Moral Short Stories

Moral Short Stories

Moral Stories
Spread the love

Hi Everyone Welcome to Moral Storys – Moral Short Stories

1. ಕಂದನ ಮೇಲಿನ ತಂದೆಯ ಪ್ರೀತಿ – Moral Short Stories

Moral Short Stories

ಒಂದು ಚಿಕ್ಕ ಹಳ್ಳಿಯಲ್ಲಿ ಚಂದ್ರಯ್ಯ ಮತ್ತು ಅವನ ಮಗ ಇದ್ದರು. ತಂದೆ ಮಗನನ್ನು ತುಂಬಾ ಅಕ್ಕರೆಯಿಂದ, ಪ್ರೀತಿಯಿಂದ ಬೆಳೆಸಿದ. ಚಂದ್ರಯ್ಯ ದುಡಿದದರಲ್ಲಿ ಅರ್ಧ ಭಾಗವನ್ನು ತನ್ನ ಮಗನ ಬಟ್ಟೆ, ಆಟಿಕೆ, ತಿಂಡಿತಿನಿಸುಗಳಿಗೆ ಖರ್ಚು ಮಾಡುತ್ತಿದ್ದ.

ಹೀಗೆ ಮಗನಿಗೆ ಏನೂ ಕಡಿಮೆ ಇಲ್ಲದಂತೆ ನೋಡಿಕೊಂಡನು. ಆದರೆ ಅತಿಯಾದ ಅಕ್ಕರೆಯಿಂದ ಮಗನು ಸೋಮಾರಿ ಆದ.  ಹಣದ ಹುಚ್ಚು ಹಿಡಿಯಿತು. ಹೊರಗಿನ ಸ್ನೇಹಿತರ ಜೊತೆ ಸೇರಿ ಅನೇಕ ರೀತಿಯ ದುಷ್ಟ ಚಟಗಳನ್ನು ಕಲಿತುಕೊಂಡ.

ವಯಸ್ಸಿಗೆ ಬಂದ ಮಗ ಕಣ್ಣು ಮುಂದೆಯೇ ಕುಡಿದು ಬೀಳುವುದನ್ನು ನೋಡಿ ತಂದೆ ಚಿಂತೆಗೀಡಾದ. ಆದರೂ ಕೂಡ ಮಗನ ನಡುವಳಿಕೆ ಸರಿಪಡಿಸಲು ಅನೇಕ ಬಾರಿ ತಿಳಿಹೇಳಿದ. ಆದರೆ ತಂದೆಯ ಮಾತನ್ನು ಕೇಳದೇ ಹೋದ. ಇತರರಿಂದಲೂ ಎಷ್ಟೋ ಸಲ ಬುದ್ಧಿ ಮಾತು ಹೇಳಿಸಿದ, ಆದರೂ ಅವನ ಎದೆಗೆ ಅವು ತಾಕಲೆ ಇಲ್ಲ.

ತಂದೆ ದುಡಿದು ದುಡಿದು ಮೆತ್ತಗಾದ. ಚಂದ್ರಯ್ಯ ಮಗನಿಗಾಗಿ   ಒಂದು ಎಕರೆ ಭೂಮಿಯನ್ನು ತೆಗೆದುಕೊಂಡಿದ್ದ. ಅದನ್ನು ಮಾರಿ ನನಗೆ ಒಂದು ಲಕ್ಷ ರೂಪಾಯಿ ಕೊಡು ಎಂದು ತಂದೆಯಲ್ಲಿ ಹಠಹಿಡಿದ. 

ತಂದೆ, ಒಂದು ಲಕ್ಷ ರೂಪಾಯಿ ನೀನು ಏನು ಮಾಡ್ತೀಯ. ಇರೊದೊಂದು ಎಕರೆ ಹೊಲ ಮಾರಿದರೆ ಮತ್ತೆ ಖರೀದಿಸಲು ನಮ್ಮಿಂದ ಆದೀತಾ? ಎಂದನು. ಅದಕ್ಕೆ ಮಗನು, ಕೇಳಿದ ಹಣ ಕೊಡಲಿಲ್ಲ ಅಂದ್ರೆ ಎಲ್ಲಾದ್ರೂ ಬಿದ್ದು ಸಾಯ್ತೀನಿ ಎಂದು ಭಯ ಹುಟ್ಟಿಸಿದ.‌

Also Read – ಸಹಾಯ ಮಾಡುವುದು ನನ್ನ ಧರ್ಮ

ಚಂದ್ರಯ್ಯ ಬೇರೆ ದಾರಿ ಕಾಣದೆ ಇದ್ದ ಒಂದು ಎಕರೆ ಹೊಲವನ್ನು ಮಾರಿ ಒಂದು ಲಕ್ಷ ರೂಪಾಯಿ ಕೊಟ್ಟನು. ಮನೇಲಿ ತಂದೆಯ ಜೊತೆ ಜಗಳಾಡಿ ಇದ್ದ ಹಣವನ್ನೆಲ್ಲಾ ತೆಗೆದುಕೊಂಡು ಹೋದನು.

ಮಗನು ಆ ದುಡ್ಡಿನಿಂದ ಸ್ನೇಹಿತರ ಜೊತೆ ಸೇರಿ ತಿಂದುಕುಡಿದು ಅರ್ಧ ದುಡ್ಡು ಖಾಲಿ ಮಾಡಿದ. ಇನ್ನುಳಿದ ದುಡ್ಡನ್ನು ಸ್ನೇಹಿತರು ಯಾಮಾರಿಸಿ ಕೊಳ್ಳೆ ಹೊಡೆದರು.

ಒಂದೇ ದಿನದಲ್ಲಿ ಜೇಬು ಖಾಲಿಯಾಯಿತು. ತಂದೆಗೆ ಮುಖ ತೋರಿಸದೆ ಮನೆಗೆ  ಹೋಗಲು ದಾರಿ ಇಲ್ಲದೆ, ದೂರ ಪ್ರಾಂತಕ್ಕೆ ಹೊರಟು ಹೋದನು.

Moral Short Stories

ಅಲ್ಲಿನ ಜನರು, ವಾತಾವರಣಕ್ಕೆ ಹೊಂದಿಕೊಳ್ಳದೆ ಕಂಗಾಲಾದ. ಕಣ್ಣಿಗೆ ನಿದ್ದೆ ಇಲ್ಲದೆ ಹೊಟ್ಟೆಗೆ ಊಟವಿಲ್ಲದೆ ಹೊದ್ದು ಕೊಳ್ಳಲು ಹಾಸಿಗೆ ಇಲ್ಲದೆ ಉಳಿಯಲು ಜಾಗವಿಲ್ಲದೆ ಹುಚ್ಚನಂತೆ ತಿರುಗಿದ.

ಹಗಲಿರುಳು ಹಸಿವಿನಿಂದ ಬಳಲಿದ. ಕೆಲಸ ಮಾಡಿದರೆ ಊಟ ಕೊಡ್ತಾರೇನೊ ಅಂತ ಅಂಗಡಿಗಳಲ್ಲಿ ಹೋಟೆಲ್-ಗಳಲ್ಲಿ ಕೆಲಸ ಕೇಳಿದ ಆದರೂ ಇವನ ವೇಷಭೂಷಣ ನೋಡಿ ಯಾರೂ ಕೆಲಸ ಕೋಡಲಿಲ್ಲ. ಹತ್ತಿರಕ್ಕೂ ಬರಗೊಡಿಸಲಿಲ್ಲ ಎಲ್ಲರು ಒಂದು ವಿಚಿತ್ರ ಪ್ರಾಣಿಯಂತೆ ಕಂಡರು.

ಆಗ ಒಬ್ಬ ವ್ಯಕ್ತಿ ಬಂದು “ನಿನ್ನ ಅವತಾರ ನೋಡಿ ನಿನಗೆ ಕೆಲಸ ಯಾರು ಕೊಡಲ್ಲ ನಿನ್ನನು ನೋಡೇ ಅರ್ಧ ಹೆದರುತ್ತಾರೆ. ನನಗೊಬ್ಬ ಸೇಠ್ ಪರಿಚಯ ಇದ್ದಾನೆ. ನಿನ್ನನು ಅಲ್ಲಿಗೆ ಕರೆದುಕೊಂಡು ಹೋಗಿ ಕೆಲಸ ಕೊಡುಸ್ತೀನಿ ಬಾ” ಎಂದು ಕರೆದುಕೊಂಡು ಹೋದ.

ಸೇಠ್ ನ ಫಾರ್ಮ್ ಹೌಸ್ ನಲ್ಲಿರುವ ದನಕರುಗಳಿಗೆ ಮೇವು ನೀರು ತರುವ ಮತ್ತು ಕೊಳಿಗಳನ್ನು ನೋಡಿಕೊಳ್ಳುವ ಕೆಲಸಕ್ಕೆ ಒಪ್ಪಿಕೊಂಡನು. ಸೇಠ್’ನ ಬಳಿಯಲಿ ಕೆಲಸಕ್ಕೆ ಇಟ್ಟು ಅವನು ಹೋದ. ದನಕರುಗಳನ್ನು ಮೇಯಿಸುತ್ತಾ ಕೊಳಿಗಳನ್ನು ನೋಡಿಕೋಳ್ಳುತ್ತಾ ಇದ್ದನು.

ಆ ಸೇಠ್ ತನ್ನ ಮನೇಲಿರುವ ಹಳೆಯ ಬಟ್ಟೆಗಳನ್ನು ತಂದು ಕೊಟ್ಟ. ದಿನ ಎರಡು ಹೊತ್ತು ಊಟ ಕೊಟ್ಟನು. ಬೆಳಿಗ್ಗೆ ರಾತ್ರಿಯ ತಂಗಳನ್ನ, ಸಂಜೆಗೆ ಅರ್ಧ ಬಾಲಿನಷ್ಟು ಅನ್ನ ಸಾರು.   ಮಾಡುವ ಕೆಲಸಕ್ಕೆ ತಿನ್ನುವ ತಿಂಡಿಗೆ ಎರಡೇದಿನದಲ್ಲಿ ತಿಂದರೂ ಸೊರಗಿದ.

ಹೀಗೆ ಒಂದು ತಿಂಗಳು ಜೀತದಾಳಾಗಿ ಕೆಲಸ ಮಾಡಿದ. ಒಂದು ದಿನ ಸೇಠ್ ಬಳಿ ಹೋಗಿ ಇಷ್ಟು ದಿನ ದುಡಿದ ನನ್ನ ಸಂಬಳ ಕೊಡ್ರಿ ನಾನು ಒಂದು ಜೊತೆ ಚೊಲೋ ಬಟ್ಟೆ ತಗೋತೀನಿ ಎಂದು ಕೇಳಿದ. ಅದಕ್ಕೆ ಸೇಠ್ ನೀನು ತಿಂದಿರೊ ಊಟಕ್ಕೆ ತೊಟ್ಟಿರುವ ಬಟ್ಟೆಗೆ ಸರಿ ಹೋಯ್ತು.

ನಿನ್ನ ಇಲ್ಲಿ ಕೆಲಸಕ್ಕೆ ಇಟ್ಟು ಹೋದವ ನಿನ್ನನು ಮೂರು ಸಾವಿರ ರೂಪಾಯಿಗೆ ಮಾರಿ ಹೋಗಿದ್ದಾನೆ. ಆ ಸಾಲ ಮುಟ್ಟುವ ವರೆಗೂ ನೀನ್ ಇಲ್ಲೆ ಕೆಲಸ ಮಾಡಿಕೊಂಡು ಬಿದ್ದಿರಬೇಕು ಎಂದನು. ಅಲ್ಲಿಯವರೆಗೂ ಎಲ್ಲೂ ಹೋಗುವಂತಿಲ್ಲ ಎಂದನು.

ಸೇಠ್ ನ ಮಾತಿನಿಂದ ಅವನ ಎದೆಬಡಿತ ನಿಂತಂತಾಯಿತು. ಹೃದಯ ಭಾರ, ದುಃಖ ಏರಿಕೊಂಡು ಬಂತು. ಬದುಕಿದ್ದರೂ ಸತ್ತಂತ್ತಿದ್ದೇನೆ ಬರೀ ಕೂಳಿಗಾಗಿ ಇಷ್ಟು ಬದುಕಿದೆನಾ! ಎಂದೆನಿಸಿತು.

ಜಾರುವ ಕಣ್ಣೀರಿನಲ್ಲಿ ಮೋಸ ಮಾಡಿದವನ ಪ್ರತಿಬಿಂಬ ಕಾಣಲಿಲ್ಲ. ಬದಲಾಗಿ ಅವನು ತನ್ನ ತಂದೆಗೆ ಮಾಡಿದ ದ್ರೋಹವೆ ಎದ್ದು ಕಾಣುತಿತ್ತು. ಜೀತದಾಳಾಗಿ ದುಡಿಸಿಕೊಂಡವನ ನೋಟು ಕಾಣಲಿಲ್ಲ ಬದಲಿಗೆ ತಂದೆಗೆ ಮಾಡಿದ ಮನಸಿನ ಏಟು ಎದ್ದು ಕಾಣುತ್ತಿದೆ. ಆ ಸ್ಥಳದಲ್ಲಿ ಗೋಳೋ ಎಂದು ಅತ್ತು ಬಿಟ್ಟನು.

ಆ ರಾತ್ರಿಯೇ ಅಲ್ಲಿಂದ ತಂದೆಯ ಬಳಿಗೆ ಬಂದನು. ಮಗನು ಯಾವತ್ತಾದರೂ ತಿರಿಗಿ ಬರ್ತಾನೆ ಎಂದು ನೂರು ದಾರಿ ಕಾಯುತ್ತಿದ್ದನು. ಮಗನು ತಂದೆ ಬಳಿ ಹೋಗಿ ನನ್ನನ್ನು ಕ್ಷಮಿಸಿಬಿಡು ಎಂದು ಅಂಗಲಾಚಿ ಬೇಡಿಕೊಂಡನು. ತಂದೆಯು ಮಗನನ್ನು ಅಪ್ಪಿಕೊಂಡು ಕಣ್ಣೀರಿಟ್ಟನು. ಮತ್ತು ಅಂದಿನಿಂದ ಮುಂದೆ ಅನ್ಯೋನ್ಯವಾಗಿ ಬಾಳಿದರು.

ಕಥೆಯಲ್ಲಿನ ನೀತಿ / Moral of this Story :
ಅನುಭವಗಳೆ ಮಾನವನಿಗೆ ಮೊದಲ ಗುಣಪಾಠಗಳು. ಜೀವನದ ಕಠಿಣ ಪರಿಸ್ಥಿತಿಗಳೆ ಜಗತ್ತಿನ ಉತ್ತಮ ಶಿಕ್ಷಣ / ಶಿಕ್ಷಕ. ಅವುಗಳು ನಮ್ಮತನವನ್ನು ನಮಗೆ ತಿಳಿಸುತ್ತವೆ.
ತಂದೆ ತಾಯಿಯ ಪ್ರೀತಿ ಮುಂದ ಎಲ್ಲವೂ ಶೂನ್ಯ.

2. ನೆಮ್ಮದಿ ಕಸಿದುಕೊಂಡ ಹಣ – Moral Short Stories

Moral Short Stories

ಒಂದಾನೊಂದು ಊರಿನಲ್ಲಿ ಒಬ್ಬ ಮನುಷ್ಯನಿದ್ದ, ಅವನ ಹೆಸರು ಮಲ್ಲಯ್ಯ. ಅವನು ಬಡವನಾಗಿದ್ದರೂ ಕೂಡಾ ತುಂಬಾ ಪ್ರಾಮಾಣಿಕನಾಗಿದ್ದನು ಮತ್ತು ಶಾಂತಿಯುತ ಜೀವನವನ್ನು ಸಾಗಿಸುತ್ತಿದ್ದನು.

ಅವನ ಮನೆಯಲ್ಲಿ ಯಾವುದೇ ರೀತಿಯ ಅಧಿಕ ಬೆಲೆಬಾಳುವ ವಸ್ತುಗಳಾಗಲಿ, ಆಸ್ತಿಗಳಾಗಲಿ ಇರಲಿಲ್ಲ, ಅದಕ್ಕಾಗಿ ಮಲ್ಲಯ್ಯನು ಜೀವನದಲ್ಲಿ ನೆಮ್ಮದಿಯಿಂದ ಜೀವಿಸುತ್ತಿದ್ದ.

ಒಂದು ದಿನ ಕಳ್ಳನು ಯಾರದೋ ಮನೆಯಲ್ಲಿ ಕಳ್ಳತನ ಮಾಡಿಕೊಂಡು ಬರುತ್ತಿರುವಾಗ ಜನರು ಅವನನ್ನು ಬೆನ್ನತ್ತಿದರು. ಕಳ್ಳನು ಜನರ ಕಣ್ಣು ತಪ್ಪಿಸಿಕೊಳ್ಳಲು ಮಲ್ಲಯ್ಯನ ಮನೆಯೊಳಕ್ಕೆ ನುಗ್ಗಿ ಅಡಗಿಕೊಂಡ. ಜನರೆಲ್ಲಾ ಅಲ್ಲಿಂದ ಹೋದ ಮೇಲೆ, ಕಳ್ಳನು ನಿಧಾನಕ್ಕೆ ಅಲ್ಲಿಂದ ಪರಾರಿಯಾದ.

ಮಲ್ಲಯ್ಯ ಬೆಳಿಗ್ಗೆ ಎದ್ದು ನೋಡಿದರೆ ಒಂದು ಮೂಟೆಯೊಂದು ಬಿದ್ದಿತ್ತು. ತಕ್ಷಣವೇ ಅದನ್ನು ಬಿಚ್ಚಿ ನೋಡಿದ. ಅದರ ತುಂಬಾ ಬಂಗಾರದ ಒಡವೆಗಳು ಮತ್ತು ನೋಟಿನ ಕಂತೆ ಇತ್ತು.

ಮಲ್ಲಯ್ಯನಿಗೆ ಆಶ್ಚರ್ಯವಾಯಿತು! “ಈ ಮೂಟೆ ಎಲ್ಲಿಂದ ಬಂತು ಮತ್ತು ಇಲ್ಲಿಗೆ ಹೇಗೆ ಬಂತು” ಎಂದು ಯೋಚಿಸುತ್ತಿರುವಾಗ ಊರಿನ ಜನರೆಲ್ಲಾ ಕಳ್ಳತನ‌ ವಿಷಯದ ಬಗ್ಗೆ ಚರ್ಚಿಸುತ್ತಿದ್ದರು.‌ ಅವರ ಪಿಸುಮಾತುಗಳು ಇವನ ಕಿವಿಗೆ ಬಿತ್ತು.

ಆವಾಗ ಮಲ್ಲಯ್ಯನಿಗೆ ಅರ್ಥವಾಯಿತು. ಊರಿನ ಜನರೆಲ್ಲಾ ಕಳ್ಳನನ್ನು ಬೆನ್ನತ್ತಿದಾಗ ತಪ್ಪಿಸಿಕೊಳ್ಳುವ ಅವಸರದಲ್ಲಿ ಮನೆಗೆ ಬಂದು, ಮೂಟೆ ಇಲ್ಲಿಯೇ ಬಿಟ್ಟು ಹೋಗಿದ್ದಾನೆ.

ಆ ಮೂಟೆ ತಗೊಂಡು ಮನೆ ಪೆಟ್ಟಿಗೆಯಲ್ಲಿ ಇಟ್ಟ. ರಾತ್ರಿ ಮಲಗುವ ಮುನ್ನ ಮಲ್ಲಯ್ಯ ಮನೆಯ ಎಲ್ಲಾ ಕಿಟಕಿ ಬಾಗಿಲುಗಳನ್ನು ಮುಚ್ಚಿದ. ಆತನಿಗೆ ನಿದ್ರೆ ಬರಲೇ ಇಲ್ಲ.

Read Also – ದುಷ್ಟರ ಸಹವಾಸ ಜೀವನ ವನವಾಸ

ಮೂಟೆಯನ್ನು ಒಮ್ಮೆ ಬಿಚ್ಚಿ ನೋಡಿದ. ಕಿಟಕಿ ಬಾಗಿಲುಗಳನ್ನು ತೆರೆದು ಹೊರಗೆ ನೋಡಿದ. ಯಾರಾದರೂ ಮೂಟೆ ಕದಿಯಲು ಬಂದ್ದಿದ್ದಾರೇನೋ ಅಂತ, ಮತ್ತೆ ಎಲ್ಲಾ ಕಿಟಕಿ ಬಾಗಿಲು ಮುಚ್ಚಿ ಮಲಗಲು ಹೋದ. ಆ ರಾತ್ರಿಯೆಲ್ಲಾ ನಿದ್ದೆ ಬರಲೇ ಇಲ್ಲ.

ಮಲ್ಲಯ್ಯ ಬೆಳಿಗ್ಗೆ ಎದ್ದು ಕಳ್ಳತನವಾದ ಮನೆಯನ್ನು ಪತ್ತೆ ಮಾಡಿ, ಆ ಮೂಟೆಯನ್ನು ಅವರಿಗೆ ಒಪ್ಪಿಸಿಕೊಟ್ಟ. ಆಗ ಆ ಮೂಟೆಯ ಯಜಮಾನನು “ಈ ಮೂಟೆ ನಿನ್ನಲ್ಲಿಗೆ ‌ಹೇಗೆ ಬಂತು” ಎಂದು ಕೇಳಿದ.

ಅದಕ್ಕೆ “ಮಲ್ಲಯ್ಯ ಒಬ್ಬ ಕಳ್ಳ ತಪ್ಪಿಸಿಕೊಳ್ಳುವ ಅವಸರದಲ್ಲಿ ನನ್ನ ಮನೆಯಲ್ಲಿ ಬಿಟ್ಟು ‌ಹೋಗಿದ್ದಾನೆ” ಎಂದು ಉತ್ತರಕೊಟ್ಟನು. ಆ ಯಜಮಾನನು “ಈ ಮೂಟೆ ನನಗೆ ತಂದೊಪ್ಪಿಸಲು ಕಾರಣವೇನು. ನೀನೇ ಇಟ್ಟುಕೊಳ್ಳಬಹುದಾಗಿತಲ್ವ” ಎಂದು ಕೇಳಿದನು.

ಅದಕ್ಕೆ ಮಲ್ಲಯ್ಯನು “ಈ ಮೂಟೆ ನನ್ನ ನಿದ್ದೆಯನ್ನು ಕೆಡಿಸಿದ್ದಲ್ಲದೆ ನನ್ನ ಶಾಂತಿಯನ್ನು ಹದಗೆಡಿಸಿತು” ಎಂದು ಉತ್ತರಿಸಿದ.

Moral Short Stories

ಅಲ್ಲಿಂದ ಹೊರಟು ಹೋದ. ಮೂಟೆಯ ಯಜಮಾನನು ಅವನ ಮಾತುಗಳಿಂದ ಮಂಕಾದ. ಮತ್ತು ನೆಮ್ಮದಿಯ ಜೀವನ ನಡೆಸಲು ದುಡ್ಡಿನ ಅವಶ್ಯಕತೆ ಇಲ್ಲವೆಂದು ಅರಿತುಕೊಂಡ.

ಕಥೆಯಲ್ಲಿನ ನೀತಿ / Moral of this Story:
ಹಣದಿಂದ ನೆಮ್ಮದಿಯನ್ನು ಪಡೆಯಲು ಸಾಧ್ಯವಿಲ್ಲ. ಇದ್ದುದರಲ್ಲೇ ತೃಪ್ತರಾಗಿರಬೇಕು.
ಹಣದಿಂದ ಮಾತ್ರೆ ಕೊಳ್ಳಬಹುದು ಆದರೆ ಆರೋಗ್ಯವನ್ನಲ್ಲ ಎಂಬುದು ನಾವು ತಿಳಿದುಕೊಳ್ಳಬೇಕಾದೆ.

Follow Our Facebook Page Moral Storys



Spread the love

Leave a Reply

Your email address will not be published. Required fields are marked *