Motivation Stories

Motivation Stories

Moral Stories
Spread the love

Hi Everyone, Welcome to Moral Storys – “Motivation Stories”

1. ಕಳ್ಳ ಮತ್ತು ನಾಯಿ – Motivation Stories

Motivation Stories, motivation Stories for students

ಒಂದು ಊರಲ್ಲಿ ಒಬ್ಬ ಕಳ್ಳ ಇದ್ದ. ಅವನು ಕಳ್ಳತನವನ್ನೇ ತನ್ನ ಪ್ರಮುಖ ಉದ್ಯೋಗವನ್ನಾಗಿ ಮಾಡಿಕೊಂಡಿದ್ದ. ಕಳ್ಳನು ಕಳ್ಳತನ ಮಾಡುವುದರಲ್ಲಿ ತುಂಬಾ ಪ್ರಾವೀಣ್ಯತೆಯನ್ನು  ಹೊಂದಿದ್ದನು. ಹೀಗೆ ಕಳ್ಳತನ ಮಾಡುತ್ತಾ ಜೀವನ ಕಳೆಯುತ್ತಿದ್ದನು.

ಒಂದು ದಿನ ಅವನಿಗೆ ಇನ್ನೂ ಜಾಸ್ತಿ ಕಳ್ಳತನ ಮಾಡಬೇಕು ಅಂತ ಅನಿಸಿತು. ಅದಕ್ಕವನು ಒಂದು ನಾಯಿಯನ್ನು ಸಾಕಿಕೊಂಡನು. ಅದಕ್ಕೆ ದಿನಾಲೂ ಹಾಲು, ಮೊಟ್ಟೆ ಮತ್ತು ಮಾಂಸವನ್ನು ಹಾಕಿ ದಷ್ಟಪುಷ್ಟವಾಗಿ ಬೆಳೆಸಿದನು. ನಾಯಿ ಕೂಡಾ ಅವನ ಬಗ್ಗೆ ನಿಷ್ಠೆಯನ್ನು ಹೊಂದಿತ್ತು.

ಅವನು ಮೊದಲ ಸಲ ನಾಯಿಯನ್ನು ಕಳ್ಳತನ ಮಾಡಲಿಕ್ಕೆ ತನ್ನೊಡನೆ ಕರೆದುಕೊಂಡು ಹೋದನು. ದೊಡ್ಡ ಬಂಗಲೆಯಲ್ಲಿ ನಾಯಿಯನ್ನು ಬಾಗಿಲ ಬಳಿ ಕಾವಲಿ ಇಟ್ಟು ಅವನು ಒಳಗೆ ಹೋದನು. ಬಂಗಲೆಯಲ್ಲಿ ಇರುವ ಬೆಳ್ಳಿ – ಬಂಗಾರ ಎಲ್ಲವನ್ನು ತೆಗೆದುಕೊಂಡು ಹೋದನು.

ಹೀಗೆ ಒಂದು ತಿಂಗಳ ಕಾಲ ನಾಯಿಯ ಜೊತೆ ಕಳ್ಳತನ ಮಾಡಿದ. ನಾಯಿಗೆ ನಿಧಾನವಾಗಿ ನಾನು ತಪ್ಪು ದಾರಿಯಲ್ಲಿ ನಡೆಯುತ್ತಿದ್ದೇನೆ ಎಂದು ಅರ್ಥವಾಯಿತು.

Also Read – ಮಾಯಾ ಬಾಗಿಲು ಸಣ್ಣ ಕಥೆ.

ಒಂದು ದಿವಸ ರಾತ್ರಿ ಪೋಲಿಸ್ ಅಧಿಕಾರಿ ಮನೆಗೆ ಕಳ್ಳತನ ಮಾಡಲಿಕ್ಕೆ ಹೋದನು, ಯಥಾಪ್ರಕಾರವಾಗಿ ನಾಯಿಯನ್ನು   ಬಾಗಿಲ ಬಳಿ ಕಾವಲಿಯಾಗಿ ನಿಲ್ಲಿಸಿ ಒಳಗೆ ಹೋದನು. ಅವನು ಒಳಕ್ಕೆ ಹೋದಾಗ ನಾಯಿ ಜೋರಾಗಿ ಕಿರುಚಿತು.


ನಾಯಿ ಶಬ್ದ ಕೇಳಿ ಎಲ್ಲರು ಎದ್ದರು, ಯಾರೋ ಕಳ್ಳ ಬಂದಿರಬಹುದು ಎಂದು ಎಲ್ಲಾ ಕಡೆ ಹುಡುಕಿದರು. ಕಳ್ಳ ಮಂಚದ ಕೆಳಗೆ ಬಚ್ಚಿಟ್ಟುಕೊಂಡಿದ್ದ. ಪೋಲಿಸ್ ಅಧಿಕಾರಿ ನೋಡಿ ಕಳ್ಳನ ಕೈಗೆ ಸಂಕೋಲೆ ಹಾಕಿ ಬಂಧಿಸಿದನು.

ಕಳ್ಳನನ್ನು ಬಂಧಿಸಿ ಜೈಲಿಗೆ ಕರೆದುಕೊಂಡು ಹೋಗುವಾಗ ನಾಯಿ ಬಾಗಿಲ ಬಳಿಯಲ್ಲಿಯೇ ನಿಂತಿತ್ತು. ಕಳ್ಳನು ನಾಯಿಯನ್ನು ನೋಡಿ “ವಿಶ್ವಾಸದ್ರೋಹಿ ನೀನು ಮಾಡಿದ ತಪ್ಪಿನಿಂದ ನನಗೆ ಈ ಪರಿಸ್ಥಿತಿ ಬಂತು. ಹೊಟ್ಟೆ ತುಂಬಾ ಊಟ ಕೊಡ್ತಿದ್ದೆ ಅಲ್ವಾ ಅದಕ್ಕೆ ನಿಂಗೆ ಕೊಬ್ಬು ಬಂದಿದೆ” ಎಂದು ಕೋಪದಿಂದ ರೇಗಿದನು.

ಅದಕ್ಕೆ ನಾಯಿ ಪ್ರತಿಯಾಗಿ “ನಾನು ವಿಶ್ವಾಸದಿಂದಲೇ ಇದ್ದೇನೆ, ನಾಯಿಯಾಗಿ ನನ್ನ ಧರ್ಮವನ್ನು ನಾನು ಪಾಲಿಸಿದ್ದೇನೆ, ಆದರೆ ಮಾನವನಾಗಿ ನೀನೇ ನಿನ್ನ ಧರ್ಮವನ್ನು ಮರೆತುಬಿಟ್ಟಿದ್ದಿ, ಮಾನವೀಯತೆಯನ್ನು ತೊರೆದುಬಿಟ್ಟಿದ್ದಿ” ಎಂದಿತು.

ಕಳ್ಳನಿಗೆ 2 ವರ್ಷ ಜೈಲು ಶಿಕ್ಷೆಯಾಯಿತು. ಪೋಲಿಸ್ ಅಧಿಕಾರಿಗಳಿಗೆ ನಾಯಿಗೆ ಸನ್ಮಾನ ಮಾಡಿ, ಬೆಳ್ಳಿ ಪದಕ ನೀಡಲಾಯಿತು ಮತ್ತು ನಾಯಿಯನ್ನು ಪೋಲಿಸ್ ಡಿಪಾರ್ಟ್ಮೆಂಟ್ ಗೆ ಸೇರಿಸಿಕೊಂಡರು.

ಕಥೆಯಲ್ಲಿನ ನೀತಿ / Moral of this Story:
ಪ್ರಾಣಿಗಳಿಗಿರುವ ಕನಿಷ್ಠ ವಿಶ್ವಾಸ, ನಂಬಿಕೆ, ನಿಷ್ಠೆ ಕೂಡಾ ಮನುಷ್ಯನಿಗಿಲ್ಲ. ತನ್ನ ಸ್ವಾರ್ಥದ ಬದುಕಿಗಾಗಿ ಧರ್ಮವನ್ನು, ಮಾನವಿಯತೆಯನ್ನು ಮರೆತಿದ್ದಾನೆ.

2. ಆನೆ ಮತ್ತು ರೈತ – Motivation Stories

Motivation Stories

ಒಂದು ಪುಟ್ಟ ಗ್ರಾಮದಲ್ಲಿ ಮಾದೇವ ಎನ್ನುವ ರೈತ ಇದ್ದ. ಆತನು ತುಂಬಾ ಪ್ರಾಮಾಣಿಕಯುಳ್ಳ ವ್ಯಕ್ತಿಯಾಗಿದ್ದನು. ಆತನಿಗೆ ಎರಡು ಎಕರೆ ಜಮೀನು ಇತ್ತು.

ಎರಡು ಎಕರೆ ಜಮೀನನ್ನು ಹಸನು ಮಾಡಿ, ಮಳೆಗಾಗಿ ಕಾಯ್ತಾ ಇದ್ದ. ಆ ರಾತ್ರಿಯೇ ಮಳೆ ಜೋರಾಗಿ ಸುರಿಯಿತು. ಮಾದೇವ ಬೆಳಿಗ್ಗೆ ಎದ್ದು ಸಂತೋಷದಿಂದ ಹೊಲಕ್ಕೆ ಹೋಗಿ ಎರಡು ಎಕರೆ ಜಮೀನಿನಲ್ಲಿ ಬಾಳೆ ಸಸಿಗಳನ್ನು ನೆಟ್ಟನು.

ಹೊಲದಿಂದ ಮನೆಗೆ ಹಿಂದಿರುಗಿ ಬರುವಾಗ, ದಾರಿಯಲ್ಲಿ  ಒಂದು ವಿಚಿತ್ರ ಶಬ್ದವೊಂದು ಕೇಳಿಸಿತು. ಆ ಶಬ್ದ ಕೇಳಿ ಅಲ್ಲೇ ನಿಂತು, ಸೂಕ್ಷ್ಮವಾಗಿ ಗಮನಿಸಿದ. ಯಾವುದೋ ಪ್ರಾಣಿ ಸಹಾಯಕ್ಕಾಗಿ ಕೂಗ್ತಾ ಇದೆ ಆಂದುಕೊಂಡು ಸುತ್ತಲೂ ತಿರುಗಿ ನೋಡಿದ.

ಅಲ್ಲಿ ಒಂದು ದೊಡ್ಡ ಮರದ ಕೆಳಗೆ ಆನೆ ಕಾಲಿಗೆ ಮರದ ಚಕ್ಕೆ ಚುಚ್ಚಿಕೊಂಡು ಒದ್ದಾಡುತ್ತಿತ್ತು. ಮಾದೇವ – ಆನೆಯ ಕಾಲಿಗೆ ಚುಚ್ಚಿರುವ ಮರದ ಚಕ್ಕೆಯನ್ನು ತೆಗೆದು, ಗಾಯವನ್ನು ಸ್ವಚ್ಛಗೊಳಿಸಿ ಔಷಧ ಎಲೆ ಹಚ್ಚಿ, ಬಟ್ಟೆಯಿಂದ ಗಟ್ಟಿಯಾಗಿ ಕಟ್ಟನ್ನು ಕಟ್ಟುತ್ತಾನೆ.


ಆನೆ ಮಾದೇವನಿಗೆ ಕಣ್ಣೀರು ಸುರಿಸುತ್ತ ತಲೆ ಬಾಗಿ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತದೆ. ನಂತರ  ಆತನು ಅಲ್ಲಿಂದ ಮನೆಗೆ ಹೊರಡುತ್ತಾನೆ.

ಒಂದು ವಾರದ ನಂತರ ಬಾಳೆ ಸಸಿ ಚೆನ್ನಾಗಿ ಬೆಳೆದು ಬಂದಿರುತ್ತದೆ. ಮಾದೇವನ ಸಂತೋಷ ಮುಗಿಲು ಮುಟ್ಟಿತು.  ಹೀಗೆ ಕೆಲವು ದಿನ ನೆಮ್ಮದಿಯಿಂದ ಇದ್ದನು.

Also Read – ಶಕ್ತಿ ಮಾತ್ರ ಇದ್ರೆ ಸಾಲದು ಯುಕ್ತಿಯು ಇರಬೇಕು.

ಕೆಲವು ದಿನ ಆದ ಮೇಲೆ ಮಳೆ ಬಾರದೆಹೋಯಿತು. ಬಾಳೆ ಗಿಡಗಳು ಬಾಡಿ ಹೋಗಲಾರಂಭಿಸಿದವು. ಮಾದೇವನ ಮುಖದ ಮೇಲಿನ ನಗು ಕೂಡ ಮಾಯವಾಯಿತು. ಮುಗಿಲಿಗೆ ಕೈ ಮುಗಿದು ಭಾರವಾದ ಮನಸ್ಸಿನಿಂದ ಚಿಂತಿಸುತ್ತಾ ಕುಳಿತ.

ಮಳೆ ಬಾರದೆ ಹೋದುದರಿಂದ ಮಾದೇವನ ಪರಿಸ್ಥಿತಿ ಆನೆಗೆ ತಿಳಿಯಿತು. ಮಾದೇವ ಮನೆಗೆ ಹೋದಾಗ ಆನೆ ದೂರದಲ್ಲಿರುವ ಕೆರೆ ನೀರನ್ನು ತನ್ನ ಸೊಂಡಿಲಿನಿಂದ ತೆಗೆದುಕೊಂಡು ಹೋಗಿ ಬಾಳೆ ಗಿಡಗಳಿಗೆ ನೀರನ್ನು ಹಾಕುತ್ತಿತ್ತು. ಹೀಗೆ ಎಲ್ಲಾ ಬಾಳೆ ಗಿಡಗಳಿಗೆ ನೀರನ್ನು ಹೊಯ್ದು ಹಾಕಿತು.

ಮಾದೇವ ಬೆಳಿಗ್ಗೆ ಎದ್ದು ನೋಡಿದರೆ ಎಲ್ಲಾ ಬಾಳೆಗಿಡಗಳು ಹಚ್ಚಹಸಿರಾಗಿದ್ದವು. ಮಾದೇವ ಇದೆಲ್ಲಾ ನೊಡಿ ಆಶ್ಚರ್ಯಪಡುತ್ತಾನೆ. ಅತ್ಯಂತ ಆನಂದಭರಿತನಾಗಿ ದೇವರ ಇರುವಿಕೆಯನ್ನು ಪ್ರಸ್ತುತಪಡಿಸುತ್ತಾನೆ.


ಹೀಗೆ ಮಾದೇವನ ಕೆಲಸ ನಿಂತು ಹೋದಾಗ ಆನೆ ಕೆಲಸವನ್ನು ಪೂರ್ಣ ಮಾಡಿಕೊಡುತ್ತಿತ್ತು ಮತ್ತು  ಅವನ ಕಣ್ಣಿಗೆ ಕಾಣದೆ  ಎಲ್ಲಾ ಕಠಿಣ ಕೆಲಸಗಳನ್ನು ಸುಲಭ ಮಾಡಿಕೊಡುತ್ತಿತ್ತು.

ಕಥೆಯಲ್ಲಿನ ನೀತಿ / Moral of this Story :

  • ‌ಅನ್ಯರು ಆಪತ್ತಿನಲ್ಲಿ ಇದ್ದಾಗ ನಾವು ಯಥಾರ್ಥವಾಗಿ ಮಾಡಿದ ಸೇವೆ, ಸಹಾಯ ನಮಗೆ ಯಾವುದೋ ಒಂದು  ರೂಪದಲ್ಲಿ ದೊಡ್ಡ ಮಟ್ಟದಲ್ಲಿ ದೊರೆಯುತ್ತದೆ.
  • ‌ಮನುಷ್ಯರಿಗಿಂತ ಪ್ರಾಣಿಗಳೇ ವಿಶ್ವಾಸ ಜೀವಿಗಳು, ಅವುಗಳಿಗೆ ಮಾಡಿದ ಸಹಾಯ ಯಾವತ್ತೂ ಮರೆಯುವುದಿಲ್ಲ.

3. ಚಿಲುಮೆ – Motivation Stories

ಒಂದು ಸಣ್ಣ ಊರಲ್ಲಿ ವಾಸು ಎಂಬ ಹುಡುಗ ಇದ್ದನು. ಅವನು ಆಟದಲ್ಲೂ ಪಾಟದಲ್ಲೂ ಮುಂಚೂಣಿಯಲ್ಲಿದ್ದ ಮತ್ತು ತನ್ನ ಎಲ್ಲಾ ಸ್ನೇಹಿತರಿಗಿಂತ‌ ಬುದ್ದಿಶಾಲಿಯಾಗಿದ್ದನು.

ಆದರೆ ಆ ಊರಲ್ಲಿ ಒಂದು ಜ್ವಲಂತ ಸಮಸ್ಯೆ ಇತ್ತು. ಏನೆಂದರೆ ಆ ಊರಲ್ಲಿ ಕುಡಿಯುವ ನೀರು ಸಮೀಪದಲ್ಲಿ ಎಲ್ಲೂ ಸಿಗುತ್ತಿರಲಿಲ್ಲ. ಅಲ್ಲಿಂದ ನಾಲ್ಕು ಮೈಲು ದೂರದಲ್ಲಿ ಒಂದು ನದಿಯಿತ್ತು. ನೀರಿಗಾಗಿ ಊರಿನ ಜನರೆಲ್ಲಾ ಪರದಾಡುತ್ತಿದ್ದರು

ಒಂದು ದಿನ ವಾಸುವಿನ ತಾಯಿ ನದಿಗೆ ನೀರು ತರಲು ಹೋದಾಗ ಬಿಸಿಲು ಜಾಸ್ತಿ ಇದ್ದುದರಿಂದ ಪ್ರಜ್ಞೆ ತಪ್ಪಿ ಬಿದ್ದಳು. ವಾಸು ತನ್ನ ತಾಯಿ ಪ್ರಜ್ಞೆ ತಪ್ಪಿ ಬಿದ್ದಿರುವ ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಓಡಿ ಹೋಗಿ ತಾಯಿಯ ಮುಖದ ಮೇಲೆ ನೀರು ಚಿಮುಕಿಸಿ ಉಪಚರಿಸಿದನು. ವಾಸುವಿನ ತಾಯಿ ಚೇತರಿಸಿಕೊಂಡ ನಂತರ ಮನೆಗೆ ಕರೆದುಕೊಂಡು ಬಂದನು.

ಮಾರನೆಯ ದಿನ ವಾಸು ಊರಿನ ಜನರನ್ನು ಒಟ್ಟಾಗಿ ಸೇರಿಸಿ ನೀರಿನ ಸಮಸ್ಯೆ ಬಗ್ಗೆ ಹೇಳುತ್ತಾನೆ. “ನೀರು ಜೀವನಾಧಾರ ಎಲ್ಲದಕ್ಕೂ ನೀರು ಬೇಕು. ಇಷ್ಟು ದಿನ ನಾವು ನೀರಿಗಾಗಿ ಪರದಾಡಿದ್ದು ಸಾಕು, ಇನ್ನು ಮುಂದೆ ನಾವೆಲ್ಲರು ಸೇರಿ ಒಂದು ಹೊಸದಾಗಿ ಬಾವಿ ತೋಡೋಣ” ಎಂದು ಹೇಳಿದನು. ಅದಕ್ಕೆ ಎಲ್ರು ಒಪ್ಪಿದರು.

Also Read This – ಹಂಸ ಮತ್ತು ಹಂದಿ

ವಾಸುವಿನ ಜೊತೆ ಊರಿನ ಜನರೆಲ್ಲಾ ಬಾವಿ ತೋಡಲಾರಂಭಿಸಿದರು. ಅದಕ್ಕೆ ಎಲ್ಲರು ಸಹಕರಿಸಿದರು. ಮೊದಲ ದಿನ ಕಳೆಯಿತು. ಎರಡನೇ ದಿನ 3 ರಿಂದ 5 ಅಡಿ ತೋಡಿದರು, ಮತ್ತೆ ಮೂರನೇ ದಿನ 5 ರಿಂದ 10 ಅಡಿ ತೋಡಿದರು ಆದರೆ ನೀರು ಕಾಣಿಸಲಿಲ್ಲ.

ಕೆಲವು ಜನ ಇಲ್ಲಿ ಜಲನೇ ಇಲ್ಲ ಎಷ್ಟು ತೋಡಿದರು ನೀರು ಸಿಗಲ್ಲ ಎಂದು ಅರ್ಧಕ್ಕೆ ಬಿಟ್ಟು ಹೋದರು. ಆದರೆ ವಾಸು ಮಾತ್ರ ಯಾರ ಮಾತು ಕೇಳಲಿಲ್ಲ.

ಮತ್ತೆ ನಾಲ್ಕನೇ ದಿನ ಬಂದು 10 ರಿಂದ 13 ಅಡಿ ತೋಡಿದ. ಆರನೇ ದಿನ ಬಂದು 13 ರಿಂದ 15 ಅಡಿ ತೋಡಿದಾಗ ನೀರಿನ ಊಟೆ ಕಂಡುಬಂತು. ಬಾವಿ ತುಂಬಿತು. ಊರು ಜನ ನೀರಿಗಾಗಿ ಪರದಾಡುವ ಸ್ಥಿತಿ ತಪ್ಪಿತು.

ಕಥೆಯಲ್ಲಿನ ನೀತಿ Moral of this Story :

  • ಪ್ರತಿಯೊಂದು ಸಮಸ್ಯೆಗೆ ಪರಿಹಾರ ಇದ್ದೇ ಇರುತ್ತದೆ.
  • ಸಾಧಿಸುವ ಛಲ ನಮ್ಮಲ್ಲಿದ್ದರೆ ಅಸಾಧ್ಯವಾದುದು ಯಾವುದು ಇಲ್ಲ.
  • ಪ್ರಯತ್ನ ಮಾಡುತ್ತಲೇ ಇದ್ದರೆ ಪ್ರತಿಫಲ ತಾನಾಗಿಯೇ ಬರುತ್ತದೆ.

Follow Our Facebook Page – Moral Storys

Spread the love

Leave a Reply

Your email address will not be published. Required fields are marked *