Kathegalu in Kannada

Kathegalu in Kannada

Moral Stories
Spread the love

Hi Everyone, Welcome to Moral Storys – Kathegalu in Kannada

ಉಪಾಯದ ಕಥೆಗಳು – Kathegalu in Kannada

ರಾಜು ಮತ್ತು ರಹೀಮ್ ಎಂಬ ಇಬ್ಬರು ಗೆಳೆಯರಿದ್ದರು. ಅವರಿಬ್ಬರು ಬುದ್ಧಿವಂತರು ಮತ್ತು ಶಕ್ತಿಶಾಲಿಯಾಗಿದ್ದರು. ಊರಿನಲ್ಲಿ ಇದ್ದು ಇದ್ದು ಜೀವನ ಬೇಸರಗೊಂಡಿತು.

ಅದಕ್ಕಾಗಿ ಆ ಬೇಸರ ಕಳೆಯಲು ಊರೂರಿಗೆ ಪಯಣ ಬೆಳೆಸಿದರು. ಒಂದೂರಿಗೆ ಹೋದಾಗ ತುಂಬಾ ಹಸಿವೆಯಾಯಿತು. ಇಬ್ಬರು ಹೋಟೆಲ್ ಗೆ ಹೋದರು.
ಹೋಟೇಲ್ ನ ಮುಂದೆ ಒಂದು ಬೋರ್ಡ್ ನ ಮೇಲೆ ‘10 ರೂ. ಚಿಲ್ಲರೆ ತಂದರೆ ಒಂದು ಊಟಕ್ಕೆ ಮತ್ತೊಂದು ಊಟ ಉಚಿತ’ ಎಂದು ಬರೆದಿತ್ತು.

ಇಬ್ಬರು ದೇವಸ್ಥಾನ ಮಂದೆ ಕೂತಿರುವ ಭಿಕ್ಷುಕರ ಬಳಿಗೆ ಹೊಗಿ, ತಮ್ಮಲ್ಲಿರುವ ನೋಟು ಕೊಟ್ಟು ಚಿಲ್ಲರೆ ತೆಗೆದುಕೊಂಡರು. ಚಿಲ್ಲರೆ ತೆಗೆದುಕೊಂಡು ಮತ್ತೆ ಹೋಟೇಲ್ ಗೆ ಹೋದರು.

ಹೋಟೇಲ್ ನಲ್ಲಿ ತಲಾ ಹತ್ತುತ್ತು ರೂಪಾಯಿ ಚಿಲ್ಲರೆ ಕೊಟ್ಟು,  ಇಬ್ಬರು ಎರಡೆರಡು ಪ್ಲೇಟ್ ಊಟ ತೆಗೆದುಕೊಂಡರು. ರಾಜು ಮತ್ತು ರಹೀಮ್ ಇಬ್ಬರು ಒಂದೊಂದು ಊಟ ತಿಂದು. ಮಿಕ್ಕಿರುವ ಎರಡು ಊಟ ತಿರುಗಿ ಹೋಟೆಲ್ ಗೆ ಕೊಟ್ಟು 20 ರೂಪಾಯಿ ನೋಟು ತೆಗೆದುಕೊಂಡರು.

Kathegalu in Kannada

ಅಲ್ಲಿಂದ ಮತ್ತೊಂದು ಊರಿಗೆ ಪಯಣ ಬೆಳೆಸಿದರು. ಎರಡು ಊರಿನ ಮಧ್ಯೆ ಒಂದು ಕಾಡು ಇತ್ತು. ಆ ಕಾಡಿನ ಮೂಲಕವೇ ಮುಂದಿನ ಊರಿಗೆ ಹಾದು ಹೋಗಬೇಕಿತ್ತು.

ಇಬ್ಬರು ಕಾಡಿನಲ್ಲಿ ಹೋಗುತ್ತಾ ಇದ್ದರು. ಆ ಕಾಡಿನಲ್ಲಿ ಒಂದು ಕೊಬ್ಬಿದ ತೋಳವೊಂದಿತ್ತು. ತೋಳ ದಿನಾಲೂ ಆಹಾರಕ್ಕಾಗಿ ಬಹು ಪ್ರಯಾಸ ಪಡುತ್ತಿತ್ತು ಮತ್ತು ದಿನ ಆಹಾರ ಹುಡುಕಲು ಬೇಸರಗೊಂಡಿತು.

Read Also – ನಂಬಿಕೆಯೇ ಯಶಸ್ಸಿನ ಮೊದಲ ಹೆಜ್ಜೆ

ರಾಜು ಮತ್ತು ರಹೀಮ್ ಇಬ್ಬರು ದಾರಿಯಲ್ಲಿ ಹೋಗುವಾಗ ತೋಳವೊಂದು ಎದುರಾಯಿತು.

ತೋಳ ಬಾಯಿ ತೆರೆದು ಇಬ್ಬರನ್ನು ತಿನ್ನಲು ಬಂದಿತು. ತಕ್ಷಣವೇ ರಾಜು ತೋಳಕ್ಕೆ ಮೊದಲು ನನ್ನನು ತಿನ್ನು’ ಎಂದನು. ರಹೀಮ್ ‘ಇಲ್ಲ ಇಲ್ಲ ಮೊದಲು ನನ್ನನು ತಿನ್ನು’ ಅಂದನು.

ಮತ್ತೆ ರಾಜು ‘ಇಲ್ಲ ಇಲ್ಲ ಮೊದಲು ನನ್ನನೇ ತಿನ್ನಬೇಕು, ಅವನಿಗಿಂತ ನಾನೇ ಬಲವಾಗಿದ್ದೇನೆ’ ಎಂದನು. ತೋಳ ವಿಚಿತ್ರವಾಗಿ ನೋಡುತ್ತಾ ನಿಂತಿತು.
ರಹೀಮನು ‘ಇಲ್ಲ ಇಲ್ಲ ಅವನಿಗಿಂತ ನಾನೇ ಎತ್ತರವಾಗಿದ್ದೀನಿ, ಅದಕ್ಕಾಗಿ ನನ್ನನೇ ಮೊದಲು ತಿನ್ನಬೇಕು’ ಎಂದನು.

ಆಗ ತೋಳ – ನೀವಿಬ್ಬರು ಯಾಕೆ ನಾನು ಮೊದಲು ನಾನು ಮೊದಲು ಎಂದು ಕಚ್ಚಾಡುತ್ತಿದ್ದೀರಿ’ ಎಂದು ಕೇಳಿತು.

Kathegalu in Kannada

ಅದಕ್ಕೆ ರಹೀಮನು ಈದಿನ ತುಂಬಾ ಒಳ್ಳೆಯ ದಿನವಂತೆ, ಇವತ್ತು ಯಾರು ಸಾಯ್ತಾರೆ ಅವರು ನೇರವಾಗಿ ಸ್ವರ್ಗಕ್ಕೆ ಹೋಗ್ತಾರಂತೆ. ಅಲ್ಲಿ ಯಾವುದೇ ರೀತಿ ಆಹಾರಕ್ಕಾಗಿ ಚಿಂತಿಸುವ ಅಗತ್ಯವಿಲ್ಲ. ಒಮ್ಮೆ ತಿಂದರೆ ಯಾವತ್ತೂ ಕೂಡಾ ಹಸಿವನೆ ಆಗಲ್ವಂತೆ’ ಎಂದನು.

ಆಗ ತೋಳ ‘ಹೌದ! ನಿಜಾನಾ, ಇವತ್ತು ಸತ್ತರೆ ಸ್ವರ್ಗಕ್ಕೆ ಹೋಗ್ತಾರಾ? ಮತ್ತು ಹಸಿವು ಕೂಡ ಆಗಲ್ವಾ?’ ಎಂದು ಆತೊರೆಯುತ್ತಾ ಕೇಳಿತು.

ರಾಜು ಮತ್ತು ರಹೀಮ್ – ‘ಹೂಂ ನಿಜ ಮತ್ತು ನಾಳೇನೇ ಒಂದು ದೊಡ್ಡ ಭೂಕಂಪ ಸಂಭವಿಸಿ, ಜಗತ್ತೆ ಮುಳುಗಿ ಹೋಗುತ್ತದಂತೆ. ಅದಕ್ಕಾಗಿ ಇವತ್ತೇ ನಾವಿಬ್ಬರೂ ಸಾಯಲು ಹೊರಟಿದ್ದೇವೆ’ ಎಂದರು.

Read Also ಸಿಂಹದ ಮೂರ್ಖತನ

ತೋಳ ಇದೆಲ್ಲಾ ನಿಜ ಎಂದು ನಂಬಿತು. ಮತ್ತು ಅಲ್ಲಿ ಯಾವ ಆಹಾರಕ್ಕಾಗಿಯೂ ಅಲೆದಾಡುವುದು ಇರುವುದಿಲ್ಲ. ಸ್ವರ್ಗದಲ್ಲಿ ಹಾಯಾಗಿ ಇರಬಹುದು ಎಂದು ಆಲೋಚಿಸಿಕೊಂಡಿತು.

ಅದಕ್ಕಾಗಿ ತೋಳ ‘ಹಾಗಾದರೆ ಮೊದಲು ನಾನು ಸಾಯುತ್ತೇನೆ, ಮೊದಲು ನಾನು ಸ್ವರ್ಗಕ್ಕೆ ಹೋಗುತ್ತೇನೆ’ ಎಂದಿತು. ತಕ್ಷಣವೇ ಅಲ್ಲಿರುವ ನದಿಗೆ ಹಾರಿ ಪ್ರಾಣಬಿಟ್ಟಿತು.

ರಾಜು ಮತ್ತು ರಹೀಮ್ ಅಲ್ಲಿಂದ ಸುರಕ್ಷಿತವಾಗಿ ಮುಂದಿನ ಊರು ಸೇರಿಕೊಂಡರು.

Kathegalu in Kannada

ಹೀಗೆ ಊರೂರು ಸುತ್ತುತ್ತಾ ಹೋದರು. ಕೊನೆಗೆ ಅವರಲ್ಲಿರುವ ದುಡ್ಡೆಲ್ಲಾ ಖಾಲಿಯಾಯಿತು. ಮತ್ತು ಮುಂದಿನ ಊರಲ್ಲಿ ಒಂದು ಜಾತ್ರೆ ಇತ್ತು. ಅದಕ್ಕಾಗಿ ರಾಜು ಮತ್ತು ರಹೀಮನು ಒಂದು ಉಪಾಯ ಮಾಡಿದರು.

ಜಾತ್ರೆಗೆ ಹೋಗುವ ದಾರಿಯಲ್ಲಿ ಒಂದು ಬೇವಿನ ಮರ ಇತ್ತು. ಆ ಮರದ ಕೆಳಗೆ ಮೂರು ಕಲ್ಲಿಟ್ಟು ಕುಂಕುಮ ಹಚ್ಚಿ, ಮರದ ಬುಡಕ್ಕೆ ಕೆಂಪು ಬಣ್ಣದ ಶಾಲು ಸುತ್ತಿದರು. ಒಂದು ನಿಂಬೆ ಹಣ್ಣು, ಎರಡು ರೂ. ಇಟ್ಟು  ಮರದ ಹಿಂಬದಿಯಲ್ಲಿ ದಣಿವಾರಿಸಲು ಸ್ವಲ್ಪ ಹೊತ್ತು ಮಲಗಿಕೊಂಡರು.

ಜಾತ್ರೆಗೆ ಹೋಗಿ ಬರುವ ಜನರೆಲ್ಲಾ ಕಲ್ಲಿಗೆ ಕೈಮುಗಿದು ತಮ್ಮಲ್ಲಿರುವ ಚಿಲ್ಲರೆ ಕಾಸುಗಳನ್ನು ಹಾಕುತ್ತಿದ್ದರು. ರಾಜು ಮತ್ತು ರಹೀಮನು ನಿದ್ದೆಯಿಂದ ಎದ್ದು, ಬಂದು ನೋಡಿದರೆ ಒಂದು ಅಗಲವಾದ ನಾಣ್ಯಗಳ ರಾಶಿಯೇ ಬಿದ್ದಿತ್ತು. Kathegalu in Kannada.

ಇಬ್ಬರು ಆ ನಾಣ್ಯಗಳನ್ನು ತೆಗೆದುಕೊಂಡು ಜಾತ್ರೆಗೆ ಹೋದರು. ಕೊನೆಗೆ ಜಾತ್ರೆ ಮುಗಿಸಿಕೊಂಡು ತಮ್ಮ ಊರು ಸೇರಿಕೊಂಡರು. 
ಕಥೆಯಲ್ಲಿನ ನೀತಿ / Moral of this Story :
ಅಪಾಯ ಕಾಲದಲ್ಲಿ ಉಪಾಯದಿಂದ ಯೋಚಿಸಬೇಕು.

ಅಪಾಯ ಕಾಲದಲ್ಲಿ ಉಪಾಯದ ಕಥೆಗಳು – Kathegalu in Kannada

ಒಂದು ಬೃಹತ್ತಾದ ಕಾಡು ಇತ್ತು. ಕಾಡಿನಲ್ಲಿ ಎಲ್ಲಾ ಜಾತಿಯ ಪ್ರಾಣಿಗಳಿಗೆ ಸಿಂಹನೆ ರಾಜನಾಗಿತ್ತು. ಸಿಂಹ ಬಲಿಷ್ಠ ಮತ್ತು ಗಾಂಭೀರ್ಯವಾಗಿತ್ತು.

ಸಿಂಹವು ನಾನೇ ಈ ಕಾಡಿಗೆ ರಾಜನೆಂದು ಬೀಗುತ್ತಿತ್ತು. ಅದರ ಹಸಿವೆಯನ್ನು ತೀರಿಸಲು ದಿನ ಒಂದು ಅಮಾಯಕ ಪ್ರಾಣಿ ಬಲಿಯಾಗಬೇಕಿತ್ತು. ಬರು ಬರುತ್ತಾ ಕಾಡಿನಲ್ಲಿ ಬರಗಾಲ ಉಂಟಾಯಿತು. ಪ್ರಾಣಿಗಳ ಸಂಖ್ಯೆಯೂ ಕಡಿಮೆಯಾಯಿತು.

ಕ್ರಮೇಣವಾಗಿ ಅರಣ್ಯದಲ್ಲಿ ಪ್ರಾಣಿಗಳ ಸಂಖ್ಯೆ ಕಡಿಮೆಯಾಗುತ್ತಾ ಬಂತು. ಒಂದಿವಸ ಸಿಂಹಕ್ಕೆ ತಿಳಿಯದಂತೆ ಪ್ರಾಣಿಗಳೆಲ್ಲ ಸಭೆ ಸೇರಿದವು. ಹೇಗಾದರೂ ಮಾಡಿ ಸಿಂಹವನ್ನು ಸಾಯಿಸಬೇಕು ಅಂತ ಯೋಚಿಸಿದವು.

ಮತ್ತು ಸಿಂಹವನ್ನು ಯಾರು ಕೊಲ್ಲಬೇಕು. ಹೇಗೆ ಕೊಲ್ಲಬೇಕು ಮತ್ತು ಯಾವಾಗ ಕೊಲ್ಲಬೇಕು ಎಂದೆಲ್ಲಾ ಯೋಚಿಸುತ್ತಿದ್ದವು. ಆದರೆ ಆ ಕೆಲ್ಸ ಮಾಡಲು ಯಾವ ಪ್ರಾಣಿಗೂ ಧೈರ್ಯ ಸಾಲಲಿಲ್ಲ. ತಾವು ಮಾಡುವ ಎಲ್ಲಾ ಪ್ರಯತ್ನಗಳು ವ್ಯರ್ಥ ಎಂದು ತಿಳಿದು ಅಲ್ಲಿಂದ ಹಿಂತಿರುಗಿದವು.

Kathegalu in Kannada

ಒಂದು ವಾರದಿಂದ ಸಿಂಹ ಆಹಾರಕ್ಕಾಗಿ ಹೊರಗೆ ಬಂದಿರಲಿಲ್ಲ. ಉಳಿದ ಎಲ್ಲಾ ಪ್ರಾಣಿಗಳಿಗೆ ಒಂದು ರೀತಿಯ ಉತ್ಸಾಹ ಮೂಡಿತು. ಕಾಡಿನ ರಾಜ ಸಿಂಹಕ್ಕೆ ಎನಾಗಿರಬಹುದೆಂದು.

ಮತ್ತೆ ಎಲ್ಲಾ ಪ್ರಾಣಿಗಳು ಒಂದು ಸ್ಥಳದಲ್ಲಿ ಗುಂಪು ಸೇರಿದವು.  ಆಗ ಯಾವುದೋ ಒಂದು ಪ್ರಾಣಿ ಬಂದು ಸಿಂಹ ಅಸ್ವಸ್ಥಗೊಂಡಿದೆ. ಇನ್ನು ಒಂದು ತಿಂಗಳ ವರೆಗೆ ಹೊರಗೆ ಬರೋದಿಲ್ಲ ಎಂದು ಹೇಳಿತು. ಆಗ ಎಲ್ಲಾ ಪ್ರಾಣಿಗಳು ಸಂತೋಷದಿಂದ ಕುಣಿದು ಕುಪ್ಪಳಿಸಿದವು.

ಆದರೆ ಒಂದು ತಿಂಗಳ ನಂತರ ಮತ್ತೆ ಏನು ? ಎಂಬ ಪ್ರಶ್ನೆ ಮೂಡಿತು. ಪ್ರಾಣಿಗಳೆಲ್ಲಾ ಇದೆ ಸರಿಯಾದ ಸಮಯ ಸರಿಯಾಗಿ ಯೋಚಿಸಿ ಸಾಯ್ಸಿಬಿಡೋಣ ಎಂದುಕೊಂಡವು.

ಅದರಲ್ಲಿ ಒಂದು ಬುದ್ದಿವಂತ ನರಿಯೊಂದು ಇತ್ತು. ನರಿ ‘ನಾನು ವೈದ್ಯನಂತೆ ಹೋಗಿ ಕೆಲಸ ಮುಗಿಸಿಕೊಂಡೆ ವಾಪಸ್ ಬರುತ್ತೇನೆ’ ಎಂದಿತು. ಅದರ ಮಾತಿಗೆ ಎಲ್ಲವು ಒಪ್ಪಿಗೆ ಸೂಚಿಸಿದವು.

ನರಿ, ಸಿಂಹದ ಬಳಿಗೆ ವೈದ್ಯನಾಗಿ ಹೋಯಿತು. ಸಿಂಹ ಗುಹೆಯಲ್ಲಿ ವಿಪರೀತ ಜ್ವರದಿಂದ ನರಳುತ್ತಿತ್ತು. ನರಿ ‘ಕಾಡಿನ ಸಿಂಹ ರಾಜನಿಗೆ ನನ್ನ ನಮಸ್ಕಾರಗಳು. ನಾನು ನಿಮ್ಮ ಆರೋಗ್ಯವನ್ನು ಸುಧಾರಿಸಲು ಬಂದಿರುವ ವೈದ್ಯ ನರಿ’ ಎಂದಿತು.

Read Also – ಕಾಗೆ ಮತ್ತು ಪಾರಿವಾಳ

ನರಿ ಸಿಂಹಕ್ಕೆ ‘ಮಹಾಪ್ರಭುಗಳೆ  ನಿಮ್ಮನ್ನು ಈ ರೀತಿ ನೋಡಲು ತುಂಬಾ ಬೇಸರವಾಗುತ್ತಿದೆ. ಆದರೆ ಕಾಡಿನ ಪರಿಸ್ಥಿತಿ ಕೈಜಾರಿ ಹೋಗುತ್ತಿದೆ’ ಎಂದಿತು.

ಕಾಡಿನಲ್ಲಿ ನಿಮ್ಮಂತೆ ಇರುವ ಸಿಂಹ ಬಂದು ‘ಈ ಕಾಡಿಗೆ ನಾನೇ ರಾಜ ಎಂದು ರಾರಾಜಿಸುತ್ತಿದ್ದಾನೆ’ ಎಂದಿತು. ಎಷ್ಟಾದರೂ ನೀವೇ ನಮ್ಮ ನಿಜವಾದ ರಾಜರಲ್ಲವೆ’ ಎಂದು ಹೇಳಿತು.

ಅಲ್ಲಿವರೆಗೂ ಏನೂ ಮಾತಾಡದ ಸಿಂಹ ಸಿಟ್ಟಿಗೆ ಬಂದು ನೀನೇಳಿದ್ದು ನಿಜವೇ? ಎಂದು ಕೇಳಿತು. ಅದಕ್ಕೆ ನರಿ ‘ಹೌದು ಮಹಾಪ್ರಭು ಆ ಕಳ್ಳ ಸಿಂಹ ಅಲ್ಲಿದ್ದಾನೆ ಬರ್ರಿ ತೋರುಸ್ತೀನಿ’ ಎಂದಿತು.

ನರಿ, ಸಿಂಹವನ್ನು ಆಳವಾದ ಬಾವಿ ಹತ್ತಿರ ಕರೆದುಕೊಂಡು ಹೋಯಿತು. ಮತ್ತು ನೀರಿನಲ್ಲಿ ಅದರ ಪ್ರತಿಬಿಂಬ ತೋರಿಸಿ ‘ನೋಡು ಅವನು ಅಲ್ಲಿದ್ದಾನೆ’ ಎಂದಿತು.

ಸಿಂಹ ನೀರಿನಲ್ಲಿ ತನ್ನ ಪ್ರತಿಬಿಂಬ ನೋಡಿ ಇನ್ನೊಂದು ಸಿಂಹ ಇದೆಯೆಂದು ಬಾವಿಗೆ ಧುಮುಕಿತು. ಮೇಲೆ ಬರಲು ಆಗದೆ ನೀರಿನಲ್ಲಿ ಮುಳುಗಿ ಸತ್ತಿತು. Kathegalu in Kannada.

ನರಿ ಈ ವಿಷಯವನ್ನು ಎಲ್ಲಾ ಪ್ರಾಣಿಗಳಿಗೆ ಮುಟ್ಟಿಸಿತು. ಅಂದಿನಿಂದ ಯಾವ ಭಯವೂ ಇಲ್ಲದೆ ನೆಮ್ಮದಿಯ ಜೀವನ ಸಾಗಿಸಿದವು‌.

ಕಥೆಯಲ್ಲಿನ ನೀತಿ / Moral of this Story :

  • ಈ ಮೇಲಿನ ಕಥೆಗಳಿಂದ ತಿಳಿದುಬರುವುದೇನಂದರೆ ತಲೆಯಲ್ಲಿ ಉಪಾಯವೊಂದಿದ್ದರೆ ಎಂತಹ ಕ್ಲಿಷ್ಟ ಪರಿಸ್ಥಿತಿಯಿಂದಾರೂ ಪಾರಾಗಬಹುದು.
  • ಪ್ರತಿಯೊಂದು ಸಮಸ್ಯೆ (ಪ್ರಶ್ನೆ)ಗೂ ಪರಿಹಾರ ಇದ್ದೆ ಇರುತ್ತದೆ.
  • ನಮ್ಮ ಜೀವನದುದ್ದಕ್ಕೂ ಏರಿಳಿತಗಳು ಬರೋದು ಸಹಜ. ಬಂದಂತಹ ಸಮಸ್ಯೆಗಳನ್ನು ಸೂಕ್ಷ್ಮವಾಗಿ ಅವಲೋಕಿಸಿ ಪರಿಹಾರ ಕಂಡುಕೊಳ್ಳಬೇಕು.

Kathegalu in Kannada

Follow Our Facebook Page Moral Storys

ವಿ.ಸೂಚನೆ – ಮೇಲಿನ ಕಥೆಗಳಲ್ಲಿ ಏನಾದರೂ ತಪ್ಪು/ದೋಷಗಳು ಕಂಡುಬಂದರೆ ದಯಮಾಡಿ ಕಾಮೆಂಟ್ ಮೂಲಕ ತಿಳಿಸಿ. ಪುನಃ ಬೇಟಿ ನೀಡಿ ಧನ್ಯವಾದಗಳು.


Spread the love

Leave a Reply

Your email address will not be published. Required fields are marked *