Hi Everyone, Welcome to Moral Storys – Kannada Stories in PDF
You can find Best Moral Storis in kannada Language
1. ಮೂರು ಕಾಗೆಗಳು – Kannada Stories in PDF
ಒಂದು ಬೇವಿನ ಮರದಲ್ಲಿ ಮೂರು ಕಾಗೆಗಳು ವಾಸಿಸುತ್ತಿದ್ದವು. ಮೂರು ಕಾಗೆಗಳು ಬಹಳ ಅನ್ಯೋನ್ಯತೆಯಿಂದ ಇದ್ದವು. ಅವುಗಳ ಹೆಸರು ತವ್ವಿ, ಸುವ್ವಿ, ಭವ್ವಿ. ಭವ್ವಿ ಎನ್ನುವಂತ ಕಾಗೆ ಉಳಿದ ಎರಡು ಕಾಗೆಗಳಿಗಿಂತ ವಯಸ್ಸಿನಲ್ಲಿ ದೊಡ್ಡದಾಗಿತ್ತು ಮತ್ತು ಹೆಚ್ಚಿನ ಕಾಳಜಿಯನ್ನು ಹೊಂದಿತ್ತು.
ಹೀಗೆ ಒಂದು ದಿವಸ ಮಳೆಗಾಲದಲ್ಲಿ ಮಳೆ ತುಂಬಾ ಜೋರಾಗಿ ಸುರಿಯುತ್ತಿತ್ತು. ಮಳೆಯಲ್ಲಿ ನೆನೆದು ಮೊದಲನೇ ಕಾಗೆ ಸುವ್ವಿಗೆ ವಿಪರೀತವಾದ ನೆಗಡಿ ಜ್ವರ ಬಂತು. ಇದರಿಂದ ಆಹಾರಕ್ಕಾಗಿ ಹೊರಗಡೆ ಹೋಗಲು ಆಗಲಿಲ್ಲ. ಅದಕ್ಕಾಗಿ ಭವ್ವಿನೆ ಎಲ್ಲಾ ಕಾಗೆಗಳಿಗೆ ಬೇಕಾಗುವಷ್ಟು ಆಹಾರವನ್ನು ತರುತ್ತಿತ್ತು.
ಸುವ್ವಿ ಆದಷ್ಟು ಬೇಗ ಚೇತರಿಸಿಕೊಳ್ಳಲು ತವ್ವಿ ಮತ್ತು ಭವ್ವಿ ಔಷಧೋಪಚಾರ ಮಾಡಿ ಕಾಳಜಿಯಿಂದ ನೋಡಿಕೊಳ್ಳುತ್ತಿದ್ದವು. ಎರಡು ದಿನದ ಬಳಿಕ ಸುವ್ವಿ ಚೇತರಿಸಿಕೊಂಡು ಮೊದಲಿನ ಸ್ಥಿತಿಗೆ ಬಂದಿತು.
ಮೂರು ಕಾಗೆಗಳು ಮೊಟ್ಟಗಳಿಟ್ಟು, ಅವುಗಳಿಗೆ ಕಾವು ಕೊಟ್ಟು ಮರಿ ಎಬ್ಬಿಸಿದವು. ಒಂದು ದಿನ ಮೂರು ಕಾಗೆಗಳು ಮರಿಗಳಿಗೆ ಆಹಾರ ತರಲು ಹೊರಗಡೆ ಹೋದವು ಆದರೆ ಆಹಾರ ಎಲ್ಲೂ ಸಿಗಲಿಲ್ಲ. ತವ್ವಿ, ಸುವ್ವಿ, ಭವ್ವಿ ವಾಪಾಸು ಗೂಡಿಗೆ ಬಂದು ಸೇರಿದವು.
ಅದೇ ಸಮಯಕ್ಕೆ ಒಬ್ಬ ರೈತ ಕೈಯಲ್ಲಿ ಬುತ್ತಿ ಹಿಡುಕೊಂಡು ಬರುತ್ತಿದ್ದ. ರೈತನಿಗೆ ದಾರಿ ನಡೆದು ಸುಸ್ತಾಗಿ, ಕಾಗೆಗಳಿರುವ ಮರದ ಕೆಳಗೆ ವಿಶ್ರಾಂತಿ ಪಡೆಯಲು ಕುಳಿತುಕೊಂಡನು.
ಕಾಗೆಗಳು ಬುತ್ತಿಯನ್ನು ನೋಡಿ ಸಂತೋಷದಿಂದ, ದೇವರಿಗೆ ಕೃತಜ್ಞತೆ ಹೇಳಿದರು. ಆ ದೇವರೇ ನಮಗಾಗಿ ಈತನನ್ನು ಇಲ್ಲಿಗೆ ಕಳುಹಿಸಿದ್ದಾನೆ. ಇವತ್ತು ನಾವ್ಯಾರೂ ಉಪವಾಸ ಬೀಳೋದಿಲ್ಲ, ಹೇಗಾದರೂ ಮಾಡಿ ಬುತ್ತಿ ಎತ್ತಿಕೊಂಡು ಬರಬೇಕು ಎಂದು ಅಂದುಕೊಂಡವು.
Also Read – ಕಾಗೆ ಮತ್ತು ಕೋಗಿಲೆ
ಕಾಗೆಗಳು ಮೆಲ್ಲಗೆ ಹೋಗಿ ಬುತ್ತಿಯನ್ನು ಎತ್ತಿಕೊಂಡು ಬಂದು ತಮ್ಮ ಮರಿಗಳಿಗೆ ತಿನ್ನುಸುತ್ತಿರುವಾಗ ಬುತ್ತಿಯಿಂದ ಲೋಟ ಜಾರಿ ನೇರವಾಗಿ ರೈತನ ತಲೆಯ ಮೇಲೆ ಬಿದ್ದಿತು.
ರೈತ ತಕ್ಷಣ ಎದ್ದು ನೋಡಿದರೆ, ಕಾಗೆಗಳು ಬುತ್ತಿಯನ್ನು ತಿನ್ನುತ್ತಿದ್ದವು. ಅಲ್ಲಿಂದ ಹುಶ್ಯೂ! ಹುಶ್ಯೂ! ಎಂದು ಓಡಿಸಲು ಪ್ರಯತ್ನಿಸಿದ, ಆದರೆ ಕಾಗೆಗಳು ಬುತ್ತಿಯನ್ನು ಬಿಟ್ಟು ಹೋಗಲಿಲ್ಲ. ಅವನು ಕೂಡಲೇ ಮರವೇರಿ ಕಾಗೆಗಳಿರುವ ಕೊಂಬೆಯ ಹತ್ತಿರ ಹೋಗುತ್ತಿದ್ದ.
ಆಗಲೇ ಆ ಕಡೆಯಿಂದ ಸಿಂಹವೊಂದು ನಡೆದು ಬರುತ್ತಾ ಇತ್ತು. ಸಿಂಹವನ್ನು ನೋಡಿದ ರೈತನು ಅಲ್ಲೇ ಅಡಗಿಕೊಂಡನು.
ಸಿಂಹ ಸ್ವಲ್ಪ ಹೊತ್ತು ಅಲ್ಲೇ ಅಡ್ಡಾಡಿ ಹಿಂತಿರುಗಿ ಹೋಯಿತು. ರೈತ ಕಾಗೆಗಳಿಗೆ ಧನ್ಯವಾದ ಹೇಳಿ ಮತ್ತು ಬುತ್ತಿಯನ್ನು ಕಾಗೆಗಳಿಗೆ ಬಿಟ್ಟು ಅಲ್ಲಿಂದ ಇಳಿದು ಮನೆಗೆ ಹೋದ.
ಕಥೆಯಲ್ಲಿನ ನೀತಿ / Moral of this Story: ಒಂದೊಂದು ಸಲ ಇನ್ನೊಬ್ಬರು ಮಾಡುವ ಕೆಲಸ ನಮ್ಮ ಮೇಲುಗಾಗಿಯೇ ಆಗಿರುತ್ತದೆ.
ಆಗುವುದೆಲ್ಲಾ ಒಳ್ಳೆಯದಕ್ಕೆ ಎನ್ನುವಂತೆ ದೇವರು ಕೆಲವರ ಮೂಲಕ ನಮ್ಮ ಅವಶ್ಯಕತೆಗಳನ್ನು ಪೂರೈಸುತ್ತಾನೆ ಮತ್ತು ರಕ್ಷಿಸುತ್ತಾನೆ.
2. ಹಸು ಮತ್ತು ಹೊಲ – Kannada Stories in PDF
ಒಂದು ಗ್ರಾಮದಲ್ಲಿ ಸಿದ್ದಪ್ಪ ಎನ್ನುವ ಒಬ್ಬ ವ್ಯಕ್ತಿ ಇದ್ದ, ಅವನು ಪ್ರಾಮಾಣಿಕ ಮತ್ತು ನಿಷ್ಟಾವಂತ ವ್ಯಕ್ತಿಯಾಗಿದ್ದನು. ಪಕ್ಕದ ಓಣಿಯಲ್ಲಿ ಸೋಮು ಎಂಬ ವ್ಯಕ್ತಿ ಇದ್ದ, ಸಿದ್ದಪ್ಪನು ಅವನಿಂದ ಒಂದು ಹಸುವನ್ನು ಕೊಂಡುಕೊಳ್ಳುತ್ತಾನೆ.
ಸೋಮು ಸಹ ತನ್ನ ಹಸು ಮಾರಿ ಬಂದ ಹಣಕ್ಕೆ ಇನ್ನು ಸ್ವಲ್ಪ ಹಣ ಸೇರಿಸಿ ಭೂಮಿಯನ್ನು ಖರೀದಿಸಿ, ಅದರಲ್ಲಿ ಭತ್ತವನ್ನು ಬೆಳೆಯಲು ಶುರುಮಾಡಿದ.
ಸಿದ್ದಪ್ಪನು ಹಸುವಿಗೆ ಹಸಿ ಹುಲ್ಲು ಹಾಕಿ ತುಂಬಾ ಕಾಳಜಿಯಿಂದ ನೋಡಿಕೊಂಡನು. ಕೆಲವು ದಿನ ಆದ ಮೇಲೆ ಹಸು ಈಯಿತು. ಸಿದ್ದಪ್ಪ ಹಾಲು ಕರೆಯುತ್ತಿದ್ದಾಗ, ಸೋಮು ಬಂದು ಹಾಲು ಕರೆಯಲು ಅನುಮತಿಸುವುದಿಲ್ಲ ಮತ್ತು ಕರುವನ್ನು ಸಹ ತನ್ನದೆಂದನು.
ಸಿದ್ದಪ್ಪ “ಏಕೆ?” ಎಂದು ಕೇಳಿದ.
ಅದಕ್ಕೆ ಸೋಮು “ನಾನು ಹಸುವನ್ನು ಮಾತ್ರ ಮಾರಿದ್ದೇನೆ, ಆದರೆ ಹಾಲು, ಕರುವನ್ನಲ್ಲ” ಎಂದು ಉತ್ತರಿಸಿದನು.
ಸಿದ್ದಪ್ಪ “ಬರಿ ಹಸುವು ತಗೊಂಡು ನಾನೇನು ಮಾಡಲಿ? ಹುಲ್ಲು, ನೀರು ಹಾಕೋದು ನಾನು, ಹೈನು ತಿಂಬೋದು ನೀನಾ?” ಎಂದು ಪ್ರಶ್ನಿಸಿದ.
ಸೋಮು “ಇದು ನನಗೆ ಸೇರಿದ್ದು” ಎಂದು ಕರುವನ್ನು ಹಿಡುಕೊಂಡು ಹೋದ.
ಸಿದ್ದಪ್ಪ ನ್ಯಾಯಕ್ಕಾಗಿ ಊರಿನ ಮುಖಂಡರಲ್ಲಿ ಹೋಗಿ ತನಗಾದ ಅನ್ಯಾಯವನ್ನು ಬಿಚ್ಚಿಹೇಳಿದ. ಊರಿನ ಮುಖಂಡರೆಲ್ಲ ಸಭೆ ಸೇರಿ, ಅವನನ್ನು ಕರೆ ಕಳುಹಿಸಿದರು. ಅವನು ಊರಿನ ಮುಖಂಡರಲ್ಲಿಗೆ ಬಂದ ಮೇಲೆ “ಸೋಮು ನಿನ್ನ ಹಸುವನ್ನು ಈತನಿಗೆ ಮಾರಿದ್ದೀಯಾ, ಮತ್ತೇಕೆ? ಹಾಲು ಕರೆಯಲು ಬಿಡಲಿಲ್ಲ ಮತ್ತು ಕರುವನ್ನು ಹಿಡುಕೊಂಡು ಹೋದೆ?” ಎಂದು ಪ್ರಶ್ನಿಸಿದರು.
ಅದಕ್ಕೆ ಸೋಮು “ನಾನು ಹಸುವನ್ನು ಮಾತ್ರ ಮಾರಿದ್ದೇನೆ ಆದರೆ ಕರುವನ್ನಲ್ಲ” ಎಂದು ಉತ್ತರಿಸಿ ಅಲ್ಲಿಂದ ಹೊರಟು ಹೋದ.
ಮಾರನೆಯ ದಿವಸ ಸೋಮು ಹೊಲದಲ್ಲಿ ಭತ್ತವನ್ನು ಕಟಾವು ಮಾಡುತ್ತಿದ್ದಾಗ ಅವನ ನೆರೆಯವನು ಬಂದು ಭತ್ತ ಕಟಾವು ಮಾಡುವುದನ್ನು ನಿಲ್ಲಿಸಿದನು. ಏಕೆ ಎಂದು ಸೋಮು ಕೇಳಿದಾಗ “ನಾನು ನಿನಗೆ ಭೂಮಿಯನ್ನು ಮಾತ್ರ ಮಾರಿದ್ದೇನೆ, ಅದರಲ್ಲಿ ಬೆಳೆಯುವ ಬೆಳೆಯನ್ನಲ್ಲ” ಎಂದು ಉತ್ತರಕೊಟ್ಟನು.
ಸೋಮು ಅಲ್ಲಿಂದ ಸೀದಾ ಊರಿನ ಮುಖಂಡರ ಬಳಿಗೆ ಬಂದು ನಡೆದಿದ್ದನ್ನೆಲ್ಲಾ ವಿವರಿಸಿದನು. ಅದಕ್ಕೆ ಮುಖಂಡರು ಸಿದ್ದಪ್ಪನ ವಿಷಯದಲ್ಲಿ ನೀನು ಮಾಡಿದ್ದು ಸರಿ ಎನ್ನುವುದಾದರೆ, ನಿನ್ನ ವಿಷಯದಲ್ಲಿ ಅವನು ಮಾಡಿದ್ದೂ ಸರಿಯೇ; ಒಂದು ವೇಳೆ ನಿನ್ನ ವಿಷಯದಲ್ಲಿ ನಿನ್ನ ನೆರೆಯವನು ಮಾಡಿದ್ದು ತಪ್ಪು ಎನ್ನುವುದಾದರೆ, ನೀನು ಸಿದ್ದಪ್ಪನ ವಿಷಯದಲ್ಲಿ ಮಾಡಿದ್ದು ಕೂಡ ತಪ್ಪೇ” ಎಂದು ಹೇಳಿದರು.
ಮುಖಂಡರ ಮಾತುಗಳಿಂದ ಸೋಮು ಎದೆಗೆ ಬಾಣ ಬಿಟ್ಟಾಂತಾಯಿತು.
ಅಲ್ಲಿಂದ ತಕ್ಷಣ ಸಿದ್ದಪ್ಪನ ಬಳಿಗೆ ಹೋಗಿ ನಿನ್ನ ವಿಷಯದಲ್ಲಿ ನಾನು ಮಾಡಿದ್ದು ತಪ್ಪೇ, “ಇದು ನಿನಗೆ ಮಾತ್ರ ಸೇರಿದ್ದು, ಇದರ ಮೇಲೆ ನನಗೆ ಯಾವ ಅಧಿಕಾರವಿಲ್ಲ ಇಗೋ ಹಸುವಿನ ಕರು” ಎಂದು ಆತನಿಗೆ ಒಪ್ಪಿಸಿ ಹೋದನು ಮತ್ತು ನೆರೆಯವನು ಬಂದು ಭತ್ತವನ್ನು ಕಟಾವು ಮಾಡ್ಲಿಕ್ಕೆ ಬಿಟ್ಟುಕೊಟ್ಟನು.
ಕಥೆಯಲ್ಲಿನ ನೀತಿ Moral of this Story: ಒಬ್ಬರಿಗೆ ಮೋಸ ಮಾಡಿದರೆ ನಮ್ಮನ್ನು ಮೋಸ ಮಾಡೋರು ಕೂಡ ಹುಟ್ಟಿರುತ್ತಾರೆ
3. ಕೋತಿ ಮಾಡಿದ ತುಂಟತನ – Kannada Stories in PDF
ರಾಜಾಪುರ ಎನ್ನುವ ಊರಿನಲ್ಲಿ ಚಂದ್ರ ಎಂಬ ವ್ಯಕ್ತಿ ಇದ್ದನು. ಅವನು ಸುಮಾರು ವರ್ಷಗಳಿಂದ ಒಂದು ನದಿಯ ದಡದಲ್ಲಿರುವ ಒಂದು ದಿಬ್ಬದ ಮೇಲೆ ಮನೆ ಕಟ್ಟಿಕೊಂಡು ವಾಸವಾಗಿದ್ದನು. ಮಳೆಗಾಲದಲ್ಲಿ ಹಗಲು ರಾತ್ರಿ ಮಳೆ ಸುರಿದು ಒಂದು ದಿವಸ ನದಿ ತುಂಬಿ ಹರಿದು ಮನೆ ಒಳಗೆ ನೀರು ಹೋಗಿ ಮನೆ ಕೊಚ್ಚಿಕೊಂಡು ಹೋಯಿತು.
ಇದರಿಂದ ಚಂದ್ರನು ಅಲ್ಲಿರುವುದು ಸುರಕ್ಷಿತವಲ್ಲವೆಂದು ತಿಳಿದು ನದಿಯಿಂದ ಮೂರು ಕಿ.ಮೀ. ದೂರದಲ್ಲಿ ಮನೆಯನ್ನು ಕಟ್ಟಿಕೊಂಡನು. ಪ್ರಾರಂಭದಲ್ಲಿ ಹೊಸ ಜಾಗ ಬದುಕಲು ಇಬ್ಬಂದಿ ಆಯಿತು.
ಹೀಗೆ ಆರು ತಿಂಗಳು ಕಳೆದವು. ಹಳೆ ಊರು ಬಿಟ್ಟು ಹೊಸ ಊರಿಗೆ ಬಂದಾಗ ಅಲ್ಲಿ ಯಾವುದೇ ಗಿಡಗಳು ಇದ್ದಿಲ್ಲ. ಬೇಸಿಗೆಯ ಕಾಲದಲ್ಲಿ ಬಿಸಿಲು ತಲೆಸುಡುವಂತ್ತಿತ್ತು.
ಅದಕ್ಕಾಗಿ ಚಂದ್ರನು ನಾಲ್ಕು ಬೇವಿನ ಸಸಿ ಮತ್ತು ತೆಂಗಿನ ಸಸಿಗಳನ್ನು ನೆಟ್ಟನು ಮತ್ತು ಮನೆಯ ಮುಂದೆ ಒಂದು ಸಣ್ಣ ಹೂ ತೋಟ ಮಾಡಿ, ಅವುಗಳನ್ನು ಯಾವ ದನಕರುಗಳು ತಿನ್ನದಂತೆ ಸುತ್ತಲೂ ಮುಳ್ಳು ತಂತಿಯನ್ನು ಹಾಕಿದ. ಬೇಗ ಬೆಳೆಯಲು ಗೊಬ್ಬರ, ನೀರು ಹಾಕಿ ಕಾಳಜಿ ಮಾಡಿದ.
ಹೀಗೆ ಸುಮಾರು ಐದು ವರ್ಷಗಳ ಕಾಲ ಜೋಪಾನ ಮಾಡಿದ. ಆರನೇ ವರ್ಷ ತೆಂಗಿನ ಮೊಗ್ಗು ಬಿಡುತ್ತಿರುವಾಗ ನಾಲ್ಕು ಕೋತಿಗಳು ಅವನ ಮನೆ ಹತ್ತಿರ ಬಂದವು. ಅವನು ಸುಮ್ಮನಿರಲಾರದೆ ಕೋತಿಗಳಿಗೆ ತಿಂಡಿ ಕೊಟ್ಟು ಅವುಗಳ ಜೊತೆ ಸ್ನೇಹ ಸಂಬಂಧ ಬೆಳೆಸಿದ. ಇನ್ನು ಮೇಲೆ ಅವೂ ಕೂಡ ಅವನ ಜೊತೆ ಇರುವಂತೆ ಸಲಿಗೆ ಕೊಟ್ಟನು.
ಒಂದು ದಿನ ಚಂದ್ರನು ಕೆಲಸದ ಮೇಲೆ ಪಟ್ಟಣಕ್ಕೆ ಹೋಗಲು ಸಿದ್ಧನಾಗುತ್ತಾನೆ. ಕೋತಿಗಳ ಮೇಲೆ ನಂಬಿಕೆಯಿಟ್ಟು ಹೂ ತೋಟ, ತೆಂಗಿನಮರ ಮತ್ತು ಮನೆಯನ್ನು ಹಾಗೆ ಬಿಟ್ಟು ಹೋಗ್ತಾನೆ.
Aslo Read – ಜಾಣ ಕರಡಿ
ಅವನು ತನ್ನ ಎಲ್ಲಾ ಕೆಲಸಗಳನ್ನು ಮುಗಿಸಿಕೊಂಡು ಸಾಯಂಕಾಲ ಬಂದು ನೋಡಿದಾಗ ಮನೆಯಲ್ಲಿರುವ ಎಲ್ಲಾ ದವಸಧಾನ್ಯ, ಸಾಮಾನುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಹೂಗಿಡಗಳನ್ನೆಲ್ಲಾ ಕಿತ್ತು ಹಾಕಿದ್ದವು ಮತ್ತು ತೆಂಗಿನ ಮೊಗ್ಗುಗಳನ್ನು ಸಹ ಕಿತ್ತು ಹಾಕಿದ್ದವು. ಅವನು ಕೋತಿಗಳನ್ನು ನಂಬಿ ಮನೆಯನ್ನು ಬಿಟ್ಟು ಹೋದೆನಲ್ಲ ಎಂದು ಪೇಚಾಡಿದ.
ಕಥೆಯಲ್ಲಿನ ನೀತಿ / Moral of this Story:
- ಮಂಗನ ಬುದ್ಧಿ ಚಂಚಲ ಮತ್ತು ಅಶಿಸ್ತಿನಿಂದ ಕೂಡಿರುತ್ತದೆ. ಯಾವಾಗಲೂ ಒಂದೇ ಕಡೆ ನಿಲ್ಲಂಗಿಲ್ಲ.
- ಇನ್ನೊಬ್ಬರ ಮೇಲೆ ಅತಿಯಾದ ನಂಬಿಕೆ ಒಳ್ಳೆಯದಲ್ಲ