Real Life Inspirational Stories of Success

Real Life Inspirational Stories of Success

Moral Stories
Spread the love

Hi Everyone, Welcome to Moral Storys – Real Life Inspirational Stories of Success

1. ದುರಾಸೆಯ ಪ್ರತಿಫಲವೇ ದುಃಖ – Real Life Inspirational Stories of Success

Real Life Inspirational Stories of Success

ಒಂದು ಊರಲ್ಲಿ ಒಬ್ಬ ವ್ಯಕ್ತಿ ಇದ್ದ, ಅವನಿಗೆ ಒಂದು ಎಕರೆ ಜಮೀನು ಮತ್ತು ಹತ್ತು ಮೇಕೆಗಳಿದ್ದವು. ಆ ಹತ್ತು ಮೇಕೆಗಳನ್ನು ತನ್ನ ಹೊಲದಲ್ಲೆ ಮೇಯಿಸುತ್ತಿದ್ದ.

ಬೇರೆ ಯಾವ ಕಡೆನೂ ಹೋಗದೆ ತನ್ನ ಸ್ವಂತ ಹೊಲದಲ್ಲಿಯೇ ಮೇಕೆಗಳನ್ನು ಸಾಯಂಕಾಲದ ವರೆಗೆ ಹೊಟ್ಟೆ ತುಂಬಾ ಮೇಯಿಸಿ ಜೋಪಾನವಾಗಿ ದೊಡ್ಡಿಗೆ ಸೇರಿಸುತ್ತಿದ್ದನು. ಮತ್ತು ಸುರಕ್ಷಿತವಾದ ಸ್ಥಳದಲ್ಲಿ ತಂಗಿಸುತ್ತಿದ್ದ.

ಒಂದು ದಿನ ಹತ್ತು ಮೇಕೆಗಳಲ್ಲೊಂದು ಮೇಕೆ ‘ದಿನಾ ಇದೇ ಹುಲ್ಲು ತಿಂದು ಬೇಸರ ಬಂತು, ಅದಕ್ಕಾಗಿ ಇವತ್ತು ಬೇರೆ ಕಡೆ ಹೋಗಬೇಕು’ ಎಂದು ಆಲೋಚಿಸಿತು.

Read Also – ಮೀನುಗಾರ ಮತ್ತು ಬಲೆ

ಆ ಮೇಕೆ ಯಜಮಾನನ ಕಣ್ಣಿಗೆ ಬೀಳದಂತೆ ದೊಡ್ಡಿಯಿಂದ ತಪ್ಪಿಸಿಕೊಂಡು ಕಾಡಿಗೆ ಹೋಯಿತು. ಅಲ್ಲಿರುವ ಹಚ್ಚಹಸಿರಾದ ಹುಲ್ಲನ್ನು ನೋಡಿ ಮೈಮರೆತು ಸಂತೋಷದಿಂದ ಕೂಗಲಾರಂಭಿಸಿತು.

ಆಗ ಅಲ್ಲೇ ಆಹಾರಕ್ಕಾಗಿ ಹುಡುಕುತ್ತಿದ್ದ ತೋಳವೊಂದು, ಇದರ ಕೂಗು ಕೇಳಿ ಹುಡುಕಿಕೊಂಡು ಬಂತು. ಆಗ ತೋಳ ಮೇಕೆಯ ಮೇಲೆ ಹಾರಿ  ಕೊಂದಿತು.

ಕಥೆಯಲ್ಲಿನ ನೀತಿ / Moral of this Story:
ಅತಿಯಾದ ಆಸೆ ನಮ್ಮ ಜೀವನವನ್ನು ದುಃಖದಲ್ಲಿ ಮುಳುಗಿಸುತ್ತದೆ. ಇದ್ದುದರಲ್ಲಿಯೇ ತೃಪ್ತರಾಗಿರಬೇಕು.

Real Life Inspirational Stories of Success

2. ನಾಯಿ ಮತ್ತು ಕಾಗೆ – Real Life Inspirational Stories of Success

Real Life Inspirational Stories of Success

ಒಂದು ದಟ್ಟವಾದ ಕಾಡು, ಕಾಡಿನ ಮಧ್ಯದಲ್ಲಿ ನದಿ ಮಳೆಗಾಲದಲ್ಲಿ ತುಂಬಿ ಹರಿಯುತ್ತಿತ್ತು. ಅಲ್ಲೊಂದು ನಾಯಿ ಸಣ್ಣಪುಟ್ಟ ಪ್ರಾಣಿಗಳನ್ನು ಬೇಟೆಯಾಡಿ ಜೀವನ ನಡೆಸುತ್ತಿತ್ತು.

ಒಂದು ದಿನ ನದಿಯ ದಡದಲ್ಲಿ ಬಂಡೆಯ ಮೇಲೆ ನಾಯಿ ಮೀನುಗಳನ್ನು ಹಿಡಿದು ತಿನ್ನುತ್ತಾ ಇತ್ತು. ಹೀಗೆ ಮೀನುಗಳನ್ನು ಹಿಡಿದು ತಿನ್ನುತ್ತಿರಬೇಕಾದರೆ ಮೀನಿನ ಮುಳ್ಳು ನಾಯಿಯ ಬಾಯೊಳಗೆ ಮುರಿದುಕೊಂಡಿತು.

ನಾಯಿಯ ಬಾಯೊಳಗಿಂದ ರಕ್ತ ಬರಲಾರಂಭಿಸಿತು. ಕಿರುಧ್ವನಿಯಿಂದ  ಬೇರೆಯವರ ಸಹಾಯಕ್ಕಾಗಿ ಕಿರುಚಿತು.

Also Read – ಕಳ್ಳ ಮತ್ತು ನಾಯಿ

ಅದರ ಕೂಗನ್ನು ಕೇಳಿ ಎಲ್ಲಾ ಪ್ರಾಣಿಗಳು ಪಕ್ಷಿಗಳು ನೋಡುತ್ತಾ ನಿಂತವು ಆದರೆ ಯಾರು ಅದರ ಸಹಾಯಕ್ಕೆ ಬರಲಿಲ್ಲ.  ಕೊನೆಗೆ ಕಾಗೆಯೊಂದು ನಾಯಿಯ ಹತ್ತಿರ ಬಂದು ಕಾಗೆಯ ಕೊಕ್ಕಿನಿಂದ ನಾಯಿಯ ಬಾಯೊಳಗಿರುವ ಮುಳ್ಳನ್ನು ತೆಗೆದುಬಿಟ್ಟಿತು.

ಕಾಗೆ “ನಿನ್ನ ಬಾಯಲ್ಲಿರುವ ಮುಳ್ಳನ್ನು ತೆಗೆದಿದ್ದೇನೆ, ಮತ್ತೆ ನನಗೇನಾದರೂ ಬಹುಮಾನ ಕೊಡುತ್ತಿಯಾ” ಒಂದು ನಾಯಿಯನ್ನು ಕೇಳಿತು.

ಅದಕ್ಕೆ ನಾಯಿ”ನಿನ್ನ ಕೊಕ್ಕು ನನ್ನ ಬಾಯೊಳಗೆ ಇಟ್ಟಾಗ ನಿನ್ನನ್ನು ಕಚ್ಚದೆ ಹಾಗೆ ಬಿಟ್ಟೆನಲ್ಲ ಅದಕ್ಕಿಂತ ದೊಡ್ಡ ಬಹುಮಾನ ಬೇಕಾ?” ಎಂದಿತು.

ಕಥೆಯಲ್ಲಿನ ನೀತಿ / Moral of this Story:
ಮಾಡಿದ ಸಹಾಯಕ್ಕೆ ಪ್ರತಿಫಲ ಎಂದಿಗೂ ಆಶಿಸಬಾರದು.

Real Life Inspirational Stories of Success

3. ಫಲ ಕೊಡದ ಮರವೇತಕೆ? – Real Life Inspirational Stories of Success

ಒಬ್ಬ ರೈತ ಹೊಲವನ್ನು ಹಸನು ಮಾಡಿ ಬೀಜ ಬಿತ್ತಿ, ಕಳೆ ತೆಗೆದು, ಗೊಬ್ಬರ ಹಾಕಿ ಜೋಪಾನವಾಗಿ ಕಾಪಾಡಿಕೊಂಡು ಬಂದ ಒಂದು ತಿಂಗಳಾದರೂ ಫಲ ಕೊಡಲಿಲ್ಲ.

ಇನ್ನೊಂದು ತಿಂಗಳು ಎದುರು ನೋಡಿದ, ಈ ತಿಂಗಳಾದರೂ ಫಲ ಕೊಡುವುದೇನು ಅಂತ ಆ ತಿಂಗಳು ಫಲ ಕೊಡಲಿಲ್ಲ.

ನೋಡಲಿಕ್ಕೆ ಬೆಳೆ ಏನೋ ಹಚ್ಚಹಸಿರಾಗಿದೆ. ಮತ್ತೊಂದು ತಿಂಗಳು ಎದುರು ನೋಡಿದ ಈ ತಿಂಗಳಾದರೂ ಫಲ ಕೊಡಬಹುದೇನೋ ಅಂತ ಆ ತಿಂಗಳು ಕೂಡಾ ನಂಬಿಕೆ ಹುಸಿಯಾಯಿತು.

ಹೀಗೆ ಒಂದು ವರ್ಷ ಎದುರು ನೋಡಿದ ಯಾವುದೇ ಫಲ ಕೊಡಲಿಲ್ಲ. ಅವನು ಪಟ್ಟ ಪಾಡು ನೀರುಪಾಲಾಯಿತು.
ಕೊನೆಗೆ ಅವನು ಎಷ್ಟು ವರ್ಷ ಕಾದರೂ ಪ್ರಯೋಜನವಿಲ್ಲ ಎಂದು ತಿಳಿದು ಇಡೀ ಬೆಳೆಯನ್ನು ಕಡಿದುಹಾಕಿದ.

ಕಥೆಯಲ್ಲಿನ ನೀತಿ / Moral of this Story:
ನಾವಾದರೂ ಕೂಡಾ ಅಷ್ಟೇ ಸೃಷ್ಟಿಸಿದ ದೇವರಿಗೆ, ತಂದೆ ತಾಯಿಗಳಿಗೆ ಪ್ರಯೋಜನಕಾರಿಯಾಗಿರಬೇಕು. ರಾಷ್ಟ್ರಕ್ಕೆ, ಸಮಾಜಕ್ಕೆ, ಸ್ನೇಹಿತರಿಗೆ ಮತ್ತು ಸಂಬಂಧಿಕರಿಗೆ  ಸಮಾಜಮುಖಿಯಾಗಿರಬೇಕು.

4. ದುಷ್ಟರ ಸಹವಾಸ ಜೀವನ ವನವಾಸ -Real Life Inspirational Stories of Success

ಒಂದು ಊರಲ್ಲಿ ಸುಂದರವಾದ ನಾಯಿಯೊಂದು ವಾಸವಾಗಿತ್ತು. ಅದರ ಯಜಮಾನ ನಾಯಿಯನ್ನು ತುಂಬಾ ಕಾಳಜಿಯಿಂದ ನೋಡಿಕೊಳ್ಳುತ್ತಿದ್ದನು. ಅದು ಯಜಮಾನನಿಗೆ ಬಹಳ ನಂಬಿಕೆಯುಳ್ಳ ನಾಯಿ ಆಗಿತ್ತು.

ಯಜಮಾನನ ಮನೆಯ‌ ಆವರಣದ ಸುತ್ತ ತನಗೆ ಇಷ್ಟವಾದ ವಿವಿಧ ಬಗೆಯ ಹೂಗಿಡಗಳನ್ನು ಬೆಳೆದಿದ್ದನು.

Also Read – ಕಾಗೆ ಮತ್ತು ಕೋಗಿಲೆ

ಒಂದು ದಿನ ನಾಯಿಯ ಯಜಮಾನನು ಒಂದು ಊರಿಗೆ ಹೋಗಿ ಬರುವುದಾಗಿ ಹೇಳಿ ಹೊರಡುತ್ತಾನೆ. ಆ ನಾಯಿ ಯಜಮಾನನನ್ನು ಬಸ್ ಹತ್ತಿಸಿ ಬರಲು ಅವನ ಹಿಂದೆ ಬಸ್ ನಿಲ್ದಾಣಕ್ಕೆ ಬರುತ್ತದೆ. ಅದೇ ಸಮಯಕ್ಕೆ ಬಸ್ ಬರುತ್ತದೆ, ಯಜಮಾನ ಬಸ್ ಹತ್ತಿ ಹೋಗುತ್ತಾನೆ.

ಯಜಮಾನನನ್ನು ಬಸ್ ಹತ್ತಿಸಿ ಬಸ್ ನಿಲ್ದಾಣದಿಂದ ಹಿಂತಿರುಗಿ ಬರುವಾಗ ದಾರಿಯಲ್ಲಿ ಒಂದು ಹಂದಿ ಎದುರಾಗುತ್ತದೆ.

ಹಂದಿ “ಎಲ್ಲಿಗೆ ಹೋಗಿ ಬರ್ತಾ ಇದೀಯಾ?” ಎಂದು ನಾಯಿಗೆ ಕೇಳುತ್ತದೆ. ಅದಕ್ಕೆ ನಾಯಿ “ನನ್ನ ಯಜಮಾನ ಊರಿಗೆ ಹೋದ, ಬಸ್ ಹತ್ತಿಸಿ ಬರಲಿಕ್ಕೆ ಹೋಗಿದ್ದೆ” ಎಂದಿತು.

ಸ್ವಲ್ಪ ಹೊತ್ತು ಮಾತುಕತೆ ಆದ ಮೇಲೆ ಹಂದಿ “ನಾನು ನಿಮ್ಮ ಮನೆಗೆ ಬರಬಹುದಾ?” ಎಂದು ಕೇಳಿತು. ಅದಕ್ಕೆ ನಾಯಿ “ಹಾ!  ಸರಿ ಬಾ ಹೋಗೋಣ” ಎಂದು ಮನೆಗೆ  ಕರೆದುಕೊಂಡು ಬಂದಿತು.

ಹಂದಿ “ವಾವ್! ನಿಮ್ಮ ಮನೆ ಎಷ್ಟು ಸುಂದರವಾಗಿದೆ?” ಎಂದಿತು. ಆಗ ನಾಯಿ “ಹಾ! ನನ್ನ ಯಜಮಾನ ಈ ಮನೆಯನ್ನು ಎಷ್ಟು ಸುಂದರವಾಗಿ ನೋಡಿಕೊಳ್ಳುತ್ತಾನೋ, ಅಷ್ಟೇ ಕಾಳಜಿಯಿಂದ ನನ್ನನ್ನು ನೋಡಿಕೊಳ್ಳುತ್ತಾನೆ. ಅಷ್ಟೇ ಅಲ್ಲ ನನಗೆ ದಿನಾ ಮಾಂಸ, ರೊಟ್ಟಿ, ಹಾಲು ಕೊಡುತ್ತಾನೆ” ಎಂದು ಹೇಳಿತು.

Real Life Inspirational Stories of Success of Success

ಆಗ ಹಂದಿ “ಹೌದಾ! ನೀನು ನಿಜವಾಗ್ಲೂ ಪುಣ್ಯ ಮಾಡಿದ್ದಿ ಅಂತ ಯಜಮಾನನನ್ನು ಪಡೆಯೋಕೆ” ಎಂದಿತು. ಅದಕ್ಕೆ ನಾಯಿ” ಹೂಂ” ಎಂದಿತು.

ಸ್ವಲ್ಪ ಹೊತ್ತು ಆದ ಮೇಲೆ ಹಂದಿ “ನಾನು ಇವತ್ತು ಇಲ್ಲೇ ಇರ್ತೀನಿ” ಎಂದಿತು. ಅದಕ್ಕೆ ನಾಯಿ “ಅಯ್ಯೋ! ನೀ ಇಲ್ಲೇ ಇದ್ರೆ ಯಜಮಾನ ನನ್ನ ಬಡಿದು ಹೊರಹಾಕುತ್ತಾನೆ” ಅಂದಿತು.

ಆಗ ಹಂದಿ “ನಿನ್ನ ಯಜಮಾನ ಊರಿಗೆ ಹೋಗಿದ್ದಾನೆ ಅಲ್ವಾ, ಇವತ್ತು ಒಂದು ದಿವಸ ಇಲ್ಲೇ ಇರ್ತೀನಿ” ಎಂದು ವಿನಂತಿಸಿಕೊಂಡಿತು.

ಅದಕ್ಕೆ ನಾಯಿ “ಸರೀ” ಅಂದಿತು.

Read Also – ಮಾತಿನ ಮಹತ್ವ

ನಾಯಿ ರಾತ್ರಿ ಹೊತ್ತಲ್ಲಿ ಮಲಗಿಕೊಂಡಾಗ ಚಂಚಲ ಬುದ್ಧಿ ಹೊಂದಿರುವ ಹಂದಿ ನೆಲವನ್ನು ತೋಡಿ ಮನೆಯ ಆವರಣದೊಳಗಿರುವ ಹೂಗಿಡಗಳನ್ನು ಹಾಳುಮಾಡಿ ಹೋಯಿತು.

ನಾಯಿ ಬೆಳಿಗ್ಗೆ ಎದ್ದು ನೋಡಿದರೆ ಎಲ್ಲಾ ಹೂಗಿಡಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು.

ಮಾರನೆಯ ದಿವಸ ಯಜಮಾನ ಬಂದು ನೋಡ್ತಾನೆ. ನೆಲವನ್ನು ತೋಡಿ ಹೂಗಿಡಗಳನ್ನು ಹಾಳು ಮಾಡಿದ್ದು, ಈ ನಾಯಿನೇ ಅಂತ ತಿಳಿದು ಆ ನಾಯಿಯನ್ನು ಮನೆಯಿಂದ ಹೊರಹಾಕುತ್ತಾನೆ.

ಕಥೆಯಲ್ಲಿನ ನೀತಿ / Moral of this Story:
ಸುಜನರ ಸಂಗ ಮಾಡಬೇಕು, ದುಷ್ಟರಿಂದ ದೂರವಿರಬೇಕು. ಯಾರನ್ನು ಪೂರ್ತಿಯಾಗಿ ನಂಬಬಾರದು.

Real Life Inspirational Stories of Success


Follow Our Facebook Page Moral Storys

ವಿ. ಸೂಚನೆ – ಮೇಲಿನ ಕಥೆಗಳಲ್ಲಿ ಏನಾದರೂ ತಪ್ಪುಗಳು ಕಂಡುಬಂದರೆ ದಯಮಾಡಿ ಕಾಮೆಂಟ್ ಮೂಲಕ ತಿಳಿಸಿ. ಪುನಃ ಬೇಟಿ ನೀಡಿ ಧನ್ಯವಾದಗಳು.


Spread the love

Leave a Reply

Your email address will not be published. Required fields are marked *