Moral Stories in Kannada PDF

Moral Stories in Kannada PDF

Moral Stories
Spread the love

Hi Everyone, Welcome to Moral Storys – Moral Stories in Kannada PDF

Here you can see Moral Stories in Kannada Language. Moral Stories help to Everyone to gain knowledge and Morality in their life. Moral Stories in Kannada PDF

1. ಎರಡು ಮೀನು / Two Fishes – Moral Stories in Kannada PDF

Moral Stories in Kannada PDF

ಒಂದು ಗ್ರಾಮದಲ್ಲಿ ಒಬ್ಬ ವ್ಯಕ್ತಿ ಇದ್ದನು. ಅವನಿಗೆ ಜೀವನದಲ್ಲಿ ತುಂಬಾ ಆಶೆಗಳಿದ್ದವು. ಸಾಕಷ್ಟು ದುಡ್ಡು ಮಾಡಬೇಕು. ಇದ್ದಕ್ಕಿದ್ದಂತೆ ದಿಢೀರನೆ ಶ್ರೀಮಂತನಾಗುವ ಕನಸನ್ನು ಕಾಣುತ್ತಿದ್ದನು.

ಒಂದು ದಿವಸ ಅವನು ಮೀನು ಹಿಡಿಯಲು ನದಿಗೆ  ಹೊರಟನು ಮತ್ತು ದಾರಿಯಲ್ಲಿ ಹೋಗುತ್ತಲೇ ಇವತ್ತು ಸಾಕಷ್ಟು ಮೀನು ಹಿಡಿದು ಅವುಗಳನ್ನು ಮಾರಿ ಬಂದ ಹಣದಲ್ಲಿ ಒಂದು ಮೀನಿನ ಬಲೆಯನ್ನು ತಗೊಂಡು, ಇನ್ನು ಇಬ್ಬರನ್ನು ಕೂಲಿಯಾಳುಗಳಾಗಿ ಇಟ್ಟುಕೊಳ್ಳುತ್ತೇನೆ ಎಂದು ಹಗಲುಗನಸು ಕಾಣುತ್ತಾ ಹೋದನು.

ನದಿಯ ದಡದಲ್ಲಿ ನಿಂತು ಮೀನು ಹಿಡಿಯಲು ಗಾಳವನ್ನು ನದಿಗೆ ಹಾಕಿ, ಸ್ವಲ್ಪ ಹೊತ್ತು ಕಾಯುತ್ತಾ ಕುಳಿತ. ಗಾಳಕ್ಕೆ ಯಾವ ಮೀನು ಬೀಳದ ಕಾರಣ ಗಾಳವನ್ನು ಎತ್ತಿಕೊಂಡು ಮತ್ತೆ ಬೇರೆಕಡೆ ಹಾಕಿ ಮತ್ತೆ ಸ್ವಲ್ಪ ಹೊತ್ತು ಕಾಯುತ್ತಾ ಕುಳಿತ. ಅಲ್ಲೂ ಕೂಡ ಒಂದು ಮೀನು ಸಹ ಬೀಳಲಿಲ್ಲ.

ಮತ್ತೆ ಅಲ್ಲಿಂದ ಗಾಳವನ್ನು ಮತ್ತೊಂದು ಕಡೆ ಹೊಯ್ದು ಹಾಕಿ ಎದುರು ನೋಡಿದ. ಹೀಗಲಾದರೂ ಮೀನು ಬೀಳುತ್ತಾವೆನಂತ, ಒಂದು ಮೀನು ಕೂಡ ಗಾಳಕ್ಕೆ ಬೀಳಲಿಲ್ಲ. ಹೀಗೆ ಅವನು ಸಾಯಂಕಾಲದ ವರೆಗೂ ಪ್ರಯತ್ನ ಮಾಡುತ್ತಲೇ ಇದ್ದನು. ಆದರೂ ಕೂಡ ಒಂದು ಮೀನು ಸಹ ಬೀಳಲಿಲ್ಲ.

Moral Stories in Kannada PDF

ಸ್ವಲ್ಪ ಸಮಯದ ಬಳಿಕ ಇನ್ನೊಬ್ಬ ವ್ಯಕ್ತಿ ಬಂದು ಗಾಳವನ್ನು ನೀರಿಗೆ ಹಾಕಿದ, ಕೆಲವೇ ನಿಮಿಷಗಳಲ್ಲಿ ಆತನು ಎರಡು ಮೀನು ಹಿಡಿದು ಹೊರಡಲು ಸಜ್ಜಾದ.

ಮೊದಲನೆಯವನು ಎರಡನೇಯವನಿಗೆ “ನೀನು ಮೀನು ಭಾರಿ ಹಿಡಿಯಲಿಕತ್ತಿ, ನಿನಗೆ ಮೀನು ಚೊಲೋ ಬೀಳುತ್ತವೆ ಇನ್ನೂ ಜಾಸ್ತಿ ಹಿಡಿಬಹುದಲ್ಲ, ಯಾಕ್ ಆಗಲೇ ಹೋಗುತ್ತೀರಿ” ಎಂದು ಕೇಳಿದ.

ಅದಕ್ಕವನು ಇವತ್ತಿನ ಊಟಕ್ಕೆ ಇವು ಸಾಕು, ಒಂದು ನಾನು ತಿಂತಿನಿ ಇನ್ನೊಂದು ಇಲ್ಲಿ ಸಾದು ಒಬ್ಬರು ಕುಂತಾರಲ್ವ ಅವರಿಗೊಂದು ಕೊಟ್ಟು ಹೋಗ್ತೀನಿ” ಎಂದ.

Read Also – ಕತ್ತೆ ಮತ್ತು ಕುದುರೆ

ಮತ್ತೆ ಮೊದಲನೆಯವನು ಎರಡನೆಯವನನ್ನು “ನಾನು ಬೆಳಿಗ್ಗೆಯಿಂದ ಸಂಜೆಯವರೆಗೆ ಒಂದು ಮೀನು ಹಿಡಿಯಲಿಲ್ಲ ಆದರೆ ನೀನು ಈಗಲೇ ಬಂದು ಎರಡು ಮೀನು ಹಿಡಿದಿಯಲ್ಲ, ಅದು ಹೇಗೆ ಸಾಧ್ಯವಾದಿತು” ಎಂದು ಕೇಳಿದ.

ಅದಕ್ಕೆ ಮತ್ತವನು ನಾನು ಬರುವಾಗ ದೇವರನ್ನು ಎರಡೇ ಮೀನು ಕೊಡು ಅಂತ ಕೇಳಿಕೊಂಡು ಬಂದಿದ್ದೆ. ಒಂದು ನನಗೆ ಇನ್ನೊಂದು ಅಲ್ಲಿ ಕುಂತಿರುವ ಸಾಧುಗೆ ಕೊಡ್ತೀನಿ ಅಂತ ಕೇಳಿದ್ದೆ” ಎಂದು ಉತ್ತರಿಸಿದನು.

ಮೊದಲನೆಯವನಿಗೆ ತುಂಬಾ ಆಶ್ಚರ್ಯವಾಯಿತು. ಆಸೆಯೇ ದುಃಖಕ್ಕೆ ಮೂಲ ಕಾರಣ ಎಂದು ತಿಳಿದುಕೊಂಡನು.

ಕಥೆಯಲ್ಲಿನ ನೀತಿ / Moral of this Story : ಬೇಡಿಕೆ, ಅವಶ್ಯಕತೆಗೆ ಮೀರಿ ಕೇಳಬಾರದು. ಅಳತೆ ಮೀರಿ ಆಸೆಪಡಬಾರದು. ಬೇಡಿಕೆಯೂ ಕೂಡ ದೇವರು ಮೆಚ್ಚುವಂತಿದ್ದರೆ ಇನ್ನು ಹೆಚ್ಚಿನದನ್ನು ಕೊಡುತ್ತಾನೆ.

Moral Stories in Kannada PDF

2. ಕಳ್ಳ ಮತ್ತು ಗ್ರಾಮಸ್ಥರು / Thief and the Villagers – Moral Stories in Kannada PDF

Moral Stories in Kannada PDF

ಒಂದೂರಿನಲ್ಲಿ ಭೂಪ ಎನ್ನುವ ಒಬ್ಬ ವ್ಯಕ್ತಿ ಇದ್ದ. ಅವನು ಜೀವನದಲ್ಲಿ ಬಹಳಷ್ಟು ಶಾಂತಿ ಮತ್ತು ಸಹೋದರತೆಯಿಂದ ಬದುಕುತ್ತಿದ್ದನು. ಅವನು ನಿಷ್ಠಾವಂತ ವ್ಯಕ್ತಿಯಾಗಿದ್ದನು.

ಒಂದು ದಿವಸ ಹೊಲಕ್ಕೆ ಹೋಗಿ ಬರುವಾಗ ಅವನಿಗೆ ತುಂಬಾ ಹಸಿವೆ ಯಾಗುತ್ತದೆ. ತಿನ್ನಲಿಕ್ಕೆ ಆಹಾರ ಎಲ್ಲೂ ಸಿಗಲಿಲ್ಲ, ಜೊತೆಗೆ ಹಣಕೊಟ್ಟು ಕೊಳ್ಳುವಷ್ಟು ಹಣ ಅವನ ಕಿಸೆಯಲ್ಲಿ ಇರಲಿಲ್ಲ. ಹೇಗಾದರೂ ಮಾಡಿ ಹಸಿವೆಯನ್ನು ತೀರಿಸಬೇಕು ಅಂತ ಅಂದುಕೊಂಡನು.

ಬಜಾರಿನಲ್ಲಿ ಒಂದು ಬೇಕರಿ ಅಂಗಡಿ ಮುಂದೆ ನಿಂತನು. ಪಕ್ಕದಲ್ಲಿರುವ ಲಡ್ಡು ಗೆ ಕೈ ಹಾಕಿಲು ನೋಡಿದ ಆದರೆ ಇಂತಹ ಕೆಲಸಕ್ಕೆ ಮನಸ್ಸು ಒಪ್ಪಲಿಲ್ಲ. ಸ್ವಲ್ಪ ಹೊತ್ತು ಅಲ್ಲಿ ನಿಂತನು. ಸಮಯ ಹೋದಂತೆಲ್ಲ ಹಸಿವು ಜಾಸ್ತಿ ಆಯಿತು. ಕೊನೆಗೆ ಲಡ್ಡುಗೆ ಹಾಕಿದಾಗ ಸಿಹಿ ಮಾರುವವನು ಗಮನಿಸಿದ.

Moral Stories in Kannada PDF

ಅಂಗಡಿ ಮಾಲಿಕ ಬಂದು ಅವನನ್ನು ರಸ್ತೆಗೆ ಎಳೆದು ಎಲ್ಲರ ಮುಂದೆ ಅವಮಾನಿಸಿದ. ಮತ್ತು ಅವತ್ತಿನಿಂದ ಊರಿನಲ್ಲಿ ಏನೇ ಕಳ್ಳತನ ಆದರೂ ಅವನ‌ ಮೇಲೆ ಹಾಕುತ್ತಿದ್ದರು. ಇದರಿಂದ ಕಳ್ಳತನ ಮಾಡೋರು ಕೂಡಾ ಬಹಳ ಚಾಕಚಕ್ಯತೆಯಿಂದ ಕಳ್ಳತನ ಮಾಡುತ್ತಿದ್ದರು.

ಆಗ ಊರಿನ ಜನರೆಲ್ಲಾ ಅವನನ್ನು ಒಬ್ಬ ಅಂತಾರಾಷ್ಟ್ರೀಯ ಕಳ್ಳನಂತೆ ನೋಡುತ್ತಿದ್ದರು. ಇದರಿಂದ ಭೂಪನಿಗೆ ಹೊರಗಡೆ ಆರಾಮಾಗಿ ಹೋಗಲು ಆಗುತ್ತಿದ್ದಿಲ್ಲ.

Read Also – ದುರಾಸೆಯ ನರಿ

ಆಗ ಅವನು ಈ ಸುಳ್ಳು ಆರೋಪದಿಂದ ಪಾರಾಗಲೇಬೇಕೆಂದು  ನಿರ್ಧರಿಸಿದ. ಅದಕ್ಕಾಗಿ ಒಂದು ಆಲೋಚನೆ ಮಾಡಿದನು. ಏನೆಂದರೆ ಅಸಲಿ ಕಳ್ಳನನ್ನು ಹಿಡಿದು ಅವನನ್ನು ಊರಿನ ಜನರಿಗೆ ಇವನೇ ಕಳ್ಳನೆಂದು ಒಪ್ಪಿಸಬೇಕು, ಇಲ್ಲ ಅದೇ ಕೆಲಸವನ್ನು ನಾನು ಮುಂದುವರಿಸಬೇಕು ಎಂಬ ಆಲೋಚನೆ ಮಾಡಿದ.

ರಾತ್ರಿ ಹೊತ್ತಲ್ಲಿ ಎಚ್ಚರಿಕೆಯಿಂದ ಇದ್ದು, ಕಳ್ಳತನಕ್ಕೆ ಯಾರಾದರೂ ಬರ್ತಾರೆ ಅಂತ ಕಾದು ಕುಳಿತಿದ್ದ. ಮಧ್ಯ ರಾತ್ರಿ ಒಬ್ಬ ವ್ಯಕ್ತಿ ಮಾರುವೇಷದಲ್ಲಿ ಬಂದನು. ಭೂಪನು ಅವನನ್ನು ಹಿಡಿಯಲು ಹಿಂದುಗಡೆಯಿಂದ ಬಂದು ಕಳ್ಳನನ್ನು ಹಿಡಿದು ರೂಮಿನಲ್ಲಿ ಬಂಧಿಸಿದ ಮತ್ತು ಊರು ಜನರಿಗೆಲ್ಲ ವಿಷಯ ತಿಳಿಸಿದ.

Also Read – ಫಲ ಕೊಡದ ಮರವೇತಕೆ

ಇವನೇ ನಿಜವಾದ ಕಳ್ಳ; ಇಲ್ಲಿಯ ವರೆಗೆ ಕಳ್ಳತನ ಮಾಡುತ್ತಾ ಬಂದಿರೊದು ಎಂದನು. ಊರಿನ ಜನ ಕಳ್ಳನನ್ನು ಗದರಿಸಿ ಕೇಳಲು, ಅವನು ಮಾಡಿದ ಕಳ್ಳತನವನ್ನು ಒಪ್ಪಿಕೊಂಡನು. ಅವನನ್ನು  ಪೋಲಿಸರ‌ ಕೈಗೆ ಒಪ್ಪಿಸಿದರು.ಭೂಪ ‘ಕಳ್ಳನು’ ಎಂಬ ಆರೋಪದಿಂದ ಮುಕ್ತನಾದ.

ಕಥೆಯಲ್ಲಿನ ನೀತಿ / Moral of this Story : ಪ್ರತಿ ಒಂದು ಸಮಸ್ಯೆಗೆ ಒಂದು ಪರಿಹಾರ ಇದ್ದೇ ಇರುತ್ತದೆ, ಅದನ್ನು ಸಮಾಧಾನದಿಂದ ಕಂಡುಹಿಡಿಯಬೇಕು. ಮತ್ತು ಕೆಲವೊಮ್ಮೆ ನಾವು ಮಾಡದ ತಪ್ಪಿಗೆ ಶಿಕ್ಷೆ ಅನುಭವಿಸಬೇಕಾಗುತ್ತದೆ. ಕೆಲವು ಪರಿಸ್ಥಿತಿಗಳು ನಮ್ಮನು ಕೆಟ್ಟವನನ್ನಾಗಿ ಮಾಡುತ್ತವೆ

3. ಕಳ್ಳ ಮತ್ತು ನಾಯಿ / Thief and the Dog – Moral Stories in Kannada PDF

Moral Stories in Kannada PDF

ಒಂದಾನೊಂದು ಊರಿನಲ್ಲಿ ಒಂದು ನಾಯಿ ಇತ್ತು. ಅದು ಬಹಳ ಸ್ವತಂತ್ರವಾಗಿ ಮತ್ತು ಆನಂದವಾಗಿ ಜೀವಿಸುತ್ತಿತ್ತು.  ನಂಬಿಕೆಗೆ ಮತ್ತೊಂದು ಹೆಸರೇ ಆ ನಾಯಿಯಾಗಿತ್ತು.

ಒಂದು ದಿನ ಕಳ್ಳನು ಕಳ್ಳತನ ಮಾಡಲು ತನ್ನ ಯಜಮಾನ ಮನೆಗೆ ಬಂದಿಳಿದನು. ಕಳ್ಳನು ಮನೆಯೊಳಕ್ಕೆ ನುಸುಳುವುದನ್ನು ನೋಡಿದ ನಾಯಿ ಜೋರಾಗಿ ಬೊಗಳಲಾರಂಭಿಸಿತು.‌ ಯಜಮಾನ ಎದ್ದು ‌ಬರುವುದರೊಳಗೆ ಕಳ್ಳನು ಕಾಂಪೌಂಡ್ ಗೋಡೆ ಏರಿ ಪರಾರಿಯಾದ.‌

ಮತ್ತೊಂದು ದಿನ ಕಳ್ಳನು ಪಕ್ಕದ ಮನೆಗೆ ಕಳ್ಳತನ ಮಾಡಲಿಕ್ಕೆ ಬಂದನು. ನಾಯಿ ಅವನ ವಾಸನೆ ಹಿಡಿದು ಮತ್ತೆ ಬೌ ಬೌ ಎಂದು ಬೊಗಳಲಾರಂಭಿಸಿತು. ಇದರಿಂದ ಮನೆಯವರು ಎದ್ದು ಎಲ್ಲಾ ಕಡೆ ಹುಡುಕಿದರು. ನಾಯಿ ಶಬ್ಧ ಕೇಳಿ ಮನೆಯವರು ಏಳುವುದಕ್ಕಿಂತ ಮುಂಚೆ ಪರಾರಿಯಾಗಿದ್ದ.

ಹೀಗೆ ಆ ಕಳ್ಳನು ಕಳ್ಳತನ ಮಾಡಲಿಕ್ಕೆ ಹೋಗುವ ಪ್ರತಿ ಮನೆಯಲ್ಲೂ ನಾಯಿ ಬೊಗಳಲು ಶುರುಮಾಡುತ್ತಿತ್ತು. ಕಳ್ಳ ಯಾವ ಕಳ್ಳತನ ಮಾಡದೆ ಸುಮ್ಮನೆ ಬರುತ್ತಿದ್ದ.

ನಾಯಿ ಕಾಟದಿಂದ ಕಳ್ಳನು ಕಳ್ಳತನ ಮಾಡುವುದನ್ನೇ ಬಿಟ್ಟುಬಿಟ್ಟ. ಕೊನೆಗೆ ಒಂದು ಸಣ್ಣ ವ್ಯಾಪಾರ ಮಾಡಿಕೊಂಡು ಜೀವನ ಸಾಗಿಸಿದ.

Related – ಕಂದನ ಮೇಲಿನ ತಂದೆಯ ಪ್ರೀತಿ

ಹೀಗೆ ಒಬ್ಬ ಕಳ್ಳನು ಬದಲಾದನು ಮತ್ತು ಊರಿನಲ್ಲಿ ಯಾವ ಕಳ್ಳತನ ಮಾಡದಂತೆ ನಾಯಿ ಕಾವಲು ಕಾಯುತ್ತಿತ್ತು. ಆ ಊರಿನ ಪ್ರತಿ ಬಾಗಿಲು ತೆರೆದೇ ಇರುತ್ತಿತ್ತು. ಇನ್ನು ಕೆಲವು ಮನೆಗೆ ಬಾಗಿಲೇ ಇರುತ್ತಿರಲಿಲ್ಲ.

ಕಥೆಯಲ್ಲಿನ ನೀತಿ / Moral of this Story : ನಾಯಿ ನಂಬಿಕೆಗೆ ಯೋಗ್ಯವಾದ ಪ್ರಾಣಿ. ಮನುಷ್ಯ ಪ್ರತಿಯೊಂದು ಜೀವಿಯಿಂದಲೂ ಕಲಿಯಬೇಕು. ಏಕೆಂದರೆ ಮಾನವನು ಅಹಂನಲ್ಲಿ ಎಲ್ಲವನ್ನು ಮರೆತು, ಮನುಷ್ಯತ್ವವನ್ನೇ ಮರೆತು ಮೃಗದಂತೆ ವರ್ತಿಸುತ್ತಾನೆ.

Follow On Facebook Moral Storys

Moral Stories in Kannada PDF

*ವಿ. ಸೂ. ಈ ಮೇಲಿನ ಕಥೆಗಳಲ್ಲಿ ಏನಾದರೂ ತಪ್ಪು ಅಥವಾ ದೋಷಗಳು ಕಂಡುಬಂದರೆ, ದಯಮಾಡಿ ಕೆಳಗೆ ಕಾಮೆಂಟ್ ಮೂಲಕ ತಿಳಿಸಿ. ಧನ್ಯವಾದಗಳು ಪುನಃ ಬೇಟಿ ನೀಡಿ.


Spread the love

Leave a Reply

Your email address will not be published. Required fields are marked *