Hi Everyone, Welcome to Moral Storys – Short Famous Stories
1. ಅನುಕರಣೆ – Short Famous Stories
ಒಂದು ಊರಲ್ಲಿ ಜಯಪ್ಪ ಎಂಬ ಹೆಸರಿನ ಒಬ್ಬ ವ್ಯಕ್ತಿ ಇದ್ದನು. ಈತನು ಷೇರು ಮಾರುಕಟ್ಟೆ ಒಬ್ಬ ಸದಸ್ಯನಾಗಿದ್ದು, ಷೇರುಗಳ ಮೇಲೆ ಹೂಡಿಕೆ ಮಾಡುತ್ತಿದ್ದನು.
ಅದಕ್ಕಾಗಿ ಜಯಪ್ಪನು ಯಾವಾಗಲೂ ಮೊಬೈಲ್ ಮತ್ತು ಕಂಪ್ಯೂಟರ್ ಮುಂದೆ ಕುಳಿತು ಯಾವಾಗಲೂ ಷೇರುಗಳ ಬಗ್ಗೆನೇ ಯೋಚಿಸುತ್ತಿದ್ದ. ಬೇರೆ ಯಾರ ಹತ್ತಿರನೂ ಸಮಯ ಕೊಟ್ಟು ಮಾತಾಡುತ್ತಿರಲಿಲ್ಲ.
ಅವನಿಗೆ ಒಬ್ಬ ಮಗ ಇದ್ದ ಅವನ ಹೆಸರು ರೋಹಿತ್ ಆದರೆ ಬಹಳ ತುಂಟ. ಏಳನೇ ತರಗತಿಯಲ್ಲಿ ಓದುತ್ತಿದ್ದ. ಮನೆಯಲ್ಲಿ ಯಾವತ್ತೂ ಕೂಡಾ ಪುಸ್ತಕ ತಗೊಂಡು ಓದುತ್ತಿರಲಿಲ್ಲ. ಅವನು ಕೂಡ ಮೊಬೈಲ್ ಕೈಯಲ್ಲಿ ಹಿಡಿದು ವೀಡಿಯೋ ಗೇಮ್ ಆಡುತ್ತಿದ್ದ. ಮೊಬೈಲ್ ಬಿಟ್ಟು ಒಂದು ಕ್ಷಣ ಇರುತ್ತಿರಲಿಲ್ಲ.
ಒಂದು ದಿವಸ ಏಳನೇ ತರಗತಿ ಅಂತಿಮ ಪರೀಕ್ಷೆ ಹತ್ತಿರ ಬಂದವು. ರೋಹಿತನು ಪರೀಕ್ಷೆ ಹಾಜರಾಗಿ ಎಲ್ಲಾ ಪತ್ರಿಕೆಗಳನ್ನು ಬರೆದನು. ಕೆಲವು ದಿನ ಆದ ಮೇಲೆ ಶಾಲೆಯಲ್ಲಿ ಪ್ರೋಗ್ರೆಸ್ ಕಾರ್ಡ್ ಕೊಟ್ಟರು.
Read Also – ಶಕ್ತಿ ಮಾತ್ರ ಇದ್ರೆ ಸಾಲದು ಯುಕ್ತಿಯು ಇರಬೇಕು
ರೋಹಿತನು ಅದನ್ನು ತಗೊಂಡು ತನ್ನ ತಂದೆಗೆ ತೋರಿಸಿದ. ಜಯಪ್ಪ ಒಂದು ಕಟ್ಟಿಗೆ ತಗೊಂಡು ಮಗನನ್ನು ಚೆನ್ನಾಗಿ ಬಾರಿಸಿದ. ಏಕೆಂದರೆ ಅವನು ಎಲ್ಲಾ ವಿಷಯಗಳಲ್ಲಿ ಫೇಲಾಗಿದ್ದನು.
ಜಯಪ್ಪನು ತನ್ನ ಮಗನಿಗೆ ಎಲ್ಲಾ ರೀತಿಯ ಪುಸ್ತಕಗಳನ್ನು ತಂದು ಕೊಟ್ಟು ಓದುವಂತೆ ಒತ್ತಾಯ ಮಾಡಿದ. ಆದರೆ ಅವನು ಪುಸ್ತಕ ಹಿಡಿದು ಓದುವಂತಹ ಮನಸ್ಥಿತಿಯಲ್ಲಿರಲಿಲ್ಲ. ಮತ್ತೆ ಫೋನಿನಲ್ಲೇ ಕಾಲಹರಣ ಮಾಡುತ್ತಿದ್ದ. ಜಯಪ್ಪನಿಗೆ ತನ್ನ ಮಗ ಹದ್ದುಮೀರಿ ಬೆಳೆದಿದ್ದಾನೆಂದು ಆಗಲೇ ಅರ್ಥ ಆಯ್ತು.
ಹೀಗೆ ಒಂದು ದಿನ ಮಗನ ವಿಷಯದಲ್ಲಿ ಚಿಂತಿಸುತ್ತಾ ದಾರಿಯಲ್ಲಿ ಹೋಗುತ್ತಿದ್ದಾಗ ತನ್ನ ಆಪ್ತ ಸ್ನೇಹಿತನೊಬ್ಬ ಕಣ್ಣಿಗೆ ಬಿದ್ದ. ಜಯಪ್ಪನ ಸ್ನೇಹಿತನ ಹೆಸರು ಬಸವ. ಈತನು ಜಯಪ್ಪನ ಹೈಸ್ಕೂಲ್ ಸ್ನೇಹಿತ ಮತ್ತು ಈತನೊಬ್ಬ ವೃತ್ತಿಯಲ್ಲಿ ಶಿಕ್ಷಕನಾಗಿದ್ದನು.
Short Famous Stories
ಇಬ್ಬರೂ ಕ್ಷೇಮದ ಬಗ್ಗೆ ಮಾತಾಡಿದ ಮೇಲೆ ಜಯಪ್ಪನು ತನ್ನ ಮಗನ ವಿಷಯದ ಬಗ್ಗೆ ಪ್ರಸ್ತಾಪಿಸುತ್ತಾನೆ. ಅದಕ್ಕೆ ಬಸವನು ಏನೂ ಮಾತಾಡದೆ ಅಲ್ಲೇ ಹತ್ತಿರದಲ್ಲಿರುವ ಮತ್ತೋರ್ವ ಸ್ನೇಹಿತನ ಮನೆಗೆ ಕರಕೊಂಡು ಹೋಗುತ್ತಾನೆ.
ಅಲ್ಲಿ ಮನೆಯ ಮುಂದೆ ಒಬ್ಬ ತಂದೆ ಸೇರಿ ಐದು ಜನ ಮಕ್ಕಳು ಪುಸ್ತಕ ಹಿಡಿದು ಓದುತ್ತಿದ್ದರು. ಬಸವನು ತನ್ನ ಸ್ನೇಹಿತನನ್ನು ಜಯಪ್ಪನಿಗೆ ಪರಿಚಯ ಮಾಡಿಸುತ್ತಾನೆ. ಆವಾಗ ಜಯಪ್ಪನು ಬಸವನ ಸ್ನೇಹಿತನನ್ನು ಕೇಳುತ್ತಾನೆ. ಏನೆಂದರೆ ‘ಯಾರು ಈ ಮಕ್ಕಳೆಲ್ಲ, ಏನ್ ನೀನು ಅಂಗನವಾಡಿ ಶಾಲೆ ತೆರೆದಿದಿಯಾ?’ಎಂದು.
Aslo Read – ಮೂರು ಕಾಗೆಗಳು
ಅದಕ್ಕವನ ಸ್ನೇಹಿತನು ‘ಇಲ್ಲ ಇವರೆಲ್ಲ ನನ್ನ ಸ್ವಂತ ಮಕ್ಕಳು’ ಎಂದು ಉತ್ತರಿಸುತ್ತಾನೆ. ಆಗ ಜಯಪ್ಪನು “ನಾಲ್ಕು ಜನ ಮಕ್ಕಳು ಪುಸ್ತಕಗಳನ್ನು ಹಿಡಿದುಕೊಂಡು ಓದುತ್ತಾ ಕೂತಿದ್ದಾರೆ. ಏನು ಹೇಳಿ ಮಕ್ಕಳನ್ನು ಬೆಳೆಸಿದಿ” ಎಂದು ಆಶ್ಚರ್ಯದಿಂದ ಕೇಳುತ್ತಾನೆ.
ಅದಕ್ಕಾತನು “ಮಕ್ಕಳು ಯಾವತ್ತೂ ನಾವ್ ಹೇಳಿದ್ದು ಮಾಡಂಗಿಲ್ಲ. ನಮ್ಮ ಮಾತು ಕೇಳಂಗಿಲ್ಲ ಅದಕ್ಕೆ ಬದಲಾಗಿ ನಮ್ಮನ್ನು ಅನುಸರಿಸುತ್ತಾರೆ. ನಮ್ಮನ್ನು ನೋಡಿ ತಾವು ನಮ್ಮಂತೆ ಬೆಳಿತಾರೆ. ನಾವು ಏನ್ಮಾಡ್ತೀವಿ ಆಂತ ನಮ್ಮನ್ನು ಅಬ್ಸರ್ವ್ ಮಾಡ್ತಾರೆ” ಎಂದು ಹೇಳುತ್ತಾನೆ.
ಕಥೆಯಲ್ಲಿನ ನೀತಿ / Moral of this Story:
ಮಕ್ಕಳನ್ನು ಬೆಳೆಸುವುದು ಒಂದು ಕಲೆ. ಮಕ್ಕಳು ನಾವು ಹೇಳಿದ್ದೆಲ್ಲಾ ಕೇಳುವುದಿಲ್ಲ, ಪಾಲಿಸುವುದಿಲ್ಲ ಅದಕ್ಕೆ ಬದಲಾಗಿ ನಮ್ಮನ್ನು ಅನುಸರಿಸುತ್ತಾರೆ. ನಾವು ಏನು ಮಾಡ್ತೀವಿ ಮಕ್ಕಳು ಕೂಡ ಅದನ್ನೇ ಮಾಡ್ತಾರೆ.
2. ಆನೆ ಮತ್ತು ಇರುವೆಗಳು – Short Famous Stories
ಒಂದಾನೊಂದು ಕಾಲದಲ್ಲಿ ಮರದ ಪೊಟರೆಯಲ್ಲಿ ಇರುವೆಗಳು ವಾಸವಾಗಿದ್ದವು. ಅವು ತಮ್ಮ ಜೀವನದಲ್ಲಿ ಬಹಳ ನಿಷ್ಠೆ ಮತ್ತು ಪ್ರಾಮಾಣಿಕತೆಯನ್ನು ಹೊಂದಿದ್ದವು. ಅಷ್ಟೇ ಅಲ್ಲದೆ ಕಷ್ಟಪಟ್ಟು ದುಡಿಯುವ ಶ್ರಮಜೀವಿಗಳಾಗಿದ್ದವು.
ಅದೇ ಮರದ ಕೊಂಬೆಯಲ್ಲಿ ಒಂದು ಪಕ್ಷಿ ಗೂಡು ಕಟ್ಟಿಕೊಂಡಿತ್ತು. ಒಂದು ದಿನ ತನ್ನ ಮರಿಗಳಿಗೆ ಆಹಾರ ತರಲು ಹೊರಗೆ ಹೋಯಿತು. ಆಹಾರಕ್ಕಾಗಿ ಎಲ್ಲಾ ಕಡೆ ಹುಡುಕಾಡಿತು ಆದರೆ ಎಲ್ಲೂ ಆಹಾರ ಸಿಗಲಿಲ್ಲ.
ಮರಳಿ ತನ್ನ ಗೂಡಿಗೆ ಹಾರಿ ಬರುವಾಗ ಮರದ ಪೊಟರೆಯಲ್ಲಿ ತಿರುಗಾಡುವ ಇರುವೆಗಳ ಸಾಲೊಂದು ಕಣ್ಣಿಗೆ ಬಿತ್ತು. ತಕ್ಷಣವೇ ಇರುವೆಗಳು ಇದ್ದಲ್ಲಿಗೆ ಹಾರಿ ಬಂದಿತು. ತನ್ನ ಕೊಕ್ಕಿನಿಂದ ಇರುವೆಗಳನ್ನು ಕುಕ್ಕಿ ತನ್ನ ಮರಿಗಳಿಗೆ ಬೇಕಾಗುವಷ್ಟು ಇರುವೆಗಳನ್ನು ತನ್ನ ಚೊಂಚಿನಲ್ಲಿ ತೆಗೆದುಕೊಂಡು ಹೋಯಿತು.
ಹೀಗೆ ದಿನಾಲೂ ಹಕ್ಕಿಯು ತನ್ನ ಮರಿಗಳಿಗೆ ಸಾಕಾಗುವಷ್ಟು ಇರುವೆಗಳನ್ನು ತೆಗೆದುಕೊಂಡು ಹೋಗುತ್ತಿತ್ತು. ಬರುಬರುತ್ತಾ ಇರುವೆಗಳ ಸಂಖ್ಯೆ ಕ್ರಮೇಣವಾಗಿ ಕಡಿಮೆಯಾಗುತ್ತಾ ಬಂತು. ಇರುವೆಗಳ ಮಧ್ಯ ಭಯ ಆವರಿಸಿತು.
Read Also – ನೆಮ್ಮದಿ ಕಸಿದುಕೊಂಡ ಹಣ
ಇರುವೆಗಳೆಲ್ಲಾ ಸಭೆ ಸೇರಿ ‘ನಾವೆಲ್ಲಾ ಇನ್ನೂ ಇಲ್ಲೇ ಇದ್ರೆ ನಮ್ಮಲ್ಲಿ ಯಾರೂ ಉಳಿಯೋದಿಲ್ಲ. ಅದಕ್ಕಾಗಿ ನಾವೆಲ್ಲ ಈ ರಾತ್ರಿಯೇ ಇಲ್ಲಿಂದ ಹೋಗ್ಬೇಕು. ಅಂತ ಮಾತಾಡಿಕೊಂಡವು.
ಇರುವೆಗಳು ಮಾತಾಡಿಕೊಂಡ ಪ್ರಕಾರವೇ ಆ ರಾತ್ರಿ ಅಲ್ಲಿಂದ ಬೇರೆ ಕಡೆ ಹೊರಟವು. ಇರುವೆಗಳು ದಾರಿಯಲ್ಲಿ ಹೋಗುತ್ತಿದ್ದಾಗ ದೂರದಲ್ಲಿ ಒಂದು ಭಯಂಕರ ಶಬ್ದ ಕೇಳಿ ಬಂತು. ಇರುವೆಗಳು ಮುಂದೆ ಹೋಗಿ ನೋಡಿದಾಗ ಕಳ್ಳರು ಆನೆಯ ದಂತವನ್ನು ಕದಿಯಲು ಅದಕ್ಕೆ ಹಿಂಸೆ ಕೊಟ್ಟು ಕಟ್ಟಿಹಾಕುತ್ತಿದ್ದರು.
ಆನೆ ನೋವನ್ನು ತಾಳದೆ ಸಹಾಯಕ್ಕಾಗಿ ಕಿರುಚುತ್ತಾ ಇತ್ತು. ಇರುವೆಗಳು ಸಾಲಾಗಿ ಬಂದು ಒಬ್ಬೊಬ್ಬರ ಕಾಲಿಗೆ ಕಚ್ಚಲಾರಂಭಿಸಿದವು ಇದರಿಂದ ಕಳ್ಳರು ಕೈಯಲ್ಲಿರುವ ಹಗ್ಗವನ್ನು ಸಡಿಲಬಿಟ್ಟರು. ಆನೆ ತಕ್ಷಣವೇ ಎದ್ದು ತನ್ನ ಸೊಂಡಿಲಿನಿಂದ ದಿಕ್ಕಿಗೊಬ್ಬರನ್ನು ಬೀಸಾಟುಬಿಟ್ಟಿತು. ಕಳ್ಳರೆಲ್ಲಾ ದಿಕ್ಕು ತಪ್ಪಿ ಓಡಿಹೋದರು.
Short Famous Stories
ಆನೆ ಇರುವೆಗಳಿಗೆ “ಸಹಾಯ ಮಾಡಿದ್ದಕ್ಕೆ ತುಂಬಾ ಧನ್ಯವಾದಗಳು ಅಂದಹಾಗೆ ನೀವೆಲ್ಲಾ ಎಲ್ಲಿಗೆ ಹೊರಟಿರುವಿರಿ?” ಎಂದು ಕೇಳಿತು.
ಅದಕ್ಕೆ ಇರುವೆಗಳು ತಮಗುಂಟಾದ ಸಮಸ್ಯೆಯನ್ನು ಹೇಳಿಕೊಂಡವು. ಆನೆ “ಬೇರೆಕಡೆ ಎಲ್ಲೂ ಹೋಗುವ ಅವಶ್ಯವಿಲ್ಲ ನಿವೆಲ್ಲಾ ಇಲ್ಲೇ ಇರಬಹುದು” ಎಂದು ಇರುವೆಗಳಿಗೆ ಸೂಕ್ತವಾದ ಸ್ಥಳವನ್ನು ತೋರಿಸಿತು.
Also Read – ದುರಾಸೆಯ ನರಿ
ಇರುವೆಗಳು ಆ ರಾತ್ರಿ ಯಾರ ಭಯವಿಲ್ಲದೆ ನೆಮ್ಮದಿಯಿಂದ ಮಲಗಿಕೊಂಡವು. ಆನೆ ಮತ್ತು ಇರುವೆಗಳು ಬಹಳ ಆತ್ಮೀಯ ಸ್ನೇಹಿತರಾದರು. ಆನೆ ಆಹಾರಕ್ಕಾಗಿ ಹೊರಗಡೆ ಹೋದಾಗ ಇರುವೆಗಳಿಗೂ ತಿಂಡಿಯನ್ನು ತಗೊಂಡು ಬರುತ್ತಿತ್ತು. ಹೀಗೆ ಆನೆ ಮತ್ತು ಇರುವೆಗಳು ಬಹಳ ಸಂತೋಷದಿಂದ ಇದ್ದವು. Short Famous Stories.
ಒಂದು ದಿವಸ ಮಳೆ ಜೋರಾಗಿ ಸುರಿಯುತ್ತಿತ್ತು ರಾತ್ರಿ ಹೊತ್ತಲ್ಲಿ ಇರುವೆಗಳು ಮಲಗಿಕೊಂಡಿದ್ದಾಗ ಅವುಗಳಿರುವ ಜಾಗ ನೀರಿನಿಂದ ತುಂಬಿಹೋಯಿತು. ಮಳೆ ಜೋರಾಗಿ ಸುರಿಯುವುದರಿಂದ ಹಳ್ಳ-ಕೊಳ್ಳಗಳು ತುಂಬಿ ಪ್ರವಾಹ ಉಂಟಾಯಿತು.
ಇರುವೆಗಳು ನೀರಿನ ರಭಸಕ್ಕೆ ಕೊಚ್ಚಿಹೋಗುವಾಗ ಆನೆ ಬಂದು ತನ್ನ ಸೊಂಡಿಲಿನಿಂದ ಇರುವೆಗಳನ್ನು ಬೆನ್ನು ಮೇಲೆ ಇಟ್ಟುಕೊಂಡು ಎತ್ತರವಾದ ಪ್ರದೇಶಕ್ಕೆ ಹೋದವು.
ಕಥೆಯಲ್ಲಿನ ನೀತಿ / Moral of this Story
ಸ್ನೇಹಕ್ಕೆ ಗಾತ್ರ, ಆಕಾರ ಸಂಬಂಧವಿಲ್ಲ.
ನಾವು ಮತ್ತೊಬ್ಬರಿಗೆ ಮಾಡಿದ ಸಹಾಯ ಬೇರೊಂದು ರೂಪದಲ್ಲಿ ದೊಡ್ಡ ಮಟ್ಟದಲ್ಲಿ ದೊರೆಯುತ್ತದೆ.
3. ಹಂಸ ಮತ್ತು ಹಂದಿ – Short Famous Stories
ಒಂದು ಸಣ್ಣ ಸರೋವರದಲ್ಲಿ ಒಂದು ಸುಂದರವಾದ ಹಂಸ ವಾಸವಾಗಿತ್ತು. ಅದಕ್ಕೆ ನಾಲ್ಕು ಮರಿಗಳಿದ್ದವು
ಒಂದು ದಿನ ಸಾಯಂಕಾಲ ವೇಳೆ ಹಂಸ ತನ್ನ ಮರಿಗಳೊಂದಿಗೆ ಹೊರಗಡೆ ವಾಕಿಂಗ್ ಬಂದಿತ್ತು. ಅದೇ ದಾರಿಯಲ್ಲಿ ಆ ಕಡೆಯಿಂದ ಹಂದಿ ತನ್ನ ಮರಿಗಳೊಂದಿಗೆ ಬರುತ್ತಾ ಇತ್ತು.
ಹಂಸ ಮತ್ತು ಹಂದಿ ಮುಖಾಮುಖಿ ಎದುರಾದಾಗ ಹಂದಿ “ನಿಂಗೆ ನಾಲ್ಕು ಮರಿಗಳು ಅವುಗಳು ಕೂಡಾ ಹಿಮದಂತೆ ಬೆಳ್ಳಗೆ ಇದ್ದಾವೆ. ಆದರೆ ನನಗ್ಯಾಕೆ ಒಂದು ಡಜನ್ ಮಕ್ಕಳಿದ್ದರೂ ಕೂಡ ಒಂದು ಮರಿ ಕೂಡಾ ಬೆಳ್ಳಗೆ ಇಲ್ಲ. ಇದಕ್ಕೆ ಕಾರಣವೇನು?” ಎಂದು ಹಂಸವನ್ನು ಕೇಳಿತು.
ಅದಕ್ಕೆ ಹಂಸ ‘ನನ್ನ ಮನಸ್ಸು ಬಹಳ ತಿಳಿ ಆದ ಅದ್ಕೆ ನಾನು ಬೆಳ್ಳಗೆ ಮತ್ತು ಸುಂದರವಾಗಿದ್ದಿನಿ’ ಅಂತ ಹೇಳಿತು. ಅದಕ್ಕೆ ಹಂದಿ ‘ಮನಸ್ಸಿಗೂ ಮೈಮೇಲಿನ ಬಣ್ಣಕ್ಕೂ ಏನ್ ಸಂಬಂಧ’ ಅಂತ ಕೇಳಿತು.
Also Read – ನರಿ ಮತ್ತು ಇಲಿಗಳು
ಆಗ ಹಂಸ “ಹೊಲಸು ಕಂಡರೆ ನಂಗೆ ಆಗಲ್ಲಾ ಆದರೆ ನೀನು ಹೊಲಸಿಲ್ಲದೆ ಇರೊಲ್ಲ. ನಾನು ಸ್ವಚ್ಛಂದವಾಗಿ ಹರಿಯುವ ನೀರಲ್ಲಿ ಈಜುತ್ತೇನೆ. ಆದರೆ ನೀನು ನಿಂತ ನೀರಲ್ಲೆ ಮೈಮರೆತು ಆನಂದಸುವಿ” ಎಂದು ಹೇಳಿತು.
ಕಥೆಯಲ್ಲಿನ ನೀತಿ / Moral of this Story:
ಆರೋಗ್ಯಕರ ಮನಸಿನಲ್ಲಿ ಆರೋಗ್ಯಕರ ದೇಹ ಇರುತ್ತದೆ.
ಮನಸ್ಸು ನಿರ್ಮಲವಾಗಿದ್ದರೆ ನಮ್ಮ ಸುತ್ತ ಮುತ್ತ ಇರುವ ವಾತಾವರಣವೂ ಕೂಡ ಸುಂದರವಾಗಿರುತ್ತದೆ.
Short Famous Stories
Follow Our Facebook Page Moral Storys
*ವಿ. ಸೂ. ಈ ಮೇಲಿನ ಕಥೆಗಳಲ್ಲಿ ಏನಾದರೂ ತಪ್ಪು/ ದೋಷಗಳು ಕಂಡುಬಂದರೆ ದಯಮಾಡಿ, ಕಾಮೆಂಟ್ ಮೂಲಕ ತಿಳಿಸಿ. ಧನ್ಯವಾದಗಳು.