields are marked *