Moral Stories Inspirational

Moral Stories Inspirational

Moral Stories
Spread the love

Hi Everyone, Welcome to Moralstorys. Moral Stories Inspirational

1. ರಾಜ ಮತ್ತು ಮೂವರು ಕಳ್ಳರು – Moral Stories Inspirational

ಒಂದಾನೊಂದು ಕಾಲದಲ್ಲಿ ಒಂದು ಪುಟ್ಟ ಗ್ರಾಮ ಇತ್ತು, ಆ ಊರಿನಲ್ಲಿ ಕಳ್ಳರ ಹಾವಳಿ ತುಂಬಾ ಇತ್ತು. ಪ್ರತಿದಿನ ಯಾವುದೋ ಒಂದು ಮನೆ ಕಳ್ಳತನಕ್ಕೆ ಒಳಗಾಗುತ್ತಿತ್ತು. ಕಳ್ಳರಿಂದ ಬೇಸತ್ತು ಊರಿನ ಜನರೆಲ್ಲಾ ರಾಜನ ಹತ್ತಿರ ಹೋದರು.

ನಾವು ಕಷ್ಟಪಟ್ಟು ಗಳಿಸಿದ ದುಡ್ಡು, ಬಂಗಾರ ಮತ್ತು ಬೆಳ್ಳಿ ಎಲ್ಲಾ ಕಳ್ಳರು ಬಂದು ಕದಿಯುತ್ತಿದ್ದಾರೆ. ಆ ಕಳ್ಳರನ್ನು ಹಿಡಿದು, ಕಳ್ಳತನದಿಂದ ನಮ್ಮನ್ನು ಪಾರು ಮಾಡು ಎಂದು ರಾಜನಲ್ಲಿ ವಿನಂತಿಸಿಕೊಂಡರು.

ರಾಜನು “ನಿಮ್ಮೆಲ್ಲರ ಆಸ್ತಿಪಾಸ್ತಿಗಳಿಗೆ ನಾನೇ ಜವಾಬ್ದಾರಿ, ನಿಮಗೂ ನಿಮ್ಮ ಮನೆಗಳಿಗೆ ಯಾವ ಹಾನಿ ಜರುಗಿದಂತೆ ನಾನು ನೋಡಿಕೊಳ್ಳುತ್ತೇನೆ. ನೀವು ಮನೆಗೆ ಹೋಗಿ ನೆಮ್ಮದಿಯಿಂದ ಮಲಗಿಕೊಳ್ಳಿರಿ” ಎಂದು ಧೈರ್ಯ ತುಂಬಿ ಕಳುಹಿಸಿದನು.

ರಾಜ ಆ ರಾತ್ರಿಯೇ ಪ್ರತಿಯೊಂದು ಮನೆಗೆ ಒಬ್ಬೊಬ್ಬ ಸೈನಿಕನನ್ನು ಕಾವಲು ಕಾಯಲು ನಿಲ್ಲಿಸಿದನು ಮತ್ತು ರಾತ್ರಿ ಹೊತ್ತಲ್ಲಿ ಹೊತ್ತು ಮೀರಿ ಯಾರೂ ಅಡ್ಡಾಡಬಾರದು ಎಂದು ಆದೇಶ ಹೊರಡಿಸಿದ. ಒಂದು ವೇಳೆ ಯಾರಾದ್ರೂ ಅನುಮಾನಾಸ್ಪದವಾಗಿ ತಿರುಗಾಡುವುದು ಕಂಡುಬಂದರೆ ತಕ್ಷಣ ಅವರನ್ನು ಬಂಧಿಸಬೇಕೆಂದು ತಿಳಿಸಿದ.

ಕಳ್ಳರು, ರಾತ್ರಿ ಹೊತ್ತಲ್ಲಿ ಎಲ್ಲರು ಮಲಗಿಕೊಂಡಿದ್ದಾರೆಂದು ಕಳ್ಳತನ ಮಾಡಲು ಊರೊಳಗೆ ಬಂದರು. ಕಳ್ಳತನ ಮಾಡಲು ಮನೆಯೊಳಗೆ ನುಗ್ಗುತ್ತಿದ್ದಾಗ, ಸೈನಿಕರು ಬಂದು ಮೂರು ಜನ ಕಳ್ಳರನ್ನು ಬಂಧಿಸಿ ರಾಜನ ಹತ್ತಿರ ಕರಕೊಂಡು ಹೋದರು.

ರಾಜ “ಅವರನ್ನು ಕಾರಾಗೃಹದಲ್ಲಿ ಬಂಧಿಸಿ, ಮೂರು ದಿನಗಳ ವರೆಗೆ ಊಟ, ನೀರು ಕೊಡಬೇಡಿ ಬದಲಾಗಿ ಅವರಿಗೆ ಇಷ್ಟವಾದ ಬೆಳ್ಳಿ-ಬಂಗಾರ ಆಹಾರವಾಗಿ ಕೊಡಿರಿ” ಎಂದು ಆಜ್ಞಾಪಿಸಿದನು.

ರಾಜನ ಆದೇಶದಂತೆ ಸೈನಿಕರು ಮೂರು ಜನ ಕಳ್ಳರಿಗೆ ಕಾರಾಗೃಹದಲ್ಲಿ ಮೂರು ದಿನದತನಕ  ಊಟ ನೀರು ಕೊಡಲಿಲ್ಲ. ಮೂರು ದಿನ ಆದ ಮೇಲೆ ಬೆಳ್ಳಿ ಬಂಗಾರ ಆಹಾರವಾಗಿ ತಟ್ಟೆಯಲ್ಲಿ ಕೊಟ್ಟರು.

ಕಳ್ಳರಿಗೆ ತುಂಬಾ ಹಸಿವೆಯಾಯಿತು, ಒಬ್ಬರನ್ನೊಬ್ಬರು ತಿನ್ನುವಂತ ಮಟ್ಟಕ್ಕೆ ಹೊಟ್ಟೆ ಹಸಿವೆಯಾಯಿತು. ಹೀಗೆ ಒಂದು ವಾರ ಕಳೆಯಿತು. ಬೆಳ್ಳಿ ಬಂಗಾರ ಹಣ ಮನುಷ್ಯನ ಹಸಿವೆಯನ್ನು ತೀರಿಸಲಾರದೆಂದು ಅವರಿಗರಿವಾಯಿತು. ಕಳ್ಳರು ತಮ್ಮ ತಪ್ಪನ್ನು ಅರಿತುಕೊಂಡು. ರಾಜನ ಬಳಿಯಲ್ಲಿ ಕ್ಷಮೆಯಾಚಿಸಿದರು.

ಕಳ್ಳರು, “ಇನ್ನು ಮುಂದೆ ನಾವು ಕಳ್ಳತನ ಮಾಡುವುದಿಲ್ಲ, ಕಷ್ಟಪಟ್ಟು ದುಡಿದು ಪ್ರಾಮಾಣಿಕವಾಗಿ  ಬದುಕುತ್ತೇವೆ” ಎಂದು ರಾಜನಲ್ಲಿ ವಿನಂತಿಸಿಕೊಂಡರು.

Also Read – ರಾಜ ಮತ್ತು ಋಷಿ Moral Story

ರಾಜನು ಅವರನ್ನು  ಕಾರಾಗೃಹದಿಂದ ಬಿಡುಗಡೆಗೊಳಿಸಿದನು. ಕಳ್ಳರು ಇಲ್ಲಿವರೆಗೆ ಕಳ್ಳತನ ಮಾಡಿರುವ ಎಲ್ಲಾ ಬೆಳ್ಳಿ ಬಂಗಾರವನ್ನು ಜನರಿಗೆ ಹಿಂತಿರುಗಿ ಕೊಟ್ಟರು.

ಕಥೆಯಲ್ಲಿನ ನೀತಿ / Moral of this Story:

  • ರಾಜನಾದವನು ತನ್ನ ಜನರ ಸುಕ್ಷೇಮವನ್ನು ಬಯಸುವವನಾಗಿರಬೇಕು. ಸೃಜನಶೀಲತೆಯನ್ನು ಹೊಂದಿರಬೇಕು.

  • ಪ್ರತಿಯೊಂದು ಸಮಸ್ಯೆಯನ್ನು ಪರಿಹರಿಸುವ ಶಕ್ತಿಯನ್ನು ಹೊಂದಿರಬೇಕು.

  • ಜನರಿಗಿಂತ ಮುಂದೆ ಯೋಚಿಸಬೇಕು, ಜವಾಬ್ದಾರಿಯನ್ನು ಹೊತ್ತುಕೊಳ್ಳಬೇಕು.

  • ಮನುಷ್ಯನು ಬದುಕಲು ಹಣ – ಆಸ್ತಿ, ವಜ್ರ – ವೈಢೂರ್ಯ, ಬೆಳ್ಳಿ – ಬಂಗಾರ ಬೇಕು. ಆದರೆ ಅದ್ಯಾವುದೂ ನಮ್ಮ ಹಸಿವೆಯನ್ನು ತೀರಿಸುವುದಿಲ್ಲ.

2. ರಾಜ ಮತ್ತು ಹಲ್ಲಿ – Moral Stories Inspirational

ಒಂದು ಊರಿನಲ್ಲಿ ಒಬ್ಬ  ರಾಜನಿದ್ದ, ಅವನು ಜೀವನದಲ್ಲಿ ನಿಷ್ಠೆ ಮತ್ತು ಪ್ರಾಮಾಣಿಕತೆಯನ್ನು ಹೊಂದಿದ್ದನು. ಒಂದು ದಿನ ರಾಜ್ಯದ ಮೇಲೆ ಅನ್ಯರಾಜ್ಯದವರು ದಂಡೆತ್ತಿ ಬಂದರು. ಅವನು ತನ್ನ ಸೈನ್ಯವನ್ನು ತೆಗೆದುಕೊಂಡು ರಣರಂಗಕ್ಕೆ ಹೋಗಿ ಕಾದಾಡಿದ ಆದರೆ ಯುದ್ದದಲ್ಲಿ ಸೋಲು ಕಂಡನು.

ನಿರಾಶೆಯಿಂದ, ಭಾರವಾದ ಮನಸ್ಸಿನಿಂದ ಅರಮನೆಗೆ ಬಂದು ಒಂದು ರೂಮಿನಲ್ಲಿ ಏಕಾಂಗಿಯಾಗಿ ಕುಳಿತುಕೊಂಡನು. “ಛೇ, ನಾನು ರಾಜನ ಪಟ್ಟಕ್ಕೆ ಅರ್ಹನಲ್ಲದವನು. ನನ್ ಕೈಲೇ ಯುದ್ಧ ಗೆಲ್ಲೋಕೆ ಆಗಲಿಲ್ಲ” ಎಂದು ತಾಳ್ಮೆ ಕಳೆದುಕೊಂಡು ಚಿಂತಿಸುತ್ತಾ ಕುಳಿತ.

ಅದೇ ರೂಮಿನಲ್ಲಿ ಒಂದು ಹಲ್ಲಿ ಗೋಡೆಯನ್ನು ಹತ್ತಲು ಪ್ರಯತ್ನ ಮಾಡ್ತಾ ಇತ್ತು. ಹಲ್ಲಿ ಗೋಡೆ ಹತ್ತುವುದನ್ನು ರಾಜನು ಕುಳಿತಲ್ಲೇ ಸೂಕ್ಷ್ಮವಾಗಿ ಗಮನಿಸುತ್ತಾ ಇದ್ದ.

ಹಲ್ಲಿ, ಗೋಡೆ ಹತ್ತುತ್ತಿದ್ದಂತೆಲ್ಲಾ ದೊಪ್ಪನೆ ಬೀಳುತ್ತಿತ್ತು. ಆದರೂ ಚಲ ಬಿಡದೆ ಮತ್ತೆ ಮತ್ತೆ ಹತ್ತುವ ಪ್ರಯತ್ನ ಮಾಡುತ್ತಲೇ ಇತ್ತು. ಸ್ವಲ್ಪ ಎತ್ತರಕ್ಕೆ ಹತ್ತುತ್ತಿದ್ದಂತೆ ಅಲ್ಲಿಂದ ಜಾರಿ ಬೀಳುತ್ತಿತ್ತು, ಆದರೆ ಹತ್ತುವ ಪ್ರಯತ್ನ ಮಾತ್ರ ಬಿಡಲಿಲ್ಲ. ಚಲಬಿಡದೆ ಗೋಡೆ ಹತ್ತುತ್ತಲೇ ಇತ್ತು, ಕೊನೆಗೆ ಗೋಡೆಯ ತುತ್ತತುದಿಯಲ್ಲಿ ಏರಿ ನಿಂತಿತು.

ಇದನ್ನೆಲ್ಲಾ ನೋಡುತ್ತಿದ್ದ ರಾಜನಿಗೆ ಒಂದು ರೀತಿಯ ಮನೋಸ್ಥೈರ್ಯ ತುಂಬಿದಂತಾಯಿತು. ಒಂದೇ ಪ್ರಯತ್ನದಲ್ಲಿ ಯಾರು ಏನೂ ಸಾಧನೆ ಮಾಡಲಿಕ್ಕೆ ಆಗದಿರಬಹುದು, ಆದರೆ ಗೆಲ್ಲೊ ವರೆಗೂ ಪ್ರಯತ್ನ ಬಿಡಬಾರದೆಂದು ಅಲ್ಲಿಂದ ಎದ್ದು ಯುದ್ಧಕ್ಕೆ ಹೊರಟ.

ಕಥೆಯಲ್ಲಿನ ನೀತಿ / Moral of this Story:

  • ಜೀವನದಲ್ಲಿ ಯಾವತ್ತೂ ಕೂಡಾ ತಾಳ್ಮೆ ಕಳೆದುಕೊಳ್ಳಬಾರದು, ಎದೆಗುಂದಬಾರದು.

  • ನಾವು ಏನನ್ನಾದರೂ ಮಾಡಲು ಮುಂದಾದಾಗ ಅದನ್ನು ಸಾಧಿಸುವ ತನಕ ಚಲ ಬಿಡಬಾರದು.

3. ರಾಜ ಮತ್ತು ತುಂಟ ಸೈನಿಕ – Moral Stories Inspirational

ಒಂದಾನೊಂದು ಕಾಲದಲ್ಲಿ ಒಬ್ಬ ರಾಜನಿದ್ದನು. ಆತನ ಬಳಿಯಲ್ಲಿ ಬಹಳ ಸಂಪತ್ತು ಇತ್ತು. ಅದನ್ನು ರಾಜನು ರಾಜ್ಯದ ಅಭಿವೃದ್ಧಿಗೆ ಮತ್ತು ಜನರ ಕಲ್ಯಾಣಕ್ಕಾಗಿ ಉಪಯೋಗಿಸುತ್ತಿದ್ದನು. ಆ ರಾಜ್ಯದಲ್ಲಿ ಕಳ್ಳರ ಹಾವಳಿ ತುಂಬಾನೆ ಇತ್ತು.

ಒಂದು ದಿನ ರಾಜನು ಕಳ್ಳರಿಂದ ಸಂಪತ್ತನ್ನು ರಕ್ಷಿಸಲು ಒಂದು ಗುಪ್ತ ದಳವನ್ನು ನೇಮಕ ಮಾಡಿದ. ಕಳ್ಳರು ಯಾರು ನುಸುಳದಂತೆ ಊರಿನ ಕೋಟೆ ಸುತ್ತಲೂ ಕಾವಲು ಕಾಯುವ ಯೋಧರ ಸಂಖ್ಯೆ ದುಪ್ಪಟ್ಟು ಮಾಡಿದ.

ಅದರಲ್ಲಿ ಬಗೀರಾ ಎನ್ನುವ ವ್ಯಕ್ತಿ ಇದ್ದ, ಅವನು ಬಹಳ ತುಂಟ ಮತ್ತು ಜಾಸ್ತಿ ಸುಳ್ಳಾಡುತ್ತಿದ್ದ. ರಾಜನು ಬಗೀರಾನನ್ನು  ಊರಿನ ಮುಖ್ಯದ್ವಾರ ಕೋಟೆಯ ಮೇಲೆ ನಿಲ್ಲಿಸಿ, ಕಳ್ಳರು ಬಂದರೆ ಸುಳಿವು ಅಥವಾ ಮಾಹಿತಿ ನೀಡು ಎಂದು ಹೇಳಿದನು.

ಬಗೀರಾ ಕೋಟೆಯ ಮೇಲೆ ನಿಂತು ಸುಮ್ಮಸುಮ್ಮನೆ ಕಹಳೆ ಊದಿದ, ಇದರಿಂದ ಸೈನಿಕರೆಲ್ಲರು ಕಳ್ಳರು ಬಂದಿದ್ದಾರೆಂದು ಎಲ್ಲಾ ಕಡೆ ಹುಡುಕಾಡಿದರು ಎಲ್ಲೂ ಕಳ್ಳರು ಸಿಗಲಿಲ್ಲ. ಕೊನೆಗೆ ಬಗೀರನ ಹತ್ತಿರ ಬಂದು ಎಲ್ಲಿದ್ದಾರೆ ಕಳ್ಳರು ಎಂದು ಕೇಳಿದರು.

ಅದಕ್ಕೆ ಬಗೀರಾ “ಇಲ್ಲ, ನೀವೆಲ್ಲಾ ಅಲರ್ಟಾಗಿ ಇದ್ದೀರ ಇಲ್ಲ ಅಂತ ಟೆಸ್ಟ್ ಮಾಡಿದೆ” ಅಂದನು.
ಅಲ್ಲಿಂದ ಅವರೆಲ್ಲರು ಹೋದರು.

ಮತ್ತೆ ಅವನು ಸ್ವಲ್ಪ ಹೊತ್ತು ಆದ ಮೇಲೆ ತನ್ನ ಸಂತೋಷಕ್ಕಾಗಿ ಕಹಳೆ ಊದಿದ. ಸೈನಿಕರೆಲ್ಲರು ನಿಜವಾಗಿ ಕಳ್ಳರು ಬಂದಿದ್ದಾರೆಂದು ಎಲ್ಲಾ ಕಡೆ ಹುಡುಕಿದರು ಮುಖ್ಯವಾಗಿ ಸಂಪತ್ತಿನ ಕೋಣೆಯಲ್ಲಿ ಹುಡುಕಿದರು ಅಲ್ಲೂ ಯಾರು ಕಾಣಿಸಲಿಲ್ಲ. ಕೊನೆಗೆ ಬಗೀರಾ ಹತ್ತಿರ ಬಂದು ಕೇಳಿದರು, ‘ಎಲ್ಲಿ ಕಳ್ಳರು’ ಅಂತ. ಅದಕ್ಕೆ ಅವನು “ಇಲ್ಲ ನಾನು ತಮಾಷೆಗೆ ಕಹಳೆ ಊದಿದೆ” ಎಂದನು.

ರಾಜ ಸಿಟ್ಟಿನಿಂದ “ಇನ್ನೊಂದು ಸಾರಿ ಕಾರಣವಿಲ್ಲದೆ ಸುಮ್ಮಸುಮ್ಮನೆ ಕಹಳೆ ಊದಿದರೆ ನಿನ್ನನು ಜೈಲಿಗೆ ಹಾಕಿವೆ” ಎಚ್ಚರಿಕೆ ಕೊಟ್ಟು ಹೋದನು.

ಬಗೀರಾ ಮಧ್ಯರಾತ್ರಿಯಲ್ಲಿ ನಿಜವಾಗಿಯೂ ಕಳ್ಳರು ನುಸುಳುವುದನ್ನು ಕಂಡನು. ತಕ್ಷಣವೇ ಕಹಳೆ ಊದಿ, ಸೈನಿಕರಿಗೆ ಸಂದೇಶ ರವಾನಿಸಿದ. ಆದರೆ ಸೈನಿಕರೆಲ್ಲರು ಇವನು ಮತ್ತೆ ಸುಮ್ಮಸುಮ್ಮನೆ ಕಹಳೆ ಊದುತ್ತಿದ್ದಾನೆ ಎಂದು ಭಾವಿಸಿದರು. ಕಳ್ಳರು ಬಂದು ಅರಮನೆಯಲ್ಲಿ ಸಂಪತ್ತೆಲ್ಲ ದೋಚಿಕೊಂಡು ಹೋದರು.

ಬೆಳಿಗ್ಗೆ, ಕಳ್ಳರು ಬಂದು ಸಂಪತ್ತು ಕದ್ದಿರುವ ವಿಷಯ ರಾಜನಿಗೆ ಗೊತ್ತಾಯಿತು. ರಾಜ ಬಗೀರಾನನ್ನು ಕರೆಸಿ, “ನಿನ್ನ ಬೇಜವಾಬ್ದಾರಿಯಿಂದಲೇ ಕಳ್ಳರು ಅರಮನೆ ಹೊಳಗೆ ನುಗ್ಗಿ ಸಂಪತ್ತೆಲ್ಲ ದೋಚಿಕೊಂಡು ಹೋಗಿದ್ದಾರೆ” ಎಂದು ಅವನನ್ನು ಜೈಲಿಗೆ ಹಾಕಿದ.

ಕಥೆಯಲ್ಲಿನ ನೀತಿ / Moral of this Story: ಯಾವಾಗಲೂ ಸುಳ್ಳು ಹೇಳುತ್ತಿದ್ದರೆ, ಕೆಲವೊಮ್ಮೆ ನಿಜ ಹೇಳಿದರೂ ಯಾರೂ ನಂಬುವುದಿಲ್ಲ.
ಮತ್ತು ನಿರೀಕ್ಷಿಸದ ಅಪಾಯವನ್ನು ತರುತ್ತದೆ.

Follow and Like Our Facebook Page Moral Storys


Spread the love

1 thought on “Moral Stories Inspirational

Leave a Reply

Your email address will not be published. Required fields are marked *