Panchatantra Story in Kannada

Panchatantra Story in Kannada

Moral Stories
Spread the love

Hi Everyone, Welcome to Moral Storys – Panchatantra Story in Kannada

1. ನರಿ ಮತ್ತು ಸಿಂಹದ ಕಥೆ – Panchatantra Story in Kannada

ಸಮುದ್ರತೀರದಿಂದ ಮೂವತ್ತು ಕಿಲೋ ಮೀಟರ್ ದೂರದಲ್ಲಿ ಒಂದು ದಟ್ಟವಾದ ಕಾಡಿತ್ತು. ಈ ಕಾಡಿನಲ್ಲಿ ಈ ಸಿಂಹವೇ ರಾಜನಾಗಿತ್ತು.

ಒಂದು ದಿವಸ ಬೇಟೆಯಾಡುವಾಗ ಸಿಂಹದ ಕಾಲು ಬಂಡೆಯ ಪೊಟರೆಯಲ್ಲಿ ಸಿಲುಕಿಕೊಂಡಿತು. ಸಿಂಹ ಎಷ್ಟು ವಿಧವಿಧವಾಗಿ ಪ್ರಯತ್ನಿಸಿದರೂ ಕಾಲು ಹೊರಗೆ ಬರಲಿಲ್ಲ. ವದ್ದಾಡಿ ವದ್ದಾಡಿ ನಿಶ್ಯಕ್ತಿಗೊಂಡಿತು. ಒಂದು ದಿನ ವರೆಗೂ ಅಲ್ಲೆ ಇತ್ತು.

ಅದೆ ಕಾಡಿನಲ್ಲಿ ನರಿಯೊಂದು ಆಹಾರಕ್ಕಾಗಿ ಹುಡುಕುತ್ತಾ ಇತ್ತು. ಆದರೆ ಆಹಾರ ಎಲ್ಲೂ ಸಿಗಲಿಲ್ಲ. ನರಿ, ಆಹಾರ  ಹುಡುಕುತ್ತಾ ಸಿಂಹ ಇರುವ ಕಡೆ ಬಂತು. ಸಿಂಹ ಸಹಾಯಕ್ಕಾಗಿ ನರಿಯನ್ನು ಕೇಳಿಕೊಂಡಿತು.

ಆಗ ನರಿ -‘ನಿಂಗೆ ಸಹಾಯ ಮಾಡಿದರೆ ನನಗೇನು ಲಾಭ’ ಎಂದಿತು.

ಅದಕ್ಕೆ ಸಿಂಹ ‘ನಾನು ಬೇಟೆಯಾಡುವ ಪ್ರತಿಯೊಂದರಲ್ಲೂ ಪಾಲು ಕೊಡ್ತೀನಿ’ ಎಂದಿತು. ಆಗ ನರಿ ಸರಿ ಎಂದು ಒಪ್ಪಿಕೊಂಡಿತು. ಸಿಂಹಕ್ಕೆ ಬಂಡೆಯ ಪೊಟರೆಯಿಂದ ತಪ್ಪಿಸಿ ಸಹಾಯ ಮಾಡಿತು.

ಸಿಂಹ ಮತ್ತು ನರಿ ಅಲ್ಲಿಂದ ಮುಂದೆ ಹೋದವು. ಸಿಂಹ ಒಂದು ಪ್ರಾಣಿಯನ್ನು ಬೇಟೆಯಾಡಿ ನರಿಯ ಬಳಿಗೆ ತಂದಿತು. ನರಿಗೆ ತುಂಬಾ ಹಸಿವೆ ಯಾಗಿತ್ತು ಮತ್ತು ಎಂದೂ ನೋಡಿರದ ಆ ಆಹಾರವನ್ನು ನೋಡಿ ಬಾಯಲ್ಲಿ ನೀರೂರಿದವು.

Read Also – ಸಹಾಯ ಮಾಡುವುದು ನನ್ನ ಧರ್ಮ

ಎಲ್ಲಾ ಆಹಾರವನ್ನು ತಾನೇ ತಿನ್ನಬೇಕೆಂದು ಅಂದುಕೊಂಡಿತು.  ನರಿ, ಸಿಂಹಕ್ಕೆ ‘ಇದೆಲ್ಲಾ ನಂಗೆ ಬೇಕು ನೀನು ಮತ್ತೊಂದು ಪ್ರಾಣಿಯನ್ನು ಬೇಟೆಯಾಡಿ ತಿನ್ನು’ ಎಂದಿತು.

ಅದಕ್ಕೆ ಸಿಂಹ ‘ನನಗೆ ಸಹಾಯ ಮಾಡಿದೀ ಎಂಬ ಒಂದೇ ಒಂದು ಕಾರಣಕ್ಕೆ ನಿಂಗೆ ಸ್ವಲ್ಪ ಪಾಲು ಕೊಡ್ತಾ ಇರೋದು’ ಎಂದಿತು. ನರಿ, ನಾನು ಕೇಳಿದ್ದನ್ನು ಕೊಡಲಿಲ್ಲ ಅಂದ್ರೆ ನಿನ್ನ ಸಾಯಿಸ್ತಿನಿ ಎಂದಿತು.

Panchatantra Story in Kannada

ಆಗ ಸಿಂಹ ಸಿಟ್ಟಿನಿಂದ ಪಂಜ ಎತ್ತಿ ಹೊಡೆಯಿತು. ಜೀವಭಯದಿಂದ ನರಿ ಸರ್ರನೆ ಓಡಿ ಹೋಯಿತು. ನರಿಗೆ ಇನ್ನೂ ಹಸಿವೆ ಜಾಸ್ತಿಯಾಗುತ್ತಾ ಹೋಯಿತು. ಆಗ ಬುದ್ಧಿ ಬಂದು ‘ಸಿಂಹ ಕೊಟ್ಟಿದ್ದಾದ್ರೂ ತಿಂದಿದ್ರೆ ಹಸಿವೆ ತೀರುತಿತ್ತು’ ಎಂದು ಅಂದುಕೊಂಡಿತು.

ಕಥೆಯಲ್ಲಿನ ನೀತಿ / Moral of this Story :
ದುರಾಸೆ ಸಂಕಟಕ್ಕೆ ದಾರಿ ಮಾಡಿಕೊಡುತ್ತದೆ.‌ ಹಂಚಿಕೊಂಡು ತಿನ್ನುವುದು ಸಂಬಂಧವನ್ನು ಹುಟ್ಟು ಹಾಕುತ್ತದೆ.

ಪ್ರತಿಯೊಬ್ಬರ ಬದುಕಿನಲಿ ಆಸೆಗಳು ಇರುತ್ತವೆ. ಆಸೆಗಳಿಲ್ಲದ ಯಾವ ಮನುಜನು ಕೂಡ ಭೂಮಿಯ ಮೇಲೆ ವಾಸಿಸಲಾರನು. ಒಂದಲ್ಲ ಒಂದು ರೀತಿಯ ಆಸೆಗಳ ಗಂಟನ್ನು ಹೊತ್ತು ಸಾಗುತ್ತಿದ್ದಾನೆ.

ಏಕೆಂದರೆ ಅವನು ಮಾನವ, ಸಂಸಾರ, ಹೆಂಡತಿ ಮಕ್ಕಳು, ಗುಡಿ ಗೋಪುರ, ಏಳು ಬೀಳುಗಳ ಮಧ್ಯೆ ಅಲೆಯುತ್ತಿದ್ದಾನೆ. ತನ್ನದೇ ಆದ ಲೌಕಿಕ ಪ್ರಪಂಚದಲ್ಲಿ ಬದುಕುತ್ತಿದ್ದಾನೆ.

ಆ ಆಸೆಗಳನ್ನೇಲ್ಲ ಪೂರೈಸಲು ಓಡುವ ಕುದುರೆಯನ್ನು ಬೆನ್ನತ್ತಿದ್ದಾನೆ. ಆಸೆ ಪಡುವುದು ತಪ್ಪೇನಲ್ಲ ಆದರೆ ಅತಿಯಾದ ದುರಾಸೆ ಒಳ್ಳೆಯದು ಅಲ್ಲವೇ ಅಲ್ಲ. ದುರಾಸೆಯಿಂದ ಜೀವನವೇ ಶೋಕಸಂದ್ರದಲ್ಲಿ ಮುಳುಗಿಸುತ್ತದೆ.

ಈಡೇರಿಸಲು ಆಗದ ಬಯಕೆಗಳನ್ನು ಈಡೇರಿಸಲು ಹಲವಾರು ಕೆಟ್ಟ ಮಾರ್ಗಗಳನ್ನು ಹಿಡಿಯಬೇಕಾಗುತ್ತದೆ. ಕೆಟ್ಟ ಕೆಟ್ಟ ಆಲೋಚನೆಗಳು ತಲೆಗೆ ಬರುತ್ತವೆ.

ಮತ್ತು ಯಾವಾಗಲೂ ಅಸಂತೃಪ್ತಿಯಲ್ಲಿ ಜೀವನ ಕಳೆಯಬೇಕಾಗುತ್ತದೆ. ಸುಲಭವಾಗಿ ಹಣ ಗಳಿಸಬೇಕು ಎನ್ನುವ ಭ್ರಮೆಯಲ್ಲಿ ಬದುಕುತ್ತಾನೆ.

2. ಮಹಾನ್ ರಾಜನ ಕಥೆ – Panchatantra Story in Kannada


ಸುಮಾರು ವರ್ಷಗಳಿಂದ ಹಿಂದೆ ಒಬ್ಬ ಅರಸನಿದ್ದನು. ಅವನು ಸಕಲಕಲಾ ವೈಲ್ಲಭನಾಗಿದ್ದನು. ಜ್ಞಾನದಲ್ಲಿ ಆಳವಾದ ಪಾಂಡಿತ್ಯವನ್ನು ಹೊಂದಿದ್ದನು.

ಯುದ್ಧದಲ್ಲಿ ಒಂದು ಸಾರಿಯೂ ಸೋತು ಹೋಗದ ಚರಿತ್ರೆ ಅವನದು. ಎಲ್ಲವೂ ಸೌಖ್ಯವಾಗಿತ್ತು. ರಾಜ್ಯ ದವಸ ಧಾನ್ಯ, ಮುತ್ತು ರತ್ನ, ವಜ್ರ ವೈಢೂರ್ಯ ಗಳಿಂದ  ತುಂಬಿತ್ತು.

ರಾಜನಿಗೆ ಆಗಾಗ ಎಲ್ಲವೂ ಇದ್ದು ಇಲ್ಲದಂತೆ ಅನ್ನಿಸುತ್ತಾ ಇತ್ತು. ಮಾತಿನಲ್ಲಿ ಹೇಳಲಾಗದ ಒಂದು ರೀತಿಯ ಮೌನ ಅವನನ್ನು ಸೆಳೆಯುತ್ತಿತ್ತು.

Panchatantra Story in Kannada

ಅವನು ತನ್ನ ಅರಮನೆಯ ಸಭಾಂಗಣದಲ್ಲಿ ಸಭೆ ಕರೆದು ಜನರ ಯೋಗಕ್ಷೇಮದ ಬಗ್ಗೆ ಮಾತಾಡಿದ. ಅವರ ಸಮಸ್ಯೆ, ಕುಂದುಕೊರತೆಗಳನ್ನು ನಿವಾರಿಸಲು ಊರೂರು ಬೇಟಿ ಮಾಡಬಯಸಿದ.

ಅದಕ್ಕಾಗಿ ಗ್ರಾಮಗಳಿಗೆ ಭೇಟಿ ನೀಡಿ ಖುದ್ದಾಗಿ ಅವರ ಸಮಸ್ಯೆಗಳೇನೆಂದು ತಿಳಿದುಕೊಳ್ಳಲು ಪ್ರವಾಸ ಕೈಗೊಂಡ. ಒಂದೊಂದು ಗ್ರಾಮವನ್ನು ಬೇಟಿ ಮಾಡುತ್ತಾ ರಾಜ್ಯವೆಲ್ಲ ತಿರುಗಾಡಿದ.

ಗ್ರಾಮಗಳಲ್ಲಿ ಜನರು ಮುರುಕು ಗುಡಿಸಲಲ್ಲಿ ಇರುವುದನ್ನು ಕಂಡನು. ಇನ್ನು ಕೆಲವು ಜನರು ತಿಂಡಿ ಇಲ್ಲದೆ ಆಹಾರಕ್ಕಾಗಿ ಬಿಕ್ಷೆ ಬೇಡುವುದನ್ನು ಕಂಡನು.

Read Also – ಅನುಕರಣೆ

ಮತ್ತೊಂದು ಗ್ರಾಮದಲ್ಲಿ ಜನರು ತೊಡಲು ಬಟ್ಟೆ ಇಲ್ಲದೆ ಹರದೋಗಿರುವ ಬಟ್ಟೆಯನ್ನು ಕಂಡನು. ಇನ್ನು ಕೆಲವು ಜನರು  ಚಪ್ಪಲಿಲ್ಲದೆ ಬರಿಗಾಲಿನಲ್ಲಿ ನಡೆಯುವುದನ್ನು ಗಮನಿಸಿದನು.

ಇನ್ನೂ ಮುಂದೆ ಹೋದಂತೆ, ಜನರು ನೀರಿಗಾಗಿ ಪರದಾಡುವ ಸ್ಥಿತಿ ನೋಡಿದನು. ಕೊನೆಗೆ ಅರಮನೆಗೆ ಹೋಗಿ ನೋಡಿ ಬಂದ ಎಲ್ಲವನ್ನು ಆಲೋಚಿಸುತ್ತಾ ಕುಳಿತನು.

ಇದಕ್ಕೆಲ್ಲ ಕಾರಣ ಏನು ಎಂಬುದನ್ನು ತನ್ನೊಳಗೆ ತಾನು ಪ್ರಶ್ನಿಸಿಕೊಂಡನು. ಕೇವಲ ಹಣ ಬಡತನ ಅಷ್ಟೇ ಕಾರಣವಲ್ಲ. ಅವರಿಗೆ ಶಿಕ್ಷಣದ ಕೊರತೆ ಇದೆ. ಉದ್ಯೋಗದ, ಮೂಲಭೂತ ಸೌಕರ್ಯಗಳ ಕೊರತೆಯಿದೆ.  ಪ್ರಭಾವಿ ನಾಯಕ ಕೊರತೆ ಇದೆ ಎಂದು ಅರಿತುಕೊಂಡನು.

ಮುಖ್ಯವಾಗಿ ರಾಜನಾದವನು ‘ನನ್ನ ಪಾತ್ರ ತುಂಬಾನೇ ಇದೆ. ನನ್ನನು ನಾನು ಪೂರ್ತಿಯಾಗಿ ತೊಡಗಿಸಿಕೊಳ್ಳಬೇಕು ಎಂದುಕೊಂಡನು.

ರಾಜನು ರಾಜ್ಯ ಪ್ರತಿ ಗ್ರಾಮಗಳಿಗೆ ಕುಡಿಯುವ ನೀರು, ಶಿಕ್ಷಣ, ಉದ್ಯೋಗ, ಜೀವನಕ್ಕೆ ಅವಶ್ಯಕತೆಗಳನ್ನು ಪೂರೈಸಿದನು. ಆರೋಗ್ಯವನ್ನು ಸುಧಾರಿಸಲು ಹಳ್ಳಿಯಲ್ಲಿ ಸುವ್ಯವಸ್ಥಿತವಾದ ಆಸ್ಪತ್ರೆಗೆಯನ್ನು ಕಟ್ಟಿಸಿದನು.

Panchatantra Story in Kannada

ವಾಸಿಸಲು ಮನೆಗಳನ್ನು ಕಟ್ಟಿಸಿದನು. ಬರಡಾಗಿದ್ದ ಗ್ರಾಮಗಳು ಹಸಿರಾದವು. ಜನರ ಮುಖದಲ್ಲಿ ನಗು ಕಾಣಿಸಿತು. ರಾಜನ ಸಾಹಸವನ್ನು ಮೆಚ್ಚಿದರು.

ರಾಜನಿಗೂ ಬದಲಾದ ಜೀವಿತವನ್ನು ನೋಡಿ ಆನಂದವಾಯಿತು. ತನಗಿರುವ ಕೊರಗು ಕೂಡ ಬಿಟ್ಟು ಹೋಯಿತು.

ಕಥೆಯಲ್ಲಿನ ನೀತಿ /  Moral of this Story :
ನಾಯಕನಾದವನು ಜನರ ಯೋಗಕ್ಷೇಮದವನ್ನು ನೋಡಿಕೊಳ್ಳುವವನಾಗಿರಬೇಕು. ಒಬ್ಬ ನಾಯಕನು ತನ್ನನ್ನು ತಾನು ಸಮಗ್ರವಾಗಿ ತೊಡಗಿಸಿಕೊಳ್ಳಬೇಕು.

ಮುಂದೆ ನಿಂತು ಸರಿಯಾದ ಸಮಯಕ್ಕೆ ಸೂಕ್ತ ನಿರ್ಧಾರಗಳನ್ನು ಕೈಗೊಳ್ಳಬೇಕು. ಯಶಸ್ವಿ ನಾಯಕ ಕೆಲಸವನ್ನು ಇತರರಿಗೆ ವಹಿಸುವುದಕ್ಕಿಂತ ಮೊದಲು ತಾನೆ ಕಾರ್ಯಾರಂಭಕನಾಗುತ್ತಾನೆ. ಏಕೆಂದರೆ ಬಾಯಿಂದ ಹೇಳಿದ ಮಾತಿಗಿಂತ ಮಾಡಿ ತೋರಿಸುವುದು ಹೆಚ್ಚು ಪ್ರಭಾವ ಬೀರುತ್ತದೆ.

ಪ್ರತಿಯೊಂದು ಹಂತದಲ್ಲೂ ವೈಯಕ್ತಿಕ ಗುರುತಿಸುವುದು ಮತ್ತು ಉತ್ತೇಜನ ಅಗತ್ಯ. ಮುಖ್ಯವಾಗಿ ನಾಯಕನಾದವನು ತಾಳ್ಮೆಯನ್ನು ಹೊಂದಿರಬೇಕು. ಪ್ರತಿಯೊಂದು ಕಾರ್ಯಚಟುವಟಿಕೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳಬೇಕು.

ಒಬ್ಬ ಯಶಸ್ವಿ ನಾಯಕನಾಗಬೇಕಾದರೆ ಕಾರ್ಯಶೀಲನಾಗಿರಬೇಕು ಮತ್ತು ಸೃಜನಶೀಲತೆಯನ್ನು ಹೊಂದಿರಬೇಕು.

3. ಜಾಣ ಜಾಣನಿಗೆ ಮೂರು ದಾರಿ – Panchatantra Story in Kannada


ಒಂದು ವಿಶಾಲವಾದ ಪ್ರದೇಶ‌ ಇತ್ತು. ಅಲ್ಲಿ ರಾಮ ಮತ್ತು ಸೋಮ ಎಂಬ ಇಬ್ಬರು ವ್ಯಕ್ತಿಗಳು ಮನೆ ಕಟ್ಟಿಕೊಂಡು ಬದುಕುತ್ತಿದ್ದರು. ಒಬ್ಬರಿಗೆ ಒಬ್ಬರು ಪರಸ್ಪರ ವಿರೋಧವಾಗಿದ್ದರು. ಇಬ್ಬರ ಮಧ್ಯೆ ವೈಮನಸ್ಸು ಗಳಿದ್ದವು.

ದಿನಾಲೂ ಯಾವುದೋ ಒಂದು ವಿಷಯದಲ್ಲಿ ಕಚ್ಚಾಡುತ್ತಿದ್ದರು. ಒಂದು ಸುಂದರ ಸಂಜೆ ಸಂತೆಗೆ ಹೋಗಿ ಬರ್ತಾ ಇದ್ದರು. ದಾರಿ ಮಧ್ಯೆ ಒಂದು ಕಾಲುವೆ ಅಡ್ಡವಾಗಿ ಹರಿಯುತ್ತಿತ್ತು.

ಕಾಲುವೆ ದಾಟಲು ಒಂದು ಕಿರಿದಾದ ಮರದ ಹಲಗೆಯನ್ನು ಹಾಕಿದ್ದರು. ಆದರೆ ಕಾಲುವೆಯನ್ನು ಹಲಗೆ ಸಹಾಯದಿಂದ ಒಬ್ಬೊಬ್ಬರೇ ದಾಟಬೇಕಿತ್ತು.

Panchatantra Story in Kannada

ಇಬ್ಬರು ವ್ಯಕ್ತಿಗಳು ಆ ಕಾಲುವೆಯ ಬಳಿ ಬಂದರು. ಕಾಲುವೆ ದಾಟಲು ನಾ ಮೊದಲು ತಾ ಮೊದಲು ಕಚ್ಚಾಡಲು ಶುರುಮಾಡಿದರು. ಇಬ್ಬರಲ್ಲಿ ಯಾರೂ ತಗ್ಗದೆ ಮೂರ್ಖರಂತೆ ಒಟ್ಟಿಗೆ ದಾಟಲು ಶುರು ಮಾಡಿದರು.

ಕಾಲುವೆ ಮಧ್ಯಭಾಗಕ್ಕೆ ಬಂದ ತಕ್ಷಣ ಹಳೆಯದಾದ ಮತ್ತು ಕಿರಿದಾದ ಹಲಗೆ ಇಬ್ಬರ ಭಾರದಿಂದ ಮುರಿದು ಬಿದ್ದಿತು. ಮೂರ್ಖತನದಿಂದ ಇಬ್ಬರು ಕಾಲುವೆಯಲ್ಲಿ ಬಿದ್ದರು.

ಕಥೆಯಲ್ಲಿನ ನೀತಿ / Moral of this Story :

  • ಈ ಮೇಲಿನ ಕಥೆಯಿಂದ ಗೊತ್ತಾಗುವುದೇನಂದರೆ ತಗ್ಗಿಸಿಕೊಂಡವನು ಎಬ್ಬಿಸಲ್ಪಡುತ್ತಾನೆ. ನಾನೇ ಎಂದು ತನ್ನನ್ನು ತಾನು ಹೆಚ್ಚಿಸಿಕೊಂಡವನು ತಗ್ಗಿಸಲ್ಪಡುತ್ತಾನೆ.
  • ಇಬ್ಬರಲ್ಲಿ ಯಾರು ಕೂಡ ತಗ್ಗಿಸಿಕೊಳ್ಳದೆ ಹೋದರೆ ಕಾಲುವೆ ಎಂಬ ಸಂಕಟದಲ್ಲಿ ಬೀಳುವರು.
  • ಜಾಣ ಜಾಣನಿಗೆ ಮೂರು > ದಾರಿ.
  • ಜಾಣ ಕೋಣನಿಗೆ ಎರಡು > ದಾರಿ.
  • ಕೋಣ ಕೋಣನಿಗೆ ಒಂದೇ > ದಾರಿ.

4. ಭಯ – Panchatantra Story in Kannada

ಒಂದು ಕುಗ್ರಾಮದಲ್ಲಿ ಒಬ್ಬ ವ್ಯಕ್ತಿ ಸುಮಾರು ವರ್ಷಗಳಿಂದ ವಾಸ ಮಾಡುತ್ತಿದ್ದ.  ಅವನು ಬಹಳ ಅಂಜುಬುರಕನಾಗಿದ್ದನು. ಪ್ರತಿಯೊಂದು ಸಣ್ಣ ವಿಚಿತ್ರ ಶಬ್ದಕ್ಕೂ ಹೆದರುತ್ತಿದ್ದ.

ಒಂದಿನ ಮಳೆಗಾಲದಲ್ಲಿ ಮಳೆ ಜೋರಾಗಿ ಸುರಿಯುತ್ತಿತ್ತು. ಗಾಳಿಯೂ ಅಷ್ಟೇ ಪ್ರಮಾಣದಲ್ಲಿ ಬೀಸುತ್ತಿತ್ತು. ಸ್ವಲ್ಪ ಹೊತ್ತು ಆದ ಮೇಲೆ ಅವನ ಮನೆಯ ಹಿಂದೆ ವಿಚಿತ್ರ ಶಬ್ದವೊಂದು ಕೇಳಿ ಬಂತು. ಆಗ ಸಮಯ ಮಧ್ಯರಾತ್ರಿ ಎರಡು ಗಂಟೆ ಆಗಿತ್ತು.

ಗಾಳಿ ಮಳೆಗೆ ಒಂದು ರೀತಿಯ ಭಯ ಹುಟ್ಟಿದ್ರೆ. ಮನೆ ಹಿಂದೆ ಮತ್ತೊಂದು ವಿಚಿತ್ರ ಶಬ್ದ ಕೇಳಿ ಇನ್ನೂ ಭಯ ಆಯ್ತು. ಎದೆಬಡಿತ ಉಸಿರಾಟ ಜಾಸ್ತಿಯಾಯಿತು. ಪ್ರಾಣವನ್ನು ಕಪಿಮುಷ್ಠಿಯಲ್ಲಿ ಹಿಡಿದುಕೊಂಡು ಕುಂತನು.

Read Also – ಆನೆ ಮತ್ತು ನರಿ

ಅದರ ಬಗ್ಗೆ ಯೋಚಿಸಿದಂತೆಲ್ಲಾ ಒಂದೊಂದು ರೀತಿಯಲ್ಲಿ ಒಂದೊಂದು ಶಬ್ದ ಕೇಳಿ ಬಂತು. ಅಲ್ಲಿಂದ ಹೋಗೆ ಬಿಡೋಣ ಎಂದುಕೊಂಡನು. ಮಳೆಯಲಿ ನೆನೆಯುತ್ತಾ ಸ್ವಲ್ಪ ದೂರದಲ್ಲಿರುವ ಗೋಡೌನ್ ಗೆ ಹೋದನು.

ಅಲ್ಲಿ ಕೂಡ ಅವನಿಗೆ ಸಮಾಧಾನ ಆಗ್ಲಿಲ್ಲ. ಏಕೆಂದರೆ ಗೋಡೌನ್ ಗೆ ಮುಖಮಾಡಿ ನಾಯಿಗಳು ಬೋ ಎಂದು ಬೊಗಳುತ್ತಿದ್ದವು. ಅದರಲ್ಲಿ ಪಕ್ಷಿಗಳು, ಇಲಿಗಳು ಓಡಾಡುತ್ತಿದ್ದವು. ಈ ಜಾಗಕ್ಕಿಂತ ತನ್ನ ಮನೆಯೇ ಸ್ವಲ್ಪ ಉತ್ತಮವಿತ್ತು ಎಂದೆನಿಸಿತು.

ಪುನಃ ಅಲ್ಲಿಂದ ತನ್ನ ಮನೆಗೆ ಹೋದನು. ಒಂದು ಮೂಲೆಯಲ್ಲಿ ಕುಳಿತು ಈ ರೀತಿಯಾಗಿ ಯೋಚಿಸಿದನು. ಮನುಷ್ಯನ ಎಲ್ಲಾ ಜೀವರಾಶಿಗಿಂತಲೂ ವಿಭಿನ್ನ.
ಯಾರಿಗಿಲ್ಲದ ಭಯ ನನಗೆ ಮಾತ್ರ ಏಕಿದೆ?
ನಾನೇಕೆ ಕಣ್ಣಿಗೆ ಕಾಣದ್ದನ್ನು ನೋಡಿ ಅಂಜಬೇಕು?
ಅಂಜಿದರೂ ನನ್ನನೇನು ಮಾಡೀತು?
ನಿಜವಾಗ್ಲೂ ಅಲ್ಲಿ ಏನಾದರೂ ಇದೇನಾ? ಎಂದು ತನ್ನನ್ನು ತಾನು ಪ್ರಶ್ನಿಸಿಕೊಂಡನು.

ಮನೆಯಿಂದ ಹೊರಗೆ ಬಂದು ಶಬ್ದ ಬರುವ ಕಡೆ ಹೋಗಿ ನೋಡಿದ. ಗಾಳಿ ಮಳೆಗೆ ಮನೆ ಹಿಂದೆ ಇರುವ ಬೇವಿನ ಮರದ ಕೊಂಬೆ ಮುರಿದು ಜೋತು ಬಿದ್ದಿತ್ತು. ಮನೆ ಟಿನ್ನುಗಳು ತಗಡಿನವು ಆಗಿರುವುದರಿಂದ ಗಾಳಿಗೆ ರೆಂಬೆ ಕೊಂಬೆಗಳು ಬಡಿದಾಗ ಶಬ್ದ ಬರುತ್ತಿತ್ತು.

ಅವನ ಎದೆಯಲ್ಲಿನ ಭಯವೆಲ್ಲಾ ತೊಲಗಿತು. ಒಳಗೆ ಹೋಗಿ ನೆಮ್ಮದಿಯಿಂದ ನಿದ್ದೆ ಮಾಡಿದನು.

ಕಥೆಯಲ್ಲಿನ ನೀತಿ / Moral of this Story :
ಸಮಸ್ಯೆ ಎದುರಾದಾಗ ಧೈರ್ಯದಿಂದ ಎದುರಿಸಬೇಕು. ಜೀವನದ ಪ್ರತಿ ಹೆಜ್ಜೆ ಹೆಜ್ಜೆಗೂ ಸಮಸ್ಯೆಗಳು, ಪರೀಕ್ಷೆಗಳು ಎದುರಾಗುತ್ತವೆ. ಓಡಿ ಹೋಗದೆ ಅಥವಾ ಸೋತು, ನಿಂತು ಹೋಗದೆ ಧೈರ್ಯ, ವಿಶ್ವಾಸದಿಂದ ಎದುರಿಸಬೇಕು.

Panchatantra Story in Kannada

Follow Our Facebook Page Moral Storys

ವಿ. ಸೂಚನೆ – ಮೇಲಿನ ಕಥೆಗಳಲ್ಲಿ ತಪ್ಪು / ದೋಷಗಳು ಕಂಡುಬಂದರೆ ದಯಮಾಡಿ ಕಾಮೆಂಟ್ ಮೂಲಕ ತಿಳಿಸಿ. ಪುನಃ ಬೇಟಿ ನೀಡಿ ಧನ್ಯವಾದಗಳು.


Spread the love

Leave a Reply

Your email address will not be published. Required fields are marked *