Kannada Moral Story

Kannada Moral Story

Moral Stories
Spread the love

Hi Everyone, Welcome to Moral Storys – Kannada Moral Story

Kannada Moral Story

ಬದುಕಿನ ಬಂಡಿ – Kannada Moral Story

ತಿಮ್ಮಾಪುರ ಎಂಬ ಒಂದು ಸುಂದರವಾದ ಗ್ರಾಮ ಇತ್ತು. ಆ ಗ್ರಾಮದಲ್ಲಿ ತಿಮ್ಮಯ್ಯ ಮತ್ತು ರಾಮಯ್ಯ ಎಂಬ ಇಬ್ಬರು ಗೆಳೆಯರಿದ್ದರು.

ಇಬ್ಬರಿಗೂ ಸ್ವಂತ ಹೊಲ ಇರಲಿಲ್ಲ. ಸಾಹುಕಾರರ ಹೊಲಗಳಲ್ಲಿ ಕೂಲಿ ನಾಲಿ ಮಾಡಿ ಜೀವನ ಸಾಗಿಸುತ್ತಿದ್ದರು. ಒಂದಿನ ಸಾಹುಕಾರನ ಹೊಲದಲ್ಲಿ ನೀರಿನ ಪೈಪ್ ಕಳುವಾಯಿತು.

ಬೆಳಿಗ್ಗೆ ಸಾಹುಕಾರ ತಿಮ್ಮಯ್ಯ ಮತ್ತು ರಾಮಯ್ಯ ಇಬ್ಬರನ್ನು ಕರೆಸಿ – ನೀರಿನ ಪೈಪ್ ಕಳ್ಳತನ ಮಾಡಿದ್ದು ನೀವೇ ಅಲ್ವಾ ಎಂದು ಕೇಳಿದ. ಅದಕ್ಕೆ ಇಬ್ಬರು ಗಾಬರಿಯಾಗಿ – ಅಯ್ಯಾ ನಾವು ಯಾವ ಕಳ್ಳತನನೂ ಮಾಡಿಲ್ಲ ನಮಗೆ ಗೊತ್ತಿಲ್ಲ ಎಂದರು.

ಸಾಹುಕಾರ – ಹೊಲದಲ್ಲಿ ಕೆಲಸ ಮಾಡೋದು ನೀವೇ ಅಲ್ವಾ, ನಿಮ್ಮನ್ನ ಬಿಟ್ಟು ಬೇರೆ ಯಾರು ಕದಿತಾರೆ ಎಂದನು. ತಿಮ್ಮಯ್ಯ ಮತ್ತು ರಾಮಯ್ಯ ಇಬ್ಬರು – ಅಯ್ಯಾ! ನಮ್ ಮೇಲೆ ಆಣೆ ಮಾಡಿ ಹೇಳ್ತೀವಿ ನಾವಂತೂ ಕದ್ದಿಲ್ಲಾ ಎಂದರು.

ಸಾಹುಕಾರ – ಸರಿ ನೀವು ಹೋಗಿರಿ ಎಂದು ಅವರಿಬ್ಬರನ್ನು ಮನೆಗೆ ಕಳಿಸಿದನು. ತಿಮ್ಮಯ್ಯ ಮತ್ತು ರಾಮಯ್ಯ ಇಬ್ಬರು ಆವತ್ತಿನಿಂದ ಸಾಹುಕಾರರ ಹೊಲಕ್ಕೆ ಹೋಗದಿರಲು ನಿರ್ಧರಿಸಿದರು. ಮೂರು ದಿನ ಯಾವ ಕೆಲಸವೂ ಮಾಡದೆ ಊರಿನಲ್ಲೇ ಇದ್ದರು.

Read Also – ಕಂದನ ಮೇಲಿನ ತಂದೆಯ ಪ್ರೀತಿ

ಕೆಲವು ದಿನ ಆದ ಮೇಲೆ ಪಟ್ಟಣಕ್ಕೆ ಹೋಗಲು ನಿರ್ಧರಿಸಿದರು. ಇಬ್ಬರು ಪಟ್ಟಣಕ್ಕೆ ಹೋಗಿ ಕೆಲಸಕ್ಕಾಗಿ ಹುಡುಕಾಡಿದರು. ಹೋಟೆಲ್ ಮಾತು ಬಾರ್ ಗಳಲ್ಲಿ ಕೆಲಸಕ್ಕೆ ಸೇರಿದರು.

ಹೋಟೇಲ್ ಮತ್ತು ಬಾರ್ ಗಳಲ್ಲಿ ಹಗಲು ರಾತ್ರಿ ಕೆಲಸ ಮಾಡಿ ಕೈ ತುಂಬಾ ಸಂಪಾದಿಸಿದರು. ಹೀಗೆ ಒಂದು ವರ್ಷದ ವರೆಗೂ ದುಡಿದು ಸಾಕಷ್ಟು ಹಣ ಗಳಿಸಿದರು. ಒಂದು ದಿನ ಇಬ್ಬರಿಗೆ ಊರಿನ ಕಡೆ ನೆನಪಾಯಿತು.

ತಿಮ್ಮಯ್ಯ – ಇಲ್ಲೆ ಅಂತ ಎಷ್ಟು ದಿನ ಇರೋದು. ನಮ್ಮ ಊರಿಗೆ ಹೋಗಿ ಬಿಡೋಣ ಅಂದನು. ಅದಕ್ಕೆ ರಾಮಯ್ಯನು – ಹೌದು, ನಾವು ದುಡಿದ ಹಣದಲ್ಲಿ ಏನಾದರೂ ಒಂದು ವ್ಯಾಪಾರ ಮಾಡಿಕೊಂಡು ಇರೋಣ ಎಂದನು.

ಪಟ್ಟಣದಲ್ಲಿ ಒಂದು ವಾರ ಕೆಲ್ಸ ಮಾಡಿ ತಮ್ಮ ಗಂಟುಮೂಟೆಯೊಂದಿಗೆ ಹಿಂದಿರುಗಿದರು. ತಾವು ದುಡಿದು ಕೂಡಿಟ್ಟ ಹಣವನ್ನು ಒಂದು ಸೂಟ್ಕೇಸ್ ನಲ್ಲಿ ಇಟ್ಟಿದ್ದರು.

Kannada Moral Story

ಊರಿನ ಮುಟ್ಟುವ ಮೊದಲು ದಾರಿಯಲ್ಲಿ ತಿಮ್ಮಯ್ಯ ಈ ರೀತಿಯಾಗಿ ಹೇಳುತ್ತಾನೆ. – ‘ಇಷ್ಟು ದುಡ್ಡು ತೆಗೆದುಕೊಂಡು ಊರಿಗೆ ಹೋದರೆ, ಎಲ್ಲರು ಬಂದು ತಮ್ಮ ಕಷ್ಟಗಳನ್ನು ಹೇಳಿಕೊಂಡು ಹಣ ಕೇಳ್ತಾರೆ. ಇಲ್ಲಾ ಯಾರಾದರೂ ಬಂದು ಕಳ್ಳತನ ಮಾಡಬಹುದು.

ಅದಕ್ಕಾಗಿ ಈ ದುಡ್ಡನ್ನೆಲ್ಲ ಇಲ್ಲೆ ಹೂತಿಟ್ಟು ಗುರುತಿಸಲು ಒಂದು ಕಲ್ಲನ್ನು ಇಟ್ಟು ಹೋಗೋಣ.

ಸ್ವಲ್ಪ ದಿನಗಳಾದ ಮೇಲೆ ಬಂದು ಇಬ್ಬರು ಸಮನಾಗಿ ಹಂಚಿಕೊಳ್ಳೋಣ ಎಂದನು. ಅದಕ್ಕೆ ರಾಮಯ್ಯ – ನೀನು ಹೇಳಿದ್ದು ನೂರಕ್ಕೆ ನೂರರಷ್ಟು ಸರಿ, ನಾವು ಹಣ ತಂದಿದ್ದು ಗೊತ್ತಾಗಿ ನಮ್ಮ ಸ್ನೇಹಿತರಲ್ಲಿ ಯಾರಾದರೂ ಬಂದು ಕೇಳಿದರೆ  ಇಲ್ಲ ಎನ್ನಲಾರೆವಲ್ಲ. ಅದಕ್ಕಾಗಿ ನೀನು ಹೇಳಿದಂತೆ ಇಲ್ಲೆ ಎಲ್ಲೊ ಹೂಣಿಡೋಣ ಎಂದನು.

ಹಣದ ಮೂಟೆಯನ್ನು ತಗ್ಗು ತೋಡಿ ಹೂಣಿಟ್ಟರು. ಹೂತಿಟ್ಟ ಜಾಗವನ್ನು ಗುರುತಿಸಲು ಒಂದು ಕಲ್ಲನ್ನು ಇಟ್ಟರು. ಅಲ್ಲಿಂದ ಊರೊಳಗೆ ಹೋದರು. ರಾತ್ರಿ ಊಟ ಮಾಡಿ ಮಲಗಿದರು. ಆದರೆ ತಿಮ್ಮಯ್ಯನಿಗೆ ರಾತ್ರಿಯೆಲ್ಲಾ ನಿದ್ದೆ ಬರಲಿಲ್ಲ. ಮತ್ತು ಹೂತಿಟ್ಟ ಹಣದ ಮೂಟೆಯ ಬಗ್ಗೆ ನೂರಾರು ಆಲೋಚನೆಗಳು ತಲೆಗೆ ಬಂದವು. ಕೆಟ್ಟ ಕೆಟ್ಟ ಆಲೋಚನೆಗಳು ತಲೆದೂರಿದವು.

Read Also – ನರಿ ಮತ್ತು ಇಲಿಗಳು

ಆ ದುಡ್ಡೆಲ್ಲಾ ತಾನೊಬ್ಬನೇ ಕೊಳ್ಳೆ ಹೊಡೆಯಬೇಕು ಎಂದು ಆಲೋಚಿಸಿದ. ಒಬ್ಬನೇ ಮಧ್ಯರಾತ್ರಿ ಹೂತಿಟ್ಟ ಜಾಗಕ್ಕೆ ಬಂದನು. ಇಟ್ಟ ಕಲ್ಲನ್ನು ಸರಿಸಿ ಮೂಟೆ ಹೊರತೆಗೆದ. ಆದರೆ ಆ ದುಡ್ಡು ನೋಡಿ ಅವನ ಹೃದಯದಲ್ಲಿ ಒಂದು ರೀತಿಯ ಭಯ ಮೂಡಿತು. ಎಲ್ಲೊ ತಪ್ಪು ಮಾಡ್ತಾ ಇದ್ದೇನೆ ಎನ್ನುವ ಸಂಶಯ ಮೂಡಿತು.

ತಿಮ್ಮಯ್ಯ ಒಂದು ಕ್ಷಣ ಅಲ್ಲೇ ಮೌನವಾಗಿ ಕುಳಿತನು. ಬಾಲ್ಯದಿಂದಲೂ ಜೊತೆಗಿದ್ದ ಸ್ನೇಹಿತಿಗೆ ಮೋಸ ಮಾಡುವುದು ಎಷ್ಟು ಮಾತ್ರವು ಸರಿಯಲ್ಲ. ನನ್ನ ಮೇಲೆ ಇಟ್ಟ ನಂಬಿಕೆ ಈ ದುಡ್ಡಿನಿಂದ ಹಾಳಾಗುವುದು ಒಳ್ಳೆಯದಲ್ಲ.

ಕಷ್ಟ ಬೆಲೆ ತಿಳಿದುಕೊಂಡ ನನ್ನಂತವನೆ ಈ ರೀತಿ ಮಾಡಿದರೆ ದೇವರು ಕ್ಷಮಿಸುವುದಿಲ್ಲ. ಸ್ನೇಹಿತನಿಗೆ ಮೋಸ ಮಾಡಿ ನಾನು ಯಾವ ರಾಜ್ಯ ಗೆಲ್ಲಬೇಕಾಗಿದೆ. ಎಂದು ಒಂದು ಕ್ಷಣ ಶಾಂತವಾಗಿ ಯೋಚಿಸಿ ಅದನ್ನು ಅಲ್ಲೇ ಮುಚ್ಚಿಟ್ಟು ಹೋದನು.

ಮೂರು ದಿನ ಆದ ಮೇಲೆ ಇಬ್ಬರು ಒಟ್ಟಿಗೆ ಹೋಗಿ ಸಮನಾಗಿ ಹಂಚಿಕೊಂಡರು.

ಕಥೆಯಲ್ಲಿನ ನೀತಿ / Moral of this Story :

  • ದುಡ್ಡು ಆಮೀಶಕ್ಕೆ ದಾರಿ ಮಾಡಿಕೊಡುತ್ತದೆ. ಒಂದು ಕೆಲಸವನ್ನು ಮಾಡುವಾಗ ಮನುಷ್ಯನ ಹೃದಯದಲ್ಲಿ ಎರಡು ವಿಷಯಗಳು ಮೂಡುತ್ತವೆ. ಕೆಟ್ಟದು ಮತ್ತು ಒಳ್ಳೆಯದು.
  • ಕೆಟ್ಟ ಮನಸ್ಸು (ನಕಾರಾತ್ಮಕ ಆಲೋಚನೆ) ಮಾಡು ಮಾಡು ಎಂದು ಹಠ ಹಿಡಿಯುತ್ತದೆ. ಒಳ್ಳೆಯ ಮನಸ್ಸು (ಸಕಾರಾತ್ಮಕ ಆಲೋಚನೆ) ಬೇಡ ಮಾಡಬೇಡ ಎಂದು ಹೇಳುತ್ತದೆ. ಕೆಟ್ಟದ್ದಕ್ಕೆ ಸೋತು ಹೋಗದೆ ಸತ್ಯದ‌ ಹಾದಿ ಹಿಡಿಯಬೇಕು.

ಕಾಗೆ ಮತ್ತು ಪಾರಿವಾಳ – Kannada Moral Story

ಒಂದು ದಟ್ಟವಾದ ಬೇವಿನ ಮರದಲ್ಲಿ ಕಾಗೆ ಮತ್ತು ಪಾರಿವಾಳ ವಾಸಿಸುತ್ತಿದ್ದವು. ಪಾರಿವಾಳ  ಬೆಳ್ಳಗೆ ಮತ್ತು ನೋಡಲು ಸುಂದರವಾಗಿತ್ತು. ಪಾರಿವಾಳ ತನ್ನ ಅಂದಚೆಂದವನ್ನು ನೋಡಿ ಜಂಬ ಕೊಚ್ಚಿಕೊಳ್ಳುತ್ತಿತ್ತು.

ಇನ್ನು ಕಾಗೆ ಬಣ್ಣದ ಬಗ್ಗೆ ಪ್ರತ್ಯೇಕವಾಗಿ ಹೇಳುವ ಅವಶ್ಯವಿಲ್ಲ.  ಹಾಗಾಗಿ ಪಾರಿವಾಳ ಕಾಗೆಯ ಮರಿಗಳನ್ನು ಅದರ ಬಣ್ಣವನ್ನು ನೋಡಿ ಹೀಯಾಳಿಸ್ತಾ ಇತ್ತು. ಪಾರಿವಾಳ ಕಾಗೆಯನ್ನು ಹತ್ತಿರಕ್ಕೆ ಬರಗೊಡಿಸುತ್ತಿರಲಿಲ್ಲ.

ಆದರೆ ಕಾಗೆ ಯಾರ ಬಗ್ಗೆನೂ ತಲೆಕೆಡಿಸಿಕೊಳ್ಳದೆ ತನ್ನ ಪಾಡಿಗೆ ತಾನಿತ್ತು. ದೇವರ ಸೃಷ್ಟಿಯಿಂದಾದ ನನ್ನ ಮೈಬಣ್ಣ ನಾನೇನು ಮಾಡಿದರೂ ಬದಲಾಯಿಸಲಾರೆನು. ಮತ್ತು ಅದರ ಬಗ್ಗೆ ಚಿಂತಿಸಿ ಯಾವ ಪ್ರಯೋಜನವೂ ಇಲ್ಲ ಎಂದು ತಿಳಿದಿತ್ತು.

Read Also – ಸಿಂಹದ ಮೂರ್ಖತನ

ಒಂದು ದಿವಸ ಪಾರಿವಾಳವೂ ಮರಿಗಳಿಗೆ ಜನ್ಮ ನೀಡಿತು. ಮರಿಗಳಿಗೆ ಆಹಾರ ತರಲು ಹೊರಗಡೆ ಹೋದಾಗ ಗರುಡವೊಂದು ಎದುರಾಯಿತು. ಪಾರಿವಾಳ ಮತ್ತು ಗರುಡ ಮಧ್ಯೆ ಕಾದಾಟ ವಾಯಿತು.

ಗರುಡ ತನ್ನ ಕಾಲಿನಿಂದ ಹಿಡಿದಿಟ್ಟು ಕೊಕ್ಕೆ ಯಿಂದ ಹಿಗ್ಗಾಮುಗ್ಗಾ ಥಳಿಸಿತು. ಪಾರಿವಾಳ ರಕ್ತಸಿಕ್ತ ವಾಯಿತು. ಪಾರಿವಾಳ ನೆಲದಲ್ಲಿ ಬಿದ್ದು ವದ್ದಾಡಿ ಹೊಲಸು ಹೊಲಸಾಯಿತು.

Kannada Moral Story

ಆಗ ಕಾಗೆ ಬಂದು ಬಾಯಿಂದ ಎತ್ತಿಕೊಂಡು ತಿರುಗಿ ಅದರ ಗೂಡಿನಲ್ಲಿ ತಂದು ಬಿಟ್ಟಿತು. ಮಾರನೆಯ ದಿನ ‌ಬೇಟೆಗಾರನು ಪಾರಿವಾಳವನ್ನು ಹಿಡಿಯಲು ಮರ ಹತ್ತುತ್ತಿದ್ದ. ಮೈಯೆಲ್ಲಾ ಗಾಯಾಗಳಾಗಿ ಅಸಹಾಯಕತೆಯಿಂದ ಕೂತಿತ್ತು.

ಕಾಗೆ ತನ್ನ ಬಂದು ಬಳಗವನ್ನೆಲ್ಲಾ ಕರೆಯಿತು. ಎಲ್ಲಾ ಕಾಗೆಗಳು ಬಂದು ಬೇಟೆಗಾರನನ್ನು ಕುಕ್ಕಿ ಕುಕ್ಕಿ ಅಲ್ಲಿಂದ ಓಡಿಸಿದವು. ಪಾರಿವಾಳ ತಾನು ಮಾಡಿದ ತಪ್ಪನ್ನು ಅರಿತುಕೊಂಡಿತು. ಮುಂದೆ ಒಳ್ಳೆಯ ಸ್ನೇಹಿತರಾಗಿ ಜೀವಿಸಿದವು.

ಕಥೆಯಲ್ಲಿನ ನೀತಿ / Moral of this Story :
ಒಬ್ಬ ವ್ಯಕ್ತಿಯ ವ್ಯಕ್ತಿತ್ವವನ್ನು ಅವರ ಮೈಬಣ್ಣ, ಆಕಾರ, ಉಡುಗೆ ತೊಡುಗೆ, ನೋಡಿ ನಿರ್ಧರಿಸಬಾರದು. ಪ್ರಕೃತಿ ದತ್ತವಾಗಿ ಬಂದಿರುವ ಯಾವುದೂ ಲೋಪವಲ್ಲ.

ನೀನು ನೀನಾಗಿಯೇ ಬದುಕು – Kannada Moral Story

ಸಮುದ್ರತೀರದಿಂದ ಮೂವತ್ತು ಕಿಲೋ ಮೀಟರ್ ದೂರದಲ್ಲಿ ಒಂದು ದಟ್ಟವಾದ ಕಾಡಿತ್ತು. ಈ ಕಾಡಿನಲ್ಲಿ ಈ ಸಿಂಹವೇ ರಾಜನಾಗಿತ್ತು.

ಒಂದು ದಿವಸ ಬೇಟೆಯಾಡುವಾಗ ಸಿಂಹದ ಕಾಲು ಬಂಡೆಯ ಪೊಟರೆಯಲ್ಲಿ ಸಿಲುಕಿಕೊಂಡಿತು. ಸಿಂಹ ಎಷ್ಟು ವಿಧವಿಧವಾಗಿ ಪ್ರಯತ್ನಿಸಿದರೂ ಕಾಲು ಹೊರಗೆ ಬರಲಿಲ್ಲ. ವದ್ದಾಡಿ ವದ್ದಾಡಿ ನಿಶ್ಯಕ್ತಿಗೊಂಡಿತು. ಒಂದು ದಿನ ವರೆಗೂ ಅಲ್ಲೆ ಇತ್ತು.

ಅದೆ ಕಾಡಿನಲ್ಲಿ ನರಿಯೊಂದು ಆಹಾರಕ್ಕಾಗಿ ಹುಡುಕುತ್ತಾ ಇತ್ತು. ಆದರೆ ಆಹಾರ ಎಲ್ಲೂ ಸಿಗಲಿಲ್ಲ. ನರಿ, ಆಹಾರ  ಹುಡುಕುತ್ತಾ ಸಿಂಹ ಇರುವ ಕಡೆ ಬಂತು. ಸಿಂಹ ಸಹಾಯಕ್ಕಾಗಿ ನರಿಯನ್ನು ಕೇಳಿಕೊಂಡಿತು.

Kannada Moral Story

ಆಗ ನರಿ -‘ನಿಂಗೆ ಸಹಾಯ ಮಾಡಿದರೆ ನನಗೇನು ಲಾಭ’ ಎಂದಿತು.

ಅದಕ್ಕೆ ಸಿಂಹ ‘ನಾನು ಬೇಟೆಯಾಡುವ ಪ್ರತಿಯೊಂದರಲ್ಲೂ ಪಾಲು ಕೊಡ್ತೀನಿ’ ಎಂದಿತು. ಆಗ ನರಿ ಸರಿ ಎಂದು ಒಪ್ಪಿಕೊಂಡಿತು. ಸಿಂಹಕ್ಕೆ ಬಂಡೆಯ ಪೊಟರೆಯಿಂದ ತಪ್ಪಿಸಿ ಸಹಾಯ ಮಾಡಿತು.

ಸಿಂಹ ಮತ್ತು ನರಿ ಅಲ್ಲಿಂದ ಮುಂದೆ ಹೋದವು. ಸಿಂಹ ಒಂದು ಪ್ರಾಣಿಯನ್ನು ಬೇಟೆಯಾಡಿ ನರಿಯ ಬಳಿಗೆ ತಂದಿತು. ನರಿಗೆ ತುಂಬಾ ಹಸಿವೆ ಯಾಗಿತ್ತು ಮತ್ತು ಎಂದೂ ನೋಡಿರದ ಆ ಆಹಾರವನ್ನು ನೋಡಿ ಬಾಯಲ್ಲಿ ನೀರೂರಿದವು.

ಎಲ್ಲಾ ಆಹಾರವನ್ನು ತಾನೇ ತಿನ್ನಬೇಕೆಂದು ಅಂದುಕೊಂಡಿತು.  ನರಿ, ಸಿಂಹಕ್ಕೆ ‘ಇದೆಲ್ಲಾ ನಂಗೆ ಬೇಕು ನೀನು ಮತ್ತೊಂದು ಪ್ರಾಣಿಯನ್ನು ಬೇಟೆಯಾಡಿ ತಿನ್ನು’ ಎಂದಿತು.

ಅದಕ್ಕೆ ಸಿಂಹ ‘ನನಗೆ ಸಹಾಯ ಮಾಡಿದೀ ಎಂಬ ಒಂದೇ ಒಂದು ಕಾರಣಕ್ಕೆ ನಿಂಗೆ ಸ್ವಲ್ಪ ಪಾಲು ಕೊಡ್ತಾ ಇರೋದು’ ಎಂದಿತು. ನರಿ, ನಾನು ಕೇಳಿದ್ದನ್ನು ಕೊಡಲಿಲ್ಲ ಅಂದ್ರೆ ನಿನ್ನ ಸಾಯಿಸ್ತಿನಿ ಎಂದಿತು.

Read Also – ಸಾಗಿಸುವ ದೇವರ ಸಹಾಯ ಹಸ್ತ

ಆಗ ಸಿಂಹ ಸಿಟ್ಟಿನಿಂದ ಪಂಜ ಎತ್ತಿ ಹೊಡೆಯಿತು. ಜೀವಭಯದಿಂದ ನರಿ ಸರ್ರನೆ ಓಡಿ ಹೋಯಿತು. ನರಿಗೆ ಇನ್ನೂ ಹಸಿವೆ ಜಾಸ್ತಿಯಾಗುತ್ತಾ ಹೋಯಿತು. ಆಗ ಬುದ್ಧಿ ಬಂದು ‘ಸಿಂಹ ಕೊಟ್ಟಿದ್ದಾದ್ರೂ ತಿಂದಿದ್ರೆ ಹಸಿವೆ ತೀರುತಿತ್ತು’ ಎಂದು ಅಂದುಕೊಂಡಿತು.

ಕಥೆಯಲ್ಲಿನ ನೀತಿ / Moral of this Story :
ದುರಾಸೆ ಸಂಕಟಕ್ಕೆ ದಾರಿ ಮಾಡಿಕೊಡುತ್ತದೆ.‌ ಹಂಚಿಕೊಂಡು ತಿನ್ನುವುದು ಸಂಬಂಧವನ್ನು ಹುಟ್ಟು ಹಾಕುತ್ತದೆ.

Kannada Moral Story

Follow Our Facebook Page – Moral Storys

ವಿ. ಸೂಚನೆ – ಈ ಮೇಲಿನ ಸಣ್ಣ ಕಥೆಗಳಲ್ಲಿ ಏನಾದರೂ ತಪ್ಪು ಅಥವಾ ದೋಷಗಳು ಕಂಡುಬಂದರೆ ದಯಮಾಡಿ ಕಾಮೆಂಟ್ ಮೂಲಕ ತಿಳಿಸಲು ಕೋರುತ್ತೇವೆ. ಧನ್ಯವಾದಗಳು ಪುನಃ ಬೇಟಿ ನೀಡಿ.


Spread the love

Leave a Reply

Your email address will not be published. Required fields are marked *