Kannada Kathegalu, ಕನ್ನಡ ಕಥೆಗಳು

Kannada Kathegalu

Moral Stories
Spread the love

Hi Everyone, Welcome to Moral Storys -Kannada Kathegalu

You can read simple and easy Moral Stories in Kannada. Kannada Kathegalu, Stories in Kannada, Kannada Stories

1. ರಾಜ ಮತ್ತು ಋಷಿ – ಕನ್ನಡ ಕಥೆ

Kannada Kathegalu, ಕನ್ನಡ ಕಥೆಗಳು
Kannada Kathegalu

ಒಂದು ರಾಜ್ಯದಲ್ಲಿ ಒಬ್ಬ ರಾಜನಿದ್ದನು. ಅವನು ವಿಶಾಲವಾದ ಸಾಮ್ರಾಜ್ಯವನ್ನು ಹೊಂದಿದ್ದನು. ಮತ್ತು ಅವನು ದೇಶದ ಎಲ್ಲಾ ಸಾಮ್ರಾಜ್ಯಗಳಿಗೆ ಅವನು ಹತ್ತಿರದ ವೈರಿ ಆಗಿದ್ದ. ಏಕೆಂದರೆ ಅವನು ದೇಶದಲ್ಲಿರುವ ಎಲ್ಲಾ ರಾಜ್ಯಗಳ ಮೇಲೆ ಯುದ್ಧ ಸಾರಿದ್ದನು ಮತ್ತು ಅಷ್ಟೇ ಕ್ರೂರಿಯಾಗಿದ್ದನು.

ಅಲ್ಲಿನ ಜನರು ಆರು ತಿಂಗಳಿಗೊಮ್ಮೆ ಕಪ್ಪ ಕಟ್ಟಬೇಕಾಗಿತ್ತು ಮತ್ತು ಭೂ ಉತ್ಪಾದನೆಯ ಅರ್ಧಭಾಗವನ್ನು ಅಲ್ಲಿನ ರಾಜನಿಗೆ ಕೊಡಬೇಕಾಗಿತ್ತು. ಒಂದುವೇಳೆ ರಾಜನಿಗೆ ನಿಗದಿತ ಸಮಯದಲ್ಲಿ ಕಂದಾಯವನ್ನು ಕಟ್ಟದಿದ್ದರೆ, ಅವರ ಭೂಮಿಯನ್ನು ಬಲವಂತವಾಗಿ ತೆಗೆದುಕೊಳ್ಳುತ್ತಿದ್ದನು; ಇಲ್ಲವಾದರೆ ಕ್ರೂರವಾಗಿ ಹಿಂಸಿಸಿ ಶಿಕ್ಷೆ ಕೊಡುತ್ತಿದ್ದನು.
 
ಒಂದು ದಿನ ರಾಜನು ತನ್ನ ಬಲಾಢ್ಯ ಸೈನ್ಯವನ್ನು ತೆಗೆದುಕೊಂಡು ಪಾಶ್ಚಿಮಾತ್ಯ ದೇಶಗಳ ಮೇಲೆ ಯುದ್ಧ ಸಾರಲು ಹೊರಟನು. ದಾರಿಯಲ್ಲಿ ಹೋಗುತ್ತಿದ್ದಾಗ ಮರದ ಕೆಳಗೆ ಒಬ್ಬ ಋಷಿಮುನಿಗಳು ಕುಂತಿದ್ದರು. ಋಷಿಯನ್ನು ನೋಡಿ ರಾಜನಿಗೆ ಏನೋ ಒಂಥರಾ ಭಾವ ಮೂಡಿತು.

ರಾಜನು ಋಷಿಮುನಿಗಳ‌ ಹತ್ತಿರ ಹೋಗಿ ನಾನು ಕಾಂತಾರ ಸಾಮ್ರಾಜ್ಯಕ್ಕೆ ಅಧಿಪತಿ ರಾಜ ಜಿತೆಂದರ್ ಸಿಂಗ್ ರಾಥೋರ್. ನಾನು ಯುದ್ಧ ಸಾರದ ಸಾಮ್ರಾಜ್ಯವೇ ಇಲ್ಲ. ಇನ್ನೊಬ್ಬರಲ್ಲಿ ಕಸಿದುಕೊಂಡು ತಿಂದಿನಿ. ಯಾವತ್ತೂ ಕೂಡಾ ಒಬ್ಬರಿಗೆ ಕೈಚಾಚಿ ಕೊಟ್ಟಿಲ್ಲ ಆದರೆ ನಿಮ್ಮನ್ನು ನೋಡಿದ ಮೇಲೆ ನಿಮಗೆ ಏನಾದರೂ ಕೊಡಬೇಕು ಅಂತ ಅನ್ನಿಸುತ್ತಿದೆ.

ಕೇಳಿ ನಿಮಗೆ ಏನು ಬೇಕು ಅಂತ ರಾಜ ಅಂದನು. ಅದಕ್ಕೆ ಋಷಿಮುನಿಗಳು ಮುಗುಳ್ನಕ್ಕರು. ರಾಜ “ಏಕೆ ನಗುತ್ತಿದ್ದೀರಿ” ಎಂದು ಕೇಳಿದನು. ಋಷಿಮುನಿಗಳು ಈ ಪ್ರಶ್ನೆ ನನ್ನಲ್ಲಿಗೆ ಬಂದು ನಿಮಗೇನು ಬೇಕು ಅಂತ ಕೇಳುವುದಕ್ಕಿಂತ ಜನಸಾಮಾನ್ಯರಲ್ಲಿಗೆ ಹೋಗಿ ಅವರಿಗೇನು ಬೇಕು ಅಂತ ಕೇಳಿದ್ರೆ ಒಳ್ಳೆಯದಿತ್ತು” ಎಂದನು. 

ಮತ್ತೆ ಮುಂದುವರೆದು “ಪರರ ಸೊತ್ತನ್ನು ದೋಚಿಕೊಂಡು ತಿನ್ನುವುದರಲ್ಲೇ ನಿಮ್ಮ ಆಯುಷ್ಯವೆಲ್ಲಾ ಮುಗಿತಾ ಇದೆ. ಇಲ್ಲದವನಿಗೆ ಕೊಟ್ಟು ನೋಡು ನಿನ್ನ ಆಯುಷ್ಯಕಾಲ ಹೆಚ್ಚಾಗುವುದರ ಜೊತೆಗೆ ರಣರಂಗದಲ್ಲಿ ಯುದ್ಧ ಗೆದ್ದರೂ ಸಿಗದ ಆನಂದ ನಿನಗಲ್ಲಿ ಸಿಗುತ್ತದೆ” ಅಂದನು.

ರಾಜನು ಮಾತಾಡದೆ ಮೌನವಾಗಿಬಿಟ್ಟ. ಋಷಿಯ ಮಾತುಗಳು ರಾಜನನ್ನು ಆಲೋಚನೆಯಲ್ಲಿ ಮುಳುಗಿಸಿದವು.

“ನಾನು ಅಧಿಕಾರದ ಅಹಂನಲ್ಲಿ ಎಲ್ಲವನ್ನು ಮರೆತು ಬಿಟ್ಟೆ, ನೀವು ಸತ್ಯವಾದ ಮಾತುಗಳಾಡಿ ನನ್ನ ಕಣ್ಣು ತೆರೆಸಿದಿರಿ” ಎಂದು ರಾಜನು ಅಲ್ಲಿಂದ ಹಿಂತಿರುಗಿ ರಾಜ್ಯಕ್ಕೆ ಬಂದನು.

Read Also – ಮಾಯಾ ಬಾಗಿಲು

ರಾಜ ಊರಿನ ಜನರನ್ನು ಕರೆದು ತಾನು ಬಲವಂತವಾಗಿ ತೆಗೆದುಕೊಂಡ ಭೂಮಿಯನ್ನು ಹಿಂತಿರುಗಿ ಕೊಟ್ಟನು ಮತ್ತು ಸರ್ಕಾರಕ್ಕೆ ಕಟ್ಟಬೇಕಾದ ಎಲ್ಲಾ ರೀತಿಯ ಸುಂಕವನ್ನು ರದ್ದುಗೊಳಿಸಿದನು.
ರಾಜ್ಯದ ಜನತೆ ಸಂತೋಷದಿಂದ ರಾಜನನ್ನು ಹಾಡಿಹೊಗಳಿದರು. ರಾಜನಿಗೆ ನಿಜವಾಗಿಯೂ ಯುದ್ಧ ಗೆದ್ದರೂ ಆಗದ  ಆನಂದವಾಯಿತು.

ಕಥೆಯಲ್ಲಿನ ನೀತಿ / Moral of this Story: ತುಳಿದು ಬದುಕಬೇಡ ತಿಳಿದು ಬದುಕು
ಹಂಚಿಕೊಂಡು ತಿಂದರೆ ಸ್ವರ್ಗ ಸುಖ

2. ಕರಡಿ ಮತ್ತು ನರಿ – ಕನ್ನಡ ಕಥೆಗಳು

ಒಂದು ಕಾಡಿನ ಅಂಚಿನಲ್ಲಿ ಕರಡಿಯೊಂದು ವಾಸವಾಗಿತ್ತು. ಕರಡಿ ಅತ್ಯಂತ ಬುದ್ಧಿವಂತ ಮತ್ತು ಬಲಶಾಲಿಯಾಗಿತ್ತು. ತನ್ನ  ಸುತ್ತಮುತ್ತಲಿರುವ ಜೇನು, ಮೀನು, ಹಣ್ಣುಗಳು ತಿಂದು ಬದುಕನ್ನು ಸಾಗಿ‌ಸುತ್ತಿತ್ತು.

ಒಂದು ದಿನ ಆಹಾರಕ್ಕಾಗಿ ಹೊರಗಡೆ ಹೋಯಿತು. ಒಂದು ಎತ್ತರವಾದ ಪಪ್ಪಾಯಿ ಗಿಡಕ್ಕೆ ಸುಂದರವಾದ ಮತ್ತು ಸಿಹಿಯಾದ ಪಪ್ಪಾಯಿ ಹಣ್ಣಗಳು ಇದ್ದವು. ಆ ಹಣ್ಣುಗಳನ್ನು ನೋಡಿದರೆ ಕರಡಿಯ ಬಾಯಲ್ಲಿ ನೀರೂರಿದವು, ಆದರೆ ಗಿಡ ಎತ್ತರಕ್ಕೆ ಬೆಳೆದಿರುವುದರಿಂದ ಹಣ್ಣು ಕರಡಿಗೆ ನಿಲುಕಲಿಲ್ಲ.

ಅದಕ್ಕಾಗಿ ಕರಡಿ ಒಂದು ಉಪಾಯ ಮಾಡಿತು. ಅಲ್ಲೇ ಹಾರುತ್ತಿರುವ ಪಕ್ಷಿಯನ್ನು ಹುಡುಕಿ, ಅದರ ಜೊತೆ ಸ್ನೇಹ ಸಂಬಂಧ ಬೆಳೆಸಿತು. ಆಗ ಪಕ್ಷಿಯು ತನ್ನ ಕೊಕ್ಕೆಯಿಂದ  ಕಚ್ಚಿ ಹಣ್ಣನ್ನು ಕೆಳಕ್ಕೆ ಬೀಳಿಸುತ್ತಿತ್ತು. ಹೀಗೆ ಆ ಪಕ್ಷಿಯ ಸಹಾಯದಿಂದ ಕರಡಿ ಸಿಹಿಯಾದ ಪಪ್ಪಾಯಿ ಹಣ್ಣುಗಳನ್ನು ತಿನ್ನುತ್ತಿತ್ತು.

ಒಂದು ದಿನ ಕರಡಿ ದಾರಿಮಧ್ಯೆ ಹೋಗುತ್ತಿದ್ದಾಗ ನರಿಯೊಂದು ಬೇಟಿಯಾಯಿತು ಮತ್ತು ಕರಡಿಯನ್ನು ಹಿಂಬಾಲಿಸಿತು. ಕರಡಿ ಎಂದಿನಂತೆ ಪಕ್ಷಿಯ ಸಹಾಯದಿಂದ ಹಣ್ಣು ತಿನ್ನಲು ಹೋದಾಗ, ಪಕ್ಷಿ ಬೀಳಿಸುವ ಹಣ್ಣುಗಳನ್ನು ನರಿಯೇ ತಿನ್ನುತ್ತಿತ್ತು. ಕರಡಿಗೆ ಬಾಯಿಗೆ ಒಂದೂ ಸಿಗಲಿಲ್ಲ. ಕರಡಿ ಒಂದು ಉಪಾಯ ಹೊಳೆಯಿತು. Kannada Kathegalu

ಕರಡಿ, ನರಿಗೆ ‘ನೀನು ನನ್ನ ಜೊತೆ ಬಾ ಜೇನು ತುಪ್ಪ ‌ಕೊಡ್ತೀನಿ’ ಎಂದು ಹೆಜ್ಜೇನು ಇರುವಲ್ಲಿಗೆ ಕರೆದುಕೊಂಡು ಹೋಯಿತು. ನರಿಗೆ ‘ಕಣ್ಣುಮುಚ್ಚಿಕೊಂಡು ಇಲ್ಲೇ ನಿಲ್ಲು ನಾನು ಜೇನು ಸೋಸಿ ತರುತ್ತೀನಿ’ ಎಂದಿತು.

ಆಗ ನರಿ ಆಸೆಯಿಂದ ಕಣ್ಣುಮುಚ್ಚಿಕೊಂಡು ನಿಂತಾಗ ಕರಡಿ ಅಲ್ಲೇ ಇರುವ ಹೆಜ್ಜೇನು ನೊಣಗಳನ್ನು ಎಬ್ಬಿಸಿ ದೂರ ಹೋಗಿ ಅಡಗಿಕೊಂಡಿತು. ಹೆಜ್ಜೇನು ನೊಣಗಳು ಬಂದು ನರಿಯನ್ನು ರಕ್ತ ಬರುವಂತೆ ಕಚ್ಚಿ ನರಿಯನ್ನು ಅಲ್ಲಿಂದ ಓಡಿಸಿ ಬಿಟ್ಟವು.

ನರಿ ಇನ್ನು ಮೇಲೆ ಈ ಕಡೆ ಬರಲೇ ಇಲ್ಲ, ಕರಡಿ ಮೊದಲಿನಂತೆ ಪಕ್ಷಿಯ ಜೊತೆ ಸ್ನೇಹ ಮಾಡುತ್ತಾ ಇದ್ದಿತು.

ಕಥೆಯಲ್ಲಿನ ನೀತಿ / Moral of this Story:

  • ಪ್ರತಿಯೊಬ್ಬರ ಜೀವನದಲ್ಲೂ ಯಾವುದೋ ಒಂದು ರೂಪದಲ್ಲಿ ಸಮಸ್ಯೆಗಳು, ತೊಂದರೆಗಳು ಬರುತ್ತವೆ. ಅವುಗಳನ್ನು ಉಪಾಯದಿಂದ ಪರಿಹರಿಸಿಕೊಳ್ಳಬೇಕು. ಪ್ರತಿಯೊಂದು ಸಮಸ್ಯೆಗೂ ಪರಿಹಾರ ಇದ್ದೇ ಇರುತ್ತದೆ.
  • ‌ಅಪಾಯ ಕಾಲದಲ್ಲಿ ಉಪಾಯದಿಂದ ಯೋಚಿಸಬೇಕು.
  • ‌ಶಕ್ತಿ ಸಾಮರ್ಥ್ಯದಿಂದ ಸಾಧಿಸದ ಕೆಲಸಗಳನ್ನು ಯುಕ್ತಿಯಿಂದ ಸಾಧಿಸಬಹುದು.

3. ಶಕ್ತಿಗಿಂತ ಯುಕ್ತಿ ಮೇಲು – ಕನ್ನಡ ಕಥೆಗಳು

ಒಂದು ಕಾಡಿನಲ್ಲಿ ಒಂದು ಆನೆ ಇತ್ತು. ಅದು ಬಲಶಾಲಿ ಮತ್ತು ಧೈರ್ಯಶಾಲಿಯಾಗಿತ್ತು. ಗಾತ್ರದಲ್ಲೇನೋ ದೊಡ್ಡದು ಆದರೆ ಬುದ್ಧಿಶಕ್ತಿಯಲ್ಲಿ ಸಣ್ಣದು. ಆನೆಯನ್ನು ಎಲ್ಲಾ ಪ್ರಾಣಿಗಳು ಗೇಲಿ ಮಾಡುತ್ತಿದ್ದವು. ಕಾಡಿನಲ್ಲಿ ಭಾರವಾದ ಎಲ್ಲಾ ಕೆಲಸಗಳನ್ನು ಆನೆ ಸುಲಭವಾಗಿ ಮಾಡಿಕೊಡುತ್ತಿತ್ತು. 

ಒಂದು ದಿನ ಕಾಡಿನಲ್ಲಿ ಕಟ್ಟಿಗೆ ಕಡಿಯುವವನು ಬಂದು ಆನೆ ಸಹಾಯವನ್ನು ಕೇಳಿದನು.  ಆನೆ ಭಾರವಾದ ಮರದ ತುಂಡುಗಳನ್ನು ಎಳೆದು ಲಾರಿಯ ಸಮೀಪ ಹಾಕುತ್ತಿತ್ತು. ಹೀಗೆ ಆನೆ ಕಾಡಿನಲ್ಲಿ ಎಲ್ಲರಿಗೂ ಸಹಾಯ ಮಾಡುತ್ತಾ ಇತ್ತು.

ಒಂದಿನ ಆನೆ ಬೆಳಿಗ್ಗೆಯಿಂದ ಸಂಜೆಯವರೆಗೂ ಕೆಲಸ ಮಾಡಿ ನಿಶ್ಯಕ್ತಿ ಗೊಂಡಿತು. ಅದಕ್ಕೆ ತುಂಬಾ ಹಸಿವೆಯಾಯಿತು. ಆಹಾರ ಹುಡುಕುತ್ತಾ ಹೋಯಿತು ಆದರೆ ಎಲ್ಲೂ ಆಹಾರ ಸಿಗಲಿಲ್ಲ. ಆನೆ ನಿರಾಸೆಯಿಂದ ಮಾವಿನ ಮರದ ಕೆಳಗೆ ಬಂದು ಕುಳಿತುಕೊಂಡಿತು.

ಮಾವಿನ ಮರದಲ್ಲಿ ಒಂದೇ ಒಂದು ಮಾವಿನ ಹಣ್ಣು ಇತ್ತು. ಅದನ್ನು ನೋಡುತ್ತಲೇ ಆನೆಗೆ ನಾಲಿಯ ಮೇಲೆ ನೀರೂರಿತು. ಆದರೆ ಮಾವಿನ ಹಣ್ಣು ಆನೆ ಸೊಂಡಿಲಿಗೆ ನಿಲುಕಲಿಲ್ಲ.

ಅದನ್ನು ಹೇಗೆ ಪಡೆಯಬೇಕು ಎಂದು ಆಲೋಚಿಸುತ್ತಿರುವಾಗ, ನರಿ ಬಂದು “ನಿನ್ನ ಬಲದಿಂದ ಮರವನ್ನು ಅಲುಗಾಡಿಸು” ಎಂದು ಹೇಳಿತು. ನರಿಯ ಮಾತಿನಂತೆ ಆನೆ ಬಲದಿಂದ ಮರವನ್ನು ಅಲ್ಲಾಡಿಸಿತು. ಮಾವಿನ ಹಣ್ಣು ತಟ್ಟನೆ ಕೆಳಕ್ಕೆ ಬಿತ್ತು ಅಲ್ಲೇ ಇದ್ದ ನರಿ ತಕ್ಷಣ ಹಣ್ಣನ್ನು ತೆಗೆದುಕೊಂಡು ಹೋಯಿತು.

ಇರುವ ಒಂದೇ ಒಂದು ಮಾವಿನ ಹಣ್ಣು ನರಿಯ ಪಾಲಾಯಿತು. ಆನೆ ಸಪ್ಪಗೆ ಬಾಡಿದ ಮುಖದಿಂದ ಆಹಾರಕ್ಕಾಗಿ ಬೇರೆ ಕಡೆ ಹೋಯಿತು.

ಕಥೆಯಲ್ಲಿನ ನೀತಿ / Moral of this Story: ಶಕ್ತಿ ಮಾತ್ರ ಇದ್ರೆ ಸಾಲದು ಯುಕ್ತಿ ಇರಬೇಕು. ಶಕ್ತಿಯಿಂದ ಮಾಡಲಾಗದ ಕೆಲಸ ಯುಕ್ತಿಯಿಂದ ಸಾಧಿಸಬಹುದು.

Related Stories – Also Read

1. ಎರಡು ಮೀನು

2. ನಾಸ್ತಿಕ

3. ತಂದೆ ಮತ್ತು ಮಗ

Follow Our Facebook Page Moral Storys


Spread the love

Leave a Reply

Your email address will not be published. Required fields are marked *