Kannada Stories with Moral

Kannada Stories with Moral

Moral Stories
Spread the love

Hi Everyone, Welcome to Moral Storys – Kannada Stories with Moral

In this page you can see Kannada Stories with Moral, Kannada Stories Moral, Moral Stories in Kannada.

1. ಕುದುರೆ ಮತ್ತು ಕತ್ತೆ – Kannada Stories with Moral

ಒಂದು ಊರಿನಲ್ಲಿ ಒಬ್ಬ ಸೈನಿಕ ಕುದುರೆ ಮತ್ತು ಕತ್ತೆ ಸಾಕಿದ್ದ. ಅವರೆಡನ್ನು ಬಹಳ ಜೋಪಾನವಾಗಿ ನೋಡಿಕೊಳ್ಳುತ್ತಿದ್ದನು. ಕುದುರೆ ಮತ್ತು ಕತ್ತೆ ಕೂಡ ಅಷ್ಟೇ ಸ್ನೇಹದಿಂದ ಇದ್ದವು.

ಒಂದು ದಿನ ರಾಜನಿಂದ ಒಂದು ಟೆಲಿಗ್ರಾಂ ಬರುತ್ತೆ,  ಯುದ್ದಕ್ಕೆ ಸಿದ್ದವಾಗಬೇಕೆಂದು. ಅದಕ್ಕಾಗಿ ಅವನು ಕುದುರೆಯನ್ನು ತಯಾರು ಮಾಡುವ ಸಲುವಾಗಿ ಇನ್ನೂ ಜೋಪಾನವಾಗಿ ನೋಡಿಕೊಳ್ಳುತ್ತಾನೆ.

ಕುದುರೆಗೆ ಹೆಚ್ಚು ಕಾಳಜಿವಹಿಸುತ್ತಾನೆ ಮತ್ತು ಕುದುರೆಯನ್ನು ಪ್ರತ್ಯೇಕ ಕೋಣೆಯಲ್ಲಿ ಕಟ್ಟಿಹಾಕಿದ. ಕುದುರೆಗೆ ಹೆಚ್ಚು ಆರೈಕೆ ಮಾಡುವುದನ್ನು ನೋಡಿ ಕತ್ತೆ ಅಸೂಯೆ ಪಡುತ್ತದೆ.

ಮಾರನೆಯ ದಿನ ಬೆಳಿಗ್ಗೆ ಎದ್ದು ಸೈನಿಕ ಕುದುರೆಯನ್ನು ತಗೊಂಡು ಯುದ್ದಕ್ಕೆ ಹೋದ. ಒಂದು ವಾರ ಆದ್ಮೇಲೆ ಮನೆಗೆ ಬಂದ. ಆದರೆ ಕುದುರೆಗೆ ಯುದ್ದದಲ್ಲಿ ಎದುರಾಳಿ ಜೊತೆ ಹೋರಾಡುವಾಗ ಬಲವಾದ ಗಾಯವಾಗಿತ್ತು. ಸೈನಿಕ ಗಾಯಗೊಂಡಿರುವ ಕುದುರೆಗೆ ಔಷಧ ಹಚ್ಚಿ ಪ್ರತ್ಯೇಕವಾದ ಕೋಣೆ ಇರಿಸಿದ.

ಕತ್ತೆ ಕುದುರೆಗಾಗಿರುವ ಗಾಯವನ್ನು ನೋಡಿ ತನ್ನ ತಪ್ಪನ್ನು ಅರಿತುಕೊಂಡು, ಕುದುರೆಯಲ್ಲಿ ಕ್ಷಮೆ ಕೇಳಿತು. ಮತ್ತೆ ಇಬ್ಬರು ಒಳ್ಳೆ ಸ್ನೇಹಿತರಾದರು.

ಕಥೆಯಲ್ಲಿನ ನೀತಿ / Moral of this Story: ಒಬ್ಬರನ್ನು ನೋಡಿ ಯಾವತ್ತೂ ಅಸೂಯೆ ಪಡಬಾರದು, ಯಾರನ್ನು ಕಡಿಮೆ ಮಾಡಿ ನೋಡಬಾರದು

2. ಅಜ್ಜಿ ಮಾಡಿದ ಮಜ್ಜಿಗೆ – Kannada Stories with Moral


ಒಂದಾನೊಂದು ಊರಿನಲ್ಲಿ ಒಬ್ಬ ಅಜ್ಜಿ ಇದ್ದಳು. ಅಜ್ಜಿ ಶ್ರಮಜೀವಿ, ಯಾವಾಗಲೂ ಕೆಲಸದಲ್ಲಿ ನಿರತರಾಗಿರುತ್ತಿದ್ದಳು. ಅಜ್ಜಿ ಮಜ್ಜಿಗೆ ಮಾಡುವುದರಲ್ಲಿ ವಿಶೇಷ ಪ್ರಾವೀಣ್ಯತೆ ಹೊಂದಿದ್ದಳು ಮತ್ತು ಆಕೆ ಮಾಡಿದ ಮಜ್ಜಿಗೆಗೆ ಊರಿನ ಜನರೆಲ್ಲಾ ಸಾಲುಗಟ್ಟಿ ನಿಲ್ಲುತ್ತಿದ್ದರು.

ಅಜ್ಜಿಗೆ ಕೂಡ ಮಜ್ಜಿಗೆನೆ  ಜೀವನಕ್ಕೆ ಆಧಾರವಾಗಿತ್ತು. ಮಜ್ಜಿಗೆ ಮಾರಾಟ ಮಾಡಿ ಬಂದ ಹಣದಿಂದ ಜೀವನ ನಡೆಸುತ್ತಿದ್ದಳು.

ಒಂದು ದಿನ ಒಬ್ಬ ರಾಜನು ಬೇಟೆ ಆಡಲು ಕಾಡಿಗೆ ಹೋದನು. ಕಾಡಿನಲ್ಲಿ ಸುತ್ತಿ ಸುತ್ತಿ ರಾಜನು ಸುಸ್ತಾದ, ಅವನ ಬಳಿಯಿರುವ ನೀರೆಲ್ಲಾ ಖಾಲಿಯಾಗಿ ನೀರಿಗಾಗಿ ಹುಡುಕುತ್ತಾ ಇದ್ದ. ಹತ್ತಿರದಲ್ಲಿ ನೀರು ಎಲ್ಲೂ ಇರಲಿಲ್ಲ. ನಡೆದು ನಡೆದು ಇನ್ನಷ್ಟು ನಿಶ್ಶಕ್ತನಾದನು.

ಹೀಗೆ ನೀರನ್ನು ಹುಡುಕುತ್ತಾ ಊರಿನ ಕಡೆ ಬಂದನು. ರಾಜ ನಿಧಾನವಾಗಿ ನಡೆಯುತ್ತಾ ಅಜ್ಜಿ ಇರುವ ಗುಡಿಸಲು ಹತ್ತಿರ ಬಂದು ಪ್ರಜ್ಞೆ ತಪ್ಪಿ ಬಿದ್ದನು.

ಅಜ್ಜಿ ರಾಜನ ಮುಖದ ಮೇಲೆ ನೀರು ಚಿಮುಕಿಸಿ, ಎಚ್ಚರವಾದ ಮೇಲೆ ಕುಡಿಯಲು ಒಂದು ತಂಬಿಗೆ ಮಜ್ಜಿಗೆ ಕೊಟ್ಟಳು. ಅಜ್ಜಿ ಸ್ವಲ್ಪ ಸಮಯದ ನಂತರ ಗುಡಿಸಲು ಒಳಕ್ಕೆ ಬರುವಂತೆ ವಿನಂತಿಸಲು, ರಾಜನು ಒಳಕ್ಕೆ ಹೋಗಿ ವಿಶ್ರಾಂತಿ ತೆಗೆದುಕೊಂಡನು.

Kannada Stories with Moral

ರಾಜನು ಚೇತರಿಸಿಕೊಂಡ ಮೇಲೆ ಅಜ್ಜಿಗೆ ತುಂಬಾ ಕೃತಜ್ಞತೆಗಳನ್ನು ಸಲ್ಲಿಸಿದನು. ನೀವು  ನಿಜವಾಗಿಯೂ ನನಗೆ ಮರುಜೀವ ಕೊಟ್ಟಿರಿ ಮತ್ತು ಬಿಸಿಲಿನಿಂದ ನೀರಡಕೆಯಾಗಿ ಬಳಲುತ್ತಿದ್ದ ನನ್ನನು ಆಧರಿಸಿ, ಅತಿಥಿ ಸತ್ಕಾರ ಮಾಡಿದೆ. ನೀವು ಮಾಡಿದ ಮಜ್ಜಿಗೆ ನಿಜವಾಗಿ ಅದ್ಭುತವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ.

ರಾಜನು ಅಲ್ಲಿಂದ ಹೋಗುವ ಮುನ್ನ ತನ್ನ ಮೈ ಮೇಲಿರುವ ಎಲ್ಲಾ ಬಂಗಾರವನ್ನು ಕೊಟ್ಟು ಹೋದನು.

ಕಥೆಯಲ್ಲಿನ ನೀತಿ / Moral of this Story: ಅತಿಥಿ ಸತ್ಕಾರ ಮಾಡುವುದನ್ನು ಯಾವತ್ತೂ ಮರೆಯಬಾರದು.
ಆಪತ್ತಿನಲ್ಲಿ ಇದ್ದವರಿಗೆ ಸಹಾಯ ಮಾಡಬೇಕು

3. ಕಾಗೆ ಮತ್ತು ಕೋಗಿಲೆ – Kannada Stories with Moral

ಒಂದು ಗ್ರಾಮದಲ್ಲಿ ಒಬ್ಬ ರೈತನಿದ್ದನು. ಅವನು ದಿನಾಲು ಮನೆಯಿಂದ ಬುತ್ತಿ ಕಟ್ಟಿಕೊಂಡು ಹೊಲಕ್ಕೆ ಹೋಗಿ ಸಂಜೆಯ ವರೆಗೂ ಕೆಲಸ ಮಾಡಿ ಬರುತ್ತಿದ್ದ. ಅವನ ಹೊಲದಲ್ಲಿ ಒಂದು ಬೇವಿನ ಮರ ಇತ್ತು.

ಆ ಮರದಲ್ಲಿ  ಒಂದು ಕಾಗೆ ವಾಸವಾಗಿತ್ತು. ರೈತನು ತಿಂದುಳಿದ ಆಹಾರವನ್ನು ತಾನು ಮತ್ತು ಇತರ ಕಾಗೆಗಳೊಂದಿಗೆ ಹಂಚಿಕೊಂಡು ತಿನ್ನುತ್ತಿತ್ತು. ಮತ್ತು ರೈತನಿಗೆ ಆವಾಗಾವಾಗ ಸಹಾಯ ಮಾಡುತ್ತಿತ್ತು. ಬೆಳೆಗೆ ಜಿಗುಟು ಹುಳ ಬಿದ್ದಾಗ ಅವುಗಳನ್ನು ತಿಂದು ಹಸನು ಮಾಡುತ್ತಿತ್ತು.

ಒಂದು ದಿನ ಕೋಗಿಲೆ ಬಂದು ಅದೇ ಬೇವಿನ ಮರದ ಕೊಂಬೆಯ ಮೇಲೆ ಕುಳಿತಿಕೊಂಡಿತು. ಕಾಗೆ ರೊಟ್ಟಿ ತಿನ್ನುತ್ತಿರುವಾ ಕೋಗಿಲೆ ತನಗೆ ಸ್ವಲ್ಪ ರೊಟ್ಟಿ ಕೊಡುವಂತೆ  ಕೇಳಿತು. ಕರುಣೆಯುಳ್ಳ ಕಾಗೆ ಒಂದು ರೊಟ್ಟಿಯ ಚೂರನ್ನು ಕೊಟ್ಟಿತು.

ಮರುದಿನವೂ ಕೂಡ ಅದೇ ಸಮಯಕ್ಕೆ ಬಂದು ಕಾಗೆಯ ರೊಟ್ಟಿಯಲ್ಲಿ ಸಮಪಾಲು ಕೇಳಿತು. ಕಾಗೆ, ಕೋಗಿಲೆಗೆ ಬಹಳ ಹಸಿವೆ ಇರಬಹುದೇನೋ ಅಂದುಕೊಂಡು ತನ್ನ ರೊಟ್ಟಿಯಲ್ಲಿ ಎರಡು ಭಾಗ ಮಾಡಿ ಅರ್ಧ ಭಾಗ ಕೋಗಿಲೆಗೆ ಕೊಟ್ಟಿತು.

Read Also – ನರಿ ಮತ್ತು ಇಲಿಗಳು

ಕೋಗಿಲೆ ಬರುಬರುತ್ತಾ ತನ್ನ ಅಧಿಕಾರ ಚಲಾಯಿಸುತ್ತಾ ಬಂತು.ಕಾಗೆಯನ್ನು ಕಡೆಗಣಿಸಿತು. ಒಂದು ದಿನ ಕಾಗೆ ಹೊರಗಡೆ ಹೋದಾಗ, ಬರುವಷ್ಟರೊಳಗೆ ರೈತ ತಿಂದು ಉಳಿಸಿರುವ ಎಲ್ಲಾ ಆಹಾರವನ್ನು ಕೋಗಿಲೆ ತಿಂದು ಖಾಲಿಮಾಡಿತು. ಮತ್ತು ಕೋಗಿಲೆ ಕಾಗೆಯ ಗೂಡಿನಲ್ಲಿ ಕೂತುಕೊಂಡಿತು.

Kannada Stories with Moral

ಕಾಗೆ ಬಂದು ಆಹಾರ ಇಲ್ಲದನ್ನು ಮತ್ತು ತನ್ನ ಗೂಡಿನಲ್ಲಿ ಕೂತುಕೊಂಡಿದ್ದನ್ನು ನೋಡಿ ಸಿಟ್ಟಿಗೆದ್ದು ಕೋಗಿಲೆಗೆ “ತಿಂಡಿಯನ್ನು ಎಲ್ಲಾ ಖಾಲಿ ಮಾಡಿದ್ದಲ್ಲದೇ ಮತ್ತೆ ನನ್ನ ಗೂಡಿನಲ್ಲೇ ಕುಂತಿದ್ಯ? ಇಲ್ಲಿಂದ ಆಚೆ ಹೋಗು” ಎಂದು ಹೇಳಿತು.

ಕೋಗಿಲೆ ಮತ್ತು ಕಾಗೆ ಕಚ್ಚಾಡಲು ಪ್ರಾರಂಭಿಸಿದವು. ಕೋಗಿಲೆ ಕಾಗೆಯನ್ನು ಕುಕ್ಕಿ ಕುಕ್ಕಿ ಹೊರಗೆ ಕಳುಹಿಸಿತು. ಆಗ ಕಾಗೆ ಕಾ… ಕಾ… ಕಾ… ಎಂದು ತಮ್ಮ ಎಲ್ಲಾ ಬಂಧುಬಳಗವನ್ನು ಕರೆಯಿತು.
ಸುಮಾರು ನೂರು ಕಾಗೆಗಳು ಕ್ಷಣಾರ್ಧದಲ್ಲೇ ಬಂದವು. ಕಾಗೆ ನಡೆದಿದ್ದನ್ನೆಲ್ಲಾ ವಿವರಿಸಿ ಹೇಳಿತು. ಎಲ್ಲಾ ಕಾಗೆಗಳು ಸೇರಿ ಕೋಗಿಲೆಯನ್ನು ಓಡಿಸಿದವು.

ಕಥೆಯಲ್ಲಿನ ನೀತಿ / Moral of this Story:
ಅಧಿಕಾರ ಚಲಾಯಿಸುವಿಕೆ ನಮಗೆ ನಾಶನವನ್ನು ತಂದುಕೊಡುತ್ತದೆ.
ಒಂದಾಗಿ ಹಂಚಿಕೊಂಡು ತಿಂದರೆ ಅದುವೇ ಸ್ವರ್ಗ.

Also Read – ಕಾಗೆ ಮತ್ತು ಹಂಸ

4. ಕುರಿಗಳು – Kannada Stories with Moral

ಒಂದು ಕಾಡಿನಲ್ಲಿ ನಾಲ್ಕು ಕುರಿಗಳು ವಾಸವಾಗಿದ್ದವು. ಅದರಲ್ಲಿ ಮೂರು ಕುರಿಗಳು ಪ್ರಾಮಾಣಿಕ ಮತ್ತು ಪ್ರತಿಯೊಂದು ಹೆಜ್ಜೆಯೂ ಕೂಡಾ ಆಲೋಚನೆ ಮಾಡಿ ಇಡುತ್ತಿದ್ದವು ಆದರೆ ನಾಲ್ಕನೇ ಕುರಿ ಮಾತ್ರ ಮಂದ ಬುದ್ಧಿ ಮತ್ತು ಚಂಚಲ ಮನಸ್ಸನ್ನು ಹೊಂದಿತ್ತು. ಮತ್ತು ಯಾರ ಮಾತು ಕೇಳುತ್ತಿರಲ್ಲಿಲ್ಲ.

ಕುರಿಗಳು ತಾವು ಮೇಯುತ್ತಿದ್ದ ಪ್ರದೇಶದಲ್ಲಿ ಹುಲ್ಲು ಕಡಿಮೆಯಾಗುತ್ತಾ ಬಂತು, ಅದಕ್ಕಾಗಿ ಮೇವು ಜಾಸ್ತಿ ಇರುವ   ಮತ್ತು ಸುರಕ್ಷಿತವಾಗಿರುವ  ಪ್ರದೇಶಕ್ಕೆ ಮೇಯಲು ಬಂದವು. ಆದರೆ ನಾಲ್ಕನೇ ಕುರಿ ಮಾತ್ರ ಅಲ್ಲಿ ಮೇಯಲು ಇಷ್ಟಪಡಲಿಲ್ಲ. ಬದಲಾಗಿ ಬೆಟ್ಟದ ಮೇಲೆ ತುಂಬಾ ಹಚ್ಚಹಸಿರಾದ ಹುಲ್ಲು ಇದೆ, ಅಲ್ಲಿಗೆ ಹೋಗಲು ಹಟತೊಟ್ಟಿತು.

ಮೂರು ಕುರಿಗಳು “ಬೇಡ, ಅಲ್ಲಿಗೆ ಹೋಗುವುದು ಸುರಕ್ಷಿತವಲ್ಲ” ಎಂದು ಹೇಳಿದವು. ಆದರೆ ಮೂರು ಕುರಿಗಳ ಮಾತನ್ನು ಕೇಳದೇ ಹೋಯಿತು.

ಆ ನಾಲ್ಕನೇ ಕುರಿ  ಉಳಿದ ಮೂರು ಕುರಿಗಳನ್ನು ಬಿಟ್ಟು ಬೆಟ್ಟದ ಕಡೆ ಮುಖ ಮಾಡಿ ಹೋಯಿತು. ಸ್ವಲ್ಪ ಎತ್ತರಕ್ಕೆ ಬೆಟ್ಟ ಹತ್ತುತ್ತಿದ್ದಂತೆ ಒಂದು ಕಲ್ಲಿನ ಮೇಲೆ ಹುಲಿ ಚರ್ಮ ಬಿದ್ದಿತ್ತು. ಕುರಿ ತಡಮಾಡದೆ ಹುಲಿ ಚರ್ಮವನ್ನು ಧರಿಸಿತು.

Read Also – ಇರುವೆ ಮತ್ತು ಆನೆ

ಬೆಟ್ಟ ಹತ್ತುತ್ತಿರುವಾಗ ನರಿ ಮತ್ತು ತೋಳುಗಳು ಎದುರಾದವು, ಆದರೆ ಕುರಿ ಹುಲಿ ಚರ್ಮವನ್ನು ಹೊದ್ದುಕೊಂಡಿರುವುದರಿಂದ ಹೆದರಿ ಓಡಿ ಹೋದವು.  ಬೆಟ್ಟದ ತುತ್ತ ತುದಿಗೆ ಹೋಗಿ ಹುಲ್ಲನ್ನು ತಿನ್ನುತ್ತಾ ಇತ್ತು. ಮತ್ತೆ ಕುರಿದೊಡ್ಡಿಗೆ ಹೋಗುವ ಮನಸ್ಸೂ ಮಾಡಲಿಲ್ಲ.

ಸಾಯಂಕಾಲ ಹೊಟ್ಟೆ ತುಂಬಿದ ಮೇಲೆ ಸಂತೋಷದಿಂದ ಕೂಗಲೂ ಆರಂಭಿಸಿತು. ಇದರ ಧ್ವನಿ ಕೇಳಿ ಅಲ್ಲೇ ಇದ್ದ ತೋಳಗಳು ಬಂದು, ಇದರ ನಿಜಸ್ವರೂಪವನ್ನು ಕಂಡುಹಿಡಿದು ಕೊಂದು ತಿಂದು ಬಿಟ್ಟವು.

ಕಥೆಯಲ್ಲಿನ ನೀತಿ / Moral of this Story:
ಅತಿಯಾದ ಆಸೆ ನಾಶನಕ್ಕೆ ದಾರಿ ಮಾಡಿಕೊಡುತ್ತದೆ.
ನಮ್ಮ ಹಿತೈಷಿಗಳ ಮಾತನ್ನು ಕೇಳಬೇಕು

Also Read – 1. ಅತಿಯಾಸೆ ಗತಿ ಕೇಡು

 

Follow Our Facebook Page Moral Storys

ವಿ. ಸೂಚನೆ – ಈ ಮೇಲಿನ ಕಥೆಗಳಲ್ಲಿ ಏನಾದರೂ ತಪ್ಪು ಅಥವಾ ದೋಷಗಳು ಕಂಡುಬಂದರೆ ದಯಮಾಡಿ ಕಾಮೆಂಟ್ ಮೂಲಕ ತಿಳಿಸಿ. ಪುನಃ ಬೇಟಿ ನೀಡಿ ಧನ್ಯವಾದಗಳು.

 

 


Spread the love

Leave a Reply

Your email address will not be published. Required fields are marked *