Inspire Short Story

Inspire Short Story

Moral Stories
Spread the love

Hi Everyone Welcome to Moral Storys – Inspire Short Story

1. ಸಾಗಿಸುವ ದೇವರ ಸಹಾಯ ಹಸ್ತ – Inspire Short Story

Inspire Short Story
Inspire Short Story

ಒಂದೂರಲ್ಲಿ ಒಬ್ಬ ವ್ಯಕ್ತಿ ಇದ್ದನು. ಆತನ ಹೆಸರು ಜೋಗಯ್ಯ. ದೇವರ ಭಯ ಭಕ್ತಿಯಲ್ಲಿ ಬೆಳೆದಿದ್ದನು. ಆತನು ದಿನನಿತ್ಯ ಬೆಳಿಗ್ಗೆ ದೇವರಿಗೆ ಪೂಜೆ ಮಾಡೇ ಆತನ ಕೆಲಸ ಆರಂಭಿಸುತ್ತದ್ದನು.

ಮನುಷ್ಯರನ್ನು ಯಾರನ್ನು ನಂಬುತ್ತಿದ್ದಿಲ್ಲ, ದೇವರನ್ನು ಮಾತ್ರ ನಂಬುತ್ತಿದ್ದ. ಪ್ರತಿ ಕೆಲಸದಲ್ಲೂ ದೇವರನ್ನು ಸ್ಮರಿಸುತ್ತಿದ್ದನು.

ಒಂದು ದಿನ ತನ್ನ ಸ್ವಂತ ಊರಿನಿಂದ ಬೇರೊಂದು ಊರಿಗೆ ಹೋಗುವಾಗ, ನಡುವೆ ಒಂದು ವಿಶಾಲವಾದ ನದಿಯನ್ನು ದಾಟಬೇಕಿತ್ತು. ಈ ಕಡೆಯಿಂದ ಆ ಕಡೆ ದಾಟಲು ದೋಣಿಯನ್ನು ಹತ್ತಿ ಕುಳಿತರು.

ದೋಣಿ, ನದಿ ಮಧ್ಯ ಭಾಗಕ್ಕೆ ಬಂದಾಗ ದೋಣಿಗೆ ಒಂದು ರಂಧ್ರ ಬಿದ್ದಿತು. ದೋಣಿಯಲ್ಲಿ ನೀರು ತುಂಬುತ್ತಾ ಬಂದವು. ಎಲ್ಲರು ಭಯ ಭ್ರಾಂತರಾದರು. ನದಿಯಲ್ಲಿ ನೀರು ಆಳವಾಗಿತ್ತು.

ಅಲ್ಲಿರುವ ಕೆಲವು ಜನ ಇನ್ನು ಕೆಲವೇ ನಿಮಿಷಗಳಲ್ಲಿ ದೋಣಿ ಮುಳುಗಿ ಹೋಗುವುದು ಖಚಿತ ನೀರಿಗೆ ಬಿದ್ದು ಈಜಿಕೊಂಡು ಹೋಗೋಣ ಎಂದರು. ಅಂಬಿಗ ‘ಜೋಗಯ್ಯನಿಗೆ ನನ್ನ ಜೊತೆ ಬರ್ರಿ ಹೇಗಾದರೂ ಮಾಡಿ ನಿಮ್ಮನ್ನು ದಡ ಸೇರಿಸುತ್ತೇನೆ’ ಎಂದನು  ಅದಕ್ಕೆ – ‘ಜೋಗಯ್ಯ ನನ್ನ ಚಿಂತೆ ಬಿಡಿ ನಾನು ನಿತ್ಯವೂ ಪೂಜಿಸುವ ದೇವರೆ ನನ್ನನು ಕಾಪಾಡುತ್ತಾನೆ’ ಎಂದನು.

ದೋಣಿಯಲ್ಲಿ ನೀರು ಜಾಸ್ತಿಯಾಗುತ್ತಾ ಹೋಯಿತು.  ಮುಳುಗುವ ದೋಣಿಯನ್ನು ನೋಡಿ ಮತ್ತೊಂದು ದೋಣಿ ಸಹಾಯಕ್ಕೆ ಬಂದಿತು. ಒಬ್ಬನು ‘ ಅಯ್ಯಾ! ಆ ದೋಣಿ ಇನ್ನು ಕೆಲವೇ ನಿಮಿಷಗಳಲ್ಲಿ ಮುಳುಗಿ ಹೋಗುತ್ತದೆ ಬಂದು ಈ ದೋಣಿ ಹತ್ತಿ’ ಎಂದು ಕೇಳಿಕೊಂಡನು.

ಅದಕ್ಕಾತನು ‘ನನ್ನನು ಆ ದೇವರೇ ಬಂದು ಕಾಪಾಡುತ್ತಾನೆ, ನೀವು ಹೋಗಿ ಬಿಡಿ’ ಎಂದನು. ದೇವರ ನಾಮಸ್ಮರಣೆ ಮಾಡುತ್ತಾ ಕುಳಿತ. ದೋಣಿಯ ಅರ್ಧ ಭಾಗ ಮುಳುತ್ತಾ ಹೋಯಿತು.

ಅಷ್ಟರಲ್ಲೇ ಇನ್ನೊಂದು ದೋಣಿ ಬಂದಿತು. ಅಂಬಿಗನು ‘ಅಯ್ಯಾ! ಇಲ್ಲಿದ್ದವರೆಲ್ಲರು ಸುರಕ್ಷಿತವಾಗಿ ದಡ ಸೇರಿದರು. ಇನ್ನು ಉಳಿದಿದ್ದು ನೀವೊಬ್ಬರೇ, ಆ ದೋಣಿ ಮುಳುಗಿ ಹೋಗುತ್ತೆ ಬೇಗ ಬಂದುಬಿಡಿ’ ಎಂದು ಕೇಳಿಕೊಂಡನು.

Also Read – ಹಂಸ ಮತ್ತು ಹಂದಿ

ಅದಕ್ಕೆ ಆತನು ‘ನಾನು ನಂಬಿದ ದೇವರು ನನ್ನನು ಕಾಪಾಡಲು ಬಂದೆ ಬರ್ತಾರೆ’ ಎಂದು ಅಲ್ಲೇ ಕುಳಿತರು. ಕ್ಷಣಮಾತ್ರದಲ್ಲೇ ಜೋಗಯ್ಯನ ಎದೆಯ ಮಟ್ಟ ನೀರು ನಿಂತವು. ಭಯದ ನಡುಕ ಹುಟ್ಟಿತು. ದೋಣಿ ಎಲ್ಲಾ ಮುಳುಗಿ ಜೋಗಯ್ಯನ ಕುತ್ತಿಗೆ ಮಟ್ಟ ನೀರು ಬಂದವು.

ಆಕಾಶದ ಕಡೆ ಮುಖ ಮಾಡಿ – ‘ಓ ದೇವರೇ ನಾನೇನು ತಪ್ಪು ಮಾಡೀನಿ, ದಿನಾಲೂ ಪೂಜೆ ಮಾಡ್ತಿದ್ದೆ ಪ್ರತಿಕ್ಷಣ ನಿಮ್ಮ ನಾಮಸ್ಮರಣೆ ಮಾಡ್ತಿದ್ದೆ. ನಿನ್ನನೇ ನಂಬೀನಿ ಆದರೂ ನನ್ನನು ಕಾಪಾಡಲು ಯಾಕೆ ಬರಲಿಲ್ಲ’ ಎಂದು ಗಟ್ಟಿಯಾಗಿ ಕೂಗಿದನು.

ಆಗ ದೇವರು ಪ್ರತ್ಯಕ್ಷನಾಗಿ “ಮೂರ್ಖ ಮಾನವನೇ ಅಂಬಿಗನ ರೂಪದಲ್ಲಿ ಮೊದಲ ಸಲ -ನನ್ನ ಜೊತೆ ಬಾ ಎಂದು ಕರೆದವನು ನಾನೇ. ಎರಡನೇ ಸಲ ನಿನಗಾಗಿ ದೋಣಿ ಕಳಿಸಿದವನೂ ನಾನೇ. ಮೂರನೇ ಸಲನೂ ಮತ್ತೊಂದು ದೋಣಿ ಕಳಿಸಿದವನೂ ನಾನೇ.

ನನ್ನನು ಪೂರ್ತಿಯಾಗಿ ಅರಿಯದೆ, ನಾನು ವಿಧವಿಧವಾಗಿ ಕರೆದರೂ ಬಾರದಿದ್ದರೆ ಅದು ನಿನ್ನ ತಪ್ಪು. ನಾನು ಎಲ್ಲ ರೀತಿಯಲ್ಲಿ ಬರ್ತಿನಿ. ಅದನ್ನು ಗುರುತಿಸುವುದೆ  ನಿಜವಾದ ಭಕ್ತಿ” ಎಂದು ಮಾಯವಾದನು.

Inspire Short Story

ಜೋಗಯ್ಯನಿಗೆ ಆಗ ಅರಿವಾಗಿ ಮುಳುಗುವ ದೋಣಿಯನ್ನು ಬಿಟ್ಟು ಸಹಾಯಕ್ಕೆ ಬಂದ ಮತ್ತೊಂದು ದೋಣಿಯನ್ನು ಹತ್ತಿದನು.

ಕಥೆಯಲ್ಲಿನ ನೀತಿ / Moral of this Story :
ದೇವರು ಸರ್ವವ್ಯಾಪಿ ಮತ್ತು ಸರ್ವಜ್ಞ. ಎಲ್ಲಾಕಡೆ ಮತ್ತು ಎಲ್ಲರಲ್ಲೂ ಇರುತ್ತಾರೆ. ದೇವರು ನೇರವಾಗಿ ಇಳಿದು ಬಂದು ನಮಗೆ ಸಹಾಯ ಮಾಡುವುದಿಲ್ಲ, ಬದಲಾಗಿ ಇತರರ ಮೂಲಕ ಸಹಾಯ ದೊರೆಯುವಂತೆ ಮಾಡಲು ಶಕ್ತನು.

ಮೇಲೆ ಹೇಳಿದಂತೆ ದೇವರು ಯಾವಾಗ ಯಾವ ರೂಪದಲ್ಲಿ ಹೇಗೆ ಬರುತ್ತಾರೆ ಗೊತ್ತಿಲ್ಲ. ಆದರೆ ಆತನ ಇರುವಿಕೆಯನ್ನು ಗುರುತಿಸುವುದೇ ನಿಜವಾದ ಭಕ್ತಿ.

2. ಹಳಿ ತಪ್ಪಿದ ರೈಲು – Inspire Short Story

Inspire Short Story

ಒಂದು ಊರಲ್ಲಿ ಒಬ್ಬ ಕುರುಬನಿಗೆ ನೂರು ಕುರಿಗಳಿದ್ದವು. ಆ ಕುರುಬನು ತನ್ನ ಕುರಿಗಳ ಮಂದೆಯನ್ನು ತೆಗೆದುಕೊಂಡು ನದಿಯ ದಡದಲ್ಲಿ  ಕುರಿಗಳ ಮುಂದೆಯನ್ನು ಮೇಯಿಸುತ್ತಿದ್ದನು. ಆ ನದಿಗೆ ಒಂದು ರೈಲ್ವೆ ಸೇತುವೆಯನ್ನು ಅಡ್ಡಲಾಗಿ ಕಟ್ಟಲಾಗಿತ್ತು.

ಒಂದು ದಿನ ಆ ಕುರುಬನು ತನ್ನ ಕುರಿಗಳನ್ನು ಮೇಯಿಸುವ ಸ್ಥಳದಲ್ಲಿ ರೈಲು ಹಳಿ ಕಟ್ಟಾಗಿತ್ತು.  ಕಟ್ಟಾಗಿರುವ ರೈಲು ಹಳಿಯನ್ನು ನೋಡುತ್ತಾನೆ.
ದೂರದಲ್ಲಿ ಬರುತ್ತಿರುವ ರೈಲನ್ನು ಕಂಡು ಗಾಬರಿಯಾಗಿ, ತನ್ನ ಬಳಿ ಇರುವ ಬಿಳಿ ವಸ್ತ್ರವನ್ನು (ಶಲ್ಯ) ಕುರಿಯ ರಕ್ತದಲ್ಲಿ ನೆನೆಸಿ, ರೈಲ್ವೇ ಸೇತುವೆ ಮೇಲೆ ಅಡ್ಡವಾಗಿ ಕಟ್ಟುತ್ತಾನೆ.

ಕೆಂಪು ವಸ್ತ್ರವನ್ನು ನೋಡಿದ ಲೋಕೋ ಪೈಲೆಟನು ರೈಲನ್ನು ನಿಲ್ಲಿಸಿ, ಇಳಿದು ಬಂದು ಕುರುಬನನ್ನು “ಯಾಕೆ ಈ ಕೆಂಪು ವಸ್ತ್ರವನ್ನು ಅಡ್ಡವಾಗಿ ಕಟ್ಟಿದ್ದಿ?” ಎಂದು ಕೇಳುತ್ತಾನೆ.

Also Read – ಆನೆ ಮತ್ತು ರೈತ

ಅದಕ್ಕೆ ಕುರುಬನು “ಮುಂದುಗಡೆ ರೈಲು ಹಳಿ ಕಟ್ಟಾಗಿದೆ, ಅದಕ್ಕೆ ನನ್ನ ಹತ್ತಿರ ಇರುವ ಬಿಳಿ ವಸ್ತ್ರವನ್ನು ಕುರಿಯ ರಕ್ತದಲ್ಲಿ ನೆನೆಸಿ ಈ ರೀತಿಯಾಗಿ ಕಟ್ಟಿದ್ದೇನೆ” ಎಂದು ಹೇಳುತ್ತಾನೆ.

ಲೋಕೋ ಪೈಲೆಟನು “ನಿನಗೊಂದು ಸಲಾಂ ನೀನು ಮಾಡಿದ ತ್ಯಾಗ ಕೇವಲ ನನ್ನೊಬ್ಬನಷ್ಟೆ ಅಲ್ಲ, ಸಾವಿರಾರು ಮಂದಿ ಪ್ರಾಣವನ್ನು ಉಳಿಸಿದೆ. ನಿನಗೆ ನಾವೆಲ್ಲಾ ಜೀವನಪೂರ್ತಿ ಚಿರಋಣಿಯಾಗಿರುತ್ತೇವೆ” ಎಂದು ಮೆಚ್ಚುಗೆ ವ್ಯಕ್ತಪಡಿಸಿದ.

ಈತನು ಮಾಡಿದ ಕೆಲಸವನ್ನು ಎಲ್ಲರೂ ಮೆಚ್ಚಿಕೊಂಡು ಪ್ರಶಂಶಿಸಿದರು. ಶ್ರೇಷ್ಠ ಬಹುಮಾನಗಳನ್ನು ಕೊಟ್ಟರು.

ಕಥೆಯಲ್ಲಿನ ನೀತಿ / Moral of this Story : ಸಹಾಯ
ಸಹಾಯ ಮಾಡುವುದು ಮಾನವನ ನೈಜತೆ, ಮತ್ತೊಬ್ಬರಿಗೆ ಸಹಾಯ ಮಾಡುವುದರಲ್ಲೇ ಮಾನವೀಯತೆ ಅಡಗಿಕೊಂಡಿದೆ.

3. ಮರಳಿ ಮಾಡದ ಮಡಿಕೆ – Inspire Short Story

ಒಂದು ಪುಟ್ಟ ಗ್ರಾಮದಲ್ಲಿ ಮದ್ಯ ತರಗತಿ ಕುಟುಂಬವೊಂದು ವಾಸವಾಗಿತ್ತು. ತಂದೆ-ತಾಯಿ ಮತ್ತು ಮಗು ಮೂರು ಜನ ಇರ್ತಾರೆ. ತಂದೆ ಕುಡುಕ ದಿನವೆಲ್ಲಾ ಕುಡೀತಾ ಇರ್ತಾನೆ.

ತಾಯಿ ಬೇರೆಯವರ ಹೊಲದಲ್ಲಿ ಕೂಲಿ ಮಾಡಿ ಜೀವನ ನಡೆಸುತ್ತಾಳೆ. ತಂದೆ ಕುಡುಕ ಆದುದರಿಂದ ತಾಯಿನೇ ಕುಟುಂಬದ ಜವಾಬ್ದಾರಿಯನ್ನು ಹೊತ್ತು ಸಂಸಾರವನ್ನು ಸಾಗಿಸುತ್ತಾಳೆ.

ಒಂದು ದಿನ ತಂದೆ ಅನಾರೋಗ್ಯದಿಂದ ಹಾಸಿಗೆಯಲ್ಲಿ ಬಿದ್ದಾಗ ಮಗನಿಗೆ ಕುಡಿಲಿಕ್ಕೆ ಒಂದು ಗ್ಲಾಸ್ ನೀರನ್ನು ಕೇಳುತ್ತಾನೆ. ಆಗ ಗ್ಲಾಸ್ ನೀರನ್ನು ಕೊಡುವಾಗ ಕೈಯಿಂದ ಜಾರಿ ಬಿದ್ದು ಹೊಡೆದು ಹೋಗುತ್ತದೆ.

ಇದನ್ನು ನೋಡಿ ಸಿಟ್ಟಿಗೆದ್ದ ತಂದೆ – “ಅಯ್ಯೋ ಬಂಗಾರದಂತ ಗ್ಲಾಸನ್ನು ಹೊಡೆದು ಬಿಟ್ಟಲ್ಲೋ ಮುಟ್ಟಾಳ, ಗ್ಲಾಸನ್ನು ಹಿಡಿದುಕೊಳ್ಳುವ ಶಕ್ತಿಯಿಲ್ಲ ನಿನಗೆ” ಎಂದು ಅಸಭ್ಯ ಮಾತುಗಳಿಂದ ಬೈಯುತ್ತಾನೆ.

Also Read – ದುರಾಸೆಯ ಪ್ರತಿಫಲವೇ ದುಃಖ

ಆಗ ಮಗನು ತಂದೆಗೆ – “ಅಪ್ಪ ನಾನು ಒಂದು ಗ್ಲಾಸ್ ಹೊಡೆದಿದ್ದಕ್ಕೆ ಇಷ್ಟೆಲ್ಲ ರಾದ್ಧಾಂತ ಮಾಡುತ್ತೀಯಲ್ಲ. ಜೀವನಪೂರ್ತಿ ಬಾಳಬೇಕಾದ ನೀನು  ದಿನಾ ಕುಡಿದು ನಿನ್ನ ದೇಹವನ್ನು ಹಾಳು ಮಾಡಿಕೊಳ್ಳುತ್ತಾ ಇದ್ದೀಯಲ್ಲ ಇದು ಸರೀನಾ.

ಗ್ಲಾಸ್ ಹೊಡೆದರೆ ಮತ್ತೆ ತರಬಹುದು ಆದರೆ ಕುಡಿತದಿಂದ ನಿನ್ನ ದೇಹ ಹಾಳಾದರೆ ಮತ್ತೆ ಸರಿಪಡಿಸಲಿಕ್ಕೆ ಆಗುತ್ತಾ?” ಎಂದು ಕೇಳಿದ.

ಮಗನ ಮಾತು ಕೇಳಿ ತಂದೆ ಒಂದು ಕ್ಷಣ ಮೌನವಾಗಿ ಬಿಡುತ್ತಾನೆ. ಮಗನ ಮಾತು ತಂದೆಯ ಎದೆಯಲ್ಲಿ ಬಾಣದಂತೆ ನಾಟಿಕೊಳ್ಳುತ್ತದೆ.

Inspire Short Story

ಆಗ ತಂದೆ “ಹೌದಲ್ಲ ಛೇ, ನನ್ನ ಮಗನಿಗೆ ಇದ್ದಷ್ಟು ತಿಳುವಳಿಕೆಯಾದರೂ ನನಗೆ ಇಲ್ಲವಲ್ಲ. ಇಷ್ಟು ದಿನ ಕುಡಿತದ ಅಮಲಿನಲ್ಲಿ ಬಿದ್ದು, ಹೆಂಡತಿ – ಮಗ ಎಲ್ಲವನ್ನು ಬಿಟ್ಟು ನನ್ನ ಜೀವನವನ್ನು ಹಾಳು ಮಾಡಿಕೊಳ್ಳಲಿಕ್ಕೆ ಹೊರಟಿದ್ದೇನಲ್ಲ” ಎಂದು ತನ್ನೊಳಗೆ ತಾನು ಯೋಚಿಸತೊಡಗಿದನು.

ಮಗನ ಮಾತಿನಿಂದ ಮಾರುಮನಸು ( ನೂತನ ಮನಸು) ಹೊಂದಿ, ಕಷ್ಟಪಟ್ಟು ದುಡಿದು ತನ್ನ ಹೆಂಡತಿ ಮಗನೊಂದಿಗೆ ಸುಖವಾಗಿ ಜೀವನ ಮಾಡಿದನು.

ಕಥೆಯಲ್ಲಿನ ನೀತಿ : Moral of this Story :
ಬೆಲೆ ಕಟ್ಟಲಾಗದ, ಬಂಗಾರಕ್ಕಿಂತಲೂ ಮಿಗಿಲಾದ ದೇಹ ನಮ್ಮದು. ಮನುಷ್ಯನ ಕೈಚಳಕದಿಂದ ತಯಾರಿಸಿದ ಯಾವುದೇ ವಸ್ತುವು ಗೆ ಹಾನಿಯಾದರೆ ಕೃತಕವಾಗಿ ನಿರ್ಮಿಸಬಹುದು. ಆದರೆ ದೇವರಿಂದ ಸೃಷ್ಟಿಸಲ್ಪಟ್ಟ ಈ ದೇಹಕ್ಕೆ ಹಾನಿಯಾದರೆ ಮತ್ತೆ ಸೃಷ್ಟಿಸಲಿಕ್ಕೆ ಸಾಧ್ಯವಿಲ್ಲ.

Follow Our Facebook Page Moral StorysSpread the love

Leave a Reply

Your email address will not be published. Required fields are marked *