Hi Everyone, Welcome to Moral Storys – “Motivation Stories for Students”
1. ಟಗರು ಮತ್ತು ಹುಲಿ – Motivation Stories for Students
ಒಂದು ಕಾಡಿನಲ್ಲಿ ಟಗರು ತನ್ನ ಕುಟುಂಬದೊಂದಿಗೆ ವಾಸವಾಗಿತ್ತು. ಟಗರು ತುಂಬಾ ಧೈರ್ಯಶಾಲಿ ಹಾಗೂ ಪ್ರಾಮಾಣಿಕವಾಗಿತ್ತು.
ಒಂದು ದಿನ ಟಗರು ನದಿಯಲ್ಲಿ ನೀರು ಕುಡಿಯುತ್ತಿರಬೇಕಾದರೆ ಮುಳ್ಳಿನ ಪೊದೆಯಲ್ಲಿ ಸಿಕ್ಕಿಕೊಂಡು ಒದ್ದಾಡುತ್ತಿರುವ ಹುಲಿಯ ಶಬ್ದ ವೊಂದು ಕೇಳಿ ಬಂತು. ಹುಲಿ ಪ್ರಾಣಾಪಾಯ ಸ್ಥಿತಿಯಲ್ಲಿ ಸಹಾಯಕ್ಕಾಗಿ ಕಿರುಚಿತ್ತಾ ಇತ್ತು.
ಟಗರು ತಡಮಾಡದೆ ಹುಲಿಯನ್ನು ಆ ಮುಳ್ಳಿನ ಪೊದೆಯಿಂದ ತಪ್ಪಿಸಿ ರಕ್ಷಿಸಿತು. ಹುಲಿ ಕೃತಜ್ಞತೆಯಿಂದ “ನನಗೆ ನೀನು ಪುನರ್ಜನ್ಮ ನೀಡದಿ, ನಿನ್ನ ಋಣ ಯಾವತ್ತೂ ಮರೆಯುವುದಿಲ್ಲ” ಎಂದು ಹೇಳಿತು.
Also Read – ದುರಾಸೆಯ ನರಿ
ಅದಕ್ಕೆ ಟಗರು “ಒಬ್ಬರು ಆಪತ್ತಿನಲ್ಲಿದ್ದಾಗ ಸಹಾಯ ಮಾಡುವುದು ನನ್ನ ಧರ್ಮ, ನನ್ನ ಧರ್ಮವನ್ನು ನಾನು ಪಾಲಿಸಿದ್ದೇನೆ” ಎಂದು ಹೇಳಿತು. ಆಗ ಹುಲಿ “ನಿನ್ನ ಧೈರ್ಯ ಸಾಹಸ ಮತ್ತು ಪ್ರಾಮಾಣಿಕತೆಯನ್ನು ನಾನು ಮೆಚ್ಚಿದ್ದೇನೆ, ನಿನ್ನ ಮಾತುಗಳಿಂದ ಇನ್ನೂ ಖುಷಿಯಾಯಿತು” ಎಂದು ಹೇಳಿ ಹೊರಟುಹೋಯಿತು.
ಒಂದು ದಿನ ತೋಳ ಹುಲಿವೇಷ ಹಾಕಿಕೊಂಡು ಒಂದೊಂದು ಕುರಿಯನ್ನು ತಿನ್ನುತ್ತಿತ್ತು. ಕುರಿಗಳ ಸಂಖ್ಯೆ ಕಡಿಮೆಯಾಗುತ್ತಾ ಬಂತು. ಎಲ್ಲಾ ಕುರಿಗಳ ನಡುವೆ ಭಯ ಆವರಿಸಿತು. ಟಗರಿಗೆ ಒಂದು ದೊಡ್ಡ ಸಮಸ್ಯೆಯಾಗಿ ಪರಿಣಮಿಸಿತು.
ಟಗರು ಮೌನವಾಗಿ ಚಿಂತಿಸುತ್ತಾ ಕುಳಿತಿತು. ಆಗ ಹುಲಿ ಬಂದು “ಏಕೆ ಮೌನವಾಗಿ ಕುಳಿತಿರುವೆ?” ಎಂದು ಕೇಳಿತು. ಅದಕ್ಕೆ ಟಗರು ತನ್ನ ಸಮಸ್ಯೆಯನ್ನೇಲ್ಲಾ ಹೇಳಿಕೊಂಡಿತು. ಹುಲಿ “ಹೆದರಬೇಡ ನಾನಿದ್ದೇನೆ” ಎಂದು ಧೈರ್ಯ ತುಂಬಿತು.
Motivation Stories for Students
ಆ ದಿನ ರಾತ್ರಿ ಹುಲಿ ಕುರಿಗಳ ಜೊತೆಯಲ್ಲಿಯೇ ಮಲಗಿಕೊಂಡಿತು. ತೋಳ ಸರಿಯಾಗಿ ಮಧ್ಯರಾತ್ರಿ ಕುರಿಗಳನ್ನು ತಿನ್ನಲು ಬಂದಾಗ, ಹುಲಿ ತೋಳದ ಕತ್ತನ್ನು ಹಿಡಿದು ಕೊಂದಿತು. ಆ ಹೊತ್ತಿನಿಂದ ಎಲ್ಲಾ ಕುರಿಗಳು, ಟಗರು ಮತ್ತು ಹುಲಿ ಸಂತೋಷದಿಂದ ಜೀವನ ಮಾಡಿದವು.
ಕಥೆಯಲ್ಲಿನ ನೀತಿ / Moral of this Story :
- ನಾವು ಒಬ್ಬರಿಗೆ ಸಹಾಯ ಮಾಡಿದರೆ ಅದು ಬೇರೊಂದು ರೂಪದಲ್ಲಿ ನಮಗೆ ದೊಡ್ಡ ಪ್ರಮಾಣದಲ್ಲಿ ಸಹಾಯ ದೊರೆಯುತ್ತದೆ.
- ನಿಷ್ಠೆ, ಪ್ರಾಮಾಣಿಕತೆಯನ್ನು ಹೊಂದಿದ ವ್ಯಕ್ತಿಯನ್ನು ದೇವರು ಎಂದಿಗೂ ಕದಲಗೊಡಿಸುವುದಿಲ್ಲ.
- ಒಬ್ಬ ವ್ಯಕ್ತಿ ಎಷ್ಟೇ ವೇಷಗಳನ್ನು ಧರಿಸಿದರೂ ಕೂಡಾ ಕಾಲ ಮತ್ತು ಪರಿಸ್ಥಿತಿ ಅವನ ನಿಜ ರೂಪವನ್ನು ಬಯಲು ಮಾಡುತ್ತದೆ.
2. ಕುರಿ ಕೋಣ ಮತ್ತು ತೋಳ – Motivation Stories for Students
ಒಂದು ದಟ್ಟವಾದ ಕಾಡಿನಲ್ಲಿ ಕುರಿ ಮತ್ತು ಕೋಣ ಇದ್ದವು. ಕುರಿ ಮತ್ತು ಕೋಣ ಎರಡು ಬಹಳ ಆತ್ಮೀಯ ಸ್ನೇಹಿತರಾಗಿದ್ದವು. ಎಲ್ಲಿಗೆ ಹೋದರೂ ಜೋತೆಯಾಗಿ ಹೋಗುತ್ತಿದ್ದವು. ಬಹಳ ಅನ್ಯೋನ್ಯತೆಯಿಂದ ನಲಿದು, ಸುಖ ಸಂತೋಷದಿಂದ ಜೀವನ ನಡೆಸುತ್ತಿದ್ದವು.
ಅದೇ ಕಾಡಿನಲ್ಲಿ ಬಹಳ ಕೊಬ್ಬಿದ ತೋಳ ವೊಂದು ವಾಸವಾಗಿತ್ತು. ಒಂದು ದಿನ ಇವೆರಡರ ಗೆಳೆತನವನ್ನು ನೋಡಲಾಗದೆ ತೋಳ, ‘ಹೇಗಾದರೂ ಮಾಡಿ ಇವರಿಬ್ಬರನ್ನು ಗೆಳೆತನದಿಂದ ಅಗಲಿಸಿ, ಕುರಿಯನ್ನು ತಿನ್ನಬೇಕೆಂದು’ ಮನಸ್ಸಿನೊಳಗೆ ಅಂದುಕೊಂಡಿತು.
ಕುರಿಯನ್ನು ತಿನ್ನಬೇಕಾದರೆ ಅವರಿಬ್ಬರಲ್ಲಿ ಯಾರನ್ನಾದರು ಸ್ನೇಹಿತನನ್ನಾಗಿ ಮಾಡಿಕೊಳ್ಳಬೇಕು. ಅದಕ್ಕಾಗಿ ತೋಳ ದಾರಿಯಲ್ಲಿ ಕುರಿ ಕಣ್ಣಿಗೆ ಕಾಣುವಂತೆ ಜೋರಾಗಿ ಅಳುತ್ತಿರುವಂತೆ ನಟಿಸುತ್ತಿತ್ತು.
ಮೃದು ಮನಸ್ಸಿನ ಕುರಿ ಬಂದು “ಯಾಕಪ್ಪಾ ತೋಳ ರಾಯ ಒಬ್ಬಂಟಿಯಾಗಿ ಅಳುತ್ತಾ ಕೂತಿರುವೆ?” ಎಂದು ಕೇಳಿತು.
Motivation Stories for Students
ಅದಕ್ಕೆ ತೋಳ “ನಂಗೆ ಈ ದಟ್ಟಡವಿಯಲ್ಲಿ ಒಬ್ಬನಾದರೂ ಸ್ನೇಹಿತನಿಲ್ಲ, ಯಾರೂ ನನ್ನ ಜೊತೆ ಆಟ ಆಡಲಿಕ್ಕೆ ಬರುತ್ತಿಲ್ಲ, ನನ್ನ ಜೊತೆ ಸ್ನೇಹ ಮಾಡಲಿಕ್ಕೆ ಯಾರೂ ಬಯಸುತ್ತಿಲ್ಲ, ಅದಕ್ಕೆ ಈ ಕೊಳದಲ್ಲಿ ಜಿಗಿದು ಸಾಯಲು ನಿರ್ಧರಿಸಿದ್ದೇನೆ” ಎಂದಿತು.
ಅದಕ್ಕೆ ಕುರಿ “ಯಾರು ಇಲ್ದಿದ್ರೆ ಏನಂತೆ ನಾನಿಲ್ವಾ, ನಾನು ನಿನ್ನ ಜೊತೆ ಬರ್ತೀನಿ, ಇವತ್ತಿನಿಂದ ನೀನು ನನ್ನ ಗೆಳೆಯ” ಎಂದಿತು. ಕುರಿ “ಬಾ ನನ್ನ ಇನ್ನೊಬ್ಬ ಸ್ನೇಹಿತನನ್ನು ಪರಿಚಯ ಮಾಡಿಸ್ತೀನಿ” ಎಂದು ಕೋಣದ ಬಳಿಗೆ ಕರೆದುಕೊಂಡು ಹೋಯಿತು.
ತೋಳ ತಾನು ಮಾಡಿದ ಉಪಾಯ ಈಡೇರುತ್ತಿದೆ ಎಂದು ತನ್ನೊಳಗೆ ಅಂದುಕೊಂಡಿತು.
ಕುರಿ ತೋಳರಾಯನನ್ನು ಕರೆದುಕೊಂಡು ತನ್ನ ಆಪ್ತ ಸ್ನೇಹಿತ ಕೋಣದ ಹತ್ತಿರ ಬಂದು ನಡೆದಿದ್ದನ್ನೆಲ್ಲಾ ವಿವರಿಸಿ ಹೇಳಿತು.
Also Read – ಕಳ್ಳ ಮತ್ತು ನಾಯಿ
ಅದಕ್ಕೆ ಕೋಣ ಕುರಿಯನ್ನು ಸ್ವಲ್ಪ ದೂರ ಕರೆದುಕೊಂಡು ಹೋಗಿ ಕಿವಿಯಲ್ಲಿ “ನಿಂಗೆ ಏನಾದ್ರೂ ಬುದ್ಧಿ ಇದೆಯಾ! ನೀನು ಹೋಗಿ ಹೋಗಿ ಆ ಕ್ರೂರ ತೋಳದ ಜೊತೆ ಸ್ನೇಹ ಮಾಡಲಿಕ್ಕೆ ಬಯಸುತ್ತಿಯಲ್ಲ. ಅವನು ಸ್ನೇಹಕ್ಕೆ ಯೋಗ್ಯನಲ್ಲದವನು.
ಅವನ ಜೊತೆ ಸ್ನೇಹ ಮಾಡುವುದೆಂದರೆ ನಮ್ಮ ಗುಂಡಿಯನ್ನು ನಾವೇ ತೋಡಿಕೊಂಡ್ಹಾಗೆ, ನಮ್ಮ ಸ್ನೇಹಕ್ಕೆ – ಪ್ರಾಣಕ್ಕೆ ಕುತ್ತು ಬರುತ್ತೆ. ಅದಕ್ಕಾಗಿ ತೋಳದ ಜೊತೆ ಸ್ನೇಹ ಮಾಡಲೇಬೇಡ” ಎಂದು ಪರಿಪರಿಯಾಗಿ ಹೇಳಿತು. ಆದರೆ ಕುರಿ, ಕೋಣದ ಮಾತನ್ನು ಕೇಳದೇ ಹೋಯಿತು.
ಹೀಗೆ ಎರಡು ದಿನ ಕಳೆಯಿತು. ತೋಳ ಹೇಗಾದರೂ ಮಾಡಿ ಕುರಿಯನ್ನು ತಿನ್ನಬೇಕೆಂದು ಸರಿಯಾದ ಸಮಯಕ್ಕಾಗಿ ಕಾಯುತ್ತಾ ಇತ್ತು.
ಅದಕ್ಕಾಗಿ ಕುರಿಯನ್ನು ದೂರ ಕರೆದುಕೊಂಡು ಹೋಗಲು ಪ್ಲ್ಯಾನ್ ಮಾಡಿತು. ತೋಳ ಕುರಿಗೆ “ಗುಡ್ಡದ ಮೇಲೆ ನಿನ್ನ ಆಪ್ತ ಸ್ನೇಹಿತನನ್ನು ಯಾರೊ ಕೊಂದು ಹಾಕಿದ್ದಾರೆ” ಎಂದು ಸುಳ್ಳು ಹೇಳಿ ಕರೆದುಕೊಂಡು ಹೋಯಿತು.
ಕೊನೆಗೆ ಅಲ್ಲಿ ಹೋಗಿ ನೋಡಿದರೆ ಯಾರೂ ಇರುವುದಿಲ್ಲ. ಕುರಿ “ಎಲ್ಲಿ ನನ್ನ ಸ್ನೇಹಿತ, ಯಾರು ಕೊಂದಿದ್ದು?” ಎಂದು ಕೇಳಿತು. ಅದಕ್ಕೆ ತೋಳ ನಗುತ್ತಾ “ನಿನ್ನ ಸ್ನೇಹಿತ ಇಲ್ಲಿ ಇಲ್ಲ ಅವನು ಸತ್ತೇ ಇಲ್ಲ, ನಿನ್ನನು ತಿನ್ನಲಿಕ್ಕೆ ಇಲ್ಲಿಯತನಕ ಬರುವಂತೆ ಮಾಡಿದೆ ಇದೆಲ್ಲಾ ನಾನು ಆಡಿದ ಆಟ” ಎಂದು ಹೇಳಿತು.
ಆಗ ಕುರಿ ತನ್ನ ಪ್ರಾಣ ಸ್ನೇಹಿತನಾದ ಕೋಣ ಹೇಳಿದ ಮಾತುಗಳನ್ನು ನೆನಪು ಮಾಡಿಕೊಂಡು ಕಣ್ಣೀರಿಟ್ಟಿತು. ಆವತ್ತು ನನ್ನ ಸ್ನೇಹಿತನ ಮಾತುಗಳನ್ನು ಕೇಳಿದ್ರೆ ಇವತ್ತು ಈ ಪರಿಸ್ಥಿತಿ ಬರುತ್ತಿರಲಿಲ್ಲ. ಮೂರ್ಖತನದಿಂದ ಒಬ್ಬ ವಿಶ್ವಾಸ ಘಾತುಕನನ್ನು ನಂಬಿ ಮೋಸ ಹೋದೆನಲ್ಲಾ ಎಂದು ತನ್ನೊಳಗೆ ದುಃಖಿಸಿತು.
ಇನ್ನೇನು ತೋಳ ಕುರಿಯನ್ನು ತಿನ್ನುವೆ ನೆಂದು ಕುರಿಯ ಮೇಲೆ ಹಾರಲು ಪ್ರಯತ್ನಿಸುತ್ತಿರುವಾಗ ಅದೇ ಸಮಯಕ್ಕೆ ಕೋಣ ಬಂದು ತನ್ನ ಕೊಂಬುಗಳಿಂದ ತೋಳವನ್ನು ಸೀಳಿ ಬಿಟ್ಟಿತು. ತೋಳ ತನ್ನ ಪ್ರಾಣ ಬಿಟ್ಟಿತು.
ಕುರಿ ಮತ್ತು ಕೋಣ ತಮ್ಮ ವಾಸಸ್ಥಾನಕ್ಕೆ ಹಿಂದಿರುಗಿ ಹೊರಟವು.
ಕಥೆಯಲ್ಲಿನ ನೀತಿ / Moral of this Story:
- ಅಪರಿಚಿತ ವ್ಯಕ್ತಿಗಳೊಂದಿಗೆ ಸ್ನೇಹ ಮಾಡುವ ಮುನ್ನ ಒಂದು ಸಾರಿ ಯೋಚಿಸಬೇಕು.
- ಯಾರನ್ನೂ ಪೂರ್ತಿಯಾಗಿ ನಂಬಬಾರದು.
- ನಮ್ಮ ಹಿತೈಷಿಗಳ ಮಾತನ್ನು ಕೇಳಬೇಕು
3. ಯಜಮಾನನ ಸೋಮಾರಿ ಬೆಕ್ಕು – Motivation Stories for Students
ಒಂದು ಊರಲ್ಲಿ ಒಬ್ಬ ರೈತನಿದ್ದ, ಅವನ ಹೆಸರು ರಾಜಪ್ಪ. ರಾಜಪ್ಪ ತನ್ನ ಹೊಲದಲ್ಲಿ ಬೆಳೆದ ಭತ್ತದ ಚೀಲಗಳನ್ನು ತನ್ನ ಮನೆಯ ಕೊಠಡಿಯಲ್ಲಿ ಸಂಗ್ರಹಿಸಿಟ್ಟಿದ್ದನು.
ಒಂದು ದಿನ ಇಲಿಗಳು ಬಂದು ಕೊಠಡಿಯಲ್ಲಿ ಸಂಗ್ರಹಿಸಿಟ್ಟ ಭತ್ತದ ಚೀಲಗಳನ್ನು ಕಡಿದು ಹಾಕಿ ಭತ್ತವನ್ನು ಸಣ್ಣ ಮಾಡಿದವು. ಹೀಗೆ ದಿನಾಲೂ ಭತ್ತದ ಚೀಲಗಳನ್ನು ಬಾಯಿಂದ ಕಚ್ಚಿ, ಭತ್ತವನ್ನು ತಿಂದು ಭತ್ತದ ಪ್ರಮಾಣವನ್ನು ಕಡಿಮೆ ಮಾಡುತ್ತಾ ಬಂದವು.
ಇದನ್ನು ಸೂಕ್ಷ್ಮವಾಗಿ ಗಮನಿಸಿದ ರಾಜಪ್ಪ, ‘ಇದು ಇಲಿಗಳ ಆಟ, ಇವುಗಳಿಗೆ ತಕ್ಕ ಬುದ್ದಿ ಕಲಿಸಬೇಕು’ ಎಂದು ಮಾರುಕಟ್ಟೆಗೆ ಹೋದನು. ಮಾರುಕಟ್ಟೆಯಲ್ಲಿ ಒಂದು ಸುಂದರವಾದ ಬೆಕ್ಕನ್ನು ಖರೀದಿಸಲು ಹುಡುಕುತ್ತಾ ಇದ್ದ.
ಅಷ್ಟರಲ್ಲಿ ತನ್ನ ಹಳೆಯ ಸ್ನೇಹಿತನೊಬ್ಬ ತನ್ನಲ್ಲಿರುವ ಬೆಕ್ಕನ್ನು ಮಾರಲು ಬಂದಿದ್ದ. ಅದು ತುಂಬಾ ಸೋಮಾರಿ ಬೆಕ್ಕು ಆಗಿತ್ತು. ಇದರಿಂದ ತುಂಬಾ ಬೇಸತ್ತಿದ್ದ ಬೆಕ್ಕಿನ ಯಜಮಾನ ಇದನ್ನು ಮಾರಲು ಬಂದಿದ್ದೇನೆ ಅಂದನು.
ಅದಕ್ಕೆ ರಾಜಪ್ಪ ಬಹಳ ಸಂತೋಷಪಟ್ಟು, ನಾನು ಬೆಕ್ಕನ್ನು ಖರೀದಿಸಲು ಬಂದಿದ್ದೇನೆ ಎಂದನು. ಸ್ನೇಹಿತನ ಕೈಯಲ್ಲಿರುವ ಬೆಕ್ಕು ರಾಜಪ್ಪನಿಗೆ ಇಷ್ಟವಾಯಿತು. ನೋಡಲು ಮುದ್ ಮುದ್ದಾಗಿತ್ತು. “ಈ ಬೆಕ್ಕು ನಂಗೆ ಕೊಡ್ತೀಯಾ?” ಎಂದು ಸ್ನೇಹಿತನನ್ನು ಕೇಳಿದ.
ಅದಕ್ಕೆ ಸ್ನೇಹಿತ ಆ ಕೊಡ್ತೀನಿ” ಎಂದನು. ರಾಜಪ್ಪ ಆ ಬೆಕ್ಕನ್ನು 100 ರೂಪಾಯಿ ಕೊಟ್ಟು ತೆಗೆದುಕೊಂಡು ಹೋದನು.
Also Read – ಮೀನುಗಾರ ಮತ್ತು ಬಲೆ
ರಾಜಪ್ಪ ಮನೆಯಲ್ಲಿ ಇಲಿಗಳ ಕಾಟವನ್ನು ತಪ್ಪಿಸಲು ಆ ಬೆಕ್ಕನ್ನು ಬಹಳ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದನು. ಆತನು ದಿನಾಲೂ ಬೆಕ್ಕಿಗೆ ಹಾಲು, ಮಾಂಸ ಮತ್ತು ಮೊಟ್ಟೆ ಕೊಡುತ್ತಿದ್ದನು. ಇದರಿಂದ ಆ ಬೆಕ್ಕು ಇನ್ನೂ ಸೋಮಾರಿಯಾಗಿ ಬಿಟ್ಟಿತು. ಇಲಿಗಳು ಬೆಕ್ಕಿನ ಕಣ್ಣು ಮುಂದೆ ಬಂದರೂ ಹಿಡಿಯಲಾರದೆ ಹೋಯಿತು.
ಇದರಿಂದ ಸಿಟ್ಟುಗೊಂಡ ರಾಜಪ್ಪ ಬೆಕ್ಕಿಗೆ ಮೂರು ದಿನಗಳ ಕಾಲ ಊಟ ಕೊಡದೆ ಹೋದನು. ಆಗ ಬೆಕ್ಕು ಹಸಿವೆಗೊಂಡು ಮನೇಲಿ ಇರುವ ಇಲಿಗಳನ್ನು ಹಿಡಿದು ತಿಂದು ಹಸಿವೆ ತೀರಿಸಿಕೊಂಡಿತು. ಇದರಿಂದ ಮನೇಲಿರುವ ಇಲಿಗಳ ಕಾಟ ಕ್ರಮೇಣವಾಗಿ ಕಡಿಮೆಯಾಗುತ್ತಾ ಬಂತು.
ಕಥೆಯಲ್ಲಿನ ನೀತಿ / Moral of this Story :
ಅತಿಯಾದರೆ ಅಮೃತವೂ ವಿಷಯವಾಗುತ್ತದೆ. ಯಾರಿಗೆ ಎಷ್ಟು ಪ್ರೀತಿ ತೋರಿಸಬೇಕು ಅಷ್ಟೇ ತೋರಿಸಬೇಕು.