Hi Everyone, Welcome to Moral Storys – Short Inspired Story
1. ಗುರೂಪದೇಶ – Short Inspired Story

ಒಂದು ಊರಿನಲ್ಲಿ ಶಾಂತಮೂರ್ತಿ ಎಂಬ ಒಬ್ಬ ವ್ಯಕ್ತಿ ಇದ್ದನು. ಆತನು ದಿನಾಲೂ ಬೇರೆಯವರ ಹೊಲದಲ್ಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದ. ಶಾಂತಮೂರ್ತಿಗೆ ಒಬ್ಬ ಮಗನಿದ್ದ. ಅವನು ಬಹಳ ತುಂಟ ಮತ್ತು ಚಮಾನುಗಾರ.
ಸ್ನೇಹಿತರ ಜೊತೆ ಸೇರಿ ಅನೇಕ ರೀತಿಯ ದುಶ್ಚಟಗಳನ್ನು ಕಲಿತುಕೊಂಡ. ತಂದೆ ದುಡಿದ ಅರ್ಧ ಹಣವನ್ನು ವ್ಯರ್ಥವಾಗಿ ಖರ್ಚು ಮಾಡುತ್ತಿದ್ದ.
ತಂದೆ, ಮಗನನ್ನು ಗದರಿಸಿ ಹೇಳಿದರೂ ಕೂಡ ಅವರ ಮಾತನ್ನು ಕೇಳದೇ ಹೋದ. ಸ್ನೇಹಿತರ ಜೊತೆ ಸೇರಿ ಕೆಟ್ಟ ಹವ್ಯಾಸಗಳನ್ನೇ ಮುಂದುವರಿಸಿದಾಗ ತಂದೆ ಸಿಟ್ಟುಗೊಂಡು ಮಗನನ್ನು ಮನೆಯಿಂದ ಹೊರಹಾಕಿದ.
ಮಗನು ಒಂದೆರಡು ದಿನ ಹರಾಮಾಗಿ ಇದ್ದನು. ಮೂರನೇ ದಿನ ಅಲ್ಲಿಲ್ಲಿ ಅಲೆದಾಡುತ್ತಾ ಊಟಕ್ಕೆ ಕಷ್ಟವಾಯಿತು. ತಂದೆ ಹೇಳಿದ್ದು ಅಲ್ಲಿಯವರೆಗ ತಲೆಗೆ ಏರಿರಲಿಲ್ಲ, ಈ ಪರಿಸ್ಥಿತಿಯಿಂದ ಅರ್ಥವಾಯಿತು.
ಎಲ್ಲ ಸ್ನೇಹಿತರನ್ನು ಬಿಟ್ಟು ಏಕಾಂಗಿಯಾಗಿ ಒಂದು ನದಿ ತೀರದಲ್ಲಿ ನಡೆದು ಹೋಗುತ್ತಿದ್ದ. ಅಲ್ಲಿ ಒಬ್ಬ ಋಷಿಮುನಿ ಕೂತುಕೊಂಡಿದ್ದ. ಋಷಿಮುನಿಗಳು ಅವನನ್ನು ಕರೆದು ಏಕಾಂಗಿಯಾಗಿ ಎಲ್ಲಿಗೆ ಹೊಂಟಿದ್ದಿ? ಎಂದು ಕೇಳಿದರು.
ಅದಕ್ಕವನು ಏನೂ ಉತ್ತರಿಸದೆ ಮೌನವಾಗಿ ಅಲ್ಲೇ ಕುಳಿತನು. ಋಷಿಮುನಿಗಳು ಅವನ ಮುಖ ನೋಡಿ – ನೀನು ಯಾವುದೋ ಸಮಸ್ಯೆಯಲ್ಲಿ ಚಿಂತಿಸ್ತಾ ಇದಿಯಾ. ಹೇಳು ಮಗನೆ ಏನಾಯ್ತು ಎಂದು ಕೇಳಿದ.
ಆಗ ಅವನು ತನ್ನ ಹಿಂದಿನ ಕಥೆಯನ್ನು ಹೇಳಿಕೊಂಡ. ಅದಕ್ಕೆ ಋಷಿಮುನಿಗಳು ಮೂರು ಗಿಡಗಳನ್ನು ತೋರಿಸಿ, ಅವುಗಳನ್ನು ಒಂದೊಂದಾಗಿ ಕೀಳಲು ಹೇಳುತ್ತಾರೆ.
Also Read – ಮೀನುಗಾರ ಮತ್ತು ಬಲೆ
ಋಷಿಗಳು ಹೇಳಿದಂತೆ ಅವನು ಆ ಮೂರು ಗಿಡಗಳನ್ನು ಕೀಳಲು ಏಳುತ್ತಾನೆ. ಮೊದಲನೇ ಗಿಡ ಚಿಕ್ಕದಾಗಿರುವುದರಿಂದ ಅದನ್ನು ಸುಲಭವಾಗಿ ಕಿತ್ತು ಬಿಸಾಡಿದ. ಎರಡನೇ ಗಿಡ ಸ್ವಲ್ಪ ದೊಡ್ಡದಾಗಿರುವುದರಿಂದ ಅದನ್ನು ಕೀಳಲು ಬಹು ಪ್ರಯಾಸ ಪಡುತ್ತಾನೆ. ಕೊನೆಗೆ ಒದ್ದಾಡಿ ಒದ್ದಾಡಿ ಎರಡನೇ ಗಿಡವನ್ನು ಕಿತ್ತು ಹಾಕಿದ.
ಇನ್ನು ಉಳಿದಿರುವುದು ಮೂರನೇ ಗಿಡ, ಆಕಾರದಲ್ಲಿ ದೊಡ್ಡದಾಗಿತ್ತು ಮತ್ತು ಅದರ ಬೇರುಗಳು ಆಳವಾಗಿ ಬಲವಾಗಿ ಹರಡಿಕೊಂಡಿದ್ದವು. ಅದನ್ನು ಎಷ್ಟು ಕಷ್ಟಪಟ್ಟು ಒದ್ದಾಡಿದರು ಕೂಡ ಅಳುಗಾಡಲಿಲ್ಲ.
ಕೊನೆಗೆ ಆಯಾಸಗೊಂಡು ಎಷ್ಟು ಪ್ರಯತ್ನಿಸಿದರೂ ನಿಷ್ಪ್ರಯೋಜನವೆಂದು ತಿಳಿದು ಬಿಟ್ಟುಬಿಟ್ಟನು.
ಋಷಿಮುನಿಗಳು ಅವನನ್ನು ಕರೆದು – “ನೋಡು ಮಗನೆ ಹವ್ಯಾಸಗಳು ಕೂಡ ಹಾಗೇನೇ. ಕೆಟ್ಟ ಹವ್ಯಾಸಗಳು ಮೊಳಕೆ ಇರುವಾಗಲೇ ಕಿತ್ತು ಬಿಸಾಡಬೇಕು, ಇಲ್ಲವಾದರೆ ಮರವಾಗಿ ಬಲವಾಗಿ ಬೇರೂರಿದ ಮೇಲೆ ಕೀಳಲು ಬಹಳವಾಗಿ ಕಷ್ಟ ಪಡಬೇಕು” ಎಂದು ಹೇಳಿದರು.
Short Inspired Story
ಅವನು ಅಲ್ಲಿಂದ ತನ್ನ ತಂದೆ ಬಳಿಗೆ ಹೋಗಿ ತನ್ನ ಹವ್ಯಾಸಗಳನ್ನು ಬದಲಿಸಿಕೊಳ್ಳುತ್ತೇನೆ ಎಂದು ಕೇಳಿಕೊಂಡನು. ಮತ್ತು ಆಹೊತ್ತಿನಿಂದ ಹೊಲದಲ್ಲಿ ಕೆಲಸ ಮಾಡುತ್ತಾ ತಂದೆಗೆ ಆಸರೆಯಾದನು.
ಕಥೆಯಲ್ಲಿನ ನೀತಿ / Moral of this Story :
ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗುವುದಿಲ್ಲ, ನಮ್ಮಲ್ಲಿರುವ ಕೆಟ್ಟ ಹವ್ಯಾಸಗಳನ್ನು ಸಣ್ಣ ಮೊಳಕೆ ಇರುವಾಗಲೇ ಕಿತ್ತು ಬಿಸಾಡಬೇಕು. ಇಲ್ಲಾಂದ್ರೆ ಅವುಗಳು ನಮ್ಮಲ್ಲಿ ಬಲವಾಗಿ ಬೇರೂರಿದ ಮೇಲೆ ತೆಗೆದುಹಾಕಲು, ಬಿಡಲು ಸಾಧ್ಯವಾಗುವುದಿಲ್ಲ.
2. ಕತ್ತೆ ಮತ್ತು ಕುದುರೆ – Short Inspired Story

ಒಂದಾನೊಂದು ಕಾಲದಲ್ಲಿ ಒಬ್ಬ ಬಟ್ಟೆ ವ್ಯಾಪಾರಿ ಇದ್ದನು. ಅವನಿಗೆ ಒಂದು ಕತ್ತೆ ಮತ್ತು ಕುದುರೆ ಇತ್ತು. ಅವನು ದಿನಾಲು ಊರೂರು ತಿರಿಗಿ ಬಟ್ಟೆ ವ್ಯಾಪಾರ ಮಾಡುತ್ತಿದ್ದನು.
ಒಂದು ದಿನ ಪಕ್ಕದ ಊರಿನಲ್ಲಿ ಜಾತ್ರೆ ಇತ್ತು. ಅದಕ್ಕಾಗಿ ಅವನು ಕತ್ತೆ ಮತ್ತು ಕುದುರೆ ಮೇಲೆ ಬಟ್ಟೆ ಮೂಟೆಗಳನ್ನು ಹೇರಿಕೊಂಡು ಜಾತ್ರೆಗೆ ಹೊರಟನು.
ಆದರೆ ಕತ್ತೆಯ ಮೇಲೆ ಭಾರವಾದ ಮೂಟೆಗಳು ಇರುವುದರಿಂದ ಕತ್ತೆಗೆ ದಾರಿ ನಡೆಯಲು ಕಷ್ಟವಾಯಿತು. ಬರುಬರುತ್ತಾ ಭಾರ ಜಾಸ್ತಿಯಾಗುತ್ತಾ ಹೋಯಿತು. ಕತ್ತೆ, ಕುದುರೆಯನ್ನು ನನ್ನ ಬೆನ್ನ ಮೇಲೆ ತುಂಬಾ ಮೂಟೆಗಳಿವೆ, ಒಂದೆರಡು ಮೂಟೆಗಳನ್ನು ತೆಗೆದುಕೋ ಎಂದು ಕೇಳಿತು.
ಅದಕ್ಕೆ ಕುದುರೆ, ಈಗ ನಾನು ಹೊತ್ತುಕೊಂಡಿರೋದು ನಿನ್ನ ಮೂಟೆಗಳನ್ನೇ, ಮತ್ತೆ ಒಂದೆರಡು ಮೂಟೆಗಳನ್ನು ತಗೋಬೇಕಾ? ನಾನು ಹಾಯಾಗಿ ರಾಜನ ಅರಮನೆಯಲ್ಲಿ ಇರಬೆಕಾದವನು ಆದರೆ ಇಲ್ಲಿ ನಿನ್ ಕೆಲ್ಸ ಮಾಡ್ತಾ ಇದ್ದೀನಿ ಎಂದಿತು.
Also Read – ಆನೆ ಮತ್ತು ಇರುವೆಗಳು
ಕತ್ತೆ ಭಾರವನ್ನು ಹೋರಲಾರದೆ ಎಡವಿ ಬಿದ್ದಿತು. ಕಾಲಿಗೆ ಪೆಟ್ಟಾಗಿ ರಕ್ತ ಸೋರಿತು. ಇನ್ನು ದಾರಿ ನಡೆಯದೇ ಹೋಯಿತು. ಬಟ್ಟೆ ವ್ಯಾಪಾರಿ ಕತ್ತೆಯ ಮೇಲಿನ ಎಲ್ಲಾ ಮೂಟೆಗಳನ್ನು ತೆಗೆದು ಕುದುರೆ ಮೇಲೆ ಹಾಕಿದ.
ಕುದುರೆ, ಆ ಒಂದೆರಡು ಮೂಟೆಗಳನ್ನು ಮೊದಲೇ ಹೊತ್ತುಕೊಂಡಿದ್ದರೆ ಈಗ ಅದರ ಎಲ್ಲಾ ಮೂಟೆಗಳನ್ನು ಹೋರುವುದು ತಪ್ಪುತ್ತಿತ್ತಲ್ಲ ಎಂದು ಮನಸ್ಸಿನೊಳಗೆ ಅಂದುಕೊಂಡಿತು.
ಕಥೆಯಲ್ಲಿನ ನೀತಿ / Moral of this Story :
ಅನುಭವವೇ ಮನುಷ್ಯನಿಗೆ ಗುಣಪಾಠ
ಹಂಚಿಕೊಂಡು ತಿಂದರೆ ಜೀವನ ಸುಖಮಯವಾಗಿರುತ್ತದೆ.
3. ಮಾತಿನ ಮಹತ್ವ – Short Inspired Story

ಒಂದಾನೊಂದು ಹಳ್ಳಿಯಲ್ಲಿ ಒಬ್ಬ ಋಷಿಮುನಿ ಇದ್ದನು. ಆಶ್ರಮದ ಆವರಣದಲ್ಲಿ ನಾಲ್ವತ್ತು ಮಕ್ಕಳು ಶಿಕ್ಷಣ ಪಡೆಯುತ್ತಿದ್ದರು. ಆತನು ಎಲ್ಲಾ ಮಕ್ಕಳಿಗೆ ಪ್ರೀತಿ ಪಾತ್ರರಾಗಿದ್ದರು.
ಒಂದು ದಿನ ಆವರಣದಲ್ಲಿ ಪಾಠವನ್ನು ಬೋಧಿಸುತ್ತಿದ್ದಾಗ ಒಬ್ಬ ಹುಡುಗ ಎದ್ದು ನಿಂತು ಗುರುಗಳೇ – ಹೆಚ್ಚು ಮಾತಾಡಿದರೆ ಒಳ್ಳೆಯದಾ! ಅಥವಾ ಕಡಿಮೆ ಮಾತಾಡಿದರೆ ಒಳ್ಳೆಯದಾ? ಎಂದು ಕೇಳಿದನು.
ಅದಕ್ಕೆ ಋಷಿ ಮುನಿ – ಊರಲ್ಲಿ ಬೀದಿ ನಾಯಿಗಳು, ನೀರಿನಲ್ಲಿನ ಕಪ್ಪೆಗಳು ಜೋರೊ ಎಂದು ಕೂಗೂತ್ತವೆ, ಯಾರು ಅವುಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ, ಗಮನಹರಿಸುವುದಿಲ್ಲ. ಆದರೆ ಕೋಳಿ ನಸುಕಿನಲ್ಲಿ ಒಂದೇ ಒಂದು ಬಾರಿ ಕೂಗಿದರೆ ಊರೆಲ್ಲ ನಿದ್ದೆ ಏಳುತ್ತಾರೆ.
ಆದ್ದರಿಂದ ಜಾಸ್ತಿ ಮಾತಾನಾಡುವುದರಿಂದ ಯಾವ ಪ್ರಯೋಜನವೂ ಇಲ್ಲ. ಸ್ವಲ್ಪ ಮಾತಾಡಿದ್ರೂ ಅದು ಸಮಯಕ್ಕೆ ತಕ್ಕಂತೆ ಮಾತಾಡಬೇಕು.
ಕಥೆಯಲ್ಲಿನ ನೀತಿ / Moral of this Story :
ಅವಶ್ಯಕತೆ ಇಲ್ಲದ ಅಧಿಕ ಪ್ರಸಂಗ ವ್ಯರ್ಥ. ಸಂದರ್ಭಾನುಸಾರ ಮಾತಾಡಿದ ಒಂದು ಮಾತು ಅರ್ಥಪೂರ್ಣವಾಗುತ್ತದೆ.
4. ನಂಬಿಕೆಯೇ ಯಶಸ್ಸಿನ ಮೊದಲ ಹೆಜ್ಜೆ – Short Inspired Story
ಒಂದು ಹಳ್ಳಿಯಲ್ಲಿ ಒಬ್ಬ ವ್ಯಕ್ತಿ ಇದ್ದನು. ಅವನು ಒಂದು ನಾಯಿಯನ್ನು ಸಾಕಿದ್ದ. ಯಜಮಾನ ನಾಯಿಯನ್ನು ಬಹಳ ಜೋಪಾನವಾಗಿ ನೋಡುಕೊಳ್ಳುತ್ತಿದ್ದನು ಮತ್ತು ನಾಯಿಗೆ ಒಳ್ಳೊಳ್ಳೆ ಆಹಾರ ಕೊಡುತ್ತಿದ್ದನು.
ಅವನು ಹೊಲಕ್ಕೆ ಹೋಗುವಾಗ ತನ್ನ ಜೊತೆ ನಾಯಿಯನ್ನು ಕರೆದುಕೊಂಡು ಹೋಗುತ್ತಿದ್ದನು. ಯಜಮಾನನಿಗೆ ಮನೆಯಲ್ಲಿ ಯಾರೂ ಇಲ್ಲದಿದ್ದರೂ ನನ್ನ ಜೊತೆ ನಾಯಿ ಇದೆ ಎಂಬ ಕೊರಗನ್ನು ತೀರಿಸಿತು.
ಆದರೆ ಒಂದು ದಿನ ನಾಯಿ ಬೀದಿ ನಾಯಿಗಳನ್ನು ನೋಡಿ “ಅವುಗಳು ಎಷ್ಟು ಚೆಂದವಾಗಿ ಸ್ವತಂತ್ರವಾಗಿ ಓಡಾಡುತ್ತಾ, ಆಡುತ್ತಾ ಇದಾರೆ. ಆದರೆ ನಾನೇನೊ ಯಜಮಾನನ ಕೈಯಲ್ಲಿ ಗುಲಾಮನಾಗಿ ಇದ್ದೇನೆ” ಎಂದು ಮನಸ್ಸಿನಲ್ಲಿ ಅಂದುಕೊಂಡಿತು.
Short Inspired Story
ಸ್ವಲ್ಪ ಹೊತ್ತು ಆದ ಮೇಲೆ “ನಾನು ಇಲ್ಲಿಂದ ತಪ್ಪಿಸಿಕೊಂಡು ಎಲ್ಲಿಗಾದರೂ ಹೋಗಿ ಬಿಡಬೇಕು” ಎಂದು ಯೋಚನೆ ಮಾಡಿತು.
ಒಂದು ದಿನ ಮಧ್ಯರಾತ್ರಿ ಯಜಮಾನನ ಮನೆಗೆ ಕಳ್ಳ ಕಳ್ಳತನ ಮಾಡಲಿಕ್ಕೆ ಬಂದನು. ಯಜಮಾನ ಗಾಢ ನಿದ್ರೆಯಲ್ಲಿದ್ದನು. ನಾಯಿ ಕಳ್ಳನನ್ನು ನೋಡಿ ಕೂಡ ಸುಮ್ಮನೆ ಮಲಗಿಕೊಂಡಂತೆ ನಟಿಸಿತು. ಕಳ್ಳ ಮನೇಲಿರುವ ಸಾಮೂನುಗಳನ್ನು ದೋಚಿಕೊಂಡು ಹೋಗುವಾಗ, ನಾಯಿ – ಅಯ್ಯಾ! ಸ್ವಾಮಿ ನಾನೂ ನಿಮ್ಮ ಜೊತೆ ಬರಬಹುದೇ? ಎಂದು ಕೇಳಿತು.
ಅದಕ್ಕವನು “ನೀನ್ ನನ್ನ ಜೊತೆ ಬಂದರೆ ನನಗೇನು ಲಾಭ ಬದಲಾಗಿ ನಿನಗೆ ಮೂರು ಹೊತ್ತು ಊಟ ಕೊಡಬೇಕು” ಎಂದನು. ಆಗ ನಾಯಿ “ನಿನಗೆ ವಿಶ್ವಾಸದಿಂದ ಇರ್ತೀನಿ, ನಿನ್ನ ಕೆಲಸಗಳಲ್ಲಿ ಸಹಾಯ ಮಾಡ್ತೀನಿ” ಎಂದಿತು.
Also Read – ದುರಾಸೆಯ ನರಿ Short Inspired Story
ಅದಕ್ಕೆ ಕಳ್ಳ – ನಾನು ಕಳ್ಳತನ ಮಾಡಲಿಕ್ಕೆ ಬಂದಿದ್ದೇನೆಂದು ಗೊತ್ತಿದ್ದರೂ ಕೂಡ ಸುಮ್ಮನೆ ಇದ್ದಿ, ನಿನ್ನ ಯಜಮಾನನನ್ನು ಎಬ್ಬಿಸಲಿಲ್ಲ. ನಿನ್ನನು ನಂಬಿ ಮೂರು ಹೊತ್ತು ಊಟ ಕೊಟ್ಟ ಯಜಮಾನನ ಮೇಲೆ ಸ್ವಲ್ಪಾದ್ರೂ ಕರುಣೆಯಿಲ್ಲ. ಅಂತದ್ರಲ್ಲಿ ನಾನೊಬ್ಬ ಕಳ್ಳ ನಾನಾದರೂ ನಿನ್ನನು ನಂಬುವುದು ಹೇಗೆ?” ಎಂದು ಹೇಳಿ ಅಲ್ಲಿಂದ ಹೊರಟು ಹೋದನು.
ನಾಯಿ ಕಳ್ಳನ ಮಾತುಗಳಿಂದ ಬುದ್ಧಿ ತಂದುಕೊಂಡು ಆಹೊತ್ತಿನಿಂದ ಯಜಮಾನನಿಗೆ ವಿಶ್ವಾಸದಿಂದ ನಡೆದುಕೊಂಡಿತು.
ಕಥೆಯಲ್ಲಿನ ನೀತಿ / Moral of this Story :
ವಿಶ್ವಾಸ ಇಲ್ಲದೆ ಯಾರನ್ನು ಮೆಚ್ಚಿಸಲು ಸಾಧ್ಯವಿಲ್ಲ. ವಿಶ್ವಾಸವು ಸಂಬಂಧಗಳ ಬೆಳವಣಿಗೆಗೆ ಬುನಾದಿ. ನಂಬಿಕೆಯೇ ಯಶಸ್ಸಿನ ಮೊದಲ ಹೆಜ್ಜೆ.