Hi Everyone, Welcome to Moral Storys – Moral of the Stories
1. ದುರಾಸೆ ವ್ಯಾಪಾರಿ – Moral of the Stories
ಒಂದಾನೊಂದು ಪುಟ್ಟ ಗ್ರಾಮದಲ್ಲಿ ಒಬ್ಬ ಹಾಲು ವ್ಯಾಪಾರಿ ಇದ್ದನು. ಅವನು ಊರಿನ ಎಲ್ಲಾ ಮನೆ ಮನೆಗೆ ಹಾಲು ಮಾರುತ್ತಾ ಜೀವನ ಸಾಗಿಸುತ್ತಿದ್ದನು. ಹಾಲು ಮಾರಾಟವೇ ಅವನ ಜೀವನಕ್ಕೆ ಆಸರೆಯಾಗಿತ್ತು.
ಹಾಲು ಮಾರಿದ ಹಣ ಜೀವನಕ್ಕೆ ಸಾಕಾಗುತ್ತಿರಲಿಲ್ಲ. ಅದಕ್ಕಾಗಿ ಅವನು ಹಾಲಿನಲ್ಲಿ ಸ್ವಲ್ಪ ನೀರು ಮಿಕ್ಸ್ ಮಾಡಿ ಮನೆ ಮನೆಗೆ ಹಾಕಿದನು. ಹಾಲಿನ ಪ್ರಮಾಣ ಜಾಸ್ತಿ ಆಯಿತು. ಹಾಗಾಗಿ ಜಾಸ್ತಿ ದುಡ್ಡು ಬಂತು.
ಅವನು ಅಷ್ಟಕ್ಕೇ ಸುಮ್ಮನಾಗಲಿಲ್ಲ. ಸ್ವಲ್ಪ ಹಾಲಿನಲ್ಲಿ ಜಾಸ್ತಿ ನೀರು ಹಾಕಿ ಮಾರಲು ಶುರು ಮಾಡಿದ. ಇದರಿಂದ ಹಾಲಿನ ಗುಣಮಟ್ಟ ಮತ್ತು ಸಾಂದ್ರತೆ ಕಡಿಮೆಯಾಯಿತು.
ಒಂದು ಮುಂಜಾನೆ ವೇಳೆ ಇಬ್ಬರು ವ್ಯಕ್ತಿಗಳು ವ್ಯಾಪಾರಿ ಬಳಿಗೆ ಹಾಲಿಗೆ ಬಂದರು. ಅವನು ಹಿಂದಿನಂತೆ ಸ್ವಲ್ಪ ಹಾಲಿಗೆ ಜಾಸ್ತಿ ನೀರು ಹಾಕುತ್ತಿದ್ದನು. ಹಾಲಿಗೆ ನೀರು ಮಿಕ್ಸ್ ಮಾಡುವುದು ನೋಡಿದರು.
ನಮ್ಮನ್ನು ಮೋಸ ಮಾಡುತ್ತಿದ್ದಾನೆಂದು ಮೆತ್ತಗೆ ಹೊಡೆದರು. ಈ ವಿಷಯ ಇಡೀ ಊರಿಗೆ ಗೊತ್ತಾಗಿ ಅವನ ಹಾಲನ್ನು ಖರೀದಿಸಲು ಹಿಂಜರಿದರು.
Read Also – ಅತಿಯಾಸೆ ಗತಿ ಕೆಡಿಸಿತು
ಅವನ ಜೀವನಕ್ಕೆ ಆಧಾರವಾದ ಒಂದೇ ಒಂದು ಹಾಲಿನ ವ್ಯಾಪಾರವು ಕೂಡ ತನ್ನ ಅತಿಯಾಸೆಯಿಂದ ಕಳೆದುಕೊಂಡನು. ಊರಿನ ಜನ ನಾನು ಬೇರೆ ಯಾವ ವ್ಯಾಪಾರ ಮಾಡಿದರೂ ನಂಬಲ್ಲ. ಒಂದು ತಪ್ಪಿನಿಂದ ಎಲ್ಲವನ್ನು ಕಳೆದುಕೊಂಡೆ ಎಂದು ಚಿಂತಿಸಿದನು.
ಕಥೆಯಲ್ಲಿನ ನೀತಿ / Moral of the Stories:
ಮನುಷ್ಯನಿಗೆ ಸಹಜವಾಗಿ ಆಸೆ ಇರುತ್ತದೆ. ಆದರೆ ಅತಿಯಾದ ಆಸೆ ಇರಬಾರದು. ಅದು ದುರಾಸೆಯಾಗುತ್ತದೆ. ಬೇಗ ಶ್ರೀಮಂತನಾಗಬೇಕು, ದಿಢೀರನೆ ಕೊಟ್ಯಾಧೀಶನಾಗಬೇಕು ಎನ್ನುವ ದುರಾಸೆ ಜೀವನಕ್ಕೆ ಹಾನಿಕಾರಕ. ಇನ್ನು ಜಾಸ್ತಿ ಗಳಿಸಬೇಕು ಎನ್ನುವ ದಾರಿ ನಿರೀಕ್ಷಿಸದ ಹಾನಿ ಉಂಟು ಮಾಡುತ್ತದೆ.
2. ಕತ್ತೆ ಮತ್ತು ಹುಲಿ – Moral of the Stories
ಒಂದು ವಿಶಾಲವಾದ ಕಾಡಿನಲ್ಲಿ ಕತ್ತೆ ತನ್ನ ಸಹಚರರ ಜೊತೆ ವಾಸವಾಗಿತ್ತು. ಆ ಕಾಡಿಗೆ ಹುಲಿ ರಾಜನಾಗಿತ್ತು. ಅದರ ದಾಳಿಗೆ ಕಾಡಿನ ಪ್ರಾಣಿಗಳೆಲ್ಲಾ ಸಣ್ಣ ಆಗುತ್ತಿದ್ದವು. ಎಲ್ಲಾ ಪ್ರಾಣಿಗಳು ದಿನಾಲೂ ಭಯದಿಂದ ಬದುಕುತ್ತಿದ್ದವು.
ಅದೇ ವರ್ಷವೇ ಕಾಡಿನಲ್ಲಿ ಭೀಕರ ಬರಗಾಲ ಉಂಟಾಯಿತು. ಕತ್ತೆಗಳು ಆಹಾರಕ್ಕಾಗಿ ಕಾಡಿನಲ್ಲಿ ಹುಡುಕುತ್ತಾ ಇದ್ದವು. ಅದೆ ಸಮಯದಲ್ಲಿ ಕಾಡಿನ ರಾಜ ಹುಲಿ ಆಹಾರಕ್ಕಾಗಿ ಹೊರಗೆ ಬಂದಿತು. ಕತ್ತೆಗಳು ಹುಲಿ ಕಣ್ಣಿಗೆ ಬಿದ್ದವು. ಹುಲಿ ಕತ್ತೆಗಳನ್ನು ಹಿಡಿಯಲು ಅಡಗಿಕೊಂಡು ಹತ್ತಿರ ಬಂದಾಗ ಅವುಗಳ ಮೇಲೆ ದಾಳಿ ಮಾಡಿತು.
ಕತ್ತೆಗಳು ದಿಕ್ಕು ತಪ್ಪಿ ಓಡಲು ಶುರು ಮಾಡಿದವು. ಹುಲಿ ಒಂದು ಕತ್ತೆಯ ಹಿಂದೆ ಓಡ್ತಾ ಇತ್ತು. ಕತ್ತೆ ಪ್ರಾಣ ಭಯದಿಂದ ಒಂದೇ ರೀತಿ ಓಡುತ್ತಲೇ ಇತ್ತು. ಕೊನೆಗೆ ಕತ್ತೆ ಒಂದು ಎತ್ತರವಾದ ಬೆಟ್ಟ ಹತ್ತಿತು. ಕತ್ತೆ ಬೇರೆ ದಾರಿ ಕಾಣದೆ ಶರಣಾಗಲು ನಿರ್ಧರಿಸಿತು.
Moral of the Stories
ಆದರೂ ಕೂಡ ಇನ್ನೊಮ್ಮೆ ಪಾರಾಗಲು ಪ್ರಯತ್ನಿಸೋಣ ಅಂದುಕೊಂಡಿತು. ಕತ್ತೆ, ಹುಲಿರಾಯ ನಾನಿನ್ನು ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ನಿನಗೆ ಬೆನ್ನು ಮಾಡಿ ಇಲ್ಲೆ ನಿಂತಿರುತ್ತೀನಿ ನೀನು ಬಾಯಿದೆರೆದು ನನ್ನ ಮೇಲೆ ಹಾರಿ ತಿಂದು ಬಿಡು ಎಂದಿತು.
ಹುಲಿ ಬಾಯಿ ತೆರೆದು ಜಿಗಿಯಲು ಕತ್ತೆ ತನ್ನ ಎರಡು ಕಾಲಿನಿಂದ ಹುಲಿಯ ಮುಖಕ್ಕೆ ಒದೆಯಿತು. ಹುಲಿಯು ಬೆಟ್ಟದಿಂದ ಕೆಳಗೆ ಜಾರಿ ಬಿದ್ದು ಸತ್ತಿತು.
ಕಥೆಯಲ್ಲಿನ ನೀತಿ / Moral of the Stories:
ಸೋಲುತ್ತೇನೆಂದು ಯಾವತ್ತು ನಿಂತು ಹೋಗಬಾರದು. ಕೊನೆಯ ವರೆಗೂ ಹೋರಾಡಬೇಕು. ನಮ್ಮತನವನ್ನು ನಾವು ಎಂದಿಗೂ ಬಿಟ್ಟುಕೊಡಬಾರದು.
ಅಪಾಯ ಎದುರಾದಾಗ ಉಪಾಯದಿಂದ ಪಾರಾಗಬೇಕು.
3. ಬಚ್ಚಿಟ್ಟಿದ್ದು ಕೊಳೆಯುತ್ತದೆ ಬಿಚ್ಚಿಟ್ಟಿದ್ದು ಹೊಳೆಯುತ್ತದೆ
ಒಂದು ಹಳ್ಳಿಯಲ್ಲಿ ಇಬ್ಬರು ಮಿತ್ರರು ಇದ್ದರು. ಅವರ ಹೆಸರು ಭೀಮ ಮತ್ತು ಸೋಮ. ಇಬ್ಬರ ಮನೆಗಳು ಪಕ್ಕ ಪಕ್ಕದಲ್ಲೇ ಇದ್ದವು. ಇಬ್ಬರು ಜೊತೆ ಜೊತೆಯಾಗಿ ಆಟ ಆಡುತ್ತಿದ್ದರು.
ಒಂದು ದಿವಸ ಭೀಮನು ತನ್ನ ತಂದೆ ತಾಯಿ ಜೊತೆ ಜಾತ್ರೆಗೆ ಹೋದನು. ಜಾತ್ರೆ ಮುಗಿಸಿಕೊಂಡು ಸಾಯಂಕಾಲ ಮನೆಗೆ ಮನೆಗೆ ಬಂದರು. ಭೀಮನು ತಾವು ತಂದಿದ್ದ ಬೆಂಡು ಬೆಟಾಸು, ಜಿಲೇಬಿಯನ್ನು ತನ್ನ ಸ್ನೇಹಿತನಿಗೂ ಕೊಟ್ಟನು.
ಭೀಮನು ಏನು ತಂದರೂ ಅದನ್ನು ಸೋಮನಿಗೂ ಕೊಡುತ್ತಿದ್ದನು. ಅವನ ಜೊತೆ ಎಲ್ಲವನ್ನು ಹಂಚಿಕೊಳ್ಳುತ್ತಿದ್ದರು. ಹೆಚ್ಚು ಹೃದಯ ವೈಶಾಲ್ಯತೆಯನ್ನು ಹೊಂದಿದ್ದನು.
ಆದರೆ ಸೋಮನು ಸ್ವಲ್ಪ ವಿಭಿನ್ನವಾಗಿದ್ದನು. ಸೋಮನ ತಂದೆ ತಾಯಿ ಸಂತೆಗೆ ಹೋಗಿ ಮಾವಿನ ಹಣ್ಣು ಮತ್ತು ಕಿತ್ತಳೆ ಹಣ್ಣುಗಳನ್ನು ತಂದರು. ಮಾವಿನ ಹಣ್ಣು, ಕಿತ್ತಳೆ ಹಣ್ಣುಗಳನ್ನು ಹೊಟ್ಟೆ ತುಂಬಾ ತಿಂದನು. ಉಳಿದವುಗಳನ್ನು ನಾಳೆ ತಿನ್ನೋಣ ಎಂದು ಒಂದು ಡಬ್ಬಿಯಲ್ಲಿ ಇಟ್ಟನು.
Read Also – ಕಂದನ ಮೇಲಿನ ತಂದೆಯ ಪ್ರೀತಿ
ಎರಡು ದಿನ ಆದ ಮೇಲೆ ಮನೆಯಲ್ಲಿ ಕೆಟ್ಟ ನಾರುವ ವಾಸನೆ ಬಂತು. ಮನೆಯಲ್ಲಿ ವಾಸನೆಯನ್ನು ಪತ್ತೆ ಹಚ್ಚಲು ಎಲ್ಲಾ ಕಡೆ ಹುಡುಕಾಡಿದರು. ಕೊನೆಗೆ ಸೋಮನ ತಂದೆ ಒಂದು ಡಬ್ಬಿಯನ್ನು ತೆಗೆದು ನೋಡಿದ. ಡಬ್ಬಿಯಲ್ಲಿ ಮಾವಿನ ಮತ್ತು ಕಿತ್ತಳೆ ಹಣ್ಣುಗಳು ಕೊಳೆತು ನಾರುತ್ತಿದ್ದವು.
ನಾಳೆ ತಿನ್ನೋಣ ಎಂದು ಇಟ್ಟಿದ್ದ ಹಣ್ಣುಗಳನ್ನು ಸೋಮು ಮರೆತೇ ಬಿಟ್ಟಿದ್ದ. ದುಡ್ಡು ಕೊಟ್ಟು ತಂದ ಹಣ್ಣುಗಳು ಸುಮ್ಮನೆ ಕೊಳೆತು ಹೋದವಲ್ಲ. ಸ್ನೇಹಿತನಿಗಾದರೂ ಕೊಟ್ಟಿದ್ರೆ ಚೆನ್ನಾಗಿತ್ತು ಅಂದುಕೊಂಡು ಪೇಚಾಡಿದನು.
ಕಥೆಯಲ್ಲಿನ ನೀತಿ / Moral of the Stories:
ಬಚ್ಚಿಟ್ಟಿದ್ದು ಕೊಳೆಯುತ್ತದೆ ಬಿಚ್ಚಿಟ್ಟಿದ್ದು ಹೊಳೆಯುತ್ತದೆ.
ಹಂಚಿಕೊಂಡು ತಿಂದರೆ ಮನಸಿಗೂ ನೆಮ್ಮದಿ ಇರುತ್ತೆ. ನಾನೊಬ್ಬನೇ ತಿನ್ನೋಣ ಎಂದು ಮುಚ್ಚಿಟ್ಟರೆ ಮೇಲಿನ ಕಥೆಯಂತೆ ಕೊಳೆತು ನಾರುತ್ತದೆ.
4. ಬೆಳ್ಳಿ ಲೋಟ – Moral of the Stories
ಒಂದು ವನದಲ್ಲಿ ಮೂರು ಕೋತಿಗಳು ಸುಮಾರು ವರ್ಷಗಳಿಂದ ವಾಸವಾಗಿದ್ದವು. ಆ ವನದಲ್ಲಿರುವ ಹಣ್ಣುಹಂಪಲು ತಿನ್ನುತ್ತಾ ಮರದಿಂದ ಮರಕ್ಕೆ ಜಿಗಿಯುತ್ತಾ ಆನಂದವಾಗಿದ್ದವು.
ಅದೇ ವನದಲ್ಲಿ ಕಟ್ಟಿಗೆ ಕಡಿಯುವವನು ಬಂದು ಬಂಡಿ ಕಟ್ಟಿಗೆಗಳನ್ನು ಕಡಿದು ಮಾರುತ್ತಿದ್ದನು. ಅವನು ಆರ್ಥಿಕವಾಗಿ ಬಡವನಾಗಿದ್ದನು. ಕಟ್ಟಿಗೆ ಕಡಿದು ಮಾರಿ ಬಂದ ಹಣದಿಂದಲೇ ತನ್ನ ಸಂಸಾರ ನಡೆಸಬೇಕಾಗಿತ್ತು.
ಪ್ರತಿ ದಿನ ಇದೆ ಕೆಲಸವನ್ನು ಮಾಡುತ್ತಿದ್ದನು.
ಬೆಳಿಗ್ಗೆ ಬರುವಾಗ ಮನೆಯಿಂದ ಮಧ್ಯಾಹ್ನ ಊಟಕ್ಕೆ ಬುತ್ತಿ ತರುತ್ತಿದ್ದನು. ಅವನ ಬುತ್ತಿಯಲ್ಲಿ ಸ್ವಲ್ಪ ಊಟವನ್ನು ಕೋತಿಗಳಿಗೂ ನೀಡುತ್ತಿದ್ದನು.
Moral of the Stories
ಒಂದು ದಿವಸ ಕೋತಿಗೆ ಬೆಳ್ಳಿ ಲೋಟ ಸಿಕ್ಕಿತು. ಅದನ್ನು ವಿಚಿತ್ರವಾಗಿ ನೋಡಿತು. ಒಂದು ವಾರ ಅದನ್ನು ತನ್ನ ಕೈಯಲ್ಲೇ ಇಟ್ಟುಕೊಂಡು ಓಡಾಡಿತು. ಕೊನೆಗೆ ಇದು ಬೆಳೆಬಾಳುವ ವಸ್ತುವು ಆಗಿರಬಹುದು ಎಂದು ತಿಳಿದುಕೊಂಡವು.
ಕೋತಿಗಳು ಇದು ನಮ್ಮತ್ರ ಇಟ್ಟುಕೊಂಡು ಏನು ಪ್ರಯೋಜನವಿಲ್ಲ, ಯಾರಿಗಾದರೂ ಕೊಟ್ರೆ ಅವರಿಗೆ ಆರ್ಥಿಕವಾಗಿ ಸಹಾಯ ಮಾಡಿದಂತಾಗುತ್ತದೆ ಎಂದು ಮಾತಾಡಿಕೊಂಡವು. ಕೋತಿಗಳಿಗೆ ಕಟ್ಟಿಗೆ ಕಡಿಯುವವ ನೆನಪಾಗಿ ಅವನಿಗೆ ಆ ಬೆಳ್ಳಿ ಲೋಟ ಕೊಟ್ಟವು.
ಕಥೆಯಲ್ಲಿನ ನೀತಿ / Moral of the Stories:
ಕಥೆಯಲ್ಲಿನ ನೀತಿ ಏನೆಂದರೆ ನಮಗೆ ಅವಶ್ಯಕತೆ ಇಲ್ಲದನ್ನು ಇಟ್ಟುಕೊಳ್ಳಬಾರದು. ಅವಶ್ಯಕತೆ ಇದ್ದವರಿಗೆ ಕೊಟ್ಟರೆ ಅವರ ಬದುಕಿಗೆ ಆಸರಾಗಬಹುದು.
ಕಷ್ಟ ಪಟ್ಟು ದುಡಿದರೆ ಎಲ್ಲವೂ ತಾನಾಗಿಯೇ ಬರುತ್ತದೆ.
5. ಐಕ್ಯತೆಯಲ್ಲಿ ಬಲವಿದೆ – Moral of the Stories
ಒಂದು ಊರಿನಲ್ಲಿ ಏಳು ಜನ ಸ್ನೇಹಿತರು ಇದ್ದರು. ಯಾವಾಗಲೂ ಜೊತೆಯಾಗಿ ಇರುತ್ತಿದ್ದರು. ಅವರೆಲ್ಲ ಒಂದೆ ತರಗತಿಯಲ್ಲಿ ಓದುತ್ತಿದ್ದರು.
ಊರಿನಲ್ಲಿ ಶಾಲೆಯೊಂದು ಇತ್ತು. ಜುಲೈ ಮತ್ತು ಆಗಸ್ಟ್ ತಿಂಗಳಲ್ಲಿ ಮಕ್ಕಳಿಗೆ ತಾಲೂಕು ಮಟ್ಟದ ಸ್ಪರ್ಧೆಗಳು ಇದ್ದವು. ಹಾಗಾಗಿ ಶಾಲೆಯ ದೈಹಿಕ ಶಿಕ್ಷಕರು ಏಳು ಜನರಿಗೆ ಕಬಡ್ಡಿ ಪ್ರಾಕ್ಟೀಸ್ ಮಾಡಿಸುತ್ತಿದ್ದರು.
ಪ್ರತಿ ದಿನ ಸಾಯಂಕಾಲ ವೇಳೆ ಆಟದ ಮೈದಾನದಲ್ಲಿ ಪ್ರಾಕ್ಟೀಸ್ ಮಾಡಿಸುತ್ತಿದ್ದರು. ಒಂದು ದಿವಸ ಯಾವುದೋ ಒಂದು ಕಾರಣಕ್ಕಾಗಿ ಅವರ ಮಧ್ಯೆ ವೈಮನಸ್ಸು ಉಂಟಾಯಿತು. ಆಗಸ್ಟ್ ತಿಂಗಳ ಮೊದಲ ವಾರ ತಾಲೂಕು ಮಟ್ಟದ ಸ್ಪರ್ಧೆಗಳು ಆರಂಭವಾದವು.
ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ತಾಲೂಕಿನ ಎಲ್ಲಾ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಕ್ರೀಡಾಕೂಟದಲ್ಲಿ ಇವರ ಸರದಿ ಬಂತು ಏಳು ಜನರಲ್ಲಿ ವೈಮನಸ್ಸು ಉಂಟಾಗಿದ್ದರಿಂದ ಸರಿಯಾಗಿ ಆಡಲಿಲ್ಲ.
ಮೊದಲ ಸುತ್ತು ಮುಗಿಯಿತು ಈ ಟೀಮಿಗೆ ಒಂದು ಅಂಕ ನೂ ಬರಲಿಲ್ಲ. ದೈಹಿಕ ಶಿಕ್ಷಕರ ಬಂದು ಒಗ್ಗಟ್ಟಿನ ಬಗ್ಗೆ ಒಂದು ಸೂತ್ರವನ್ನು ಹೇಳಿದರು. ಏಳು ಸ್ನೇಹಿತರಿಗೂ ಒಂದೊಂದು ಕಡ್ಡಿ ಪುಲ್ಲೆಯನ್ನು ಕೊಟ್ಟು ಮುರಿಯಲು ಹೇಳಿದರು.
Read Also – ಒಗ್ಗಟ್ಟಿನಲ್ಲಿ ಬಲವಿದೆ.
ಏಳು ಜನ ಸ್ನೇಹಿತರು ಸುಲಭವಾಗಿ ಬೆರಳುಗಳಿಂದಲೇ ಮುರಿದು ಬಿಟ್ಟರು. ಮೇಷ್ಟ್ರು ಕಟ್ಟಿಗೆ ಪುಲ್ಲೆಗಳ ಗಂಟನ್ನು ಕೊಟ್ಟ ಮುರಿಯಲು ಹೇಳಿದರು. ಅವರೆಲ್ಲರೂ ಬಲವಾಗಿ ಮುರಿಯಲು ಪ್ರಯತ್ನಿಸಿದರು. ಆದರೆ ಅದನ್ನು ಮುರಿಯಲು ಯಾರಿಂದಲೂ ಆಗಲಿಲ್ಲ.
ಮೇಷ್ಟ್ರು, ನೀವು ಕೂಡ ಹೀಗೆಯೇ ಬೇರೆ ಬೇರೆಯಾಗಿದ್ದರೆ ಇತರರು ನಿಮ್ಮನ್ನು ಸುಲಭವಾಗಿ ಸೋಲಿಸುತ್ತಾರೆ. ಅದೇ ನೀವೆಲ್ಲ ಒಗ್ಗಾಟ್ಟಾಗಿ ಒಂದೆಯಾಗಿದ್ದರೆ ನಿಮ್ಮನ್ನು ಯಾರು ಸೋಲಿಸಲಾರರು. ಏಕೆಂದರೆ ಒಗ್ಗಟ್ಟಿನಲ್ಲಿ ಶಕ್ತಿಯಿದೆ ಎಂದು ಅವರನ್ನು ಹುರಿದುಂಬಿಸಿದನು.
ಕಬಡ್ಡಿ ಎರಡನೇ ಸುತ್ತಿನಲ್ಲಿ ಎಲ್ಲಾರು ಏಕಮನಸ್ಸಿನಿಂದ ಒಗ್ಗಟ್ಟಾಗಿ ಆಡಿ ಕೊನೆಗೆ ಗೆದ್ದರು.
ಕಥೆಯಲ್ಲಿನ ನೀತಿ / Moral of the Stories:
ಏಕತೆಯಲ್ಲಿ ಬಲವಿದೆ. ಒಬ್ಬನೇ ಮಾಡುವ ಕೆಲಸಕ್ಕೂ ಒಗ್ಗಟ್ಟಾಗಿ ಮಾಡುವ ಕೆಲಸಕ್ಕೂ ತುಂಬಾ ವ್ಯತ್ಯಾಸವಿದೆ.
ಒಬ್ಬನೇ ಮಾಡವ ಕೆಲಸಕ್ಕಿಂತ ಎಲ್ಲರೂ ಒಟ್ಟಾಗಿ ಮಾಡುವ ಕೆಲಸ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ.
6. ಬದುಕಿನಲ್ಲಿ ಕಿವುಡರಾಗಬೇಕು – Moral of the Stories
ಒಂದು ದಿನ ಕಪ್ಪೆಗಳು ಎಲ್ಲಾ ಸೇರಿ ನೇರವಾದ ಬೆಟ್ಟವನ್ನು ಹತ್ತಲು ನಿರ್ಧರಿಸಿದವು. ಕೆಲವು ಕಪ್ಪೆಗಳು ಆರಂಭದಲ್ಲೇ ನಮ್ಮಿಂದ ಆಗಲ್ಲ ಎಂದು ಕೈಬಿಟ್ಟವು. ಇನ್ನು ಕೆಲವು ಕಪ್ಪೆಗಳು ಏರುತ್ತಲೇ ಜಾರಿ ಬಿದ್ದವು.
ಇನ್ನು ಕೆಲವು ಕಪ್ಪೆಗಳು ಅರ್ಧ ಬೆಟ್ಟಕ್ಕೆ ಹತ್ತಿ ಕೆಳಬಿದ್ದವು. ಹೀಗೆ ಎಲ್ಲಾ ಕಪ್ಪೆಗಳು ಬೆಟ್ಟದ ಅರ್ಧ ಭಾಗಕ್ಕೆ ಹೋಗಿ ಸೋತವು. ಆದರೆ ಒಂದೇ ಒಂದು ಕಪ್ಪೆ ಮಾತ್ರ ನಿಧಾನವಾಗಿ ಬೆಟ್ಟ ಹತ್ತುತ್ತಾ ಇತ್ತು.
ಉಳಿದ ಕಪ್ಪೆಗಳೆಲ್ಲಾ ನಿನ್ ಕೈಲೇ ಆಗಲ್ಲ ಅರ್ಧಕ್ಕೆ ಬಿಟ್ಟು ಬಂದು ಬಿಡು ಎಂದವು. ಅದು ಮಾತ್ರ ತನ್ನ ಪಾಡಿಗೆ ತಾನು ಹತ್ತುತ್ತಲೇ ಇತ್ತು. ಉಳಿದೆಲ್ಲವೂ ಅಲ್ಲಿಯವರೆಗೆ ಹತ್ತಿದ್ದಿ ಇನ್ನು ಮೇಲೆ ಹತ್ತಲು ಆಗುವುದಿಲ್ಲ ಬಂದುಬಿಡು ಎಂದವು. ಇನ್ನು ಕೆಲವು ಕಪ್ಪೆಗಳು ಹತ್ತುವುದನ್ನು ನೋಡಿ ಗೇಲಿ ಮಾಡುತ್ತಿದ್ದವು.
Moral of the Stories
ಅದು ಯಾರ ಮಾತಿಗೂ ತಿರುಗಿ ನೋಡದೆ ಕೊನೆಗೆ ಬೆಟ್ಟದ ತುದಿಯಲ್ಲಿ ಏರಿ ನಿಂತಿತು. ಕೊನೆಗೆ ಇಳಿದು ಬಂದ ಮೇಲೆ ಎಲ್ಲಾ ಕಪ್ಪೆಗಳು ಅದನ್ನು ಈ ರೀತಿ ಕೇಳಿದವು. ನೀನು ಬೆಟ್ಟವನ್ನು ಕೊನೆಯ ವರೆಗೂ ಹೇಗೆ ಹತ್ತಲು ಸಾಧ್ಯವಾಯಿತು. ಮತ್ತು ನಾವೆಲ್ಲ ಬೇಡ ಬಂದುಬಿಡು ನಿನ್ ಕೈಲೇ ಆಗಲ್ಲ ಅಂದ್ರು ಕೂಡ ನೀನು ಹೇಗೆ ಹತ್ತಿದಿ ಎಂದು ಕೇಳಿದವು.
ಆಗ ಆ ಕಪ್ಪೆ ಈ ರೀತಿಯಾಗಿ ಉತ್ತರ ನೀಡಿತು. ನಿವೆಲ್ಲಾ ಏನ್ ಜೋರಾಗಿ ಕೂಗಿದಿರಲ್ಲಾ ನನಗೆ ಹತ್ತು ಇನ್ನೂ ಮೇಲೆ ಹತ್ತು ಎಂದು ಪ್ರೋತ್ಸಾಹ ನೀಡಿದಂತಾಯಿತು. ಹಾಗಾಗಿ ನನಗೆ ಬೆಟ್ಟ ಹತ್ತಲು ಸಾಧ್ಯವಾಯಿತು ಎಂದಿತು.
ಕಥೆಯಲ್ಲಿನ ನೀತಿ / Moral of the Stories:
ನಾವು ಬದುಕಿನಲ್ಲಿ ಏನಾದರೂ ಸಾಧಿಸಬೇಕಾದರೆ ಕಪ್ಪೆಯಂತೆ ಕಿವುಡರಾಗಿರಬೇಕು. ಹಾಗಿದ್ದರೆ ಮಾತ್ರ ನಮ್ಮ ಗುರಿಯನ್ನು ತಲುಪಲು ಸಾಧ್ಯ. ಪ್ರತಿಯೊಂದು ಹಂತದಲ್ಲೂ ಆಡಿಕೊಳ್ಳುವವರು ಇದ್ದೆ ಇರುತ್ತಾರೆ. ಅವರ ಮಾತಿಗೆ ಕಿವಿಗೊಡದೆ ನಮ್ಮ ಗುರಿಯತ್ತ ಸಾಗಬೇಕು.
Moral of the Stories
Moral Storys
Follow Our Facebook Page – Moral Storys
ವಿ. ಸೂಚನೆ – ಮೇಲಿನ ಕಥೆಗಳಲ್ಲಿ ತಪ್ಪು / ದೋಷಗಳು ಕಂಡುಬಂದರೆ ದಯಮಾಡಿ ಕಾಮೆಂಟ್ ಮೂಲಕ ತಿಳಿಸಿ. ಪುನಃ ಬೇಟಿ ಧನ್ಯವಾದಗಳು.