Inspiration for Short Stories

Inspiration for Short Stories

Moral Stories
Spread the love

Inspiration for Short Hi Everyone, Welcome to Moral Storys – Inspiration for Short Stories

ಬಣ್ಣ ಹಚ್ಚಿದ ಬಂಗಾರದ ಮೊಟ್ಟೆ – Inspiration for Short Stories

ಒಂದಾನೊಂದು ಕಾಲದಲ್ಲಿ ಚಿಂಟು ಬಂಟು ಎಂಬ ಇಬ್ಬರು ಗೆಳೆಯರಿದ್ದರು. ಇಬ್ಬರು ಗೆಳೆಯರು ಜೀವನದಲ್ಲಿ ಎತ್ತರಕ್ಕೆ ಬೆಳೆದು ನಿಲ್ಲಬೇಕು ಎಂಬ ಮಹತ್ತರ ಆಶಯವನ್ನು ಹೊಂದಿದ್ದರು. ಅದಕ್ಕಾಗಿ ಚಿಂಟು ಕಷ್ಟಪಟ್ಟು ದುಡಿದು ಗಳಿಸುತ್ತಿದ್ದ.

ಚಿಂಟು ಕಷ್ಟಪಟ್ಟು ದುಡಿದ ಹಣದಿಂದ ಒಂದು ಹಸು ತಗೊಂಡು ಒಂದು ವರ್ಷ ಚೆನ್ನಾಗಿ ಸಾಕಿದ. ಹೊಟ್ಟೆ ತುಂಬಾ ಮೇಯಿಸಿ ಜೋಪಾನವಾಗಿ ನೋಡಿಕೊಳ್ಳುತ್ತಿದ್ದನು.

ನಂತರ ಆ ಹಸು ಒಂದು ಹೆಣ್ಣು ಮರಿಗೆ ಜನ್ಮ ನೀಡಿತು. ಚಿಂಟು ಹಸುವಿಗೆ  ಹಸಿ ಹುಲ್ಲು, ಜೋಳದ ಸಪ್ಪೆ ಹಾಕುವುದರಿಂದ ಹಸು ಪ್ರತಿದಿನ ಐದು ಲೀಟರ್ ಹಾಲು ಕೊಡುತ್ತಿತ್ತು.

ಚಿಂಟು ಹಾಲನ್ನು ಮನೆ ಮನೆ ಹಾಕಿ ಸಾಕಷ್ಟು ಲಾಭ ಮಾಡುತ್ತಿದ್ದ. ಹೀಗೆ ಹಾಲು ಮಾರಿ ಬಂದ ಲಾಭದಲ್ಲಿ ಚಿಂಟು ಮತ್ತೊಂದು ಹಸುವನ್ನು ಕೊಂಡುಕೊಂಡನು.

Read Also – ಮಾಯಾ ಬಾಗಿಲು

ಹೀಗೆ ಚಿಂಟು ಹಾಲು ಮಾರುವ ಮೂಲಕ ಕೈತುಂಬಾ ಸಂಪಾದಿಸುತ್ತಿದ್ದ. ಹಾಲಿನ ವ್ಯಾಪಾರ ಲಾಭದಾಯಕವಾಗಿ ಸಾಗುತ್ತಿತ್ತು. 

Inspiration for Short Stories

ಆದರೆ ಬಂಟು ಕಷ್ಟಪಟ್ಟು ದುಡಿದು ಗಳಿಸುವ ಮನಸ್ಥಿತಿಯಲ್ಲಿ ಇರಲಿಲ್ಲ. ಚಿಂಟು ಬಂದು ಬಂಟುಗೆ ಸ್ವಲ್ಪ ಹಣ ಕೊಟ್ಟು ಕೋಳಿ ಸಾಕಾಣಿಕೆ ಮಾಡು ಎಂದು ಸಲಹೆಕೊಟ್ಟನು. ಚಿಂಟು ಹೇಳಿದಂತೆ ಬಂಟು ಮಾರುಕಟ್ಟೆಗೆ ಹೋಗಿ ಒಂದು ಕೋಳಿಯನ್ನು ತಗೊಂಡು ಬಂದನು.

ಕೆಲವು ದಿನ ಆದ ಮೇಲೆ ಕೋಳಿ ಮೊಟ್ಟೆಯಿಟ್ಟು ಮರಿ ಎಬ್ಬಿಸಿದವು. ಇದರಿಂದ ಬಂಟುವಿನ ಕೋಳಿಗಳ ಸಂಖ್ಯೆ ಕ್ರಮೇಣವಾಗಿ ಹೆಚ್ಚಾಗುತ್ತಾ ಹೋಯಿತು. ಕೋಳಿಗಳನ್ನು ಮತ್ತು ಮೊಟ್ಟೆಗಳನ್ನು ಅಧಿಕ ಬೆಲೆಗೆ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದ್ದ.

Read Also – ಎರಡು ಮೀನು

ಹೀಗೆ ಅವನ ವ್ಯಾಪಾರವೂ ಕೂಡ ಕೈತುಂಬಾ ಲಾಭವನ್ನು ತಂದುಕೊಡುತ್ತಿತ್ತು. ಆದರೆ ಅವನಿಗೆ ಬರುವ ಲಾಭ ಸಾಕಾಗಲಿಲ್ಲ ಇನ್ನೂ ಜಾಸ್ತಿ ಗಳಿಸಬೇಕು, ಬೇಗ ಶ್ರೀಮಂತನಾಗಬೇಕು ಎಂಬ ಆಸೆ ಹುಟ್ಟಿಕೊಂಡಿತು.

ಬಂಟುಗೆ ಅಧಿಕ ಲಾಭ ಗಳಿಸಿ, ಬೇಗ ಶ್ರೀಮಂತನಾಗಲು ಒಂದು ಆಲೋಚನೆ ಬಂತು. ಅದೇನೆಂದರೆ ಮೊಟ್ಟೆಗಳಿಗೆ ಬಂಗಾರದ ಬಣ್ಣ ಹಚ್ಚಿ ಬಂಗಾರದ ಮೊಟ್ಟೆಗಳೆಂದು ಮಾರುಕಟ್ಟೆಯಲ್ಲಿ ಅಧಿಕ ಬೆಲೆಗೆ ಮಾರುತ್ತಿದ್ದ.

Inspiration for Short Stories

ಮಾರುಕಟ್ಟೆಯಲ್ಲಿ ಮೊಟ್ಟೆಗಳು ಕೆಲವೇ ನಿಮಿಷಗಳಲ್ಲಿ ಖಾಲಿಯಾಗುತ್ತಿದ್ದವು. ಇವನು ಮಾಡಿದ ಉಪಾಯ ಯಶಸ್ವಿಯಾಗುತ್ತಿದೆಂದು ಅದನ್ನೇ ಮುಂದುವರಿಸಿದನು.

ಹೀಗೆ ಕೋಳಿ ಮೊಟ್ಟೆಗಳಿಗೆ ಬಂಗಾರದ ಬಣ್ಣ ಹಚ್ಚಿ ಮಾರುಕಟ್ಟೆಯಲ್ಲಿ ಬಂಗಾರದ ಮೊಟ್ಟೆ ಎಂದು ಎಲ್ಲರನ್ನು ನಂಬಿಸಿ ಮಾರಾಟ ಮಾಡುತ್ತಿದ್ದ.

Also Read – ಮೂರು ಕಾಗೆಗಳು

ಒಂದು ದಿನ ಮೊಟ್ಟೆಗಳನ್ನು ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದ್ದಾಗ ಮಳೆ ಜೋರಾಗಿ ಬಂತು. ಮಳೆ ಹನಿಗೆ ಮೊಟ್ಟೆಗಳಿಗಿರುವ ಬಂಗಾರದ ಬಣ್ಣವೆಲ್ಲ ಕೊಚ್ಚಿಕೊಂಡು ಹೋಯಿತು.

ಇದರಿಂದ ಬಂಟುವಿನ ಬಣ್ಣದಾಟ ಬಯಲಾಯಿತು ಸೇರಿದ ಜನರೆಲ್ಲ ಮೋಸಮಾಡ್ತಿದ್ದಾನೆಂದು ಹಿಗ್ಗಾಮುಗ್ಗಾ ಒಡೆದು ಅವನಲ್ಲಿರುವ ಹಣವೆಲ್ಲ ತೆಗೆದುಕೊಂಡರು.

ಕಥೆಯಲ್ಲಿನ ನೀತಿ / Moral of this Story: ದುರಾಸೆ ದುಃಖವನ್ನೆ ತಂದುಕೊಡುತ್ತದೆ, ಅತಿಯಾದ ಆಸೆ ಜೀವನವನ್ನು ಶೋಕದಲ್ಲಿ ಮುಳುಗಿಸುತ್ತವೆ.

ದುರಾಸೆಯ ನರಿ – Inspiration for Short Stories

ಒಂದು ಅಡವಿಯಲ್ಲಿ ದುರಾಸೆ ಹೊಂದಿರುವ ನರಿ ಇತ್ತು. ಒಂದು ದಿನ ಹಸಿವೆಗೊಂಡು ಆಹಾರಕ್ಕಾಗಿ ಹೊರಗಡೆ ಹೋಯಿತು. ದಾರಿಯಲ್ಲಿ ಒಂದು ಸೌತೆಕಾಯಿ ಬಿದ್ದಿತ್ತು

ಅದೇ ಸಮಯದಲ್ಲಿ ಕಾಗೆಯೊಂದು ತನ್ನ ಬಾಯಿಯಲ್ಲಿ ರೊಟ್ಟಿಯನ್ನು ತೆಗೆದುಕೊಂಡು ಹೋಗತ್ತಾ ಇತ್ತು. ಕಾಗೆಯ ಬಾಯಲ್ಲಿ ರೊಟ್ಟಿಯನ್ನು ನೋಡಿದ ನರಿ ಸೌತೆಕಾಯಿಯನ್ನು ಬಿಟ್ಟು ಕಾಗೆಯನ್ನು ಹಿಂಬಾಲಿಸಿತು.

ನರಿ ಮುಂದಿನ ದಾರಿ ಕೂಡ ನೋಡದೆ ಕಾಗೆಯನ್ನೆ ದಿಟ್ಟಿಸಿ ನೋಡುತ್ತಾ ಓಡಿತು. ನರಿ ಕಾಗೆಯನ್ನು ಹಿಂಬಾಲಿಸಿ ಓಡುತ್ತಿದ್ದಂತೆಲ್ಲಾ ಅದರ ಸಂತೋಷಕ್ಕೆ ಕೊನೆಯಿಲ್ಲದಂತಾಯಿತು.

Read Also – ನಾಸ್ತಿಕ

ನರಿ ಓಡುತ್ತಲೇ ‘ಕಾಗೆ ಯಾವ ಗಿಡದ ಮೇಲೆ ಕೂತುಕೊಳ್ಳುತ್ತೊ ಯಾವಾಗ ನಾನು ಆ ರುಚಿಕರವಾದ ರೊಟ್ಟಿಯನ್ನು ತಿಂದೆನೋ’ ಎಂದು ಅಂದುಕೊಂಡಿತು. ಆದರೆ ಕಾಗೆ ಎಲ್ಲೂ ಕೂಡಲೇ ಇಲ್ಲ.

ಅದು ತನ್ನ ಪಾಡಿಗೆ ಇನ್ನೂ ದೂರಕ್ಕೆ ಹಾರಿ ಹೋಗ್ತಾ ಇತ್ತು. ಮುಂದೆ ಒಂದು ಆಳವಾದ ಬಾವಿ ಇತ್ತು. ನರಿ ವೇಗವಾಗಿ ಓಡುತ್ತಿರುವಾಗ ಆ ಬಾವಿಯಲ್ಲಿ ಬಿದ್ದು ಪ್ರಾಣ ಬಿಟ್ಟಿತು.

ಕಥೆಯಲ್ಲಿನ ನೀತಿ/ Moral of this Story: ನಮ್ಮದಲ್ಲದ ವಸ್ತುವನ್ನು ಯಾವತ್ತೂ ಕೂಡಾ ಆಶಿಸಬಾರದು.
ಇದ್ದದ್ದರಲ್ಲಿಯೇ ಸಂತೃಪ್ತರಾಗಿರಬೇಕು.ಇದ್ದಿದ್ದನ್ನು ಬಿಟ್ಟು ಇಲ್ಲದ್ದನ್ನು ಹುಡುಕಲು ಹೋಗಿ ಎಲ್ಲವನ್ನೂ ಕಳೆದುಕೊಳ್ಳುತ್ತೇವೆ.

ನರಿಯ ಮದುವೆ – Inspiration for Short Stories

ಒಂದು ಬಯಲು ಸೀಮೆಯಲ್ಲಿ ನರಿ ಇತರ ಪ್ರಾಣಿ ಮತ್ತು ಪಕ್ಷಿಗಳೊಂದಿಗೆ ವಾಸವಾಗಿತ್ತು. ಎಲ್ಲಾ ಪ್ರಾಣಿ ಮತ್ತು ಪಕ್ಷಿಗಳು ಸೇರಿ ನರಿಗೆ ಕನ್ಯೆ ನೋಡಿ, ಮದುವೆ ಮಾಡಲು ನಿರ್ಧರಿಸಿದವು. ಅದಕ್ಕಾಗಿ ಒಂದು ದಿನ ಕನ್ಯೆ ನೋಡಲು ಹೋಗ್ಬೇಕು ಅಂತ ರಾತ್ರಿ ಎಲ್ಲಾ ಸಭೆ ಸೇರಿ ಮಾತಾಡಿಕೊಂಡವು.

ಮಾರನೇ ದಿನ ಬೆಳಿಗ್ಗೆ ನರಿ ಕನ್ಯೆ ನೋಡ್ಲಿಕ್ಕೆ ಹೋಗುತ್ತಿದ್ದೇನೆ ಎಂಬ ಆತುರದಲ್ಲಿ ರೆಡಿಯಾಗಿ ಎಲ್ಲರನ್ನು ಕರೆಯಿತು ಆದರೆ ಯಾರು ಬರಲು ಸಿದ್ದರಾಗಲಿಲ್ಲ. ಜೊತೆಗೆ ಕೋತಿಯನ್ನು ಕರೆದುಕೊಂಡು ಹೋಯಿತು.

Also Read this – ಶಕ್ತಿ ಮಾತ್ರ ಇದ್ರೆ ಸಾಲದು ಯುಕ್ತಿಯು ಇರಬೇಕು

ನಡುದಾರಿಯಲ್ಲಿ ಒಂದು ಮಾವಿನ ಮರ ಸಿಹಿಯಾದ ಹಣ್ಣಾದ ಮಾವಿನ ಹಣ್ಣುಗಳಿಂದ ತುಂಬಿತ್ತು. ಕೋತಿ ಒಂದು ಕ್ಷಣವೂ ಯೋಚನೆ ಮಾಡದೆ ತಟ್ಟನೆ ಹೋಗಿ ಮಾವಿನ ಮರದ ಮೇಲೆ ಕುಳಿತಿತು.

ನರಿ ಎಷ್ಟು ಬಾರಿ ಕರೆದರೂ ಬರಲೇ ಇಲ್ಲ. ಕೋತಿ ಸಿಹಿಯಾದ ಮಾವಿನ ಹಣ್ಣನ್ನು ತಿಂದು ಅಲ್ಲೇ ಮಲಗಿಕೊಂಡಿತು. ಇನ್ನು ನರಿ ಕೋತಿಯನ್ನು ಎದುರು ನೋಡಿ ತಿರುಗಿ ಮನೆಗೆ  ಹೊರಟಿತು.

ನಂತರದ ದಿನ ನರಿ, ಜೊತೆಗೆ ಬರುವಂತೆ ಹಂದಿಯನ್ನು ಕರೆಯಿತು. ಅದಕ್ಕೆ ಹಂದಿ ಕನ್ಯೆ ನೋಡಲು ಹೋಗಲಿಕ್ಕೆ ಒಪ್ಪಿಕೊಂಡಿತ್ತು. ನರಿ ಮತ್ತು ಹಂದಿ ಕನ್ಯೆ ನೋಡ್ಲಿಕ್ಕೆ ಹೋದವು. ದಾರಿಯಲ್ಲಿ ಹೋಗುತ್ತಿದ್ದಾಗ ಹಂದಿಗೆ ಚರಂಡಿಯೊಂದು ಕಂಡಿತು.

Inspiration for Short Stories

ಹಂದಿ ಸರ್ರನೆ ಚರಂಡಿಗೆ ಜಿಗಿಯಿತು. ನರಿ ‘ನಾವು ಕನ್ಯೆ ನೋಡ್ಲಿಕ್ಕೆ ಹೋಗಬೇಕು ಸಮಯವಿಲ್ಲ ಬಾ’ ಎಂದು ಕರೆಯಿತು. ಹಂದಿ ಚರಂಡಿಗೆ ಇಳಿದ ಮೇಲೆ ತಾನು ಬಂದ ಕೆಲ್ಸ ಮರೆತೇ ಬಿಡಿತು. ನರಿ ಅಲ್ಲಿಂದ ಹಿಂದಿರುಗಿ ಊರಿನ ಕಡೆ ಹೊರಟಿತು.

ಮಾರನೆಯ ದಿನ ಆಮೆಯನ್ನು ಕರೆಯಿತು. ಆಮೆ ಜೊತೆ ಬರಲು ಒಪ್ಪಿಕೊಂಡಿತು. ನರಿ ಮತ್ತು ಆಮೆ ನಡಿಗೆ ಪ್ರಾರಂಭಿಸಿದರು. ನರಿ ಬೇಗ ಬೇಗ ನಡಿತಿತ್ತು ಆದರೆ ಆಮೆ ನಿಧಾನವಾಗಿ ನಡಿತಿತ್ತು.

ಊರು ಮುಟ್ಟಲು ಇನ್ನ ದೂರಕ್ಕೆ ಮತ್ತು ವೇಗವಾಗಿ ನಡಿಬೇಕಿತ್ತು. ಆದರೆ ಆಮೆ ಸ್ವಲ್ಪ ದೂರ ಹೋದ ಮೇಲೆ ಅಷ್ಟು ದೂರ ನಡೆಯಲು ನನ್ ಕೈಲೇ ಆಗುವುದಿಲ್ಲ’ ಎಂದು ಅಲ್ಲೆ ಕೂತುಕೊಂಡಿತು. ನರಿ ಆಹೊತ್ತು ಕೂಡ‌ ನರಿ ನಿರಾಶೆಯಿಂದ ಮನೆಗೆ ತೆರಳಿತು.

Read Also – ವ್ಯಾಪಾರಿ ಮತ್ತು ಕತ್ತೆ

ಮತ್ತೊಂದು ದಿನ ನರಿ ಎಮ್ಮೆಯನ್ನು ಜೊತೆ ಮಾಡಿ ಕರೆದುಕೊಂಡು ಹೋಯಿತು. ದಾರಿಯಲ್ಲಿ ಹೋಗುತ್ತಿದ್ದಾಗ ನೀರಿನ ಹೊಂಡ ಕಣ್ಣಿಗೆ ಬಿತ್ತು.

ಎಮ್ಮೆ ನರಿಗೆ ‘ನಂಗೆ ತುಂಬಾ ನೀರಡಿಕೆಯಾಗಿದೆ ಹೋಗಿ ನೀರು ಕುಡಿದು ಬರ್ತೀನಿ’ ಅಂತ ಹೇಳಿ ನೀರಿನ ಹೊಂಡಕ್ಕೆ ಹೋಯಿತು.

ಎಮ್ಮೆ ಹೊಂಡಕ್ಕೆ ಹೋದ ಮೇಲೆ ಹೊರಪ್ರಪಂಚವೆಲ್ಲ  ಮರೆತೇ ಬಿಡ್ತು. ನರಿ ದಿನಾ ಅರ್ಧ ದಾರಿಯಲ್ಲಿ ತಿರುಗಿ ಹೋಗುವಂತೆ ಇವತ್ತು ಕೂಡ ಹಿಂದಿರುಗಿ ಹೋಯಿತು.

Inspiration for Short Stories

ನರಿ ಹೀಗೆ ಪ್ರತಿ ದಿನ ಒಂದೊಂದು ಪ್ರಾಣಿಯನ್ನು ಜೊತೆ ಕರೆದುಕೊಂಡು ಹೋಗುತ್ತಿತ್ತು. ಅವುಗಳು ಬಂದ‌ ಕೆಲ್ಸ ಮರೆತು, ತಮ್ಮ ಸ್ವಾರ್ಥಕ್ಕಾಗಿ ಇಷ್ಟ ಬಂದಂತೆ ಸುತ್ತುತ್ತಾ, ತಮ್ಮ ದುರಾಸೆಯಿಂದ  ಮನಸ್ಸು ಬಂದಂತೆ ಮಾಡುತ್ತಿದ್ದವು. ಇನ್ನು ನರಿ ಮದುವೆ ಆಸೆಯನ್ನು ಬಿಟ್ಟು ತನ್ನ ಕೆಲಸ ಮಾಡ್ಕೊಂಡು ಇತ್ತು.

ಕಥೆಯಲ್ಲಿನ ನೀತಿ / Moral of this Story:
ಜೀವನದಲ್ಲಿ ಯಾರನ್ನು ನಂಬಬಾರದು.
ಮನಸ್ಸನ್ನು ಯಾವಾಗಲೂ ಹತೋಟಿಯಲ್ಲಿ ಇಟ್ಟುಕೊಳ್ಳಬೇಕು.

Follow Our Facebook Page Moral Storys

Inspiration for Short Stories

ವಿ. ಸೂಚನೆ – ಮೇಲಿನ ಕಥೆಗಳಲ್ಲಿ ಏನಾದರೂ ತಪ್ಪು ಅಥವಾ ದೋಷಗಳು ಕಂಡುಬಂದರೆ ದಯಮಾಡಿ ಕಾಮೆಂಟ್ ಮೂಲಕ ತಿಳಿಸಿ. ಪುನಃ ಬೇಟಿ ಧನ್ಯವಾದಗಳು.


Spread the love

Leave a Reply

Your email address will not be published. Required fields are marked *