Kannada Moral Stories

Kannada Moral Stories

Moral Stories
Spread the love

Kannada Moral Stories

Welcome to Moral Storys

We will provide World’s Best Kannada Moral Stories, You can find and read all types of Moral Stories in Kannada Language

ಒಗ್ಗಟ್ಟಿನಲ್ಲಿ ಬಲವಿದೆ – Kannada Moral Stories

Kannada Moral Stories

ಒಂದಾನೊಂದು ಕಾಲದಲ್ಲಿ ಚಿಕ್ಕದಾದ ಮತ್ತು ಸುಂದರವಾದ ಹಳ್ಳಿ ಇತ್ತು. ಆ ಹಳ್ಳಿಯಲ್ಲಿ ರಾಕೇಶ್ ಎನ್ನುವ ಒಬ್ಬ ವ್ಯಕ್ತಿ ಇದ್ದನು. ಅವನಿಗೆ ಇಬ್ಬರು ಮಕ್ಕಳು. ಮಕ್ಕಳು ಕ್ರಮವಾಗಿ ಹತ್ತು ಮತ್ತು ಹನ್ನೆರಡು ವರ್ಷದವರಾಗಿದ್ದರು. ರಾಕೇಶ್ ತನ್ನ ಇಬ್ಬರು ಮಕ್ಕಳಿಗೆ ಯಾವತ್ತೂ ಯಾವುದೂ ಕಡಿಮೆ ಇಲ್ಲದಂತೆ ನೋಡಿಕೊಂಡನು.

ರಾಕೇಶನು ತಾನು ಚಿಕ್ಕವನಿದ್ದಾಗ ಶಾಲೆಗೆ ಹೋಗಿ ಅಕ್ಷರ ಕಲಿಯಲಿಲ್ಲ. ಮತ್ತು ಈಗಿನಂತೆ ಆಗ ಎಲ್ಲ ಸೌಕರ್ಯಗಳು ಇರಲಿಲ್ಲ. ರಾಕೇಶ್ ಅನಕ್ಷರಸ್ಥನಾಗಿದ್ದರೂ ವಿಚಾರದಲ್ಲಿ ಪ್ರಜ್ಞಾವಂತನಾಗಿದ್ದ. ಅದಕ್ಕಾಗಿ ತನ್ನ ಮಕ್ಕಳಿಗಾದರೂ ಅಕ್ಷರ ಜ್ಞಾನ ಕೊಡಿಸಿ ವಿದ್ಯಾವಂತರನ್ನಾಗಿ ಮಾಡಬೇಕು ಎಂಬ ಮಹತ್ತರ ಆಶಯವನ್ನು ಹೊಂದಿದ್ದನು.

ಸಮಾಜದಲ್ಲಿ ತನ್ನ ಮಕ್ಕಳು ಹೋದಲ್ಲೆಲ್ಲ ಒಂದು ಒಳ್ಳೆಯ ಗೌರವ ‌ಸಿಗಲಿ ಎಂದು ತಂದೆ ತನ್ನ ದುಡಿತವನ್ನು ಮಕ್ಕಳ ಏಳಿಗೆಗಾಗಿ ಧಾರೆ ಎರೆದ. ಆದರೆ ಮಕ್ಕಳು ತಂದೆ ತೋರಿಸಿದ ದಾರಿಯಲ್ಲಿ ನಡೆಯಲಿಲ್ಲ. ವಿದ್ಯಾಭ್ಯಾಸವನ್ನು ಅರ್ಧಕ್ಕೆ ನಿಲ್ಲಿಸಿದರು.

Kannada Moral Stories

ಕೆಲವು ವರ್ಷಗಳು ಕಳೆದವು. ಮಕ್ಕಳಿಬ್ಬರೂ ಮದುವೆ ವಯಸ್ಸಿಗೆ ಬಂದರು. ತಂದೆಗೂ ವಯಸ್ಸಾಯಿತು.‌ ಇಬ್ಬರಿಗೆ ಹತ್ತಿರದ ಸಂಬಂಧಿಕರಲ್ಲಿ ಹೆಣ್ಣು ನೋಡಿ ಮದುವೆ ಮಾಡಿದ. ಮದುವೆ ಆದ ಆರಂಭದಲ್ಲಿ ಎಲ್ಲವೂ ಚೆನ್ನಾಗಿತ್ತು.

ಕೆಲವು ತಿಂಗಳು ಕಳೆದ ಮೇಲೆ ಇಬ್ಬರು ಅಣ್ಣ – ತಮ್ಮಂದಿರಲ್ಲಿ ವೈಮನಸ್ಸು ಉಂಟಾಯಿತು. ಸಂಸಾರದಲ್ಲಿ ಬಿರುಕು ಮೂಡಿ, ಮನೆಯಲ್ಲಿ ನೆಮ್ಮದಿ ಇಲ್ಲದಂತಾಯಿತು.

ಇಬ್ಬರು ಮಕ್ಕಳು ಪ್ರತಿಯೊಂದು ಸಣ್ಣ ವಿಷಯಕ್ಕೂ ಕಚ್ಚಾಡುತ್ತಿದ್ದರು. ಊರಿನ  ಜಗಳಗಳೆಲ್ಲಾ ಮನೆ ಬಾಗಿಲಿಗೆ ಬಂದವು. ಇವರಿಬ್ಬರ ಮಧ್ಯೆ ಹೊಂದಾಣಿಕೆಯಿಲ್ಲದ ಕಾರಣ ಊರಿನ ಜನರೆಲ್ಲಾ ರಾಕೇಶನ ಮನೆಗೆ ಬಂದು ಜಗಳವಾಡಲು ಶುರು ಮಾಡಿದರು.

Read Also – ಮಾಯಾ ಬಾಗಿಲು

ರಾಕೇಶ್ ಅನಕ್ಷರಸ್ಥನಾಗಿದ್ದರೂ ವಿಚಾರದಲ್ಲಿ ಪ್ರಜ್ಞಾವಂತನಾಗಿದ್ದ. ಇಬ್ಬರ ಮಕ್ಕಳನ್ನು ಹತ್ತಿರಕ್ಕೆ ಕರೆದು ಒಬ್ಬೊಬ್ಬರಿಗೆ ಒಂದೊಂದು ಕೋಲುಗಳನ್ನು ಕೊಟ್ಟು ಅದನ್ನು ಎರಡು ಭಾಗ ಮಾಡಲು ಹೇಳಿದ. ತಂದೆಯ ಮಾತಿನಂತೆ ಇಬ್ಬರು ಕೋಲುಗಳನ್ನು ಸಲೀಸಾಗಿ ಮುರಿದರು.

ಮತ್ತೆ ರಾಕೇಶನು ಇಬ್ಬರಿಗೆ ಕೋಲುಗಳ ಕಟ್ಟನ್ನು ಕೊಟ್ಟು ಅದನ್ನು ಮುರಿಯುವಂತೆ ಹೇಳಿದನು. ಇಬ್ಬರು ಮಕ್ಕಳು ಅದನ್ನು ಮುರಿಯಲು ಎಷ್ಟು ಬಲವಾಗಿ ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ.

ತಂದೆ ಮಕ್ಕಳಿಗೆ ಒಂದೇ ಇರುವ ಕೋಲನ್ನು ಸುಲಭವಾಗಿ ಮುರಿಯಬಹುದು ಆದರೆ ಕೋಲುಗಳ ಕಟ್ಟನ್ನು ಮುರಿಯಲು ಸಾಧ್ಯವಿಲ್ಲ. ನೀವಿಬ್ಬರು ಒಗ್ಗಟ್ಟಾಗಿದ್ದರೆ ಹೊರಗಿನ ಯಾವ ಶಕ್ತಿಯೂ ನಿಮ್ಮನ್ನು ಸೋಲಿಸಲಾರದು.

ಅದಕ್ಕೆ ಬದಲಾಗಿ ನೀವಿಬ್ಬರು ಬೇರೆಯಾದರೆ ನೀವು ಮುರಿದ ಕೋಲಿನಂತೆ ನಿಮ್ಮನ್ನು ಸುಲಭವಾಗಿ ಸೋಲಿಸುತ್ತಾರೆ. ಮಕ್ಕಳು ತಮ್ಮ ತಪ್ಪನ್ನು ಅರಿತುಕೊಂಡು ತಂದೆಯನ್ನು ಕ್ಷಮಿಸುವಂತೆ ಕೇಳಿದರು. ಮತ್ತೆ ತಂದೆಗೆ ತಕ್ಕ ಮಕ್ಕಳಾಗಿ ಬಾಳಿದರು.

ಕಥೆಯಲ್ಲಿನ ನೀತಿ/ Moral of this Story: ಒಗ್ಗಟ್ಟಿನಲ್ಲಿ ಬಲವಿದೆ, ಏಕತೆಯಲ್ಲಿ ಬಲವಿದೆ. ಎಲ್ಲಾರೂ ಒಟ್ಟಾಗಿ ಬಾಳಿದರೆ ಸ್ವರ್ಗ ಸುಖ.

ಮೇಕೆ ಮತ್ತು ಬಾವಿ – Kannada Moral Stories

Kannada Moral Stories

ಒಂದು ಊರಿನಲ್ಲಿ ಒಬ್ಬ ರೈತನಿದ್ದನು. ಅವನಿಗೆ ಏಳು ಮೇಕೆಗಳಿದ್ದವು ಮತ್ತು ಅವುಗಳನ್ನು ಬಹಳ ಜೋಪಾನವಾಗಿ ನೋಡಿಕೊಳ್ಳುತ್ತಿದ್ದನು. ಆದರೆ ಆ ಏಳು ಮೇಕೆಗಳು ಬಹಳ ತುಂಟ ಮೇಕೆಗಳಾಗಿದ್ದವು. ಅವುಗಳ ಯಜಮಾನ ಎಷ್ಟು ಕ್ರಮಶಿಕ್ಷಣ ಕೊಟ್ಟು ಬೆಳೆಸಿದರೂ ಕೂಡ ಅಸಡ್ಯೆ ಮಾಡುತ್ತಿದ್ದವು.

ಒಂದು ದಿನ ರೈತನು ಮೇಕೆಗಳನ್ನು ಮೇಯಲು ಬಿಟ್ಟು, ಮೇಕೆಗಳಿಗೆ ಮೇವು ಮತ್ತು ತಪ್ಪಲ ತರಲು ಹೊರಟನು. ಹೋಗುವ ಮುಂಚೆ ಮೇಕೆಗಳಿಗೆ “ಇಲ್ಲಿ ಹತ್ತಿರದಲ್ಲಿ ಒಂದು ಆಳವಾದ ಬಾವಿಯಿದೆ. ಅಲ್ಲಿಗೆ ಹೋಗ್ಬೇಡಿ ಮತ್ತು ಅದರ ಸುತ್ತ ಆಡಬೇಡಿ” ಒಂದು ಹೇಳಿ ಹೊರಟು ಹೋದ.

ಆದರೆ ಮೇಕೆಗಳು ಅವನ ಮಾತನ್ನು ತಾತ್ಸಾರ ಮಾಡಿದವು ಮತ್ತು ಬಾವಿಯ ಸುತ್ತ ಸುತ್ತುತ್ತಿದ್ದವು. ರೈತನು ಮಾಡಬಾರದೆಂದು ಹೇಳಿರುವ ಕೆಲಸವನ್ನೆ ಮಾಡುತ್ತಿದ್ದವು. ಮೇಕೆಗಳು ಬಾವಿಯ ಹತ್ತಿರ ಹೋಗಿ ಇಣುಕಿ ಹಾಕಿದವು.

Kannada Moral Stories

ಇಣುಕಿ ಹಾಕಿದಾಗ ಅವುಗಳ ಪ್ರತಿಬಿಂಬ ಬಾವಿಯಲ್ಲಿ ಕಂಡು ಮತ್ತು ಅದರಲ್ಲಿ ಒಂದು ಮೇಕೆ ಇಲ್ಲಿ ಬಹಳ ಮೇಕೆಗಳಿವೆ ಎಂದು ಮೇಕೆ ಬಾವಿಗೆ ಜಿಗಿಯಿತು. ಆದರೆ ಅಲ್ಲಿ ಯಾವ ಮೇಕೆನೂ ಇರಲಿಲ್ಲ. ಮತ್ತು ಮೇಕೆ ನೀರಿನಲ್ಲಿ ಒದ್ದಾಡುತ್ತಿತ್ತು.

ಅದೇ ಸಮಯಕ್ಕೆ ರೈತನು ಬಂದನು. ಮೇಕೆಗೆಳೆಲ್ಲಾ ಬಾವಿಯ ಸುತ್ತ ನಿಂತಿರುವುದನ್ನು ಕಂಡು ರೈತನು ಯಾವುದಾದರೂ ಮೇಕೆ ಬಾವಿಗೆ ಬಿದ್ದಿರಬಹುದು ಎಂದು ಆತುರದಿಂದ ಓಡಿಹೋದ.

ಬಾವಿಯಲ್ಲಿ ನೀರು ಜಾಸ್ತಿ ಇರುವುದರಿಂದ ಮೇಕೆ ಮುಳುಗಿ ಮುಳುಗಿ ತೇಲುತ್ತಿತ್ತು. ರೈತನು ಹಗ್ಗದ ಸಹಾಯದಿಂದ ಮೇಕೆಯನ್ನು ಮೇಲೆತ್ತಿದನು.

ಕಥೆಯ ನೀತಿ/ Moral of this Story: ಹಿರಿಯರ ಅನುಭವದ ಮಾತುಗಳು ನಮ್ಮ ಮೇಲಿಗಾಗಿಯೇ ಯಾವತ್ತೂ ಅಸಡ್ಡೆ ಮಾಡಬಾರದು. ಅದಕ್ಕಾಗಿ ಹಿರಿಯರ ಮಾತುಗಳನ್ನು ಕೇಳಬೇಕು ಮತ್ತು ಗೌರವಿಸಬೇಕು.

ಆಗುವುದೆಲ್ಲಾ ಒಳ್ಳೆಯದಕ್ಕೆ – Kannada Moral Stories

ಒಂದು ಗ್ರಾಮದಲ್ಲಿ  ನಾಲ್ವತ್ತು ವಯಸ್ಸಿನ ವ್ಯಕ್ತಿಯೊಬ್ಬ ಮೀನುಗಾರಿಕೆ ಮಾಡುತ್ತಿದ್ದನು. ಅವನ ಹೆಸರು ರಮೇಶ. ಅವನು ದಿನಾ ಬೆಳಿಗ್ಗೆ ಮನೆ ಮನೆಗೆ ಮೀನು ಮಾರಾಟ ಮಾಡಿ ಜೀವನ ನಡೆಸುತ್ತಿದ್ದನು.

ಒಂದು ದಿನ ರಮೇಶನು ಒಂದು ದೊಡ್ಡದಾದ ಮತ್ತು ಹಳೆಯದಾದ ಮಾವಿನ ಮರದ ಕೆಳಗೆ ಕುಳಿತು ಮೀನದ ಬಲೆ ನೇಯುತ್ತಿದ್ದಾಗ, ಒಬ್ಬ ಹುಡುಗ ಬಂದು ಮಾವಿನ ಹಣ್ಣಿಗೆ ಕಲ್ಲು ತಗೊಂಡು ತೂರಿದ. ರಮೇಶನು ಅವನನ್ನು ಗದರಿಸಲು ಅಲ್ಲಿಂದ ತೊಲಗಲಿಲ್ಲ.

ಮತ್ತೆ ಇನ್ನೊಂದು ಕಲ್ಲು ತಗೊಂಡು ಎಸೆಯಲು ಪ್ರಯತ್ನಿಸುತ್ತಿರುವಾಗ, ರಮೇಶನು ಅವನನ್ನು ಹಿಡಿಯಲು ತಕ್ಷಣ ಎದ್ದು ಅವನ ಬಳಿಗೆ ಓಡಿದ.

ಮಾವಿನ ಮರದ ಕೊಂಬೆಯೊಂದು ಮುರಿದು ರಮೇಶ ಕೂತಿದ್ದ ಸ್ಥಳದಲ್ಲಿ ದೊಪ್ಪನೆ ಬಿದ್ದಿತು. ರಮೇಶ ಹಿಂದೆ ತಿರುಗಿ ನೋಡಿದ. ಒಂದು ಕ್ಷಣ ಆಶ್ಚರ್ಯಚಕಿತನಾದನು. ಈ ಹುಡುಗ ಕಲ್ಲು ತೂರಿದ್ದು ನನ್ನ ಮೇಲಿಗಾಗಿಯೇ ಆಗಿದೆಯೆಂದು ತಿಳಿದುಕೊಂಡು ಹುಡುಗನನ್ನು ಹಿಮ್ಮೆಟ್ಟಿಸುವುದನ್ನು ಬಿಟ್ಟನು. ಮತ್ತು ಅವನಿಗೆ ಧನ್ಯವಾದಗಳು ಹೇಳಿದನು.

Read Also – ಆನೆ ಮತ್ತು ಇರುವೆಗಳು

ಮತ್ತೊಂದು ದಿನ ರಮೇಶನು ನದಿಯ ದಡದ ಮೇಲೆ ಹೋಗುತ್ತಿದ್ದಾಗ ಹಿಂದಿನಿಂದ ಒಬ್ಬ ಕಳ್ಳ ಬಂದು ಅವನ ಬಲೆಯನ್ನು ತೆಗೆದುಕೊಂಡು ಓಡಿ ಹೋದನು. ಕಳ್ಳನನ್ನು ಹಿಡಿಯಲು ಅವನ ಹಿಂದೆಯೇ ಓಡಿಹೋದ.

ಮುಂದೆ ಒಬ್ಬ ಬಾಲಕ ನದಿಯಲ್ಲಿ ಸ್ನಾನ ಮಾಡಲು ಹೋಗಿ ಕಾಲು ಜಾರಿ ಬಿದ್ದು ನೀರಿನಲ್ಲಿ ಮುಳುಗಿ ಮುಳುಗಿ ತೇಲುತ್ತಿದ್ದ.  ರಮೇಶನು ನೋಡಿದ ತಕ್ಷಣವೇ ನದಿಗೆ ಹಾರಿ ಬಾಲಕನನ್ನು ಎಳೆದು ತಂದು ರಕ್ಷಿಸಿದ. ಆ ಬಾಲಕ ಬೇರೆ ಯಾರೊ ಅಲ್ಲ ರಮೇಶನ ಸ್ವಂತ ಮಗನಾಗಿದ್ದನು.

ರಮೇಶನು, ಅವನು ಬಲೆ ಕದಿಯದಿದ್ದರೆ ನಾನು ಈ ಕಡೆ ಬರುತ್ತಿರಲಿಲ್ಲ. ಮತ್ತು ಸ್ವಲ್ಪ ಹೊತ್ತು ತಡವಾಗಿದ್ದರೂ ನನ್ನ ಮಗನ ಪ್ರಾಣ ಉಳಿಯುತ್ತಿರಲಿಲ್ಲ ಎಂದು ಯೋಚಿಸಿದನು. ಆ ಕಳ್ಳನಿಗೆ ತುಂಬಾ ಧನ್ಯವಾದಗಳು ಹೇಳಿ, ಮನದಲ್ಲೇ ಸ್ಮರಿಸಿದನು.

ಕಥೆಯಲ್ಲಿನ ನೀತಿ/ Moral of this Story: ಕೆಲವೊಮ್ಮೆ ಆಗುವುದೆಲ್ಲಾ ಒಳ್ಳೆಯದಕ್ಕೆ ಆಗುತ್ತದೆ.

ರಾಮಪ್ಪ ಮತ್ತು ಹೋಟೆಲ್ ವಾಣಿ – Kannada Moral Stories

ಒಂದು ಹಳ್ಳಿಯಲ್ಲಿ ಒಬ್ಬ ರೈತನಿದ್ದನು. ಆತನ ಹೆಸರು ರಾಮಪ್ಪ. ಪ್ರಾಮಾಣಿಕ ಮತ್ತು ಮೃದು ಸ್ವಭಾವದ ವ್ಯಕ್ತಿಯಾಗಿದ್ದ.

ಒಂದು ದಿನ ಕೆಲಸದ ನಿಮಿತ್ತ ಪಟ್ಟಣಕ್ಕೆ ಹೋಗುತ್ತಾನೆ. ಸಾಯಂಕಾಲ ಕೆಲಸ ಮುಗಿದ ಮೇಲೆ ತುಂಬಾ ಹಸಿವೆಯಾಗುತ್ತದೆ. ದಾರಿಯಲ್ಲಿ ಏನಾದರೂ ತಿಂಡಿ ಸಿಗಬಹುದೆಂದು ದಾರಿಯುದ್ದಕ್ಕೂ ನೋಡಿಕೊಂಡು ಬರುತ್ತಾನೆ. Kannada Moral Stories.

ಸ್ವಲ್ಪ ಮುಂದೆ ಹೋದಾಗ ಒಂದು ಟಾಪ್ ಹೋಟೆಲ್ ಕಾಣಿಸುತ್ತದೆ. ರಾಮಪ್ಪನು ಹಸಿವೆ ತಾಳಲಾರದೆ ಆ ಹೋಟೆಲ್ಗೆ ಹೋಗುತ್ತಾನೆ. ಹೋಟೆಲ್ ಒಳಗೆ ಹೋಗಿ ಅಲ್ಲಿರುವ ಕುರ್ಚಿಯಲ್ಲಿ ಕೂತುಕೊಳ್ಳುತ್ತಾನೆ.

ವಾಣಿ ಆರ್ಡರ್ ಕೇಳಲು ಬಂದಾಗ ಅವನನ್ನು ಅಲ್ಲಿರುವ ಎಲ್ಲಾ ಐಟಂಗಳ ಬೆಲೆಯನ್ನು ಕೇಳುತ್ತಾನೆ ಮತ್ತು ಕೊನೆಯದಾಗಿ ಯಾವುದು ಅತಿಕಡಿಮೆ ಬೆಲೆ ಇದೆಯೋ ಅದನ್ನು ತರಲಿಕ್ಕೆ ಹೇಳುತ್ತಾನೆ.

Read Also – ಮೂರು ಕಾಗೆಗಳು

ಅದನ್ನು ಕೇಳಿದ  ವಾಣಿ ಅವನನ್ನು ಕಡಿಮೆ ಮಾಡಿ ನೋಡುತ್ತಾನೆ. ಏಕೆಂದರೆ ಇವನಲ್ಲಿ ಈ ಐಟಂಗಳನ್ನು ತಿನ್ನಲು ದುಡ್ಡು ಇಲ್ಲ. ಐಟಂಗಳನ್ನು ಯಾವತ್ತೂ ತಿಂದಿರುವುದಿಲ್ಲ ಎಂದು ಭಾವಿಸಿಸುತ್ತಾನೆ.

ವಾಣಿ ಟೀ ತಂದು ಕೊಟ್ಟು ಹೋಗುತ್ತಾನೆ. ರಾಮಪ್ಪನು ಒಂದು ಟೀ ಕುಡಿದು, ಟೀಯ ಬೆಲೆಗಿಂತ ಅಧಿಕ ಹಣವನ್ನು ವಾಣಿಗೆ ಟಿಪ್ಪು ಆಗಿ ಕೊಟ್ಟು ಅಲ್ಲಿಂದ ಹೋಗುತ್ತಾನೆ. ಇದನ್ನು ನೋಡಿ ವಾಣಿಗೆ ಆಶ್ಚರ್ಯವಾಯಿತು. ಆಗ ಅವನಿಗೆ ಅರ್ಥವಾಯಿತು ಅವನು ಎಲ್ಲಾ ಐಟಂಗಳ ಬೆಲೆಯನ್ನು ಕೇಳಿದ್ದು ನನಗೆ ಟಿಪ್ಪು ಕೊಡವ ಸಲುವಾಗಿ ಅಂತ.

ಕಥೆಯಲ್ಲಿನ ನೀತಿ/ Moral of this Story – ಒಬ್ಬ ವ್ಯಕ್ತಿಯ ವ್ಯಕ್ತಿತ್ವವನ್ನು ಆಕಾರಗಳಲ್ಲಿ, ಹೊರನೋಟದಲ್ಲಿ ಅಳೆಯಬಾರದು.

Follow Our Facebook Page Moral Storys

*ವಿ. ಸೂ. ಈ ಮೇಲಿನ ಕಥೆಗಳಲ್ಲಿ ಏನಾದರೂ ತಪ್ಪು / ದೋಷಗಳು ಕಂಡುಬಂದರೆ ದಯಮಾಡಿ ಕಾಮೆಂಟ್ ಮೂಲಕ ತಿಳಿಸಲು ಕೋರುತ್ತೇವೆ. ಧನ್ಯವಾದಗಳು ಪುನಃ ಬೇಟಿ ನೀಡಿ.


Spread the love

Leave a Reply

Your email address will not be published. Required fields are marked *