Hi Everyone, welcome to Moral Storys – Kannada Neethi Kathegalu
Here you can see Moral Stories in Kannada. Easy to read and understand. Moral Stories help to improve Knowledge, Positive character, Ethics and Life Values. Moral Stories play very important role in our Life. Moral Stories in Kannada, Stories in Kannada with Moral. Kannada Neethi Kathegalu

1. ಮಾಯಾ ಬಾಗಿಲು / Magic Door – Moral Story
ಒಂದು ಕಾಲದಲ್ಲಿ ಒಬ್ಬ ಮನುಷ್ಯನಿದ್ದನು. ಅವನ ಹೆಸರು ದೊಡ್ಡ ಈಶಪ್ಪ. ಡುಡ್ಡಿನಾಸೆ ಜಾಸ್ತಿ ಇರುವುದರಿಂದ ಇವನನ್ನು ಎಲ್ಲರೂ ದುಡ್ಡೀಶ ದುಡ್ಡೀಶ ಎಂದು ಕರೆಯುತ್ತಿದ್ದರು. ಬಹಳ ಹಣದಾಸೆವುಳ್ಳವನಾಗಿದ್ದನು ಮತ್ತು ಬೇಗ ಶ್ರೀಮಂತನಾಗಿಬಿಡಬೇಕೆಂಬ ಆಶೆಯನ್ನು ಹೊಂದಿದ್ದನು. ಅದಕ್ಕಾಗಿ ಅವನು ಹಣ ಗಳಿಸುವ ಸುಲಭವಾದ ಮಾರ್ಗವನ್ನು ಹುಡುಕುತ್ತಿದ್ದ.
ಒಂದು ದಿನ ಅವನ ಸ್ನೇಹಿತನು ದಾರಿಯಲ್ಲಿ ಭೇಟಿಯಾದಾಗ ಅವನನ್ನು ಕೇಳಿದ, “ಅತಿಕಡಿಮೆ ಸಮಯದಲ್ಲಿ ಅತಿದೊಡ್ಡ ಶ್ರೀಮಂತನಾಗೋದು ಹೇಗೆ” ಎಂದು.
ಅದಕ್ಕವನು ಇಲ್ಲಿಂದ ಹತ್ತು ಕಿಲೋಮೀಟರ್ ದೂರದಲ್ಲಿ ಒಬ್ಬ ಮಂತ್ರವಾದಿ ಇದ್ದಾನೆ. ನೀನು ಅವನಲ್ಲಿಗೆ ಹೋಗಿ ಮಂತ್ರಗಳಿಂದ ದುಡ್ಡು ಮಾಡುವ ದಾರಿ ಕೇಳು. ಆ ಮಂತ್ರವಾದಿ ನಿಂಗೆ ಸುಲಭವಾಗಿ ದುಡ್ಡು ಮಾಡುವುದನ್ನು ಹೇಳಿಕೊಡುತ್ತಾರೆ, ಆಗ ನೀನು ಬೇಗ ಶ್ರೀಮಂತನಾಗ್ತಿಯ ಎಂದು ಹೇಳಿ ಹೋಗುತ್ತಾನೆ.
ಅವನ ಮಾತಿನಂತೆ ಈಶಪ್ಪನು ಆಗಲೇ ಅಲ್ಲಿಂದ ಮಂತ್ರವಾದಿ ಬಳಿಗೆ ಹೋಗುತ್ತಾನೆ. ಮಂತ್ರವಾದಿ, “ಯಾರು ನೀವು, ಏನು ಬೇಕಿತ್ತು?” ಎಂದು ಕೇಳುತ್ತಾನೆ.
ಅದಕ್ಕೆ ಈಶಪ್ಪನು ನನಗೆ ದುಡ್ಡು ಮಾಡುವ ಮಂತ್ರಗಳ ಬಗ್ಗೆ ತಿಳಿಸಿಕೊಡಿ” ಎಂದು ಕೇಳ್ತಾನೆ. ಮಂತ್ರವಾದಿ – ಅದು ಅಷ್ಟು ಸುಲಭದ ಕೆಲಸ ಅಲ್ಲ ಮತ್ತು ಅದರಿಂದ ಲಾಭವಿದ್ದಷ್ಟು ನಷ್ಟವೂ ಕೂಡ ಇದೆ ಎಂದು ಉತ್ತರಿಸುತ್ತಾನೆ.
ಈಶಪ್ಪನು ಅದೆಲ್ಲಾ ನಂಗೆ ಗೊತ್ತಿಲ್ಲ ಮಂತ್ರಗಳನ್ನು ಕಲಿತುಕೊಂಡೆ ಇಲ್ಲಿಂದ ಹೋಗೋದು. ಜೀವನದಲ್ಲಿ ಎಲ್ಲದಕ್ಕೂ ಸಿದ್ದನಾಗೇ ಬಂದಿದ್ದೇನೆ ದಯಮಾಡಿ ಆ ಮಂತ್ರಗಳನ್ನು ತಿಳಿಸಿಕೊಡಿ ಎಂದು ಕೇಳಿದನು.
ಕೊನೆಗೆ ಮಂತ್ರವಾದಿ, ಅವನ ಕಿವಿಯಲ್ಲಿ ಎರಡು ಮಂತ್ರಗಳನ್ನು ಹೇಳಿದ ಮತ್ತು ನಿಧಿ ಇರುವ ಜಾಗಕ್ಕೆ ಹೋಗುವಂತೆ ಹೇಳಿದ. ಈಶಪ್ಪನು ಅಲ್ಲಿಂದ ಆ ನಿಧಿ ಇರುವ ಜಾಗದ ಕಡೆ ಹೋದ.
ಒಂದು ಹಳೆಯದಾದ ಮಾಯಾ ಬಂಗ್ಲೆ ಹತ್ತಿರ ಬಂದು ನಿಂತನು. ಅದಕ್ಕೊಂದು ಮಾಯಾ ಬಾಗಿಲು ಇತ್ತು ಅದರೊಳಗೆ ಪ್ರವೇಶಿಸಬೇಕಾದರೆ ಬಾಗಿಲು ತೆರೆಯುವ ಒಂದು ಮಂತ್ರವನ್ನು ಹೇಳಬೇಕು. ಈಶಪ್ಪನು, ಮಂತ್ರವಾದಿ ಹೇಳಿದಂತೆ ಮಂತ್ರವನ್ನು ಮೂರು ಬಾರಿ ಜಪಿಸಿದ. ಆಗ ಮಾಯಾ ಬಾಗಿಲು ತೆರೆದುಕೊಂಡಿತು.
ಅವನು ಒಳಗೆ ಹೋಗಿ ನೋಡಿದಾಗ ಬಂಗ್ಲೆ- ಬೆಳ್ಳಿ ಬಂಗಾರ ವಜ್ರಗಳಿಂದ ತುಂಬಿತ್ತು. ಅದನ್ನು ನೋಡಿ ಅವನ ಸಂತೋಷ ಗಗನಮುಟ್ಟಿತು. ಆಕಾಶದಲ್ಲಿ ತೇಲುತ್ತಿದ್ದಂತೆ ಭಾವಿಸಿದ, ಸಂತೋಷದಿಂದ ಕೂಗಲು ಶುರುಮಾಡಿದ.
ಅದನ್ನೆಲ್ಲ ತನ್ನ ಮನೆಗೆ ಹೊಯ್ಯಲು ಚೀಲಕ್ಕೆ ತುಂಬಿದನು. ಹೊರಗೆ ಬರಬೇಕಾದರೆ ಎರಡನೇ ಮಂತ್ರವನ್ನು ಹೇಳಬೇಕಾಗಿತ್ತು. ಆದರೆ ಸಂತೋಷದಲ್ಲಿ ಹೊರಗೆ ಬರಬೇಕಾದ (ಬರುವ) ಎರಡನೇ ಮಂತ್ರವನ್ನು ಮರೆತು ಬಿಟ್ಟಿದ್ದ. ಏನು ಮಾಡಿದರೂ ಎಷ್ಟು ಕೂಗಿದರು ಬಾಗಿಲು ತೆರೆಯಲಿಲ್ಲ.
ಕೆಲವು ದಿನಗಳ ಕಾಲ ಆತನು ಅದರಲ್ಲೇ ಇದ್ದನು. ಆ ಕಡೆ ಯಾರು ಹೋಗದ ಕಾರಣ ಅವನನ್ನು ಹೊರಗೆ ತರಲಿಕ್ಕೆ ಅವಕಾಶ ಇಲ್ಲದೆ ಹೋಯಿತು. ಕೊನೆಯ ಪಕ್ಷ ಊಟ ನೀರು ಇಲ್ಲದೆ ಅಲ್ಲಿಯೇ ಪ್ರಾಣ ಬಿಟ್ಟನು.
ಕಥೆಯಲ್ಲಿನ ನೀತಿ / Moral of this Story :
- ಅತಿಯಾದ ಆಸೆಯಿಂದ ದೊರಕುವ ಪ್ರತಿಫಲ ನಾಶನ. ಇದ್ದ ಸ್ಥಿತಿಯನ್ನೂ ಕಳೆದುಕೊಳ್ಳುತ್ತವೆ.
- ಸಂಪತ್ತು ಎಷ್ಟಿದ್ದರೂ ಹೋಗುವ ಪ್ರಾಣವನ್ನು ಉಳಿಸುವುದಿಲ್ಲ.
- ಬೆಳ್ಳಿ ಬಂಗಾರ ಎಷ್ಟಿದ್ದರೂ ತಿನ್ನಲು ಬರುವುದಿಲ್ಲ ಬಾಯಾರಿಕೆಯನ್ನು ತಣಿಸುವುದಿಲ್ಲ ಹಸಿವೆಯನ್ನು ತೀರಿಸುವುದಿಲ್ಲ.
2. ನರಿ ಮತ್ತು ಇಲಿಗಳು / Fox and Mice – Moral Story
ಒಂದು ಕಾಡಿನಲ್ಲಿ ಒಂದು ನರಿ ಇದ್ದಿತು. ನರಿ ಯಾವಾಗಲೂ ಇತರ ಪ್ರಾಣಿಗಳನ್ನು ಮೋಸಗೊಳಿಸುತ್ತಾ ಇತ್ತು. ಕಾಡಿನಲ್ಲಿ ಒಂದು ದಿನ ಇಲಿಗಳ ಜೊತೆ ಸ್ನೇಹ ಮಾಡಲು ಇಲಿಗಳ ಹತ್ತಿರ ಬಂದು ಕೇಳಿತು. ಇಲಿಗಳು ನರಿಯನ್ನು ತಮ್ಮ ಸ್ನೇಹಿತನನ್ನಾಗಿ ಸ್ವೀಕರಿಸಿದವು.
ನರಿ ಇಲಿಗಳಿಗೆ ‘ಸ್ವಲ್ಪ ದೂರದಲ್ಲಿ ಒಂದು ಸುಂದರವಾದ ಹಣ್ಣಿನ ತೋಟವಿದೆ, ಅಲ್ಲಿ ಸಿಹಿಯಾದ ಮತ್ತು ಬಗೆಬಗೆಯ ಹಣ್ಣುಗಳಿವೆ’ ಎಂದು ಹೇಳಿತು.
ನರಿಯ ಮಾತು ಕೇಳಿ ಇಲಿಗಳಿಗೆ ತುಂಬಾ ಸಂತೋಷವಾಯಿತು ಮತ್ತು ಅಲ್ಲಿಗೆ ಹೋಗುವುದು ಹೇಗೆ? ಎಂದು ಕೇಳಿದವು.
ಅದಕ್ಕೆ ನರಿ “ನನಗೆ ಈ ದಾರಿ ಗೊತ್ತು, ನಾನು ನಿಮ್ಮನ್ನು ಕರೆದುಕೊಂಡು ಹೋಗ್ತೀನಿ” ಎಂದು ಹೇಳಿತು. ನರಿ ಮತ್ತು ಇಲಿಗಳು ಹೊರಡಲು ಸಿದ್ಧರಾದವು.
ಇಲಿಗಳು ಅಲ್ಲಿಗೆ ಹೋಗಿ ನೋಡಿದರೆ ಯಾವ ತೋಟವೂ ಇರಲಿಲ್ಲ. ಅಲ್ಲಿನ ಪ್ರದೇಶವೆಲ್ಲ ಪ್ರಾಣಿಗಳ ಮೂಳೆಗಳಿಂದ ತುಂಬಿತ್ತು ಮತ್ತು ಯಾವ ಪ್ರಾಣಿಗಳ ಸುಳಿವು ಇಲ್ಲದ ಪ್ರದೇಶವಾಗಿತ್ತು.
ಇಲಿಗಳು ಭಯಭೀತರಾಗಿ “ಎಲ್ಲಿದೆ ಹಣ್ಣಿನ ತೋಟ?, ಇಲ್ಲಿ ಯಾವ ತೋಟನೂ ಕಾಣಿಸ್ತಿಲ್ಲವಲ್ಲ” ಎಂದು ಕೇಳಿದವು.
ನರಿ ನಗುತ್ತಾ “ಇಲ್ಲಿ ಯಾವ ತೋಟನೂ ಇಲ್ಲ, ನಿಮ್ಮನ್ನು ಇಲ್ಲಿವರೆಗೆ ಬರುವಂತೆ ಮಾಡುವ ಸಲುವಾಗಿ ತೋಟವಿದೆಯೆಂದು ಸುಳ್ಳು ಹೇಳಿದೆ” ಎಂದಿತು. ಮತ್ತೆ ಮುಂದುವರೆದು”ನಿಮ್ಮನ್ನು ಬೇಟೆಯಾಡಿ ತಿನ್ನಲಿಕ್ಕೆ ನಿಮ್ಮ ಜೊತೆ ಸ್ನೇಹ ಮಾಡುವಂತೆ ನಟಿಸಿದೆ” ಎಂದಿತು.
ಇಲಿಗಳು ಭಯದಿಂದ ನಡುಗಿದವು. ನರಿ ಒಂದೊಂದು ಇಲಿಗಳನ್ನು ಬೇಟೆಯಾಡಿ ತಿನ್ನುತ್ತಾ ಇತ್ತು. ಅದರಲ್ಲಿ ಒಂದು ಇಲಿ ತಪ್ಪಿಸಿಕೊಂಡು ತಾನಿರುವ ಸ್ಥಳಕ್ಕೆ ಹೋಯಿತು. ಆ ಇಲಿ ಈ ವಿಷಯವನ್ನು ಉಳಿದೆಲ್ಲಾ ಪ್ರಾಣಿಗಳಿಗೆ ತಿಳಿಸಿತು. ಎಲ್ಲಾ ಪ್ರಾಣಿಗಳು ಸೇರಿ ನರಿಗೆ ತಕ್ಕ ಪಾಠವನ್ನು ಕಲಿಸಬೇಕೆಂದು ನಿರ್ಧರಿಸಿದವು.
ಎಲ್ಲಾ ಪ್ರಾಣಿಗಳು ಸೇರಿ ನರಿ ಬರುವ ದಾರಿಯಲ್ಲಿ ಒಂದು ಅಗಲವಾದ ಮತ್ತು ಆಳವಾದ ಕುಣಿಯನ್ನು ತೋಡಿ, ಅದರ ಮೇಲೆ ಟೊಳ್ಳು ಸಪ್ಪೆ, ಹುಲ್ಲು ಹಾಕಿ ಗುಂಡಿ ಕಾಣದಂತೆ ಮುಚ್ಚಿಟ್ಟವು. ಮಾರನೆಯ ದಿನ ನರಿ ಆಹಾರಕ್ಕಾಗಿ ಪ್ರಾಣಿಗಳ ಬಳಿಗೆ ಬರುತ್ತಿದ್ದಾಗ ತೋಡಿದ ಕುಣಿಯಲ್ಲಿ ಬಿದ್ದಿತು.
ಆಗ ಎಲ್ಲಾ ಪ್ರಾಣಿಗಳು ಸೇರಿ ನರಿಯನ್ನು ಜೀವಂತ ಸಮಾಧಿ ಮಾಡಿದವು. ಇಲಿಗಳು ಯಾವ ಭಯವೂ ಇಲ್ಲದೆ ಆರಾಮಾಗಿ ಜೀವಿಸಿದವು.
ಕಥೆಯಲ್ಲಿನ ನೀತಿ / Moral of this Story :
- ಜೀವನದಲ್ಲಿ ಯಾರನ್ನು ಕುರುಡರಂತೆ ನಂಬಬಾರದು.
- ಇನ್ನೊಬ್ಬರಿಗೆ ಮೋಸ ಮಾಡಿದರೆ ನಮ್ಮನ್ನು ಮೋಸ ಮಾಡೋರು ಇರುತ್ತಾರೆ.
3. ಮಾಸ್ಟರ್ ಬುಲ್ಪ್ರಾಗ್ – Moral Story
Kannada Neethi Kathegalu
ಒಂದು ದಿನ ಎಲ್ಲಾ ಕಪ್ಪೆಗಳು ಸೇರಿ ತಮ್ಮ ಪಿತೃಗಳ ಕಾಲದಿಂದ ರೂಢಿಯಲ್ಲಿರುವ ಜಾತ್ರೆಯನ್ನು ವಿಜ್ರಂಭಣೆಯಿಂದ ಆಚರಿಸುತ್ತಿದ್ದವು. ಆ ಜಾತ್ರೆಗೆ ಒಂದು ವಿಶೇಷ ಪ್ರಾವೀಣ್ಯತೆ ಹೊಂದಿದ ಮಾಸ್ಟರ್ ಬುಲ್ಪ್ರಾಗ್ ಕಪ್ಪೆಯನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಿಸಿದರು.
ಬಾವಿಯಲ್ಲಿರುವ ಒಂದು ಕಪ್ಪೆ ಜಂಬ ಕೊಚ್ಚಿಕೊಳ್ಳುತ್ತ ಮಾಸ್ಟರ್ ಬುಲ್ಪ್ರಾಗ್ ಎಂಬ ಕಪ್ಪೆಯನ್ನು ಕೇಳಿತು ಅದೆನಂದರೆ ನಿಮ್ಮ ಸಾಮ್ರಾಜ್ಯ ಇದರಷ್ಟು ದೊಡ್ಡದು ಇದೆಯಾ ಎಂದು ಕೇಳಿತು. ಅದಕ್ಕೆ ಮಾಸ್ಟರ್ ಬುಲ್ಪ್ರಾಗ್ ಇದಕ್ಕಿಂತ ದೊಡ್ಡದಾಗಿದೆ ಎಂದು ಹೇಳಿತು.
ಸಣ್ಣ ಕಪ್ಪೆ ಅಲ್ಲಿಂದ ಜಿಗಿದು ಇದರಷ್ಟು ದೊಡ್ಡದಾ? ನಿಮ್ಮ ಸಾಮ್ರಾಜ್ಯ ಎಂದು ಕೇಳಿತು. ಮತ್ತೆ ಮಾಸ್ಟರ್ ಬುಲ್ಪ್ರಾಗ್ ಅದಕ್ಕಿಂತ ದೊಡ್ಡದು ಎಂದು ಹೇಳಿತು. ಬಾವಿಯ ಕಪ್ಪೆ ಇರುವ ಸ್ಥಳದಿಂದ ಮೂರು ಜಿಗಿತ ಜಿಗಿದು ಇಷ್ಟಗಲ ಇರಬಹುದಾ? ಎಂದು ಕೇಳಿತು.
ಅದಕ್ಕೆ ಬುಲ್ಪ್ರಾಗ್ ಹೀಗೆ ಉತ್ತರಿಸಿತು – ನಿನ್ನ ಜೀವಮಾನವಿಡೀ ಜಿಗಿದರೂ ಕೂಡ ನನ್ನ ಸಾಮ್ರಾಜ್ಯದ ಕಾಲು ಭಾಗದಷ್ಟು ಇರುವುದಿಲ್ಲ. ಅಳತೆಗೂ ಮೀರಿರುವ ಬಹು ವಿಶಾಲವಾದ ಸಾಮ್ರಾಜ್ಯ ನನ್ನದು.
ಬಾವಿಯ ಕಪ್ಪೆ, ಹಾಗಾದರೆ ತೋರಿಸು ಎಲ್ಲಿದೆ ಎಷ್ಟಿದೆ ನಿನ್ನ ಸಾಮ್ರಾಜ್ಯ ಎಂದಿತು. ಸಮುದ್ರ ಕಪ್ಪೆ ಬಾವಿಯ ಎಲ್ಲಾ ಕಪ್ಪೆಗಳನ್ನು ಕರಕೊಂಡು ಹೋಗಿ ಸಮುದ್ರವನ್ನು ತೋರಿಸಿತು.
ಆಗ ಬಾವಿಯ ಎಲ್ಲಾ ಕಪ್ಪೆಗಳು ಆಶ್ಚರ್ಯವಾಯಿತು. ಇಲ್ಲಿ ಹೊಸ ಪ್ರಪಂಚವೇ ಇದೆ ಎಂದು ಗೊತ್ತಾಯಿತು ಮತ್ತು ವಿಭಿನ್ನವಾಗಿತ್ತು. ವಿವಿಧ ಪ್ರಭೇದದ ಕಪ್ಪೆಗಳಿದ್ದವು.
ಕಥೆಯಲ್ಲಿನ ನೀತಿ / Moral of the Story :
ಪ್ರಪಂಚ ಬಹು ವಿಶಾಲವಾಗಿದೆ. ಜೀವನದಲ್ಲಿ ನಾವೂ ಕೂಡ ಬಾವಿಯಲ್ಲಿನ ಕಪ್ಪೆಯಾಗಿರಬಾರದು. ಇದಕ್ಕಿಂತಲೂ ಶ್ರೇಷ್ಠವಾದ ಮತ್ತು ಉತ್ತಮವಾದ ಪ್ರದೇಶ, ಸಂಸ್ಕೃತಿ, ವಿಚಾರಗಳಿವೆ.
ತಮಗಿರುವ ಅಲ್ಪ ಜ್ಞಾನವನ್ನೇ ಮಹಾಜ್ಞಾನವೆಂದು ಬಣ್ಣಿಸಿಕೊಳ್ಳುತ್ತಾರೆ. ನಾನೇ ಎಲ್ಲಾ ಎಂಬ ಅಹಂನಲ್ಲಿ ಬದುಕುತ್ತಿರುತ್ತಾರೆ.
ಇವುಗಳನ್ನು ಓದಿ
Follow our Facebook Page Moral Storys
very nice post i love this post